ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ರಾಷ್ಟ್ರೀಯ ರೋಪ್ ವೇಸ್ ಅಭಿವೃದ್ಧಿ ಕಾರ್ಯಕ್ರಮ – ಪರ್ವತಮಾಲಾ ಪರಿಯೋಜನೆ ಅಡಿಯಲ್ಲಿ ಉತ್ತರಾಖಂಡ ರಾಜ್ಯದ ಗೋವಿಂದಘಾಟ್ ನಿಂದ ಹೇಮಕುಂಡ್ ಸಾಹಿಬ್ ಜೀ(12.4 ಕಿ.ಮೀ) ವರೆಗೆ ರೋಪ್ ವೇ ಯೋಜನೆ ಅಭಿವೃದ್ಧಿಗೆ ಸಂಪುಟದ ಅನುಮೋದನೆ
प्रविष्टि तिथि:
05 MAR 2025 3:08PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಗೋವಿಂದ ಘಾಟ್ ನಿಂದ ಹೇಮಕುಂಡ್ ಸಾಹಿಬ್ ಜೀ ವರೆಗೆ 12.4 ಕಿ.ಮೀ ರೋಪ್ ವೇ ಯೋಜನೆ ನಿರ್ಮಾಣಕ್ಕೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಯನ್ನು ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿಬಿಎಫ್ಒಟಿ) ಮಾದರಿಯಲ್ಲಿ ಒಟ್ಟು 2,730.13 ಕೋಟಿ ರೂ.ಗಳ ಬಂಡವಾಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಪ್ರಸ್ತುತ, ಹೇಮಕುಂಡ್ ಸಾಹಿಬ್ ಜೀ ಗೆ ಪ್ರಯಾಣವು ಗೋವಿಂದಘಾಟ್ ನಿಂದ 21 ಕಿ.ಮೀ ಎತ್ತರದ ಚಾರಣವಾಗಿದ್ದು, ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳು ಅಥವಾ ಪಲ್ಲಕ್ಕಿಗಳಿಂದ ಕ್ರಮಿಸಬೇಕಾಗಿರುತ್ತದೆ. ಉದ್ದೇಶಿತ ರೋಪ್ ವೇ ಯಾತ್ರಾರ್ಥಿಗಳಿಗೆ ಮತ್ತು ಹೇಮಕುಂಡ್ ಸಾಹಿಬ್ ಜೀ ಮತ್ತು ಹೂವುಗಳ ಕಣಿವೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವನ್ನು ಒದಗಿಸುವಂತೆ ಯೋಜಿಸಲಾಗಿದೆ ಮತ್ತು ಗೋವಿಂದಘಾಟ್ ಹಾಗು ಹೇಮಕುಂಡ್ ಸಾಹಿಬ್ ಜೀ ನಡುವಿನ ಸರ್ವಋತು ಸಂಪರ್ಕವನ್ನು ಮತ್ತು ಕೊನೆಯ ಮೈಲಿವರೆಗಿನ ಸಂಪರ್ಕವನ್ನು ಖಚಿತಪಡಿಸುತ್ತದೆ.
ರೋಪ್ ವೇ ಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಮತ್ತು ಗೋವಿಂದಘಾಟ್ ನಿಂದ ಘಂಗಾರಿಯಾ (10.55 ಕಿ.ಮೀ) ವರೆಗಿನ ಮೊನೊಕೇಬಲ್ ಡಿಟಾಚಬಲ್ ಗೊಂಡೋಲಾ (ಎಂಡಿಜಿ) ಅನ್ನು ಆಧರಿಸಿದೆ, ಘಂಗಾರಿಯಾದಿಂದ ಹೇಮಕುಂಡ್ ಸಾಹಿಬ್ ಜೀ (1.85 ಕಿ.ಮೀ) ವರೆಗಿನ ಅತ್ಯಾಧುನಿಕ ಟ್ರೈಕೇಬಲ್ ಡಿಟಾಚಬಲ್ ಗೊಂಡೋಲಾ (3 ಎಸ್) ತಂತ್ರಜ್ಞಾನದೊಂದಿಗೆ ಅಡೆ-ತಡೆರಹಿತವಾಗಿ ಸಂಯೋಜಿಸಲಾಗುವುದು.
ರೋಪ್ ವೇ ಯೋಜನೆಯು ನಿರ್ಮಾಣ ಮತ್ತು ಕಾರ್ಯಾಚರಣೆಗಳ ಸಮಯದಲ್ಲಿ ಮತ್ತು ಆತಿಥ್ಯ, ಪ್ರಯಾಣ, ಆಹಾರ ಮತ್ತು ಪಾನೀಯಗಳು (ಎಫ್ & ಬಿ) ಮತ್ತು ಪ್ರವಾಸೋದ್ಯಮದಂತಹ ಸಂಬಂಧಿತ ಪ್ರವಾಸೋದ್ಯಮ ಉದ್ಯಮಗಳಲ್ಲಿ ವರ್ಷವಿಡೀ ಗಣನೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ರೋಪ್ ವೇ ಯೋಜನೆಯ ಅಭಿವೃದ್ಧಿಯು ಸಮತೋಲಿತ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ, ಯಾತ್ರಾರ್ಥಿಗಳಿಗೆ ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುವ ಮತ್ತು ಪ್ರದೇಶದ ತ್ವರಿತ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ.
ಹೇಮಕುಂಡ್ ಸಾಹಿಬ್ ಜೀ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ 15,000 ಅಡಿ ಎತ್ತರದಲ್ಲಿರುವ ಅತ್ಯಂತ ಪೂಜ್ಯ ಯಾತ್ರಾ ಸ್ಥಳವಾಗಿದೆ. ಈ ಪವಿತ್ರ ಸ್ಥಳದಲ್ಲಿ ಸ್ಥಾಪಿಸಲಾದ ಗುರುದ್ವಾರವು ಮೇ ಮತ್ತು ಸೆಪ್ಟೆಂಬರ್ ನಡುವೆ ವರ್ಷದಲ್ಲಿ ಸುಮಾರು 5 ತಿಂಗಳು ತೆರೆದಿರುತ್ತದೆ ಮತ್ತು ವಾರ್ಷಿಕವಾಗಿ ಸುಮಾರು 1.5 ರಿಂದ 2 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಹೇಮಕುಂಡ್ ಸಾಹಿಬ್ ಜೀ ಗೆ ಚಾರಣವು ಪ್ರಸಿದ್ಧ ವ್ಯಾಲಿ ಆಫ್ ಫ್ಲವರ್ಸ್ಗೆ (ಹೂವುಗಳ ಕಣಿವೆ) ಪ್ರವೇಶದ್ವಾರವಾಗಿ ಕಾರ್ಯನಿರ್ವಹಿಸುತ್ತದೆ, ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲ್ಪಟ್ಟ ರಾಷ್ಟ್ರೀಯ ಉದ್ಯಾನವನವಾಗಿದೆ, ಇದು ಪ್ರಾಚೀನ ಗರ್ವಾಲ್ ಹಿಮಾಲಯದಲ್ಲಿದೆ.
*****
(रिलीज़ आईडी: 2108508)
आगंतुक पटल : 84
इस विज्ञप्ति को इन भाषाओं में पढ़ें:
English
,
Urdu
,
हिन्दी
,
Nepali
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam