ರಾಷ್ಟ್ರಪತಿಗಳ ಕಾರ್ಯಾಲಯ
ರಾಮನವಮಿ ಮುನ್ನಾದಿನದಂದು ಭಾರತದ ರಾಷ್ಟ್ರಪತಿಗಳಿಂದ ಶುಭಾಶಯ
Posted On:
05 APR 2025 7:01PM by PIB Bengaluru
ರಾಮನವಮಿಯ ಅಂಗವಾಗಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ದೇಶದ ಎಲ್ಲಾ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ.
ರಾಷ್ಟ್ರಪತಿಗಳು ತಮ್ಮ ಸಂದೇಶದಲ್ಲಿ, “ರಾಮನವಮಿಯ ಶುಭ ಸಂದರ್ಭದಲ್ಲಿ, ಎಲ್ಲಾ ಸಹ ನಾಗರಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು ಮತ್ತು ಶುಭ ಹಾರೈಕೆಗಳು” ಎಂದು ಹೇಳಿದ್ದಾರೆ.
ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮನ ಜನ್ಮದಿನವನ್ನು ಈ ಪವಿತ್ರ ಹಬ್ಬವಾಗಿ ಆಚರಿಸಲಾಗುತ್ತದೆ. ಭಗವಾನ್ ಶ್ರೀ ರಾಮನ ಮಹಾನ್ ಜೀವನ ಪಯಣವು ಸತ್ಯ, ಧರ್ಮ ಮತ್ತು ನೀತಿಯ ಮಾರ್ಗವನ್ನು ಅನುಸರಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಈ ಹಬ್ಬವು ಸಮರ್ಪಣೆ ಮತ್ತು ಬದ್ಧತೆಯಿಂದ ಮಾನವೀಯತೆಗೆ ಸೇವೆ ಸಲ್ಲಿಸುವ ಸಂದೇಶವನ್ನು ನೀಡುತ್ತದೆ. ಈ ಪವಿತ್ರ ಉತ್ಸವವು ತ್ಯಾಗ, ನಿಸ್ವಾರ್ಥ ಪ್ರೀತಿಯ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮತ್ತು ಕೊಟ್ಟ ಮಾತಿಗೆ ಬದ್ಧರಾಗಿರಲು ಜನರನ್ನು ಪ್ರೇರೇಪಿಸುತ್ತದೆ.
ಈ ಪವಿತ್ರ ಸಂದರ್ಭದಲ್ಲಿ, ಭಗವಾನ್ ಶ್ರೀ ರಾಮನ ಆದರ್ಶಗಳಿಂದ ಕಲಿಯೋಣ ಮತ್ತು ಇಡೀ ಮಾನವಕುಲದ ಯೋಗಕ್ಷೇಮಕ್ಕಾಗಿ ಒಟ್ಟಾಗಿ ಕಾರ್ಯನಿರ್ವಹಿಸೋಣ”.
ರಾಷ್ಟ್ರಪತಿಗಳ ಸಂದೇಶವನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ-
*****
(Release ID: 2119431)
Visitor Counter : 8