ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ 2025: "ಮೇಕ್ ದಿ ವರ್ಲ್ಡ್ ಖಾದಿ ಧರಿಸು" ಚಾಲೆಂಜಿಗೆ ಅಂತಿಮ ಸ್ಪರ್ಧಿಗಳ ಘೋಷಣೆ
750 ರಿಂದ ಅತ್ಯುತ್ತಮದವರೆಗೆ : ಖಾದಿಯನ್ನು ಮರುಕಲ್ಪಿಸುವ ವಿಜೇತರನ್ನು ಗೌರವಿಸಲಿದೆ ’ವೇವ್ಸ್”
Posted On:
09 APR 2025 5:00PM by PIB Bengaluru
ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಅಡ್ವರ್ಟೈಸಿಂಗ್ ಏಜೆನ್ಸಿಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಎಎಐ) ಸಹಯೋಗದೊಂದಿಗೆ, ಮೇ 1 ರಿಂದ 4 ರವರೆಗೆ ಮುಂಬೈನಲ್ಲಿ ನಡೆಯಲಿರುವ ವೇವ್ಸ್ ಶೃಂಗಸಭೆ 2025 ರ ಅಂಗವಾಗಿ ನಡೆಯುತ್ತಿರುವ 32 ಕ್ರಿಯೇಟಿವ್ ಇನ್ ಇಂಡಿಯಾ ಸವಾಲುಗಳಲ್ಲಿ ಒಂದಾದ ಮೇಕ್ ದಿ ವರ್ಲ್ಡ್ ವೇರ್ ಖಾದಿಗಾಗಿ (ಖಾದಿಯನ್ನು ಧರಿಸಿ ಜಗತ್ತನ್ನು ರೂಪಿಸಿ) ಶಾರ್ಟ್ಲಿಸ್ಟ್ ಅನ್ನು (ಅಂತಿಮ ಆಯ್ಕೆಯ ಅಭ್ಯರ್ಥಿ ಪಟ್ಟಿಯನ್ನು) ಪ್ರಕಟಿಸಿದೆ.

ಶಾರ್ಟ್ ಲಿಸ್ಟ್ ಮಾಡಿರುವ ಅಭ್ಯರ್ಥಿಗಳು:
- ಇಮಾನ್ ಸೇನ್ ಗುಪ್ತಾ ಮತ್ತು ಸೋಹಮ್ ಘೋಷ್ - ಹವಾಸ್ ವರ್ಲ್ಡ್ ವೈಡ್ ಇಂಡಿಯಾ
- ಕಾರ್ತಿಕ್ ಶಂಕರ್ ಮತ್ತು ಮಧುಮಿತಾ ಬಸು - 22 ಅಡಿ ಬುಡಕಟ್ಟು (22 ಫೀಟ್ ಟ್ರೈಬಲ್)
- ಕಾಜಲ್ ತ್ರಿಲೋಟ್ಕರ್ - ಸಂವಾದಾತ್ಮಕ ಮಾರ್ಗಗಳು (ಇಂಟರ್ಯಾಕ್ಟಿವ್ ಅವೆನ್ಯೂಸ್ )
- ತನ್ಮಯ್ ರೌಲ್ ಮತ್ತು ಮಂದಾರ್ ಮಹಾದಿಕ್ - ಡಿಡಿಬಿ ಮುದ್ರಾ ಗ್ರೂಪ್
- ಆಕಾಶ್ ಮೆಜಾರಿ ಮತ್ತು ಕಾಜೋಲ್ ಜೆಸ್ವಾನಿ - ಡಿಡಿಬಿ ಮುದ್ರಾ ಗ್ರೂಪ್
ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ತಮ್ಮ ಕೃತಿಗಳ ಹಿಂದಿನ ಒಳನೋಟಗಳನ್ನು ಹಂಚಿಕೊಂಡರು.
ಭಾರತದ ಸ್ವಾತಂತ್ರ್ಯ ಚಳವಳಿಯ ಸಂಕೇತದಿಂದ ಸುಸ್ಥಿರ ಫ್ಯಾಷನ್ ಗೆ ಪರಿಹಾರದವರೆಗೆ ಖಾದಿಯ ವಿಕಸನಗೊಳ್ಳುತ್ತಿರುವ ಗುರುತಿಸುವಿಕೆಯನ್ನು ಅವರು ಪ್ರತಿಬಿಂಬಿಸಿದರು.
