WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್ ಬಜಾರ್ 2025, 250 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಒಪ್ಪಂದಗಳನ್ನು ಮಾಡಿದೆ ಮತ್ತು ಪ್ರಮುಖ ಅಂತರರಾಷ್ಟ್ರೀಯ ಸಹಯೋಗಗಳನ್ನು ಅನಾವರಣಗೊಳಿಸಿದೆ: ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಸಂಜಯ್ ಜಾಜು

 Posted On: 02 MAY 2025 9:33PM |   Location: PIB Bengaluru

ವೇವ್ಸ್ ಶೃಂಗಸಭೆಯ ಪ್ರಮುಖ ಜಾಗತಿಕ ಮಾರುಕಟ್ಟೆ ಉಪಕ್ರಮವಾದ ವೇವ್ಸ್ ಬಜಾರ್, ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಅಂತರರಾಷ್ಟ್ರೀಯ ಸಹಯೋಗಕ್ಕೆ ಪ್ರಬಲ ವೇಗವರ್ಧಕವಾಗಿ ಹೊರಹೊಮ್ಮಿದೆ. ಕಂಟೆಂಟ್‌ ಸೃಷ್ಟಿಕರ್ತರನ್ನು ಹೂಡಿಕೆದಾರರು, ಖರೀದಿದಾರರೊಂದಿಗೆ ಸಂಪರ್ಕಿಸಲು ವಿನ್ಯಾಸಗೊಳಿಸಲಾದ ವೇವ್ಸ್ ಬಜಾರ್, ಭಾರತವನ್ನು ಕಂಟೆಂಟ್ ವಾಣಿಜ್ಯೀಕರಣದ ಕಾರ್ಯತಂತ್ರದ ಕೇಂದ್ರವಾಗಿ ಪರಿವರ್ತಿಸಲು ಸಜ್ಜಾಗಿದೆ. ವೇವ್ಸ್‌ ಬಜಾರ್ 2025, 250 ಕೋಟಿಗೂ ಹೆಚ್ಚು ಮೌಲ್ಯದ ಒಪ್ಪಂದಗಳನ್ನು ಮಾಡಿದೆ ಮತ್ತು ಪ್ರಮುಖ ಅಂತರರಾಷ್ಟ್ರೀಯ ಸಹಯೋಗಗಳನ್ನು ಅನಾವರಣಗೊಳಿಸಿದೆ ಎಂದು ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್ ಶೃಂಗಸಭೆಯಲ್ಲಿ  ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಹೇಳಿದ್ದಾರೆ.

ತನ್ನ ಚೊಚ್ಚಲ ಆವೃತ್ತಿಯಲ್ಲಿ, ವೇವ್ಸ್ ಬಜಾರ್ ದಕ್ಷಿಣ ಕೊರಿಯಾ, ಜಪಾನ್, ಅಮೆರಿಕ, ಜರ್ಮನಿ, ರಷ್ಯಾ, ನೆದರ್ಲ್ಯಾಂಡ್ಸ್ ಮತ್ತು ನ್ಯೂಜಿಲೆಂಡ್ ಸೇರಿದಂತೆ 22 ಕ್ಕೂ ಹೆಚ್ಚು ದೇಶಗಳ ಪ್ರಮುಖ ವೃತ್ತಿಪರರನ್ನು ಒಟ್ಟುಗೂಡಿಸಿತು ಮತ್ತು 95 ಜಾಗತಿಕ ಖರೀದಿದಾರರು ಮತ್ತು 224 ಮಾರಾಟಗಾರರು ಭಾಗವಹಿಸಿದ್ದರು. ಪ್ರಮುಖ ಖರೀದಿದಾರರಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಮೆಟಾ, ಡಿಸ್ನಿ ಸ್ಟಾರ್, ಜೀ ಎಂಟರ್‌ಟೈನ್‌ಮೆಂಟ್, ಬನಿಜಯ್ ಏಷ್ಯಾ, ವಾರ್ನರ್ ಬ್ರದರ್ಸ್ ಡಿಸ್ಕವರಿ, ಸೋನಿ ಎಲ್‌ಐವಿ, ವೈಆರ್‌ಎಫ್, ಧರ್ಮ, ಜಿಯೋ ಸ್ಟುಡಿಯೋಸ್, ರೋಟರ್‌ಡ್ಯಾಮ್ ಫಿಲ್ಮ್ ಫೆಸ್ಟಿವಲ್ ಮತ್ತು ರಶ್ಲೇಕ್ ಮೀಡಿಯಾ ಸೇರಿವೆ.

