ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬೆಲ್ಜಿಯಂನ ಘನತೆವೆತ್ತ ದೊರೆ ಫಿಲಿಪ್‌ ಅವರೊಂದಿಗೆ ಪ್ರಧಾನಮಂತ್ರಿ ಮಾತುಕತೆ

Posted On: 27 MAR 2025 8:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಲ್ಜಿಯಂನ ಘನತೆವೆತ್ತ ದೊರೆ ಫಿಲಿಪ್‌ ಅವರೊಂದಿಗೆ ಮಾತುಕತೆ ನಡೆಸಿದರು. ಶ್ರೀ ನರೇಂದ್ರ ಮೋದಿ ಅವರು ಇತ್ತೀಚೆಗೆ ಎಚ್‌ಆರ್‌ಎಚ್‌ ರಾಜಕುಮಾರಿ ಆಸ್ಟ್ರಿಡ್‌ ನೇತೃತ್ವದ ಬೆಲ್ಜಿಯಂ ಆರ್ಥಿಕ ನಿಯೋಗವನ್ನು ಶ್ಲಾಘಿಸಿದರು. ಇಬ್ಬರೂ ನಾಯಕರು ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಆಳಗೊಳಿಸುವುದು, ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು ಮತ್ತು ನಾವೀನ್ಯತೆ ಮತ್ತು ಸುಸ್ಥಿರತೆಯಲ್ಲಿಸಹಯೋಗವನ್ನು ಮುಂದುವರಿಸುವ ಬಗ್ಗೆ ಚರ್ಚಿಸಿದರು.

ಈ ಸಂಬಂಧ ಎಕ್ಸ್‌ ಖಾತೆಯ ಪೋಸ್ಟ್‌ನಲ್ಲಿ, ಅವರು ಹೀಗೆ ಹೇಳಿದ್ದಾರೆ:

‘‘ಬೆಲ್ಜಿಯಂನ ಎಚ್‌ಎಂ ಕಿಂಗ್‌ ಫಿಲಿಪ್‌ ಅವರೊಂದಿಗೆ ಸಮಾಲೋಚಿಸಿದ್ದು ಸಂತೋಷವಾಗಿದೆ. ಈ ವೇಳೆ, ಎಚ್‌ಆರ್‌ಎಚ್‌ ರಾಜಕುಮಾರಿ ಆಸ್ಟ್ರಿಡ್‌ ನೇತೃತ್ವದ ಭಾರತದ ಭೇಟಿಯ ಇತ್ತೀಚೆಗಿನ ಬೆಲ್ಜಿಯಂ ಆರ್ಥಿಕ ಕಾರ್ಯಾಚರಣೆಯನ್ನು ಶ್ಲಾಘಿಸಿದರು. ನಮ್ಮ ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಆಳಗೊಳಿಸುವುದು, ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು ಮತ್ತು ನಾವೀನ್ಯತೆ ಮತ್ತು ಸುಸ್ಥಿರತೆಯಲ್ಲಿಸಹಯೋಗವನ್ನು ಮುಂದುವರಿಸುವ ಬಗ್ಗೆ ನಾವು ಚರ್ಚಿಸಿದ್ದೇವೆ. 

@MonarchieBe  ’’

 

 

*****


(Release ID: 2116126) Visitor Counter : 19