ಕಾಜಲ್ ತ್ರಿಲೋಟ್ಕರ್ ಖಾದಿಯನ್ನು "ಸಮಯದ ಸಾಕ್ಷಿ... ನಿಧಾನ, ಭಾವಪೂರ್ಣ ಮತ್ತು ಎಚ್ಚರಿಕೆಯಿಂದ ತಿನೇಯುವ ನೇಯ್ಗೆ " ಎಂದು ಬಣ್ಣಿಸಿದರೆ ತನ್ಮಯ್ ರೌಲ್ ಮತ್ತು ಮಂದಾರ್ ಮಹಾದಿಕ್ ಇದನ್ನು "ಭವಿಷ್ಯದ ಫ್ಯಾಬ್ರಿಕ್" ಎಂದು ಸ್ಥಾನೀಕರಿಸಿದರು, ವೇಗದ ಫ್ಯಾಷನ್ ನಿಂದ ಉಂಟಾಗುವ ಪರಿಸರ ನಾಶವನ್ನು ಪರಿಹರಿಸುವ ಸಾಮರ್ಥ್ಯವನ್ನು ಇದು ಎತ್ತಿ ತೋರಿಸುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು. ಆಕಾಶ್ ಮೆಜಾರಿ ಮತ್ತು ಕಾಜೋಲ್ ಜೆಸ್ವಾನಿ ತಮ್ಮ ಅಭಿಯಾನದ ಮೂಲಕ ಹವಾಮಾನ ಪ್ರಜ್ಞೆಯನ್ನು ಉತ್ತೇಜಿಸುವ ಮೂಲಕ ಪರಿಸರ ಹಾನಿಯನ್ನು "ಸರಿಪಡಿಸುವ" ಸಾಧನವಾಗಿ ಖಾದಿಯನ್ನು ಬಿಂಬಿಸಿದರು. ಏತನ್ಮಧ್ಯೆ, ಇಮಾನ್ ಸೇನ್ ಗುಪ್ತಾ ಮತ್ತು ಸೋಹಮ್ ಘೋಷ್ ಖಾದಿಯ ಆರ್ಥಿಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಒತ್ತಿಹೇಳಿದರು, ಇದು ಜಾಗತಿಕ ಫ್ಯಾಷನ್ ನಲ್ಲಿ ಪ್ರೀಮಿಯಂ, ಉದ್ದೇಶ-ಚಾಲಿತ ಆಯ್ಕೆ ಎಂದು ಪ್ರತಿಪಾದಿಸಿದರು.

ಖಾದಿಯನ್ನು ಸುಸ್ಥಿರತೆ ಮತ್ತು ಅಸ್ಮಿತೆಯ ಜಾಗತಿಕ ಐಕಾನ್ ಆಗಿ ಮರುಕಲ್ಪಿಸಲು ವಿನ್ಯಾಸಗೊಳಿಸಲಾದ ಈ ಸ್ಪರ್ಧೆಯು ದೇಶಾದ್ಯಂತದ ಸೃಜನಶೀಲ ವೃತ್ತಿಪರರು ಮತ್ತು ಏಜೆನ್ಸಿಗಳಿಂದ 750 ಕ್ಕೂ ಹೆಚ್ಚು ನೋಂದಣಿಗಳನ್ನು ಸೆಳೆಯಿತು. ಖಾದಿಯನ್ನು ಕೇವಲ ಬಟ್ಟೆಯಾಗಿ ಮಾತ್ರವಲ್ಲದೆ, ವಿಶ್ವ ವೇದಿಕೆಯಲ್ಲಿ ನಾವೀನ್ಯತೆ ಮತ್ತು ಪ್ರಜ್ಞಾಪೂರ್ವಕ ಬದುಕಿನ ಪ್ರಬಲ ಸಂಕೇತವಾಗಿ ಇರಿಸುವ ಜಾಹೀರಾತು ಅಭಿಯಾನಗಳನ್ನು ರೂಪಿಸಲು ಭಾಗವಹಿಸಿದವರಿಗೆ ಸವಾಲುಗಳನ್ನು ನೀಡಲಾಯಿತು.
ಜಾಹೀರಾತು ಉದ್ಯಮದ ನಾಯಕರನ್ನು ಒಳಗೊಂಡ ತೀರ್ಪುಗಾರರು ಸ್ವಂತಿಕೆ, ಸಾಂಸ್ಕೃತಿಕ ಆಳ, ಜಾಗತಿಕ ಆಕರ್ಷಣೆ ಮತ್ತು ಸ್ಪರ್ಧೆಯ ಪ್ರಮುಖ ಸಂದೇಶದೊಂದಿಗೆ ಹೊಂದಾಣಿಕೆಯ ಆಧಾರದ ಮೇಲೆ ನಮೂದುಗಳನ್ನು ಮೌಲ್ಯಮಾಪನ ಮಾಡಿದರು. ಶಾರ್ಟ್ ಲಿಸ್ಟ್ ಮಾಡಲಾದ ಅಭಿಯಾನಗಳು ಅವುಗಳ ಕಾರ್ಯತಂತ್ರದ ಚಿಂತನೆ, ಬಲವಾದ ನಿರೂಪಣೆಗಳು ಮತ್ತು ಖಾದಿಯ ಸುತ್ತ ಜಾಗತಿಕ ಆಂದೋಲನವನ್ನು ಪ್ರಚೋದಿಸುವ ಸಾಮರ್ಥ್ಯಕ್ಕಾಗಿ ಪ್ರಶಂಸಿಸಲ್ಪಟ್ಟವು.
