ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ 2025ರ ಕ್ರಿಯೇಟ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಪೈರಸಿ ವಿರೋಧಿ ಚಾಲೆಂಜ್ ಗೆ ಅಗ್ರ ಏಳು ಅಂತಿಮ ಸ್ಪರ್ಧಿಗಳನ್ನು ಘೋಷಿಸಲಾಗಿದೆ
ಪೈರಸಿ ವಿರೋಧಿ ಚಾಲೆಂಜ್ ಗೆ ಉದ್ಯಮ ಮತ್ತು ಭಾಗವಹಿಸುವವರಿಂದ ಅಗಾಧ ಪ್ರತಿಕ್ರಿಯೆ
ದೇಶಾದ್ಯಂತ ನವೋದ್ಯಮಗಳು, ತಂತ್ರಜ್ಞಾನ ಪೂರೈಕೆದಾರರು, ಸಂಶೋಧನಾ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಂದ 1,600 ಕ್ಕೂ ಹೆಚ್ಚು ನೋಂದಣಿಗಳು ಮತ್ತು 132 ವಿಚಾರಗಳ ಸಲ್ಲಿಕೆ
Posted On:
16 APR 2025 6:21PM
|
Location:
PIB Bengaluru
ವೇವ್ಸ್ (ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ) 2025 ರ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ಮೊದಲ ಋತುವಿನ ಅಡಿಯಲ್ಲಿ ಪ್ರವರ್ತಕ ಉಪಕ್ರಮವಾದ ಪೈರಸಿ ವಿರೋಧಿ (ಆಂಟಿ-ಪೈರಸಿ) ಚಾಲೆಂಜ್ ನ ಅಂತಿಮ ಸ್ಪರ್ಧಿಗಳನ್ನು ಘೋಷಿಸಲಾಗಿದೆ. ವೇವ್ಸ್ ಶೃಂಗಸಭೆಯನ್ನು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು 2025 ರ ಮೇ 1-4 ರವರೆಗೆ ಮುಂಬೈನಲ್ಲಿ ಆಯೋಜಿಸುತ್ತಿದೆ.
ಫಿಂಗರ್ ಪ್ರಿಂಟಿಂಗ್ ಮತ್ತು ವಾಟರ್ ಮಾರ್ಕಿಂಗ್ ಪರಿಹಾರಗಳಲ್ಲಿ ತಾಂತ್ರಿಕ ಪ್ರಗತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಪೈರಸಿ ವಿರೋಧಿ ಚಾಲೆಂಜ್ ಗೆ ಉದ್ಯಮ ಮತ್ತು ಭಾಗವಹಿಸುವವರಿಂದ ಅಗಾಧ ಪ್ರತಿಕ್ರಿಯೆ ದೊರೆಯಿತು. ಸೆಪ್ಟೆಂಬರ್ 12, 2024 ರಂದು ಪ್ರಾರಂಭಿಸಲಾದ ಈ ಸವಾಲನ್ನು ಡಿಜಿಟಲ್ ಪೈರಸಿ ವಿರುದ್ಧದ ಹೋರಾಟದಲ್ಲಿ ಮೇಕ್ ಇನ್ ಇಂಡಿಯಾ ತಂತ್ರಜ್ಞಾನಗಳನ್ನು ಉತ್ತೇಜಿಸುವುದು ಎಂಬ ಪ್ರಮುಖ ಉದ್ದೇಶದಿಂದ ರೂಪಿಸಲಾಗಿತ್ತು. ಈ ಸವಾಲಿನಲ್ಲಿ ದೇಶಾದ್ಯಂತದ ನವೋದ್ಯಮಗಳು, ತಂತ್ರಜ್ಞಾನ ಪೂರೈಕೆದಾರರು, ಸಂಶೋಧನಾ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಂದ 1,600 ಕ್ಕೂ ಹೆಚ್ಚು ನೋಂದಣಿಗಳು ಮತ್ತು 132 ವಿಚಾರಗಳು (ಐಡಿಯಾ) ಸಲ್ಲಿಕೆಯಾಗಿದ್ದವು. ಕಠಿಣ ಬಹು-ಹಂತದ ತಪಾಸಣೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯ ನಂತರ, 15 ವಿಚಾರಗಳನ್ನು ಮೊದಲಿಗೆ ಆಯ್ಕೆ ಮಾಡಲಾಯಿತು ಮತ್ತು ಈಗ, ಗೌರವಾನ್ವಿತ ತೀರ್ಪುಗಾರರ ಸಮಿತಿಯ ಆಳವಾದ ಮೌಲ್ಯಮಾಪನಗಳ ನಂತರ, ಡಿಜಿಟಲ್ ಕಂಟೆಂಟ್ ಭದ್ರತೆಯಲ್ಲಿ ಅವರ ಅದ್ಭುತ ಪರಿಹಾರಗಳಿಗಾಗಿ 7 ಅತ್ಯುತ್ತಮ ಅಂತಿಮ ಸ್ಪರ್ಧಿಗಳು ಹೊರಹೊಮ್ಮಿದ್ದಾರೆ.
