WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವೆಕ್ಸ್‌ 2025 ರ ಅರ್ಹತಾ ಮಾನದಂಡಗಳನ್ನು ವಿಸ್ತರಿಸಲಾಗಿದೆ, ಅರ್ಜಿ ಸಲ್ಲಿಸಲು ಏಪ್ರಿಲ್ 21 ಕೊನೆಯ ದಿನವಾಗಿರುತ್ತದೆ


ಪ್ರಮುಖ ಮಾಧ್ಯಮ-ತಂತ್ರಜ್ಞಾನ ನವೋದ್ಯಮ ಕಾರ್ಯಕ್ರಮವು ಹಳೆಯ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತಿದೆ ಮತ್ತು ದೇಶಾದ್ಯಂತ ಆಸಕ್ತಿಯನ್ನು ಸೃಷ್ಟಿಸುತ್ತಿದೆ

 Posted On: 16 APR 2025 5:47PM |   Location: PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಐಎಎಂಎಐ) ಸಹಯೋಗದೊಂದಿಗೆ, ಮಾಧ್ಯಮ ಮತ್ತು ಮನರಂಜನಾ ತಂತ್ರಜ್ಞಾನ ಕ್ಷೇತ್ರದಲ್ಲಿ ನವೋದ್ಯಮಗಳಿಗೆ ಭಾರತದ ಪ್ರಮುಖ ವೇದಿಕೆಯಾದ ವೇವೆಕ್ಸ್ 2025 ಕ್ಕೆ ಎರಡು ಪ್ರಮುಖ ಅಪ್‌ಡೇಟ್‌ ಘೋಷಿಸಿದೆ. ವ್ಯಾಪಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮತ್ತು ನಾವೀನ್ಯತೆಯನ್ನು ವರ್ಧಿಸುವ ಪ್ರಯತ್ನದಲ್ಲಿ, ಅರ್ಹತಾ ಮಾನದಂಡಗಳನ್ನು ವಿಸ್ತರಿಸಲಾಗಿದೆ ಮತ್ತು ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸಲಾಗಿದೆ.

2016ರ ನಂತರ ಪ್ರಾರಂಭವಾದ ನವೋದ್ಯಮಗಳು ವೇವೆಕ್ಸ್ 2025 ಕ್ಕೆ ಅರ್ಜಿ ಸಲ್ಲಿಸಲು ಅರ್ಹವಾಗಿವೆ ಎಂದು ಘೋಷಿಸಲಾಗಿದೆ. ಇದು ಹಿಂದಿನ ಮಾನದಂಡಗಳಿಗಿಂತ ಗಮನಾರ್ಹ ಬದಲಾವಣೆಯಾಗಿದೆ, ಅದು 2020 ಅಥವಾ ನಂತರ ಸ್ಥಾಪನೆಯಾದ ನವೋದ್ಯಮಗಳಿಗೆ ಪ್ರವೇಶವನ್ನು ಸೀಮಿತಗೊಳಿಸುತ್ತಿತ್ತು.  ಈ ಉಪಕ್ರಮವು ವ್ಯಾಪಕ ಶ್ರೇಣಿಯ ಭಾಗವಹಿಸುವವರನ್ನು, ವಿಶೇಷವಾಗಿ ಮಾಧ್ಯಮ-ತಂತ್ರಜ್ಞಾನ ವಲಯದಲ್ಲಿ ಸ್ಥಿತಿಸ್ಥಾಪಕತ್ವ, ಬೆಳವಣಿಗೆ ಮತ್ತು ಪ್ರಭಾವದ ದಾಖಲೆಯನ್ನು ಹೊಂದಿರುವವರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ದೇಶಾದ್ಯಂತದ ಉದ್ಯಮಿಗಳಿಂದ ಬಂದ ಬಲವಾದ ಆಸಕ್ತಿ ಮತ್ತು ವಿನಂತಿಗಳಿಗೆ ಪ್ರತಿಕ್ರಿಯೆಯಾಗಿ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಏಪ್ರಿಲ್ 21, 2025 ಕ್ಕೆ ವಿಸ್ತರಿಸಲಾಗಿದೆ. ಈ ವಿಸ್ತರಣೆಯು ಮಹತ್ವಾಕಾಂಕ್ಷಿ ಮಾಧ್ಯಮ-ತಂತ್ರಜ್ಞಾನ ನಾವೀನ್ಯಕಾರರಿಗೆ ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಲು ಮತ್ತು ರಾಷ್ಟ್ರೀಯ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಪಡೆಯಲು ಹೆಚ್ಚುವರಿ ಸಮಯವನ್ನು ನೀಡುತ್ತದೆ.

ವೇವೆಕ್ಸ್ 2025 ಹೂಡಿಕೆ ಕಾರ್ಯಕ್ರಮಗಳು ಮೇ 2 ಮತ್ತು 3 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌‌ ಲ್ಲಿ ವೇವ್ಸ್ 2025 ಶೃಂಗಸಭೆಯ ಸಂದರ್ಭದಲ್ಲಿ ನಡೆಯಲಿವೆ. ವಿಶ್ವ ಧ್ವನಿ-ದೃಶ್ಯ ಮನರಂಜನಾ ಶೃಂಗಸಭೆ (ವೇವ್ಸ್‌) ಯ ಪ್ರಮುಖ ವಿಭಾಗವಾದ ವೇವೆಕ್ಸ್, ಗೇಮಿಂಗ್, ಅನಿಮೇಷನ್, ಎಕ್ಸ್‌ ಆರ್, ಮೆಟಾವರ್ಸ್, ಜನರೇಟಿವ್ ಎಐ ಮತ್ತು ಕಂಟೆಂಟ್‌ ತಂತ್ರಜ್ಞಾನಗಳಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುವ ನವೋದ್ಯಮಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಚಿಮ್ಮುಹಲಗೆ ಆಗಲಿದೆ.

