ರಕ್ಷಣಾ ಸಚಿವಾಲಯ
azadi ka amrit mahotsav

ಆಪರೇಷನ್ ಸಿಂಧೂರ್: ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸಶಸ್ತ್ರ ಪಡೆಗಳು ನಿಖರ ದಾಳಿ ನಡೆಸಿದವು

Posted On: 07 MAY 2025 1:44AM by PIB Bengaluru

ಸ್ವಲ್ಪ ಸಮಯದ ಹಿಂದೆ, ಭಾರತೀಯ ಸಶಸ್ತ್ರ ಪಡೆಗಳು 'ಆಪರೇಷನ್ ಸಿಂಧೂರ್' ಅರಂಭಿಸಿ, ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸಲಾಗಿದ್ದ ಮತ್ತು ನಿರ್ದೇಶಿಸಲಾಗಿದ್ದ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಲಾಯಿತು.

ಒಟ್ಟಾರೆಯಾಗಿ, ಒಂಬತ್ತು ನೆಲೆಗಳನ್ನು ಗುರಿಯಾಗಿಸಲಾಗಿತ್ತು.

ನಮ್ಮ ಕ್ರಮಗಳು ಗುರಿಯನ್ನು ಕೇಂದ್ರೀಕರಿಸಿವೆ, ಅಳೆಯಲ್ಪಟ್ಟಿವೆ ಮತ್ತು ಸ್ವಭಾವತಃ ಆಕ್ರಮಣಕಾರಿಯಲ್ಲ. ಪಾಕಿಸ್ತಾನಿ ಯಾವುದೇ ಸೇನಾ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿಲ್ಲ. ಈ ನೆಲೆಗಳನ್ನು ಆಯ್ಕೆ ಮಾಡುವಲ್ಲಿ ಮತ್ತು ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಭಾರತವು ಹೆಚ್ಚಿನ ಸಂಯಮವನ್ನು ತೋರಿಸಿದೆ. 

25 ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕನ ಹತ್ಯೆಗೆ ಕಾರಣವಾದ ಬರ್ಬರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ದಾಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ.

'ಆಪರೇಷನ್ ಸಿಂಧೂರ್ʼ ಕುರಿತು ವಿವರವಾದ ಮಾಹಿತಿಯನ್ನು ಇಂದು ನಂತರ ನೀಡಲಾಗುವುದು.

 

*****


(Release ID: 2127424) Visitor Counter : 204