ಮುಂಬೈನ ಜಿಯೋ ಸೆಂಟರ್‌ನಲ್ಲಿ 2025ರ ಮೇ 01–04 ರವರೆಗೆ ನಡೆಯಲಿರುವ ವಿಶ್ವ ಧ್ವನಿ-ದೃಶ್ಯ ಮನರಂಜನಾ ಶೃಂಗಸಭೆ (ವೇವ್ಸ್) 2025 ರ ಸಂದರ್ಭದಲ್ಲಿ, ಏಳು ಅಗ್ರಾಂತಿಮ ಸ್ಪರ್ಧಿಗಳು ತಮ್ಮ ಪರಿಹಾರಗಳನ್ನು ಅಂತಿಮ ತೀರ್ಪುಗಾರರ ಮುಂದೆ ಮತ್ತು ನೇರ ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುತ್ತಾರೆ. ವಿಜೇತರನ್ನು ಶೃಂಗಸಭೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಪುರಸ್ಕರಿಸಲಾಗುವುದು.
ಅಂತಿಮ ಸ್ಪರ್ಧಿಗಳು ಮತ್ತು ಅವರ ಪರಿಹಾರಗಳು:
ತಂಡದ ಹೆಸರು
|
ಪ್ರಸ್ತಾವಿತ ಪರಿಹಾರ
|
ಪರಿಹಾರದ ಬಗ್ಗೆ ಸಂಕ್ಷಿಪ್ತ ವಿವರಗಳು
|
ಏಜೋವಿ ಇನ್ಫೋಟೆಕ್ ಸರ್ವೀಸಸ್ ಪ್ರೈ. ಲಿಮಿಟೆಡ್.
|
ಸ್ಟೆಲ್ತ್‌ಗಾರ್ಡ್
|
ಮೀಡಿಯಾ ಫೈಲ್ ಗಳಲ್ಲಿ ದೃಢವಾದ, ಗುಪ್ತ ವಾಟರ್ ಮಾರ್ಕ್‌ಗಳನ್ನು ಎಂಬೆಡ್ ಮಾಡುವ ಆಫ್ ಲೈನ್ ಪರಿಕರ, ಇವುಗಳನ್ನು ಸಂಕುಚಿತಗೊಳಿಸುವಿಕೆ ಅಥವಾ ಸ್ವರೂಪ ಬದಲಾವಣೆಗಳ ನಂತರವೂ ಪತ್ತೆಹಚ್ಚಬಹುದು.
|
ಆಟಮ್‌ಸ್ಟೇಟ್
|
ಮಾಂಕ್ ಡಿಬಿ
|
ನೈಜ-ಸಮಯದ ಕಂಟೆಂಟ್ ಪರಿಶೀಲನೆ ಮತ್ತು ಪೈರಸಿ ಪತ್ತೆಗಾಗಿ ಫಿಂಗರ್ ಪ್ರಿಂಟಿಂಗ್ ಮತ್ತು ವಾಟರ್ ಮಾರ್ಕಿಂಗ್ ಅನ್ನು ಬಳಸುವ ಎಐ-ಆಧಾರಿತ ವೆಕ್ಟರ್ ಡೇಟಾಬೇಸ್.
|
ನ್ಯೂರೋನಿಕ್ಸ್
|
ನ್ಯೂರೋಟ್ರೇಸ್
|
ಗೂಢಲಿಪೀಕರಣ, ಪರವಾನಗಿ ಪ್ರಮಾಣಪತ್ರಗಳು, ಪ್ರವೇಶ ನಿಯಂತ್ರಣ, ಡೈನಾಮಿಕ್ ವಾಟರ್ ಮಾರ್ಕಿಂಗ್ ಮತ್ತು ಪೈರಸಿ ಪತ್ತೆಯನ್ನು ಸಂಯೋಜಿಸುವ ಸಮಗ್ರ ವೀಡಿಯೊ ಸಂರಕ್ಷಣಾ ಸೂಟ್.
