ಪ್ರಧಾನ ಮಂತ್ರಿಯವರ ಕಛೇರಿ
ಬಸವ ಜಯಂತಿಯಂದು ಜಗದ್ಗುರು ಬಸವೇಶ್ವರರಿಗೆ ಪ್ರಧಾನಮಂತ್ರಿ ಗೌರವ ನಮನ
ಪ್ರಕಟಣಾ ದಿನಾಂಕ:
30 APR 2025 8:55AM by PIB Bengaluru
ಬಸವ ಜಯಂತಿಯ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಗದ್ಗುರು ಬಸವೇಶ್ವರ ಅವರ ಆಳವಾದ ಜ್ಞಾನ ಮತ್ತು ಬಹುಕಾಲ ಉಳಿಯುವ ಅವರ ಕೊಡುಗೆಯನ್ನು ಸ್ಮರಿಸುವ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. 12ನೇ ಶತಮಾನದ ತತ್ವಜ್ಞಾನಿ ಮತ್ತು ಸಮಾಜ ಸುಧಾರಕರನ್ನು ಸ್ಮರಿಸುತ್ತಾ, ಪ್ರಧಾನಮಂತ್ರಿಗಳು X ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಬಸವ ಜಯಂತಿಯ ಈ ಶುಭಗಳಿಗೆಯಲ್ಲಿ, ಜಗದ್ಗುರು ಬಸವೇಶ್ವರರ ಅಗಾಧವಾದ ಜ್ಞಾನವನ್ನು ನಾವು ಸ್ಮರಿಸುತ್ತೇವೆ. ಸಮಾಜಕ್ಕಾಗಿ ಅವರ ದೃಷ್ಟಿಕೋನ ಮತ್ತು ಅವಕಾಶ ವಂಚಿತರನ್ನು ಮೇಲೆತ್ತಲು ಅವರು ಮಾಡಿದ ಅವಿಶ್ರಾಂತ ಪ್ರಯತ್ನಗಳು ನಮಗೆ ಸದಾ ಮಾರ್ಗದರ್ಶನ ನೀಡುತ್ತಿರುತ್ತವೆ.”
*****
(ಪ್ರಕಟಣೆ ಐ.ಡಿ.: 2125363)
ವಿಸಿಟರ್ ಕೌಂಟರ್ : 44
ಪ್ರಕಟಣೆಯನ್ನು ಇದರಲ್ಲಿ ಓದಿ:
Assamese
,
English
,
Urdu
,
हिन्दी
,
Marathi
,
Manipuri
,
Bengali-TR
,
Bengali
,
Punjabi
,
Gujarati
,
Odia
,
Tamil
,
Telugu
,
Malayalam