ಪ್ರಧಾನ ಮಂತ್ರಿಯವರ ಕಛೇರಿ
ಥಾಯ್ಲೆಂಡ್ ಮತ್ತು ಶ್ರೀಲಂಕಾ ಭೇಟಿಗೂ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ
Posted On:
03 APR 2025 6:47AM by PIB Bengaluru
ಪ್ರಧಾನಮಂತ್ರಿ ಪೆಟೊಂಗ್ಟಾರ್ನ್ ಶಿನವಾತ್ರಾ ಅವರ ಆಹ್ವಾನದ ಮೇರೆಗೆ ನಾನು ಇಂದು ಅಧಿಕೃತ ಭೇಟಿಗಾಗಿ ಮತ್ತು 6ನೇ ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್ ಗೆ ತೆರಳುತ್ತಿದ್ದೇನೆ.
ಕಳೆದ ದಶಕದಲ್ಲಿ, ಬಿಮ್ ಸ್ಟೆಕ್ ಬಂಗಾಳಕೊಲ್ಲಿ ಪ್ರದೇಶದಲ್ಲಿ ಪ್ರಾದೇಶಿಕ ಅಭಿವೃದ್ಧಿ, ಸಂಪರ್ಕ ಮತ್ತು ಆರ್ಥಿಕ ಪ್ರಗತಿಯನ್ನು ಉತ್ತೇಜಿಸುವ ಮಹತ್ವದ ವೇದಿಕೆಯಾಗಿ ಹೊರಹೊಮ್ಮಿದೆ. ಭೌಗೋಳಿಕ ಸ್ಥಳದೊಂದಿಗೆ, ಭಾರತದ ಈಶಾನ್ಯ ಪ್ರದೇಶವು ಬಿಮ್ ಸ್ಟೆಕ್ ನ ಹೃದಯಭಾಗದಲ್ಲಿದೆ. ಬಿಮ್ ಸ್ಟೆಕ್ ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಲು ಮತ್ತು ನಮ್ಮ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ಉತ್ಪಾದಕವಾಗಿ ತೊಡಗಿಸಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ.
ನನ್ನ ಅಧಿಕೃತ ಭೇಟಿಯ ಸಮಯದಲ್ಲಿ, ಹಂಚಿಕೆಯ ಸಂಸ್ಕೃತಿ, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಚಿಂತನೆಯ ಬಲವಾದ ಅಡಿಪಾಯವನ್ನು ಆಧರಿಸಿದ ನಮ್ಮ ಹಳೆಯ ಐತಿಹಾಸಿಕ ಸಂಬಂಧಗಳನ್ನು ಉನ್ನತೀಕರಿಸುವ ಸಾಮಾನ್ಯ ಬಯಕೆಯೊಂದಿಗೆ ಪ್ರಧಾನಿ ಶಿನವಾತ್ರಾ ಮತ್ತು ಥಾಯ್ ನಾಯಕತ್ವದೊಂದಿಗೆ ತೊಡಗಿಸಿಕೊಳ್ಳಲು ನನಗೆ ಅವಕಾಶ ಸಿಗಲಿದೆ.
ಥಾಯ್ಲೆಂಡ್ ನಿಂದ ನಾನು ಏಪ್ರಿಲ್ 04-06 ರವರೆಗೆ ಎರಡು ದಿನಗಳ ಕಾಲ ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದೇನೆ. ಇದು ಕಳೆದ ಡಿಸೆಂಬರ್ ನಲ್ಲಿ ಅಧ್ಯಕ್ಷ ದಿಸನಾಯಕ ಅವರ ಅತ್ಯಂತ ಯಶಸ್ವಿ ಭಾರತ ಭೇಟಿಯ ನಂತರ ಬಂದಿದೆ. "ಹಂಚಿಕೆಯ ಭವಿಷ್ಯಕ್ಕಾಗಿ ಪಾಲುದಾರಿಕೆಯನ್ನು ಪೋಷಿಸುವುದು" ಎಂಬ ಜಂಟಿ ದೃಷ್ಟಿಕೋನದ ಪ್ರಗತಿಯನ್ನು ಪರಿಶೀಲಿಸಲು ಮತ್ತು ನಮ್ಮ ಹಂಚಿಕೆಯ ಉದ್ದೇಶಗಳನ್ನು ಸಾಕಾರಗೊಳಿಸಲು ಹೆಚ್ಚಿನ ಮಾರ್ಗದರ್ಶನವನ್ನು ಒದಗಿಸಲು ನಮಗೆ ಅವಕಾಶವಿದೆ.
ಈ ಭೇಟಿಗಳು ಗತಕಾಲದ ಅಡಿಪಾಯವನ್ನು ನಿರ್ಮಿಸುತ್ತವೆ ಮತ್ತು ನಮ್ಮ ಜನರ ಮತ್ತು ವಿಶಾಲ ಪ್ರದೇಶದ ಪ್ರಯೋಜನಕ್ಕಾಗಿ ನಮ್ಮ ನಿಕಟ ಸಂಬಂಧಗಳನ್ನು ಬಲಪಡಿಸಲು ಕೊಡುಗೆ ನೀಡುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದರು.
*****
(Release ID: 2118188)
Visitor Counter : 11
Read this release in:
Tamil
,
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Telugu
,
Malayalam