|
ಗಾರ್ಡಿಯನ್ಸ್ ಆಫ್ ಒರಿಜಿನಾಲಿಟಿ
|
ಪೈರೇಟ್ಎಕ್ಸ್
|
ಅನಧಿಕೃತ ಪ್ರವೇಶ ಮತ್ತು ಅಕ್ರಮ ವಿತರಣೆಯಿಂದ ಮಲ್ಟಿಮೀಡಿಯಾ ವಿಷಯವನ್ನು ಸುರಕ್ಷಿತಗೊಳಿಸಲು ವಿನ್ಯಾಸಗೊಳಿಸಲಾದ ಸುಧಾರಿತ ಡಿ ಆರ್ ಎಂ ಮತ್ತು ಆಂಟಿ-ಪೈರಸಿ ವ್ಯವಸ್ಥೆ.
|
ಹಮ್ಮಿಂಗ್ ಬರ್ಡ್
|
ತ್ರಯಂಬಕ
|
ಕಂಟೆಂಟ್ ತಿದ್ದುಪಡಿ ನಿರೋಧಕ ರಕ್ಷಣೆಗಾಗಿ ಬ್ಲೈಂಡ್ ವಾಟರ್ ಮಾರ್ಕಿಂಗ್ ಮತ್ತು ಕ್ರಿಪ್ಟೋಗ್ರಾಫಿಕ್ ಹ್ಯಾಶಿಂಗ್ ಅನ್ನು ಸಂಯೋಜಿಸುವ ಬ್ಲಾಕ್ ಚೈನ್-ಚಾಲಿತ ಪರಿಹಾರ.
|
ಸೈಫರ್ ಕೋರ್
|
ಸುರಕ್ಷಿತ ಫಿಂಗರ್‌ಪ್ರಿಂಟ್ ಸ್ಟೆಗನೋಗ್ರಫಿ (ಎಸ್ ಎಫ್ ಎಸ್ ಎಸ್)
|
ಡಿಜಿಟಲ್ ಮಾಧ್ಯಮದಲ್ಲಿ ಸುರಕ್ಷಿತ ಫಿಂಗರ್‌ಪ್ರಿಂಟ್ ಗಳನ್ನು ಎಂಬೆಡ್ ಮಾಡಲು ಸ್ಟೆಗನೋಗ್ರಫಿ ಮತ್ತು ಕ್ರಿಪ್ಟೋಗ್ರಾಫಿಕ್ ತಂತ್ರಗಳನ್ನು ಬಳಸುವ ಒಂದು ವ್ಯವಸ್ಥೆ, ಇದು ಬಲವಾದ ಪೈರಸಿ ತಡೆಗಟ್ಟುವಿಕೆಯನ್ನು ಸಕ್ರಿಯಗೊಳಿಸುತ್ತದೆ.
|
ವೈಟ್‌ಹ್ಯಾಟ್‌ಲವರ್ಸ್
|
ಶ್ಯಾಡೋ ಸ್ಟಾಂಪ್
|
ನೈಜ ಸಮಯದಲ್ಲಿ ಡಿಜಿಟಲ್ ಕಂಟೆಂಟ್ ಅನ್ನು ಮೇಲ್ವಿಚಾರಣೆ ಮಾಡಲು ಮತ್ತು ಪತ್ತೆಹಚ್ಚಲು ಅದೃಶ್ಯ, ಅನನ್ಯವಾಗಿ ಗುರುತಿಸಬಹುದಾದ ಮಾರ್ಕರ್ ಗಳನ್ನು ಬಳಸುವ ಮಾರ್ಕರ್-ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ.
