ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಬ್ರ್ಯಾಂಡ್‌ಗಳು, ತಮ್ಮ ಪ್ರೇಕ್ಷಕರನ್ನು ಅರ್ಥಮಾಡಿಕೊಳ್ಳಲು, ತಮ್ಮ ಕೊಡುಗೆಗಳನ್ನು ವೈಯಕ್ತೀಕರಿಸಲು ಮತ್ತು ಅರ್ಥಪೂರ್ಣ ಸಂಪರ್ಕ ಸಾಧಿಸಲು ಸಂಸ್ಕೃತಿ, ಒಂದು ಪ್ರಬಲ ಮಾರ್ಗವಾಗಿದೆ : ಪ್ರೇಮ್ ನಾರಾಯಣ್, ಓಗಿಲ್ವಿ ವೇವ್ಸ್ 2025
ಬ್ರಾಂಡ್ ನಿರ್ಮಾಣಕ್ಕೆ ಶಕ್ತಿಯ ರೂಪದಲ್ಲಿ ಸಂಸ್ಕೃತಿ - ಓಗಿಲ್ವಿ ವೇವ್ಸ್ 2025ರಲ್ಲಿ ಪ್ರೇಮ್ ನಾರಾಯಣ್ ಅವರ ಮಾಸ್ಟರ್‌ಕ್ಲಾಸ್‌ನಿಂದಾಯ್ಡ ಪ್ರಮುಖ ಅಂಶಗಳು
Posted On:
01 MAY 2025 6:02PM
|
Location:
PIB Bengaluru
ವೇವ್ಸ್ 2025ರ ಉದ್ಘಾಟನಾ ದಿನದಂದು, ಓಗಿಲ್ವಿಯ ಮುಖ್ಯ ಕಾರ್ಯತಂತ್ರ ಅಧಿಕಾರಿ ಶ್ರೀ ಪ್ರೇಮ್ ನಾರಾಯಣ್ ಅವರು ಬ್ರ್ಯಾಂಡ್-ನಿರ್ಮಾಣದ ಕುರಿತು ಅದ್ಭುತವಾದ ಮಾಸ್ಟರ್‌ಕ್ಲಾಸ್ ಅನ್ನು ನೀಡಿದರು, ಭಾರತೀಯ ಗ್ರಾಹಕರನ್ನು ತಲುಪುವಂತಹ ಬ್ರ್ಯಾಂಡ್‌ಗಳನ್ನು ನಿರ್ಮಿಸಲು ಸಂಸ್ಕೃತಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಪ್ರಮುಖ ಅಂಶಗಳನ್ನು ಹಂಚಿಕೊಂಡರು.
"ಬ್ರಾಂಡ್‌ಗಳನ್ನು ನಿರ್ಮಿಸಲು ಶಕ್ತಿ ತುಂಬುವ ಸಂಸ್ಕೃತಿ" ಎಂಬ ಶೀರ್ಷಿಕೆಯ ತಮ್ಮ ಸೆಷನ್ ನಲ್ಲಿ, ಶ್ರೀ ನಾರಾಯಣ್ ಅವರು ಬ್ರ್ಯಾಂಡ್ ವಿವರಣೆಗಳಿಗೆ ರೂಪ ನೀಡುವಲ್ಲಿ ಮತ್ತು ಗ್ರಾಹಕರ ನಡವಳಿಕೆಯ ಮೇಲೆ ಪ್ರಭಾವ ಬೀರುವಲ್ಲಿ ಸಾಂಸ್ಕೃತಿಕ ಪ್ರಸ್ತುತತೆಯ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ಭಾರತದಲ್ಲಿ ಜಾಹೀರಾತು ಸಾಂಸ್ಕೃತಿಕ ಸಂಪ್ರದಾಯಗಳಲ್ಲಿ ಬೇರೂರುವ ಮೂಲಕ ಹೇಗೆ ವಿಕಸನಗೊಂಡಿದೆ ಮತ್ತು ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಹೊಂದಿಕೆಯಾಗುವ ಬ್ರ್ಯಾಂಡ್‌ಗಳು ಶಾಶ್ವತ ಗ್ರಾಹಕ ನಿಷ್ಠೆಯನ್ನು ಹೇಗೆ ಗಳಿಸುವ ಸಾಧ್ಯತೆಯಿದೆ ಎಂಬುದನ್ನು ಪ್ರದರ್ಶಿಸಿದರು.
