WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

10ನೇ ರಾಷ್ಟ್ರೀಯ ಸಮುದಾಯ ರೇಡಿಯೋ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು


ಕೇಂದ್ರ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು 12 ಸಮುದಾಯ ರೇಡಿಯೋ ಕೇಂದ್ರಗಳನ್ನು ಅತ್ಯುತ್ತಮ ಕೊಡುಗೆಗಾಗಿ ಗೌರವಿಸಿದರು

ಸಮುದಾಯ ರೇಡಿಯೋ ದೇಶದ ಪ್ರತಿಯೊಂದು ಮೂಲೆಯಲ್ಲಿರುವ ನಾಗರಿಕರನ್ನು ತಲುಪುವ ಒಂದು ಸಾಧನವಾಗಿದೆ; ಈ ಮೂಲಕ, ಪ್ರತಿಯೊಬ್ಬರಿಗೂ ಪ್ರಮುಖ ಅಭಿವೃದ್ಧಿ ಉಪಕ್ರಮಗಳ ಬಗ್ಗೆ ತಿಳಿಸುತ್ತದೆ: ಡಾ. ಎಲ್. ಮುರುಗನ್

ಮುಂಬೈನಲ್ಲಿ ವೇವ್ಸ್ 2025ರಲ್ಲಿ 8ನೇ ರಾಷ್ಟ್ರೀಯ ಸಮುದಾಯ ರೇಡಿಯೋ ಸಮ್ಮೇಳನ ಆಯೋಜನೆ

 Posted On: 03 MAY 2025 4:26PM |   Location: PIB Bengaluru

ಮುಂಬೈನಲ್ಲಿ ನಡೆಯುತ್ತಿರುವ ಜಾಗತಿಕ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆಯ (ವೇವ್ಸ್) ಸಂದರ್ಭದಲ್ಲಿ ಇಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಭಾರತೀಯ ಸಮೂಹ ಸಂವಹನ ಸಂಸ್ಥೆಯು 8 ನೇ ರಾಷ್ಟ್ರೀಯ ಸಮುದಾಯ ರೇಡಿಯೋ ಸಮ್ಮೇಳನವನ್ನು ಆಯೋಜಿಸಿದವು. ಈ ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು 12 ಅತ್ಯುತ್ತಮ ಸಮುದಾಯ ರೇಡಿಯೋ ಕೇಂದ್ರಗಳಿಗೆ 10 ನೇ ರಾಷ್ಟ್ರೀಯ ಸಮುದಾಯ ರೇಡಿಯೋ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಲ್. ಮುರುಗನ್ ಅವರು ವಿಜೇತರನ್ನು ಅಭಿನಂದಿಸಿದರು ಮತ್ತು ರಾಷ್ಟ್ರೀಯ ಸಮ್ಮೇಳನವು ಭಾರತದಲ್ಲಿ ಸಮುದಾಯ ಮಾಧ್ಯಮ ವಲಯವನ್ನು ನಾವೀನ್ಯತೆ, ಒಳಗೊಳ್ಳುವಿಕೆ ಮತ್ತು ಪ್ರಭಾವದ ಮೂಲಕ ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಸಮುದಾಯ ರೇಡಿಯೋ ದೇಶದ ಎಲ್ಲಾ ಮೂಲೆಗಳಲ್ಲಿರುವ ನಾಗರಿಕರನ್ನು ತಲುಪುವ ಒಂದು ಸಾಧನವಾಗಿದೆ ಎಂದು ಅವರು ಹೇಳಿದರು. ದೇಶಾದ್ಯಂತದ ಸಮುದಾಯ ರೇಡಿಯೋಗಳು ಒಂದಲ್ಲ ಒಂದು ಕಲ್ಯಾಣ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿವೆ ಮತ್ತು ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ಪ್ರಚಾರ ಸೇರಿದಂತೆ ಉತ್ತಮ ಉದ್ದೇಶಗಳನ್ನು ಬೆಂಬಲಿಸುತ್ತಿವೆ ಎಂದು ಅವರು ಹೇಳಿದರು. ಸಮುದಾಯ ರೇಡಿಯೋ ಕೇಂದ್ರಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನಗಳು ಮತ್ತು ಕೇಂದ್ರ ಸರ್ಕಾರದ ಪ್ರಮುಖ ಅಭಿವೃದ್ಧಿ ಉಪಕ್ರಮಗಳನ್ನು ದೇಶದ ಎಲ್ಲಾ ಭಾಗಗಳಿಗೆ ಕೊಂಡೊಯ್ಯುತ್ತಿವೆ. ಈ ಕೇಂದ್ರಗಳು ಮಹಿಳೆಯರು ಮತ್ತು ಬುಡಕಟ್ಟು ಜನಾಂಗದಂತಹ ವಿವಿಧ ಸಮುದಾಯಗಳು ಮತ್ತು ವರ್ಗಗಳಿಗೆ ಕಲ್ಯಾಣ ಚಟುವಟಿಕೆಗಳ ಹೊಸ ಆಯಾಮವನ್ನು ಸೇರಿಸುತ್ತಿವೆ ಎಂದು ಅವರು ಹೇಳಿದರು.

