WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಭಾರತದಲ್ಲಿ ಸೃಜನಶೀಲತೆಗೆ ಪ್ರಥಮಾದ್ಯತೆಯ -ಮೊದಲ ಪರಿಸರ ವ್ಯವಸ್ಥೆಯನ್ನು ರಚಿಸಲು ಸರ್ಕಾರ ಬದ್ಧವಾಗಿದೆ: ಕೇಂದ್ರ ಸಚಿವರಾದ​​​​​​​ ಡಾ. ಎಲ್ ಮುರುಗನ್


ವೇವ್ಸ್ 2025ರಲ್ಲಿ ಭಾರತದ ಮನರಂಜನಾ ಆರ್ಥಿಕತೆಯ ಬಗ್ಗೆ ಹೆಗ್ಗುರುತು ವರದಿಯನ್ನು ಬಿಡುಗಡೆ ಮಾಡಿದ ಮೋಷನ್ ಪಿಕ್ಚರ್ ಅಸೋಸಿಯೇಷನ್  

 Posted On: 03 MAY 2025 8:55PM |   Location: PIB Bengaluru

ಮುಂಬೈಯಲ್ಲಿ ಆಯೋಜನೆಯಾಗಿರುವ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್) ಮೂರನೇ ದಿನದಂದು, ಮೋಷನ್ ಪಿಕ್ಚರ್ ಅಸೋಸಿಯೇಷನ್ (ಎಂಪಿಎ) ರಾಷ್ಟ್ರೀಯ ಆರ್ಥಿಕತೆಯ ಮೇಲೆ ಭಾರತದ ಚಲನಚಿತ್ರ, ದೂರದರ್ಶನ/ಟೆಲಿವಿಶನ್ ಮತ್ತು ಸ್ಟ್ರೀಮಿಂಗ್ ಕ್ಷೇತ್ರಗಳ ಪರಿವರ್ತಕ ಪರಿಣಾಮವನ್ನು ಎತ್ತಿ ತೋರಿಸುವ ಸಮಗ್ರ ವರದಿಯನ್ನು ಅನಾವರಣಗೊಳಿಸಿತು. ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾದ ಡಾ.ಎಲ್.ಮುರುಗನ್ ಮತ್ತು ಎಂಪಿಎ ಅಧ್ಯಕ್ಷ ಹಾಗು ಸಿಇಒ ಚಾರ್ಲ್ಸ್ ರಿವ್ಕಿನ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಮಾತನಾಡಿದ ಡಾ.ಮುರುಗನ್, ಎಂಪಿಎಯ ಜಾಗತಿಕ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ಅಂತರರಾಷ್ಟ್ರೀಯ ಪ್ರೇಕ್ಷಕರ ಮೇಲೆ ಹೆಚ್ಚುತ್ತಿರುವ ಭಾರತೀಯ ಸಿನೆಮಾದ ಪ್ರಭಾವವನ್ನು ಗುರುತಿಸಿದರು. "ಭಾರತೀಯ ಕಥೆಗಳು, ಭಾಷೆಗಳು ಮತ್ತು ಭೌಗೋಳಿಕತೆಗಳಲ್ಲಿ ಅನುರಣಿಸುತ್ತವೆ ಎಂಬುದನ್ನು ಆರ್.ಆರ್.ಆರ್ ಮತ್ತು ಬಾಹುಬಲಿಯಂತಹ ಚಲನಚಿತ್ರಗಳು ಸಾಬೀತುಪಡಿಸಿವೆ" ಎಂದು ಹೇಳಿದರು.

ನೀತಿಗಳು, ಉತ್ಪಾದನಾ ಪ್ರೋತ್ಸಾಹಕಗಳು ಮತ್ತು ಬಲವಾದ ಬೌದ್ಧಿಕ ಆಸ್ತಿ ರಕ್ಷಣೆಗಳ ಬೆಂಬಲದೊಂದಿಗೆ ಸೃಜನಶೀಲತೆಗೆ ಮೊದಲಾದ್ಯತೆಯ  -ಮೊದಲ ಪರಿಸರ ವ್ಯವಸ್ಥೆಯನ್ನು ರಚಿಸುವ ಸರ್ಕಾರದ ಬದ್ಧತೆಯನ್ನು ಅವರು ಒತ್ತಿ ಹೇಳಿದರು. ಇತ್ತೀಚಿನ ಕೃತಿಚೌರ್ಯ ವಿರೋಧಿ ಸುಧಾರಣೆಗಳನ್ನು ಉಲ್ಲೇಖಿಸಿದ ಅವರು, ಡಿಜಿಟಲ್ ಯುಗದಲ್ಲಿ ಸೃಜನಶೀಲ ಕೃತಿಗಳ/ಮನಸ್ಸುಗಳ ಹಕ್ಕುಗಳನ್ನು ರಕ್ಷಿಸುವ ಮಹತ್ವವನ್ನು ಒತ್ತಿ ಹೇಳಿದರು.


ಸಿನಿಮಾ ಕೇವಲ ಆರ್ಥಿಕ ಎಂಜಿನ್ ಅಲ್ಲ. ಇದು ಪ್ರಮುಖ ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ಸೇತುವೆಯಾಗಿದೆ. ಜಾಗತಿಕವಾಗಿ ಗೌರವಾರ್ಹವಾದ ಮತ್ತು ಸುರಕ್ಷಿತ ಸೃಜನಶೀಲ ಉದ್ಯಮವನ್ನು ಸಹ-ನಿರ್ಮಾಣ ಮಾಡಲು  ಮೋಷನ್ ಪಿಕ್ಚರ್ ಅಸೋಸಿಯೇಷನ್ ಜೊತೆಗಿನ ಪಾಲುದಾರಿಕೆಯನ್ನು ಆಳಗೊಳಿಸುವುದನ್ನು ಭಾರತ ಎದುರು ನೋಡುತ್ತಿದೆ" ಎಂದು ಅವರು ಹೇಳಿದರು.