ಕ್ಯಾಡ್ಬರಿಯ ಜಾಹೀರಾತು ಪಯಣವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಶ್ರೀ ನಾರಾಯಣ್ ಅವರು, ಆಳವಾಗಿ ಬೇರೂರಿರುವ ಆಚರಣೆಯ ಆಧುನಿಕ ಅಭಿವ್ಯಕ್ತಿಯಾಗಿ ಚಾಕೊಲೇಟ್ ಅನ್ನು ಬಿಂಬಿಸುವ ಮೂಲಕ ಭಾರತೀಯ ಸಿಹಿ ತಿಂಡಿಗಳ ಸಂಪ್ರದಾಯದಲ್ಲಿ ಹೇಗೆ ಬ್ರ್ಯಾಂಡ್ ಯಶಸ್ವಿಯಾಗಿ ಸೇರಿಕೊಂಡಿತು ಎಂಬುದನ್ನು ವಿವರಿಸಿದರು. ಈ ಸಾಂಸ್ಕೃತಿಕ ಜೋಡಣೆಯು ಭಾರತೀಯ ಮನೆ ಮನೆಗಳಲ್ಲಿ ಆಚರಣೆಗಳು ಮತ್ತು ದೈನಂದಿನ ಕ್ಷಣಗಳನ್ನು ಮರು ವ್ಯಾಖ್ಯಾನಿಸುವ ಮೂಲಕ ವಿಶಿಷ್ಟ ಮತ್ತು ಶಾಶ್ವತವಾದ ಸ್ಥಳವನ್ನು ಸೃಷ್ಟಿಸಲು ಬ್ರ್ಯಾಂಡ್ ಗೆ ಸಹಾಯ ಮಾಡಿತು.
ಬ್ರ್ಯಾಂಡ್ ಪ್ರಯೋಜನಗಳನ್ನು ಪ್ರಸ್ತುತಪಡಿಸಲು ಸಾಂಸ್ಕೃತಿಕ ಅಂಶಗಳನ್ನು ಪರಿಣಾಮಕಾರಿಯಾಗಿ ಬಳಸಿದ ಇತರ ಅಭಿಯಾನಗಳಿಗು ಕೂಡ ಅಧಿವೇಶನದಲ್ಲಿ ವಿಶೇಷ ಗಮನಹರಿಸಲಾಗಿತ್ತು. ಸಿಯೆಟ್ ಅವರ ಸುರಕ್ಷತಾ ಸಂದೇಶ ಮತ್ತು ಫೆವಿಕಾಲ್‌ನ ಹಾಸ್ಯಮಯ ಆದರೆ ಸಂಸ್ಕೃತಿಕಯೊಂದಿಗೆ ಮೇಳೈಸಿದ ಕಥೆ ಹೇಳುವಿಕೆ ಉತ್ತಮ ಉದಾಹರಣೆಗಳಾಗಿವೆ - ಇವೆರಡೂ ಬ್ರ್ಯಾಂಡ್ ನೆನಪಿಸುವಿಕೆ ಜೊತೆ ಜೊತೆಗೆ ಭಾವನಾತ್ಮಕ ಸಂಪರ್ಕವನ್ನು ವೃದ್ಧಿಸಿವೆ.