ಆಯ್ದ ನವೋದ್ಯಮಗಳು ಕ್ಲೋಸ್ಡ್ ರೂಮ್ ಪಿಚಿಂಗ್ ಸೆಷನ್‌ ಗಳಲ್ಲಿ ಭಾಗವಹಿಸುತ್ತವೆ ಮತ್ತು ಉನ್ನತ ವೆಂಚರ್‌ ಕ್ಯಾಪಿಟಲ್ ಸಂಸ್ಥೆಗಳು ಮತ್ತು ಉನ್ನತ ಮಟ್ಟದ ಏಂಜಲ್ ಹೂಡಿಕೆದಾರರು ಇರುತ್ತಾರೆ. ಪ್ರಮುಖ ಉದ್ಯಮ ತಜ್ಞರ ಮಾರ್ಗದರ್ಶನ, ಜಾಗತಿಕ ಪಾಲುದಾರರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಪ್ರಮುಖ ತಂತ್ರಜ್ಞಾನ ಮತ್ತು ಮಾಧ್ಯಮ ಕಂಪನಿಗಳೊಂದಿಗೆ ಸಹಯೋಗಿಸುವ ಅವಕಾಶಗಳಿಂದಲೂ ಅವರು ಪ್ರಯೋಜನ ಪಡೆಯುತ್ತಾರೆ.

ವೇವೆಕ್ಸ್‌ 2025 ಅನ್ನು ಕೇವಲ ಉದಯೋನ್ಮುಖ ವಿಚಾರಗಳನ್ನು ಪ್ರದರ್ಶಿಸಲು ಮಾತ್ರವಲ್ಲದೆ, ಡಿಜಿಟಲ್ ಯುಗದಲ್ಲಿ ನಾವು ಕಂಟೆಂಟ್‌ ರಚಿಸುವ, ವಿತರಿಸುವ ಮತ್ತು ಹಣಗಳಿಸುವ ವಿಧಾನಗಳನ್ನು ವೇಗಗೊಳಿಸಲು ಒಂದು ಕಾರ್ಯತಂತ್ರದ ವೇದಿಕೆಯಾಗಿಯೂ ವಿನ್ಯಾಸಗೊಳಿಸಲಾಗಿದೆ.

ಅರ್ಜಿಗಳನ್ನು ವೇವೆಕ್ಸ್‌ ನ ಅಧಿಕೃತ ಪೋರ್ಟಲ್ https://wavex.wavesbazaar.com ಮೂಲಕ ಸಲ್ಲಿಸಬಹುದು.

ವೇವ್ಸ್‌ ಕುರಿತು

ಮಾಧ್ಯಮ ಮತ್ತು ಮನರಂಜನೆ (ಎಂ & ಇ) ವಲಯದಲ್ಲಿ ಒಂದು ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಅನ್ನು ಭಾರತ ಸರ್ಕಾರವು ಮೇ 1 ರಿಂದ 4, 2025 ರವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಲಿದೆ.

ನೀವು ಉದ್ಯಮ ವೃತ್ತಿಪರರಾಗಿರಲಿ, ಹೂಡಿಕೆದಾರರಾಗಿರಲಿ, ಸೃಷ್ಟಿಕರ್ತರಾಗಿರಲಿ ಅಥವಾ ನಾವೀನ್ಯಕಾರರಾಗಿರಲಿ, ಶೃಂಗಸಭೆಯು ಎಂ&ಇ ಕ್ಷೇತ್ರದೊಂದಿಗೆ ಸಂಪರ್ಕ ಸಾಧಿಸಲು, ಸಹಯೋಗ ಪಡೆಯಲು, ನಾವೀನ್ಯತೆ ಮತ್ತು ಕೊಡುಗೆ ನೀಡಲು ಅದ್ಭುತವಾದ ಜಾಗತಿಕ ವೇದಿಕೆಯನ್ನು ಕಲ್ಪಿಸುತ್ತದೆ.

ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ವರ್ಧಿಸಲು ಸಜ್ಜಾಗಿದೆ, ಕಂಟೆಂಟ್ ಸೃಷ್ಟಿ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಗಾಗಿ ಕೇಂದ್ರವಾಗಿ ಅದರ ಸ್ಥಾನವನ್ನು ಹೆಚ್ಚಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಜನರೇಟಿವ್ ಎಐ, ವರ್ಧಿತ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್), ಮತ್ತು ವಿಸ್ತೃತ ರಿಯಾಲಿಟಿ (ಎಕ್ಸ್‌ಆರ್) ಸೇರಿದಂತೆ ಉದ್ಯಮಗಳು ಮತ್ತು ವಲಯಗಳು ಇದು ಗಮನ ಹರಿಸುವ ಕ್ಷೇತ್ರಗಳಾಗಿವೆ.

ಪ್ರಶ್ನೆಗಳಿವೆಯೇ? ಉತ್ತರಗಳನ್ನು ಹುಡುಕಿ here

PIB Team WAVES ನ ಇತ್ತೀಚಿನ ಪ್ರಕಟಣೆಗಳೊಂದಿಗೆ ಅಪ್‌ಡೇಟ್‌ ಆಗಿ

ವೇವ್ಸ್‌ ಗೆ ನೋಂದಾಯಿಸಿ now

 

*****


Release ID: (Release ID: 2123098)   |   Visitor Counter: 19