ವೀಕ್ಷಣಾ ಕೊಠಡಿ ಮತ್ತು ಮಾರುಕಟ್ಟೆ ಪ್ರದರ್ಶನಗಳು:

115 ಚಲನಚಿತ್ರ ನಿರ್ಮಾಪಕರು ತಮ್ಮ ಪೂರ್ಣಗೊಂಡ ಯೋಜನೆಗಳನ್ನು ಅಂತರರಾಷ್ಟ್ರೀಯ ಖರೀದಿದಾರರಿಗೆ ಪ್ರಸ್ತುತಪಡಿಸಿದರು. ವೀಕ್ಷಣಾ ಕೊಠಡಿಯಿಂದ 15 ಅತ್ಯುತ್ತಮ ಯೋಜನೆಗಳನ್ನು 'ಟಾಪ್ ಸೆಲೆಕ್ಟ್' ಎಂದು ಆಯ್ಕೆ ಮಾಡಲಾಯಿತು ಮತ್ತು ಅವುಗಳನ್ನು ನೇರಪ್ರಸಾರ ಮಾಡಲಾಯಿತು. ಚಲನಚಿತ್ರ ನಿರ್ಮಾಪಕರನ್ನು ಖ್ಯಾತ ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ ಸನ್ಮಾನಿಸಿದರು, ನಟ ಟೈಗರ್ ಶ್ರಾಫ್ ಆಯ್ದ ಶೀರ್ಷಿಕೆಗಳಲ್ಲಿ ಒಂದನ್ನು ಬೆಂಬಲಿಸಲು ಹಾಜರಿದ್ದರು. ಮಾರುಕಟ್ಟೆ ಪ್ರದರ್ಶನವು ಪ್ರತಿಭಾನ್ವಿತ ಚಲನಚಿತ್ರ ನಿರ್ಮಾಪಕರಿಂದ 15 ಗಮನಾರ್ಹ ಮತ್ತು ಮೆಚ್ಚುಗೆ ಪಡೆದ ಯೋಜನೆಗಳನ್ನು ಪ್ರದರ್ಶಿಸಿತು.

ಪಿಚ್ ರೂಮ್: 104 ಪ್ರಾಜೆಕ್ಟ್ ಸಲ್ಲಿಕೆಗಳಲ್ಲಿ, 16 ಕ್ಯುರೇಟೆಡ್ ಪ್ರಾಜೆಕ್ಟ್‌ ಗಳನ್ನು ನೇರಪ್ರಸಾರ ಮಾಡಲು ಆಯ್ಕೆ ಮಾಡಲಾಯಿತು, ಇದು ಆರಂಭಿಕ ಹಂತದ ಕಂಟೆಂಟ್‌ ಸೃಷ್ಟಿಕರ್ತರಿಗೆ ವೇವ್ಸ್ ಬಜಾರ್‌ ನ 2 ದಿನಗಳಲ್ಲಿ ಉದ್ಯಮದ ಪಾಲುದಾರರೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ವೇದಿಕೆಯನ್ನು ನೀಡಿತು.

ಬಿ2ಬಿ ಖರೀದಿದಾರ-ಮಾರಾಟಗಾರರ ಮಾರುಕಟ್ಟೆ: ವೇವ್ಸ್ ಬಜಾರ್, ಎಫ್‌ ಐ ಸಿ ಸಿ ಐ (ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ) ಸಹಯೋಗದೊಂದಿಗೆ ಭಾರತದ ಮೊದಲ ಮೀಸಲಾದ ಬಿ2ಬಿ ಖರೀದಿದಾರ-ಮಾರಾಟಗಾರರ ಸಭೆಗಳನ್ನು ಮೇ 1–3 ರವರೆಗೆ ನಡೆಸಿತು, ಇದು ಉದ್ದೇಶಿತ ಒಪ್ಪಂದ ಮಾಡಿಕೊಳ್ಳುವಿಕೆ ಮತ್ತು ಸೃಜನಶೀಲ ವ್ಯವಹಾರ ಅಭಿವೃದ್ಧಿಯನ್ನು ಸಕ್ರಿಯಗೊಳಿಸಿತು.