"ಬ್ರಾಂಡ್ ಬಗ್ಗೆ ಪ್ರೀತಿ"ಯನ್ನು ಹುಟ್ಟುಹಾಕುವುದು ಉತ್ಪನ್ನದ ವೈಶಿಷ್ಟ್ಯಗಳನ್ನೂ ಮೀರಿದೆ ಎಂದು ಶ್ರೀ ನಾರಾಯಣ್ ಒತ್ತಿ ಹೇಳಿದರು - ಇದಕ್ಕೆ ಬ್ರ್ಯಾಂಡ್ ಗೆ ಸಾಂಸ್ಕೃತಿಕ ಹೊದಿಕೆಯ ಅಗತ್ಯವಿದೆ. ಉದಾಹರಣೆಗೆ, ಭಾರತೀಯ ಆತಿಥ್ಯದ ಸಂಕೇತವಾದ ಚಹಾದ ಸರಳ ಕಲ್ಪನೆಯನ್ನು ವಿವಿಧ ಬ್ರ್ಯಾಂಡ್‌ಗಳು ಸೃಜನಾತ್ಮಕ ರೂಪದಲ್ಲಿ ಪ್ರಸ್ತುತಪಡಿಸುವ ಮೂಲಕ ಒಗ್ಗಟ್ಟು ಮತ್ತು ಪರಿಚಿತತೆಯನ್ನು ಒತ್ತಿಹೇಳಲು ಬಳಸಿಕೊಳ್ಳುತ್ತವೆ, ಈ ಮೂಲಕ ಬ್ರ್ಯಾಂಡ್ ಜನರಿಗೆ ಬಹಳ ಹತ್ತಿರವಾದಾಗಿರುವಂತಹ ಮತ್ತು ಹೃತ್ಪೂರ್ವಕವಾದ ಅನುಭವ ನೀಡುತ್ತದೆ. ಪ್ರಾದೇಶಿಕ ಸಂವೇದನೆಗಳಿಗೆ ಅನುಗುಣವಾಗಿ ಸಂವಹನವನ್ನು ಕೈಗೊಳ್ಳುವುದರ ಮಹತ್ವವನ್ನು ಅವರು ಒತ್ತಿ ಹೇಳಿದರು. ಭಾರತದ ಶ್ರೀಮಂತ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ, ಪ್ರಾದೇಶಿಕ ಅಂಶಗಳನ್ನು ಸೇರಿಸುವುದು ಬ್ರ್ಯಾಂಡಿಂಗ್‌ನಲ್ಲಿ ಕೇವಲ ಪರಿಣಾಮಕಾರಿ ಮಾತ್ರವಲ್ಲ ಅತ್ಯಗತ್ಯವೂ ಆಗಿದೆ .
ಸಾಂಸ್ಕೃತಿಕ ಸಂದರ್ಭಗಳು ಮತ್ತು ಡಿಜಿಟಲ್ ತಂತ್ರಜ್ಞಾನಗಳ ಒಗ್ಗೂಡಿಸುವಿಕೆ ವ್ಯವಹಾರದ ಅಭಿವೃದ್ಧಿಗೆ ಹೇಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂಬುದರ ಕುರಿತು ಮಾಸ್ಟರ್‌ಕ್ಲಾಸ್ ಬೆಳಕು ಚೆಲ್ಲುತ್ತದೆ. ಶಾರುಖ್ ಖಾನ್ ಅವರ ಮೇಲೆ ಚಿತ್ರಿಸಲಾದ ಕ್ಯಾಡ್ಬರಿಯ "ಮೈ ಆಡ್" ಅಭಿಯಾನವನ್ನು ಹೈಪರ್- ಪರ್ಸನಲೈಸ್ಡ್ ಜಾಹೀರಾತಿಗೆ ಮಾದರಿಯಾಗಿ ಪ್ರಸ್ತುತಪಡಿಸಲಾಯಿತು, ಇದು ಸಾಂಸ್ಕೃತಿಕ ಅಂಶಗಳನ್ನು ಉಳಿಸಿಕೊಳ್ಳುವ ಮೂಲಕ ಡಿಜಿಟಲ್ ಪರಿಕರಗಳನ್ನು ಬಳಸಿಕೊಂಡು ಅತಿ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಅನುವು ಮಾಡಿಕೊಡುತ್ತದೆ.