|
ಚಾಲೆಂಜ್ ನ ಮುಖ್ಯಾಂಶಗಳು:
- ಫಿಂಗರ್ ಪ್ರಿಂಟಿಂಗ್, ವಾಟರ್ ಮಾರ್ಕಿಂಗ್, ಬ್ಲಾಕ್ ಚೈನ್ ಮತ್ತು ಸ್ಟೆಗನೋಗ್ರಫಿಯಂತಹ ಮುಂದುವರಿದ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಲಾಗಿದೆ
- ನವೋದ್ಯಮಗಳು, ವಿದ್ಯಾರ್ಥಿಗಳು ಮತ್ತು ತಂತ್ರಜ್ಞಾನ ನಾವೀನ್ಯಕಾರರಿಂದ ವೈವಿಧ್ಯಮಯ ಭಾಗವಹಿಸುವಿಕೆ
- ಉದ್ಯಮ ತಜ್ಞರು ಮತ್ತು ತಂತ್ರಜ್ಞರನ್ನು ಒಳಗೊಂಡ ವಿಶಿಷ್ಟ ತೀರ್ಪುಗಾರರಿಂದ ನಿರ್ಣಯ
- ವಿಜೇತರು ರಾಷ್ಟ್ರೀಯ ಮನ್ನಣೆ, ಮಾರ್ಗದರ್ಶನ ಮತ್ತು ಉದ್ಯಮ ಸಹಯೋಗದ ಅವಕಾಶಗಳನ್ನು ಪಡೆಯುತ್ತಾರೆ
ಇಂದಿನ ವೇಗವಾಗಿ ಬೆಳೆಯುತ್ತಿರುವ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ, ಡಿಜಿಟಲ್ ಕಂಟೆಂಟ್ ನ ಸುರಕ್ಷತೆ, ಸಮಗ್ರತೆ ಮತ್ತು ದೃಢೀಕರಣವನ್ನು ರಕ್ಷಿಸುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ. ಡಿಜಿಟಲ್ ಮಾಧ್ಯಮ ಬಳಕೆಯ ಹೆಚ್ಚಳವು ಪೈರಸಿ, ಅನಧಿಕೃತ ವಿತರಣೆ ಮತ್ತು ಕಂಟೆಂಟ್ ತಿರುಚುವಿಕೆಯ ಅಪಾಯವನ್ನು ಹೆಚ್ಚಿಸಿದೆ - ಕಂಟೆಂಟ್ ರಚನೆಕಾರರು, ವಿತರಕರು ಮತ್ತು ಹಕ್ಕುದಾರರಿಗೆ ಗಂಭೀರ ಸವಾಲುಗಳನ್ನು ಒಡ್ಡುತ್ತಿದೆ.
ಮೀಡಿಯಾ ಪಾರ್ಟ್‌ನರ್ಸ್ ಏಷ್ಯಾ ವರದಿಯ ಪ್ರಕಾರ, 2024 ರಲ್ಲಿ ಭಾರತದಲ್ಲಿ 90 ಮಿಲಿಯನ್ ಬಳಕೆದಾರರು ಆನ್‌ಲೈನ್ ವೀಡಿಯೊ ಪೈರಸಿಯಲ್ಲಿ ತೊಡಗಿದ್ದಾರೆ, ಇದರಿಂದಾಗಿ 1.2 ಬಿಲಿಯನ್ ಅಮೆರಿಕ ಡಾಲರ್ ನಷ್ಟವಾಗಬಹುದು. ಪರಿಣಾಮಕಾರಿಯಾದ ಬಲವಾದ ಪೈರಸಿ ವಿರೋಧಿ ಮಧ್ಯಸ್ಥಿಕೆಗಳಿಲ್ಲದಿದ್ದರೆ, ಇದು 2029 ರ ವೇಳೆಗೆ 158 ಮಿಲಿಯನ್ ಬಳಕೆದಾರರಿಗೆ ಹೆಚ್ಚಾಗಬಹುದು.
ಹಕ್ಕುದಾರರು ಮತ್ತು ಪ್ರಸಾರಕರು ತಮ್ಮ ಐಪಿ ಹಕ್ಕುಗಳನ್ನು ಗುರುತಿಸಲು, ಅಡ್ಡಿಪಡಿಸಲು ಮತ್ತು ಜಾರಿಗೊಳಿಸಲು ತಾಂತ್ರಿಕ ಪರಿಹಾರಗಳನ್ನು ಹೆಚ್ಚಾಗಿ ಅವಲಂಬಿಸುತ್ತಾರೆ. ಆದಾಗ್ಯೂ, ಪ್ರಮುಖ ಪೈರಸಿ ತಾಣಗಳು ಮತ್ತು ಸೇವೆಗಳ ಹಿಂದಿರುವ ಕ್ರಿಮಿನಲ್ ತಂಡಗಳು ನಿರಂತರವಾಗಿ ತಮ್ಮ ಮೂಲಸೌಕರ್ಯವನ್ನು ಅಳವಡಿಸಿಕೊಳ್ಳುತ್ತಿವೆ, ಪೈರಸಿ ಪತ್ತೆ ಮತ್ತು ಜಾರಿಗೊಳಿಸುವಿಕೆಯನ್ನು ಹಿಂದೆಂದಿಗಿಂತಲೂ ಹೆಚ್ಚು ಸಂಕೀರ್ಣಗೊಳಿಸುತ್ತಿವೆ.