ವೇವ್ಸ್ 2025ರ ಮೊದಲ ಆವೃತ್ತಿಯ ಕುರಿತು ಮಾತನಾಡಿದ ಡಾ. ಎಲ್. ಮುರುಗನ್, ಇಲ್ಲಿ ಹೊಸ ಆಲೋಚನೆಗಳು ಹೊರಹೊಮ್ಮುತ್ತವೆ ಮತ್ತು ಸೃಜನಶೀಲ ಆರ್ಥಿಕತೆಯು ಉದಯೋನ್ಮುಖ ವಲಯವಾಗಿದ್ದು ಅದು ಮುಂದಿನ ದಿನಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ನಾಲ್ಕು ವಿಭಿನ್ನ ಥೀಮ್ ಗಳ ಅಡಿಯಲ್ಲಿ ಪ್ರಶಸ್ತಿ ಪಡೆದ ಸಮುದಾಯ ರೇಡಿಯೋ ಕೇಂದ್ರಗಳ ಪಟ್ಟಿ

ಈ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಜಂಟಿ ಕಾರ್ಯದರ್ಶಿ (ಪ್ರಸಾರ) ಶ್ರೀ ಪೃಥುಲ್ ಕುಮಾರ್ ಮತ್ತು ಎನ್ ಎಫ್ ಡಿ ಸಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಐಐಎಂಸಿ ಉಪಕುಲಪತಿ ಡಾ. ಅನುಪಮಾ ಭಟ್ನಾಗರ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಈ ಸಮ್ಮೇಳನವು ದೇಶಾದ್ಯಂತ 400 ಸಮುದಾಯ ರೇಡಿಯೋ ಕೇಂದ್ರಗಳ ಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ, ಅವರಿಗೆ ಸಂವಹನ ಮತ್ತು ಸಹಯೋಗಕ್ಕೆ ಅವಕಾಶವನ್ನು ಒದಗಿಸಿತು. ಪ್ರಸ್ತುತ ದೇಶಾದ್ಯಂತ 531 ಸಮುದಾಯ ರೇಡಿಯೋ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕ ಸಂವಾದ ಮತ್ತು ಜಾಗೃತಿ ಮೂಡಿಸುವಲ್ಲಿ ಸಮುದಾಯ ರೇಡಿಯೋದ ಪ್ರಮುಖ ಪಾತ್ರ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಅದರ ಸಾಮರ್ಥ್ಯವನ್ನು ಸಮ್ಮೇಳನವು ಒತ್ತಿಹೇಳಿತು.

 

*****


Release ID: (Release ID: 2126632)   |   Visitor Counter: 11