ವಾರ್ತಾ ಮತ್ತು ಪ್ರಸಾರ ಸಚಿವಾಲಯ
ನಿಮ್ಮ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಿ, ನಿಮ್ಮ ಗಡಿಗಳನ್ನು ವ್ಯಾಖ್ಯಾನಿಸಿ, ಪ್ರಾಮಾಣಿಕವಾಗಿ ಸಂವಹನ ಮಾಡಿ- ಸಾಮಾಜಿಕ ಮಾಧ್ಯಮದ ಪ್ರಭಾವಿಗಳಿಗೆ ವೇವ್ಸ್ ಸಲಹೆ
ಸಾಮಾಜಿಕ ಮಾಧ್ಯಮದ ಜಾಹೀರಾತಿಗೆ ಸಂಬಂಧಿಸಿ ಪ್ರಭಾವಿಗಳಿಗೆ ಉತ್ತಮ ಅಭ್ಯಾಸಗಳು /ಪದ್ಧತಿಗಳನ್ನು ರೂಪಿಸಿದ ವೇವ್ಸ್
Posted On:
04 MAY 2025 1:39PM
|
Location:
PIB Bengaluru
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರಿನಲ್ಲಿ ನಡೆಯುತ್ತಿರುವ ವಿಶ್ವ ಆಡಿಯೊ ವಿಷುಯಲ್ ಮತ್ತು ಎಂಟರ್ಟೈನ್ಮೆಂಟ್ ಶೃಂಗಸಭೆ (ವೇವ್ಸ್) 2025 ರ 4 ನೇ ದಿನದಂದು ಪ್ರಭಾವಿಗಳಿಗೆ ಸಾಮಾಜಿಕ ಮಾಧ್ಯಮ ಜಾಹೀರಾತುಗಳಿಗೆ ಸಂಬಂಧಿಸಿದ ಉತ್ತಮ ಅಭ್ಯಾಸಗಳ ಕುರಿತು ಪ್ರತ್ಯೇಕ ಕಿರು ಗೋಷ್ಠಿ (ಬ್ರೇಕ್ಔಟ್ ಸೆಷನ್) ನಡೆಯಿತು.
ಗೋಷ್ಠಿಯ ತಂಡದಲ್ಲಿ ಎ ಎಸ್ ಸಿ ಐ ಐ ನಿರ್ದೇಶಕಿ ಶ್ರೀಮತಿ ಸಹೇಲಿ ಸಿನ್ಹಾ; ಚಲನಚಿತ್ರ ನಟಿ ಮತ್ತು ಪ್ರಭಾವಿ ಶ್ರೀಮತಿ ಶಿಬಾನಿ ಅಖ್ತರ್, ಮನರಂಜನಾ ಪತ್ರಕರ್ತ ಶ್ರೀ ಮಾಯಾಂಕ್ ಶೇಖರ್, ಮತ್ತು ಪಾಕೆಟ್ ಏಸಸ್ ಮುಖ್ಯ ವ್ಯವಹಾರ ಅಧಿಕಾರಿ ಶ್ರೀ ವಿನಯ್ ಪಿಳ್ಳೈ ಇದ್ದರು. ಗೋಷ್ಠಿಯನ್ನು ಖೈತಾನ್ & ಕಂಪನಿಯ ಪಾಲುದಾರರಾದ ಶ್ರೀಮತಿ ತನು ಬ್ಯಾನರ್ಜಿ ನಿರ್ವಹಿಸಿದರು.