ಅಂತಿಮ ವಿಜೇತರನ್ನು ವೇವ್ಸ್ ಶೃಂಗಸಭೆ 2025 ರಲ್ಲಿ ಘೋಷಿಸಲಾಗುವುದು ಮತ್ತು ಸನ್ಮಾನಿಸಲಾಗುವುದು, ಅಲ್ಲಿ ಅವರ ಪ್ರಚಾರ ಅಭಿಯಾನಗಳನ್ನು ನೀತಿ ನಿರೂಪಕರು, ಜಾಗತಿಕ ಪ್ರತಿನಿಧಿಗಳು, ಮಾಧ್ಯಮ ನಾಯಕರು ಮತ್ತು ಉದ್ಯಮ ಮಧ್ಯಸ್ಥಗಾರರ ಗಣ್ಯ ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸಲಾಗುವುದು.
ವೇವ್ಸ್ ಬಗ್ಗೆ
ಮಾಧ್ಯಮ ಮತ್ತು ಮನರಂಜನಾ (ಎಂ & ಇ) ಕ್ಷೇತ್ರದ ಮೈಲಿಗಲ್ಲು ಕಾರ್ಯಕ್ರಮವಾದ ಮೊದಲ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಅನ್ನು ಭಾರತ ಸರ್ಕಾರವು 2025 ರ ಮೇ 1 ರಿಂದ 4 ರವರೆಗೆ ಮಹಾರಾಷ್ಟ್ರದ ಮುಂಬೈನಲ್ಲಿ ಆಯೋಜಿಸಿದೆ.
ನೀವು ಉದ್ಯಮದ ವೃತ್ತಿಪರರು, ಹೂಡಿಕೆದಾರರು, ಸೃಷ್ಟಿಕರ್ತರು ಅಥವಾ ನಾವೀನ್ಯಕಾರರಾಗಿದ್ದಲ್ಲಿ/ಅನ್ವೇಷಕಾರರಾಗಿದ್ದಲ್ಲಿ, ಶೃಂಗಸಭೆಯು ಎಂ &ಇ ಭೂದೃಶ್ಯಕ್ಕೆ ಸಂಪರ್ಕಿಸಲು, ಸಹಯೋಗ ಮಾಡಲು, ಅನ್ವೇಷಿಸಲು ಮತ್ತು ಕೊಡುಗೆ ನೀಡಲು ಅತ್ಯುಚ್ಛ ಜಾಗತಿಕ ವೇದಿಕೆಯನ್ನು ನೀಡುತ್ತದೆ.
ವೇವ್ಸ್ ಭಾರತದ ಸೃಜನಶೀಲ ಶಕ್ತಿಯನ್ನು ಹೆಚ್ಚಿಸಲು ಸಜ್ಜಾಗಿದೆ, ವಿಷಯ ರಚನೆ, ಬೌದ್ಧಿಕ ಆಸ್ತಿ ಮತ್ತು ತಾಂತ್ರಿಕ ನಾವೀನ್ಯತೆಗಳ ಕೇಂದ್ರವಾಗಿ ಅದರ ಸ್ಥಾನವನ್ನು ವರ್ಧಿಸುತ್ತದೆ. ಪ್ರಸಾರ, ಮುದ್ರಣ ಮಾಧ್ಯಮ, ದೂರದರ್ಶನ, ರೇಡಿಯೋ, ಚಲನಚಿತ್ರಗಳು, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್, ಧ್ವನಿ ಮತ್ತು ಸಂಗೀತ, ಜಾಹೀರಾತು, ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು, ಜೆನೆರೇಟಿವ್ ಎಐ, ವರ್ಧಿತ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್) ಮತ್ತು ವಿಸ್ತರಿತ ರಿಯಾಲಿಟಿ (ಎಕ್ಸ್ಆರ್)ಗಳು ಗಮನ ಕೇಂದ್ರೀಕರಿಸುವ ಕೈಗಾರಿಕೋದ್ಯಮಗಳು ಮತ್ತು ವಲಯಗಳಲ್ಲಿ ಸೇರಿವೆ.
ಪ್ರಶ್ನೆಗಳಿವೆಯೇ? ಇಲ್ಲಿ ಉತ್ತರಗಳನ್ನು ಹುಡುಕಿ
ಪಿಐಬಿ ಟೀಮ್ ವೇವ್ಸ್ ನ ಇತ್ತೀಚಿನ ಪ್ರಕಟಣೆಗಳೊಂದಿಗೆ ಅಪ್ ಡೇಟ್ ಆಗಿರಿ
ಬನ್ನಿ, ನಮ್ಮೊಂದಿಗೆ ಪ್ರಯಾಣಿಸಿ! ವೇವ್ಸ್ ಗಾಗಿ ಈಗ ನೋಂದಾಯಿಸಿ
*****
(Release ID: 2120635)
Visitor Counter : 15
Read this release in:
Odia
,
English
,
Urdu
,
Hindi
,
Marathi
,
Bengali
,
Assamese
,
Gujarati
,
Tamil
,
Telugu
,
Malayalam