ಆರಂಭಿಕ ವ್ಯವಹಾರ ಫಲಿತಾಂಶಗಳು

ವೇವ್ಸ್ ಬಜಾರ್ ಮೊದಲ ಒಂದೂವರೆ ದಿನಗಳಲ್ಲಿ ಚಲನಚಿತ್ರ, ಸಂಗೀತ, ಅನಿಮೇಷನ್, ರೇಡಿಯೋ ಮತ್ತು ವಿ ಎಫ್‌ ಎಕ್ಸ್ ವಲಯಗಳಲ್ಲಿ 250 ಕೋಟಿ ರೂ. ಮೌಲ್ಯದ ದೃಢೀಕೃತ ವಹಿವಾಟುಗಳನ್ನು ದಾಖಲಿಸಿದೆ. ಮುಂದಿನ ಎರಡು ದಿನಗಳಲ್ಲಿ ಈ ಅಂಕಿ ಅಂಶ ಗಮನಾರ್ಹವಾಗಿ ಏರಿಕೆಯಾಗುವ ನಿರೀಕ್ಷೆಯಿದೆ ಮತ್ತು 400 ಕೋಟಿ ರೂ. ದಾಟುವ ನಿರೀಕ್ಷೆಯಿದೆ.

ಮೇ 2, 2025 ರಂದು ಗಮನಾರ್ಹ ವಹಿವಾಟುಗಳು ಮತ್ತು ಪ್ರಮುಖ ಪ್ರಕಟಣೆಗಳು

ಟಾಪ್ ಸೆಲೆಕ್ಟ್ ಚಿತ್ರವಾದ ಖಿಡ್ಕಿ ಗಾಂವ್, ಏಷ್ಯನ್ ಸಿನಿಮಾ ಫಂಡ್‌ ನೊಂದಿಗೆ ಪೋಸ್ಟ್-ಪ್ರೊಡಕ್ಷನ್ ಮತ್ತು ವಿ ಎಫ್‌ ಎಕ್ಸ್ ಒಪ್ಪಂದವನ್ನು ಪಡೆದುಕೊಂಡಿದೆ. ಏಷ್ಯನ್ ಸಿನಿಮಾ ಫಂಡ್ (ಎಸಿಎಫ್) ಬುಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಬೆಂಬಲ ಕಾರ್ಯಕ್ರಮವಾಗಿದ್ದು, ಇದು ಫಿಕ್ಷನ್ ಮತ್ತು ಸಾಕ್ಷ್ಯಚಿತ್ರ ಯೋಜನೆಗಳನ್ನು ಒಳಗೊಂಡಂತೆ ಏಷ್ಯನ್ ಚಲನಚಿತ್ರಗಳಿಗೆ ಹಣವನ್ನು ಒದಗಿಸುತ್ತದೆ.‌

  • ಇಂಡೋ-ಯುರೋಪಿಯನ್ ಅನಿಮೇಷನ್ ಮೈತ್ರಿ (€30 ಮಿಲಿಯನ್)

ಬ್ರಾಡ್‌ವಿಷನ್ ಪರ್ಸ್ಪೆಕ್ಟಿವ್ಸ್ (ಭಾರತ) ಮತ್ತು ಫ್ಯಾಬ್ರಿಕ್ ಡಿ'ಇಮೇಜಸ್ ಗ್ರೂಪ್ (ಯುರೋಪ್) ನಾಲ್ಕು ಅನಿಮೇಟೆಡ್ ಚಲನಚಿತ್ರಗಳಿಗೆ €30 ಮಿಲಿಯನ್ ಸಹ-ನಿರ್ಮಾಣ ಒಪ್ಪಂದವನ್ನು ಘೋಷಿಸಿವೆ. €7–8 ಮಿಲಿಯನ್ ಬಜೆಟ್‌ ನಲ್ಲಿರುವ ಪ್ರತಿಯೊಂದು ಶೀರ್ಷಿಕೆಯನ್ನು ಇಂಡೋ-ಫ್ರೆಂಚ್ ಮತ್ತು ಇಂಡೋ-ಬೆಲ್ಜಿಯಂ ಒಪ್ಪಂದದ ಚೌಕಟ್ಟಿನ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಮೈತ್ರಿಯನ್ನು ಮಾರ್ಕ್ ಮೆರ್ಟೆನ್ಸ್ (ಸಿಒಒ, ಎಫ್‌ ಡಿ ಐ ಗ್ರೂಪ್) ಮತ್ತು ಶ್ರೀರಾಮ್ ಚಂದ್ರಶೇಖರನ್ (ಸ್ಥಾಪಕ ಮತ್ತು ಸಿಇಒ, ಬ್ರಾಡ್‌ವಿಷನ್) ಅವರು ಅನುಮೋದಿಸಿದರು, ಇದು ಭಾರತದಲ್ಲಿ ಅಂತರರಾಷ್ಟ್ರೀಯ ಅನಿಮೇಷನ್ ಸಹಯೋಗಗಳಿಗೆ  ಹೊಸ ಮಾನದಂಡವನ್ನು ಸ್ಥಾಪಿಸಿತು.