ಡಿಜಿಟಲ್ ಆರ್ಥಿಕತೆಯಲ್ಲಿ ಪ್ರಭಾವಿಗಳ ಪಾತ್ರ ಹೆಚ್ಚುತ್ತಿರುವ ಬಗ್ಗೆ ಮತ್ತು ಪ್ರಭಾವಿಗಳ ಜಾಹೀರಾತುಗಳ ವಿಶ್ವಾಸಾರ್ಹತೆಯನ್ನು ಬಲಪಡಿಸಲು ಅಗತ್ಯವಾದ ನೈತಿಕ, ಸೃಜನಶೀಲ ಮತ್ತು ಕಾನೂನು ಚೌಕಟ್ಟುಗಳ ಮೇಲೆ ಚರ್ಚೆಗಳು ಗಮನ ಕೇಂದ್ರೀಕರಿಸಿದವು. ಅಧಿಕೃತತೆ, ಪಾರದರ್ಶಕತೆ ಮತ್ತು ವಿಷಯ ಜವಾಬ್ದಾರಿಯು ಸುಸ್ಥಿರ ಪ್ರಭಾವಿ ಮಾರ್ಕೆಟಿಂಗ್ ಗೆ ಪ್ರಮುಖ ಆಧಾರಸ್ತಂಭಗಳಾಗಿವೆ ಎಂದು ತಂಡವು ಒತ್ತಿ ಹೇಳಿತು.
ಶ್ರೀಮತಿ ಶಿಬಾನಿ ಅಖ್ತರ್ ಅವರು ಬ್ರಾಂಡೆಡ್ ವಿಷಯ ಸಾಮಗ್ರಿಯನ್ನು ರಚಿಸುವಾಗ ಒಬ್ಬರ ಧ್ವನಿಗೆ ನಿಷ್ಠರಾಗಿರುವಿಕೆಯ ಮಹತ್ವವನ್ನು ಎತ್ತಿ ತೋರಿಸಿದರು. ಪರಿಣಾಮಕಾರಿ ಪ್ರಭಾವಶಾಲಿ ಮಾರ್ಕೆಟಿಂಗ್ ಗೆ ಸೃಜನಶೀಲ ಮನಸ್ಸುಗಳು ವಿಷಯ ಮತ್ತು ಬ್ರ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು ಹಾಗು ಅಭಿಯಾನಗಳು/ಪ್ರಚಾರಾಂದೋಲನಗಳು ವೈಯಕ್ತಿಕ ನಂಬಿಕೆ ಮತ್ತು ಉದ್ದೇಶವನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಪ್ರಭಾವಿಗಳು ತಮ್ಮ ಬ್ರಾಂಡ್ ಅನ್ನು ಸಾವಯವವಾಗಿ ನಿರ್ಮಿಸಬೇಕು ಮತ್ತು ಎಲ್ಲಾ ಪಾಲುದಾರಿಕೆಗಳ ಅಡಿಪಾಯವಾಗಿ ಅಧಿಕೃತತೆ/ಸತ್ಯಾಸತ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದೂ ಅವರು ಆಗ್ರಹಿಸಿದರು.
ಪ್ಲಾಟ್ ಫಾರ್ಮ್-ನಿರ್ದಿಷ್ಟ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲು ಮತ್ತು ಒಂದು-ಗಾತ್ರ-ಎಲ್ಲಾ ಕಡೆಯೂ ಸರಿ ಹೊಂದುತ್ತದೆ ಎಂಬ ಧೋರಣೆ/ವಿಧಾನವನ್ನು ಕೈಬಿಡಲು ಸೃಜನಶೀಲ ಮನಸ್ಸುಗಳಿಗೆ ಸಲಹೆ ನೀಡಿದ ಶ್ರೀ ವಿನಯ್ ಪಿಳ್ಳೈ, ಪ್ರತಿ ಡಿಜಿಟಲ್ ಪ್ಲಾಟ್ ಫಾರ್ಮ್ (ವೇದಿಕೆ) ವಿಭಿನ್ನ ರೀತಿಯ ಪ್ರೇಕ್ಷಕರಿಗೆ ತೊಡಗಿಸಿಕೊಳ್ಳುವಿಕೆಯ ಅವಕಾಶವನ್ನು ಹೊಂದಿರುತ್ತದೆ ಮತ್ತು ಸೂಕ್ತವಾದ ಕಥೆ ಹೇಳುವ ತಂತ್ರಗಳನ್ನು ಬಯಸುತ್ತದೆ ಎಂದು ವಿವರಿಸಿದರು. ಪ್ರಜ್ಞಾಪೂರ್ವಕವಾಗಿ ಬ್ರಾಂಡ್ ರೂಪಿಸಬೇಕಾದ ಮಹತ್ವವನ್ನು ಪ್ರತಿಪಾದಿಸಿದ ಅವರು ವಿಶ್ವಾಸಾರ್ಹವಾಗಿ ಉಳಿಯುವುದು ಮತ್ತು ದತ್ತಾಂಶದೊಂದಿಗೆ -ಮಾಹಿತಿಯುಕ್ತ ವಿಷಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ತಾವು ಗುರಿಯಾಗಿಸಿಕೊಂಡ ಪ್ರೇಕ್ಷಕ ಸಮೂಹ ಅದಕ್ಕೆ ಅನುರಣಿಸುವಂತೆ ಮಾಡುವ ಮಹತ್ವವನ್ನೂ ಒತ್ತಿ ಹೇಳಿದರು.