ಚಾರ್ಲ್ಸ್ ರಿವ್ಕಿನ್ ಅವರು ಇದು ದೇಶದ ಮನರಂಜನಾ ಉದ್ಯಮಕ್ಕೆ "ನಿರ್ಣಾಯಕ ಪ್ರಮುಖ ಕ್ಷಣ" ಎಂದು ಕರೆದರಲ್ಲದೆ  ಈ ಸಮಯದಲ್ಲಿ ಭಾರತದೊಂದಿಗೆ ಎಂಪಿಎ ಚಾಲ್ತಿಯಲ್ಲಿರುವ ಪಾಲುದಾರಿಕೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. "ಭಾರತದ ಸೃಜನಶೀಲ ಆರ್ಥಿಕತೆಯು ಅಸಾಧಾರಣ ಬೆಳವಣಿಗೆಗೆ ಸಜ್ಜಾಗಿದೆ, ಮತ್ತು ಎಂಪಿಎ ಪ್ರಯಾಣವನ್ನು ಬೆಂಬಲಿಸಲು ಹೆಮ್ಮೆಪಡುತ್ತದೆ" ಎಂದು ರಿವ್ಕಿನ್ ಹೇಳಿದರು.

ವರದಿಯನ್ನು ಅನಾವರಣಗೊಳಿಸಿದ ನಂತರ ಪ್ರಮುಖ ಸಂಶೋಧನೆಗಳನ್ನು ಹಂಚಿಕೊಂಡ ರಿವ್ಕಿನ್, ಭಾರತೀಯ ಚಲನಚಿತ್ರ, ಟಿವಿ ಮತ್ತು ಸ್ಟ್ರೀಮಿಂಗ್ ಉದ್ಯಮಗಳು 2.6 ಮಿಲಿಯನ್ ಉದ್ಯೋಗಗಳನ್ನು ಬೆಂಬಲಿಸಿವೆ ಮತ್ತು ವಾರ್ಷಿಕ ಆರ್ಥಿಕ ಉತ್ಪಾದನೆಯ ಪ್ರಕಾರ 60 ಬಿಲಿಯನ್ ಡಾಲರ್ಗಿಂತ ಹೆಚ್ಚು ಗಳಿಸಿವೆ ಎಂದು ಹೇಳಿದರು. ಹೂಡಿಕೆಗಳು, ಪಾಲುದಾರಿಕೆಗಳು ಮತ್ತು ಮುಂದಾಲೋಚನೆಯ ನೀತಿಗಳಿಗಾಗಿ ವಕಾಲತ್ತು ಮಾಡುವ ಮೂಲಕ ಭಾರತದ ಮನರಂಜನಾ ಕ್ಷೇತ್ರದ ಬೆಳವಣಿಗೆಯನ್ನು ಉತ್ತೇಜಿಸಲು ಎಂಪಿಎ ಸದಸ್ಯ ಸ್ಟುಡಿಯೋಗಳು ಬದ್ಧವಾಗಿವೆ ಎಂದು ಅವರು ಹೇಳಿದರು.

ಎಂಪಿಎ ಉದ್ದೇಶಗಳು ಮತ್ತು ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸೃಜನಶೀಲ ಆರ್ಥಿಕತೆಯ ದೃಷ್ಟಿಕೋನದ ನಡುವಿನ ಹೊಂದಾಣಿಕೆಯನ್ನು ರಿವ್ಕಿನ್ ಒತ್ತಿಹೇಳಿದರು, ಕಥೆ ಹೇಳುವಿಕೆ, ದೃಶ್ಯ ಪರಿಣಾಮಗಳು ಮತ್ತು ಜಾಗತಿಕ ವಿಷಯ ರಫ್ತು ಮಾಡುವಲ್ಲಿ ಭಾರತದ ಸಾಮರ್ಥ್ಯವನ್ನು ಎತ್ತಿ ತೋರಿಸಿದರು.
ಎಂಪಿಎ ವರದಿಯ ಪ್ರಮುಖ ಮುಖ್ಯಾಂಶಗಳ ವೀಡಿಯೊ ಪ್ರಸ್ತುತಿಯೊಂದಿಗೆ ಅಧಿವೇಶನವು ಕೊನೆಗೊಂಡಿತು, ಸಹಯೋಗ, ನಾವೀನ್ಯತೆ ಮತ್ತು ಅಂತರ್ಗತ ಬೆಳವಣಿಗೆಯಿಂದ ಪ್ರೇರಿತವಾದ ಭವಿಷ್ಯಕ್ಕಾಗಿ ನೀತಿ ನಿರೂಪಕರು ಮತ್ತು ಜಾಗತಿಕ ಮಾಧ್ಯಮ ನಾಯಕರ ನಡುವಿನ ಹಂಚಿಕೆಯ ದೃಷ್ಟಿಕೋನವನ್ನು ಇದು ಸಂಕೇತಿಸುತ್ತದೆ.

ನೈಜ ಸಮಯದ ಅಧಿಕೃತ ಮಾಹಿತಿಗಳಿಗಾಗಿ, ದಯವಿಟ್ಟು ನಮ್ಮನ್ನು ಅನುಸರಿಸಿ:

On X :

https://x.com/WAVESummitIndia

https://x.com/MIB_India

https://x.com/PIB_India

https://x.com/PIBmumbai

On Instagram:

https://www.instagram.com/wavesummitindia

https://www.instagram.com/mib_india

https://www.instagram.com/pibindia

 

*****

 


Release ID: (Release ID: 2126943)   |   Visitor Counter: 10