ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಂಗಳಕರವಾದ ಪರ್ಕಾಶ್ ಪುರಬ್‌ ನ ಸುಸಂದರ್ಭದಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

Posted On: 18 APR 2025 12:26PM by PIB Bengaluru

ಪ್ರಧಾನಮಂತ್ರಿಯವರು ಇಂದು ಮಂಗಳಕರವಾದ ಪ್ರಕಾಶ್ ಪುರಬ್ ಸಂದರ್ಭದಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಅವರಿಗೆ ಗೌರವ ನಮನ ಸಲ್ಲಿಸಿದರು. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಅಚಲವಾಗಿ ನಿರತರಾಗಿದ್ದ ಶ್ರೀ ಗುರು ತೇಗ್ ಬಹದ್ದೂರ್ ಅವರ ಜೀವನವು ಧೈರ್ಯ ಮತ್ತು ಸಹಾನುಭೂತಿಯ ಸೇವೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಎಕ್ಸ್ ನಲ್ಲಿ ಅವರು ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ ;

"ಶ್ರೀ ಗುರು ತೇಗ್ ಬಹದ್ದೂರ್ ಅವರ ಮಂಗಳಕರವಾದ ಪ್ರಕಾಶ್ ಪುರಬ್‌ ಸಂದರ್ಭದಲ್ಲಿ, ನಮ್ಮ ನೆಲದ  ಆಧ್ಯಾತ್ಮಿಕ ಶ್ರೇಷ್ಠರಲ್ಲಿ ಒಬ್ಬರಿಗೆ ನಾನು ನನ್ನ ನಮ್ರ ನಮನಗಳನ್ನು ಸಲ್ಲಿಸುತ್ತೇನೆ. ಅವರ ಜೀವನವು ಧೈರ್ಯ ಮತ್ತು ಸಹಾನುಭೂತಿಯ ಸೇವೆಯನ್ನು ಪ್ರತಿಬಿಂಬಿಸುತ್ತದೆ. ಅವರು ಅನ್ಯಾಯದ ವಿರುದ್ಧ ಹೋರಾಡುವಲ್ಲಿ ಅಚಲರಾಗಿದ್ದರು. ಅವರು ಕಲ್ಪಿಸಿಕೊಂಡ ಸಮಾಜವನ್ನು ನಿರ್ಮಿಸುವಲ್ಲಿ ಅವರ ಬೋಧನೆಗಳು ನಮಗೆಲ್ಲರಿಗೂ ಸ್ಫೂರ್ತಿ ನೀಡುವುದು ಮುಂದುವರಿಯಲಿದೆ"

 

 

“ਸ੍ਰੀ ਗੁਰੂ ਤੇਗ਼ ਬਹਾਦਰ ਜੀ ਦੇ ਸ਼ੁਭ ਪ੍ਰਕਾਸ਼ ਪੁਰਬ 'ਤੇ, ਮੈਂ ਆਪਣੀ ਧਰਤੀ ਦੇ ਮਹਾਨ ਅਧਿਆਤਮਿਕ ਮਸ਼ਾਲਧਾਰੀਆਂ ਵਿੱਚੋਂ ਇੱਕ ਨੂੰ ਨਿਮਰ ਸ਼ਰਧਾਂਜਲੀ ਭੇਟ ਕਰਦਾ ਹਾਂ। ਉਨ੍ਹਾਂ ਦਾ ਜੀਵਨ ਹਿੰਮਤ ਅਤੇ ਹਮਦਰਦੀ ਭਰੀ ਸੇਵਾ ਦਾ ਪ੍ਰਤੀਕ ਹੈ। ਉਹ ਅਨਿਆਂ ਖਿਲਾਫ਼ ਲੜਾਈ 'ਚ ਅਡੋਲ ਰਹੇ। ਉਨ੍ਹਾਂ ਦੀਆਂ ਸਿੱਖਿਆਵਾਂ ਸਾਨੂੰ ਸਾਰਿਆਂ ਨੂੰ ਉਨ੍ਹਾਂ ਵਲੋਂ ਕਲਪਨਾ ਕੀਤੇ ਸਮਾਜ ਦੇ ਨਿਰਮਾਣ ਲਈ ਪ੍ਰੇਰਿਤ ਕਰਦੀਆਂ ਰਹਿਣਗੀਆਂ।“
 

 

*****


(Release ID: 2122987)