ಶ್ರೀ ಮಾಯಾಂಕ್ ಶೇಖರ್ ಅವರು ಡಿಜಿಟಲ್ ಪ್ರಭಾವದ ವಿಕಸನ ಮತ್ತು ಸೆಲೆಬ್ರಿಟಿ ಹಾಗು ಸೃಜನಶೀಲ ಮನಸ್ಸುಗಳ ಸಂಸ್ಕೃತಿಯ ನಡುವಿನ ಮಸುಕಾಗುತ್ತಿರುವ ರೇಖೆಗಳ ಬಗ್ಗೆ ಮಾತನಾಡಿದರು. ಪ್ರಸ್ತುತ ಯುಗದಲ್ಲಿ, ಪ್ರಭಾವವು ಚಲನಚಿತ್ರ ಮತ್ತು ಟೆಲಿವಿಶನ್/ದೂರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ ಬದಲು ಈಗ ಪ್ಲಾಟ್ ಫಾರಂ (ವೇದಿಕೆ) ಆಧಾರಿತ ಮತ್ತು ನಿರ್ದಿಷ್ಟ ವಿಷಯ ಸಾಮಗ್ರಿ ಯನ್ನು ಆಧರಿಸಿದೆ ಎಂಬುದರತ್ತ ಅವರು ಗಮನಸೆಳೆದರು. ಸೃಜನಶೀಲ ಕಲಾವಿದರು/ಬರಹಗಾರರು ತಮ್ಮ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ತಪ್ಪು ಮಾಹಿತಿಯನ್ನು ಹರಡಬಾರದು ಅಥವಾ ಇತರರ ಕೆಲಸವನ್ನು ನಕಲು ಮಾಡಬಾರದು ಎಂದು ಅವರು ಎಚ್ಚರಿಸಿದರು. ಪ್ರಾಯೋಜಿತ ವಿಷಯ ಸಾಮಗ್ರಿಗಳಲ್ಲಿ ಸಮಗ್ರತೆ ಮತ್ತು ಸತ್ಯಶೋಧನೆಯ ಮಹತ್ವವನ್ನೂ ಅವರು ಒತ್ತಿ ಹೇಳಿದರು.
