ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಗಳಿಂದ ಥಾಯ್ ರಾಮಾಯಣ, ರಾಮಕಿಯೆನ್‌ನ ಆಕರ್ಷಕ ಪ್ರದರ್ಶನ ವೀಕ್ಷಣೆ

Posted On: 03 APR 2025 1:02PM by PIB Bengaluru

ಭಾರತ ಮತ್ತು ಥಾಯ್ಲೆಂಡ್ ನಡುವಿನ ಗಾಢ ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಥಾಯ್ ರಾಮಾಯಣ, ರಾಮಕಿಯೆನ್‌ನ ಅತ್ಯದ್ಭುತ ಪ್ರದರ್ಶನವನ್ನು ವೀಕ್ಷಿಸಿದರು.

 ಎಕ್ಸ್ ನಲ್ಲಿ ಪ್ರತ್ಯೇಕ ಪೋಸ್ಟ್ ಗಳಲ್ಲಿ ಅವರು ಹೀಗೆ ಬರೆದಿದ್ದಾರೆ: 

“ಸರಿಸಾಟಿಯಿಲ್ಲದ ಸಾಂಸ್ಕೃತಿಕ ಬಾಂಧವ್ಯ!

ಥಾಯ್ ರಾಮಾಯಣ, ರಾಮಕಿಯೆನ್‌ನ ಮನಮೋಹಕ ಪ್ರದರ್ಶನ‌ ವೀಕ್ಷಣೆಗೆ ಸಾಕ್ಷಿಯಾದೆ.  ಇದು ಭಾರತ ಮತ್ತು ಥಾಯ್ಲೆಂಡ್ ನಡುವಿನ ಗಾಢವಾದ ಸಾಂಸ್ಕೃತಿಕ ಮತ್ತು ನಾಗರಿಕ ಬಾಂಧವ್ಯವನ್ನು ಸುಂದರವಾಗಿ ಪ್ರದರ್ಶಿಸಲ್ಪಟ್ಟಿದ್ದು, ನಿಜಕ್ಕೂ ಅಮೋಘ ಅನುಭವವಾಗಿದೆ.

ರಾಮಾಯಣವು ನಿಜವಾಗಿಯೂ ಏಷ್ಯಾದ ಹಲವು ಭಾಗಗಳಲ್ಲಿ ಮನಸ್ಸು ಮತ್ತು ಸಂಪ್ರದಾಯಗಳನ್ನು ಸಂಪರ್ಕಿಸುವುದನ್ನು ಮುಂದುವರೆಸಿದೆ.”

 

 

“ความสัมพันธ์ทางวัฒนธรรมที่ไม่เหมือนใคร! ได้ชมการแสดง รามเกียรติ์ ที่น่าหลงใหลซึ่งเป็นประสบการณ์ที่เต็มไปด้วยคุณค่า แสดงให้เห็นถึงความสัมพันธ์ทางวัฒนธรรมและอารยธรรมที่มีร่วมกันระหว่างอินเดียและไทยได้อย่างงดงาม รรามเกียรติ์ยังคงสานสัมพันธ์แห่งจิตวิญญาณและประเพณีในหลายพื้นที่ของเอเชียอย่างต่อเนื่อง”

 

 

*****


(Release ID: 2118213) Visitor Counter : 11