ಫಿಂಗರ್ ಪ್ರಿಂಟಿಂಗ್ ಮತ್ತು ವಾಟರ್ ಮಾರ್ಕಿಂಗ್ ಪರಿಹಾರಗಳಲ್ಲಿ ತಾಂತ್ರಿಕ ನಾವೀನ್ಯತೆಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಈ ಸ್ಪರ್ಧೆಯು, ಭಾರತದ ಡಿಜಿಟಲ್ ಪೂರಕ ವ್ಯವಸ್ಥೆಯನ್ನು ಸುರಕ್ಷಿತಗೊಳಿಸಲು ಹೆಚ್ಚುತ್ತಿರುವ ತುರ್ತುಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
ಭಾರತದ ಡಿಜಿಟಲ್ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಮತ್ತು ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ಥಳೀಯ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ಪ್ರಯಾಣದಲ್ಲಿ ಆಂಟಿ-ಪೈರಸಿ ಚಾಲೆಂಜ್ ಒಂದು ಮಹತ್ವದ ಮೈಲಿಗಲ್ಲಾಗಿದೆ.
ವೇವ್ಸ್ ನ ಭಾಗವಾಗಿ ಸಿಐಐ ಆಯೋಜಿಸಿದ್ದ ಚಾಲೆಂಜ್ ಅನ್ನು ಐಪಿಹೌಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮತ್ತು ಹ್ಯಾಕ್2ಸ್ಕಿಲ್ ಬೆಂಬಲಿಸಿದ್ದು, ಇವು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮತ್ತು ಚಾಲೆಂಜ್ ನ ಉದ್ದಕ್ಕೂ ಉದ್ಯಮದ ತೊಡಗಿಸಿಕೊಳ್ಳುವಿಕೆಯನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ವೇವ್ಸ್ ಕುರಿತು
ಮಾಧ್ಯಮ ಮತ್ತು ಮನರಂಜನೆ (ಎಂ & ಇ) ವಲಯದಲ್ಲಿ ಒಂದು ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಅನ್ನು ಭಾರತ ಸರ್ಕಾರವು ಮೇ 1 ರಿಂದ 4, 2025 ರವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಲಿದೆ.
ನೀವು ಉದ್ಯಮ ವೃತ್ತಿಪರರಾಗಿರಲಿ, ಹೂಡಿಕೆದಾರರಾಗಿರಲಿ, ಸೃಷ್ಟಿಕರ್ತರಾಗಿರಲಿ ಅಥವಾ ನಾವೀನ್ಯಕಾರರಾಗಿರಲಿ, ಶೃಂಗಸಭೆಯು ಎಂ&ಇ ಕ್ಷೇತ್ರದೊಂದಿಗೆ ಸಂಪರ್ಕ ಸಾಧಿಸಲು, ಸಹಯೋಗ ಪಡೆಯಲು, ನಾವೀನ್ಯತೆ ಮತ್ತು ಕೊಡುಗೆ ನೀಡಲು ಅದ್ಭುತವಾದ ಜಾಗತಿಕ ವೇದಿಕೆಯನ್ನು ಕಲ್ಪಿಸುತ್ತದೆ.
ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ವರ್ಧಿಸಲು ಸಜ್ಜಾಗಿದೆ, ಕಂಟೆಂಟ್ ಸೃಷ್ಟಿ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಗಾಗಿ ಕೇಂದ್ರವಾಗಿ ಅದರ ಸ್ಥಾನವನ್ನು ಹೆಚ್ಚಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ವೇದಿಕೆಗಳು, ಜನರೇಟಿವ್ ಎಐ, ವರ್ಧಿತ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್), ಮತ್ತು ವಿಸ್ತೃತ ರಿಯಾಲಿಟಿ (ಎಕ್ಸ್‌ಆರ್) ಸೇರಿದಂತೆ ಉದ್ಯಮಗಳು ಮತ್ತು ವಲಯಗಳು ಇದು ಗಮನ ಹರಿಸುವ ಕ್ಷೇತ್ರಗಳಾಗಿವೆ.
ಪ್ರಶ್ನೆಗಳಿವೆಯೇ? ಉತ್ತರಗಳನ್ನು ಹುಡುಕಿ here
PIB Team WAVES ನ ಇತ್ತೀಚಿನ ಪ್ರಕಟಣೆಗಳೊಂದಿಗೆ ಅಪ್‌ಡೇಟ್ ಆಗಿ
ವೇವ್ಸ್ ಗೆ ನೋಂದಾಯಿಸಿ now
*****
Release ID:
(Release ID: 2123097)
| Visitor Counter:
22
Read this release in:
English
,
Urdu
,
Nepali
,
Hindi
,
Marathi
,
Punjabi
,
Gujarati
,
Odia
,
Tamil
,
Telugu
,
Malayalam