ಪ್ರಭಾವಿಗಳು ತಮ್ಮ ಪಾಲುದಾರಿಕೆಯ ಬಗ್ಗೆ ಪಾರದರ್ಶಕವಾಗಿರಬೇಕು ಮತ್ತು ತಮ್ಮ ಪೋಸ್ಟ್ಗೆ ಶುಲ್ಕ ಪಾವತಿಸಲಾಗಿದೆಯೇ ಅಥವಾ ಬರೇ ಪ್ರಚಾರಕ್ಕಷ್ಟೇ ಪೋಸ್ಟ್ ಮಾಡಲಾಗಿದೆಯೇ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಶ್ರೀಮತಿ ಸಹೇಲಿ ಸಿನ್ಹಾ ಹೇಳಿದರು. ಪ್ರಭಾವಿಗಳು ನೈತಿಕ, ಮಾಹಿತಿಯುಕ್ತ ಮತ್ತು ತಮ್ಮ ಪ್ರೇಕ್ಷಕರ ನಂಬಿಕೆಯನ್ನು ಪ್ರತಿಬಿಂಬಿಸುವ ವಿಷಯ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಬೇಕೆಂದು ಅವರು ಪ್ರತಿಪಾದಿಸಿದರು. ಕಾನೂನು ಬಾಧ್ಯತೆಗಳು, ಜಾಹೀರಾತು ಮಾನದಂಡಗಳು ಮತ್ತು ವಿಷಯ ಜವಾಬ್ದಾರಿಯ ಬಗ್ಗೆ ಉದಯೋನ್ಮುಖ ಸೃಜನಶೀಲ ವಿಷಯ ಸಾಮಗ್ರಿ ತಯಾರಕರಿಗೆ ಮಾರ್ಗದರ್ಶನ ನೀಡಲು ಎಎಸ್ಸಿಐಐ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತದೆ ಎಂಬ ವಿಷಯವನ್ನು ಅವರು ಹಂಚಿಕೊಂಡರು.
ವಿಷಯ ಸಾಮಗ್ರಿ ತಯಾರಕ ಸುಜನಶೀಲ ವ್ಯಕ್ತಿಗಳು ತಮ್ಮ ಗಡಿಗಳನ್ನು ವ್ಯಾಖ್ಯಾನಿಸಬೇಕು, ತಮ್ಮನ್ನು ಅನುಸರಿಸುವ ಅನುಯಾಯಿಗಳೊಂದಿಗೆ ಪ್ರಾಮಾಣಿಕವಾಗಿ ಸಂವಹನ ನಡೆಸಬೇಕು ಮತ್ತು ಜಾಹೀರಾತು ಮಾರ್ಗಸೂಚಿಗಳು ಹಾಗು ಪ್ಲಾಟ್ಫಾರ್ಮ್ ನಿಯಮಗಳನ್ನು ಅನುಸರಿಸುತ್ತಿರಬೇಕು ಎಂದು ತಂಡವು ಸಾಮೂಹಿಕ ಶಿಫಾರಸು ಮಾಡಿತು. ಪ್ರೇಕ್ಷಕರೊಂದಿಗೆ ದೀರ್ಘಕಾಲೀನ ಸಂಬಂಧವನ್ನು ನಿರ್ಮಿಸುವುದು ಹೆಚ್ಚಾಗಿ ಜಾಹೀರಾತು ಉದ್ದೇಶದಲ್ಲಿಯ ನಂಬಿಕೆ/ವಿಶ್ವಾಸ ಮತ್ತು ಸ್ಪಷ್ಟತೆಯನ್ನು ಅವಲಂಬಿಸಿದೆ ಎಂದು ಅವರು ಹೇಳಿದರು.
ಪ್ರಭಾವಿ ಜಾಹೀರಾತುಗಳಿಗಾಗಿ ಔಪಚಾರಿಕವಾಗಿ ನಿರೂಪಿಸಲ್ಪಟ್ಟ ಉತ್ತಮ ಅಭ್ಯಾಸಗಳಿಗೆ ದೃಢವಾದ ಅನುಸರಣೆ ಮತ್ತು ಡಿಜಿಟಲ್ ಜಾಹೀರಾತು ಪರಿಸರ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವೃತ್ತಿಪರತೆಯನ್ನು ಉತ್ತೇಜಿಸಲು ಉದ್ಯಮದ ಪ್ರಯತ್ನಗಳನ್ನು ಮುಂದುವರಿಸಲು ಕರೆ ನೀಡುವ ಮೂಲಕ ಅಧಿವೇಶನವು ಕೊನೆಗೊಂಡಿತು.
For official updates on realtime, please follow us:
On X :
https://x.com/WAVESummitIndia
https://x.com/MIB_India
https://x.com/PIB_India
https://x.com/PIBmumbai
On Instagram:
https://www.instagram.com/wavesummitindia
https://www.instagram.com/mib_india
https://www.instagram.com/pibindia
*****
Release ID:
(Release ID: 2126980)
| Visitor Counter:
11