  • ಭಾರತ-ಯುಕೆ ಸಹ-ನಿರ್ಮಾಣ ಒಪ್ಪಂದಕ್ಕೆ ಸಹಿ ಹಾಕಲಾಗಿದೆ

ಅಮಂಡಾ ಗ್ರೂಮ್ (ಸ್ಥಾಪಕಿ ಮತ್ತು ಸಿಇಒ, ದಿ ಬ್ರಿಡ್ಜ್, ಯುಕೆ) ಮತ್ತು ಮುಂಜಾಲ್ ಶ್ರಾಫ್ (ಸಹ-ಸಂಸ್ಥಾಪಕಿ, ಗ್ರಾಫಿಟಿ ಸ್ಟುಡಿಯೋಸ್, ಭಾರತ) ಭಾರತದ ವಸಾಹತುಶಾಹಿ ಇತಿಹಾಸವನ್ನು ಅನ್ವೇಷಿಸುವ ವಾಸ್ತವಿಕ ಸರಣಿಗಳನ್ನು ಸಹ-ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ ಸಹಿ ಹಾಕಿದರು. ಫಿಲ್ಮ್ ಬಜಾರ್‌ ನಿಂದ ಹಲವು ವರ್ಷಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಮತ್ತು ಕಂಟೆಂಟ್ ಇಂಡಿಯಾದಲ್ಲಿ ಅಂತಿಮಗೊಳಿಸಲಾದ ಪಾಲುದಾರಿಕೆಯು ಅಂತರರಾಷ್ಟ್ರೀಯ ಕಥೆ ಹೇಳುವಿಕೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

  • ಟಿವಿ ಅಸಾಹಿಯಿಂದ "ಶಿನ್ ಚಾನ್ ಇಂಡಿಯಾ ವರ್ಷ" ಉಪಕ್ರಮ ಆರಂಭ

ಭಾರತದಲ್ಲಿ ತನ್ನ ಅಪಾರ ಜನಪ್ರಿಯತೆಯನ್ನು ಆಚರಿಸಲು ಟಿವಿ ಅಸಾಹಿ "ಶಿನ್ ಚಾನ್ ಇಂಡಿಯಾ ವರ್ಷ" ವನ್ನು ಘೋಷಿಸಿದೆ. ಮುಖ್ಯಾಂಶಗಳು ಇಲ್ಲಿವೆ:

  • ಶಿನ್ ಚಾನ್: ಅವರ್ ಡೈನೋಸಾರ್ ಡೈರಿ ಮೇ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ
  • 2025 ರ ದೀಪಾವಳಿ ಹಬ್ಬದಂದು ಎರಡನೇ ಚಿತ್ರ ‘ದಿ ಸ್ಪೈಸಿ ಕಸುಕಾಬೆ ಡ್ಯಾನ್ಸರ್ಸ್ ಇನ್ ಇಂಡಿಯಾ’ಬಿಡುಗಡೆ
  • ಅನಿಮೆ ಇಂಡಿಯಾ (ಆಗಸ್ಟ್) ಮತ್ತು ಮೇಳ ಮೇಳ ಜಪಾನ್ (ಸೆಪ್ಟೆಂಬರ್) ನಲ್ಲಿ ಅಭಿಮಾನಿಗಳನ್ನು ತೊಡಗಿಸಿಕೊಳ್ಳುವ ಕಾರ್ಯಕ್ರಮಗಳು

ಈ ಉಪಕ್ರಮವು ಜಾಗತಿಕ ಅನಿಮೆ ಪೂರಕ ವ್ಯವಸ್ಥೆಯಲ್ಲಿ ಭಾರತದ ಹೆಚ್ಚುತ್ತಿರುವ ಪಾತ್ರವನ್ನು ಮತ್ತಷ್ಟು ಸ್ಥಾಪಿಸುತ್ತದೆ ಮತ್ತು ಭಾರತ-ಜಪಾನ್‌ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುತ್ತದೆ.

 

*****


Release ID: (Release ID: 2126934)   |   Visitor Counter: 7