ಅಧಿಕ ಸಂದರ್ಭೋಚಿತ ಮತ್ತು ಮಾರ್ದನಿಸುವ ಕಥೆಯ ಪ್ರಸ್ತುತಪಡಿಸುವಿಕೆಗಾಗಿ ಕಾರ್ಯನಿರ್ವಹಿಸಬಹುದಾದ ಸಾಂಸ್ಕೃತಿಕ ಅಂಶಗಳಿಂದ ಡಿಜಿಟಲ್ ಮತ್ತು ಸಾಮಾಜಿಕ ವೇದಿಕೆಗಳು, ಸಮೃದ್ಧವಾಗಿವೆ ಎಂದು ಶ್ರೀ ನಾರಾಯಣನ್ ಹೇಳಿದರು. ಟ್ರಕ್ ಮೂಲಕ ಪ್ರಯಾಣಿಸುವವರು ಅಥವಾ ವ್ಯಾಪಾರ ಮಾಡುವವರು ಇಲ್ಲವೇ ಡ್ರೈವರ್ ಗಳಿಗಾಗಿ ಕಣ್ಣಿನ ಪರೀಕ್ಷೆಯ ಮೆನು ಕುರಿತ ಅಭಿಯಾನವನ್ನು ಅವರು ಸೂಚಿಸಿದರು, ಇದು ನಿರ್ದಿಷ್ಟ ಪ್ರೇಕ್ಷಕರಿಗೆ ಸಂದೇಶವನ್ನು ವೈಯಕ್ತೀಕರಿಸುವುದಲ್ಲದೆ, ಸ್ಪಷ್ಟವಾದ ಸಾಮಾಜಿಕ ಪರಿಣಾಮವನ್ನು ಸಹ ಬೀರಿದೆ - ಇದುವರೆಗೆ 42,000ಕ್ಕೂ ಹೆಚ್ಚು ಟ್ರಕ್ಕರ್‌ಗಳಿಗೆ ಪ್ರಯೋಜನವನ್ನು ಒದಗಿಸಿದೆ.
ಅಧಿವೇಶನವನ್ನು ಮುಕ್ತಾಯಗೊಳಿಸುತ್ತಾ, ಬ್ರ್ಯಾಂಡ್‌ಗಳು ತಮ್ಮ ಗ್ರಾಹಕರನ್ನು ಅರ್ಥಮಾಡಿಕೊಳ್ಳಲು, ತಮ್ಮ ಕೊಡುಗೆಗಳನ್ನು ವೈಯಕ್ತೀಕರಿಸಲು ಮತ್ತು ಅರ್ಥಪೂರ್ಣ ಸಂಬಂಧವನ್ನು ಬೆಳೆಸಲು, ಸಂಸ್ಕೃತಿ ಒಂದು ಪ್ರಬಲವಾದ ಮಾಧ್ಯಮವಾಗಿದೆ ಎಂದು ನಾರಾಯಣ್ ಪ್ರತಿಪಾದಿಸಿದರು. ಭಾರತದಲ್ಲಿ ಮಾತ್ರವಲ್ಲದೆ ಭಾರತದೊಂದಿಗೆ ಬೆಳೆಯಲು ಬಯಸುವ ಬ್ರ್ಯಾಂಡ್‌ಗಳಿಗೆ - ಸ್ಥಳೀಯ ಜನರ ಆಕಾಂಕ್ಷೆಗಳು ಹಾಗೂ ಸಂಪ್ರದಾಯಗಳನ್ನು ಅರ್ಥಮಾಡಿಕೊಂಡು, ಅವರ ಭಾಷೆಯಲ್ಲೇ ಮಾತನಾಡುವ ಮೂಲಕ ಬ್ರ್ಯಾಂಡ್‌ಗಳು ಹೇಗೆ ಯಶಸ್ಸು ಸಾಧಿಸಬಹುದು ಎಂಬುದಕ್ಕೆ - ಈ ಅಧಿವೇಶನ ಒಂದು ಮಾರ್ಗಸೂಚಿಯನ್ನು ಕಲ್ಪಿಸಿತು.
*****
Release ID:
(Release ID: 2126095)
| Visitor Counter:
7