ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಬ್ಯಾಟಲ್ ಆಫ್ ದಿ ಬ್ಯಾಂಡ್ಸ್ ಗ್ಲೋಬಲ್
ಅಲ್ಲಿ ಸಂಸ್ಕೃತಿಗಳು ಘರ್ಷಿಸುತ್ತವೆ, ಸಂಗೀತವು ಒಂದುಗೂಡಿಸುತ್ತದೆ
Posted On:
28 FEB 2025 5:02PM by PIB Bengaluru
ಪರಿಚಯ
ದಿ ಬ್ಯಾಟಲ್ ಆಫ್ ದಿ ಬ್ಯಾಂಡ್ಸ್ ನ ಅಗಾಧ ಯಶಸ್ಸಿನ ನಂತರ, ವೇವ್ಸ್ ಈಗ ಬ್ಯಾಟಲ್ ಆಫ್ ದಿ ಬ್ಯಾಂಡ್ಸ್ ಗ್ಲೋಬಲ್ ಅನ್ನು ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದೆ. ಈ ಅತ್ಯಾಕರ್ಷಕ ಹೊಸ ಉಪಕ್ರಮವನ್ನು ವಿಶಾಲ ಪ್ರೇಕ್ಷಕರನ್ನು ಆಕರ್ಷಿಸಲು ಮತ್ತು ಯುವ ಪೀಳಿಗೆಗೆ ಸಂಗೀತದ ಶ್ರೀಮಂತ ಸೌಂದರ್ಯ ಮತ್ತು ವೈವಿಧ್ಯತೆಯನ್ನು ಪರಿಚಯಿಸಲು ವಿನ್ಯಾಸಗೊಳಿಸಲಾಗಿದೆ. ಪ್ರಸಾರ ಭಾರತಿ ಮತ್ತು ಸರೆಗಮಾ ಸಹಯೋಗದೊಂದಿಗೆ ವೇವ್ಸ್ ಮೊದಲ ಸೀಸನ್ ನ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ ನ ಭಾಗವಾಗಿರುವ ಈ ಕಾರ್ಯಕ್ರಮವು ಭಾಗವಹಿಸುವ ಬ್ಯಾಂಡ್ ಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅದ್ಭುತ ವೇದಿಕೆಯನ್ನು ಒದಗಿಸುತ್ತದೆ.

ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ತನ್ನ ಮೊದಲ ಆವೃತ್ತಿಯಲ್ಲಿ ಇಡೀ ಮಾಧ್ಯಮ ಮತ್ತು ಮನರಂಜನಾ ವಲಯದ (ಎಂ&ಇ) ಸಮನ್ವಯಕ್ಕೆ ಒಂದು ವಿಶಿಷ್ಟ ವೇದಿಕೆಯಾಗಿದೆ. ಈ ಕಾರ್ಯಕ್ರಮವು ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಗಮನವನ್ನು ಭಾರತದತ್ತ ಸೆಳೆಯುವ ಮತ್ತು ಅದನ್ನು ಭಾರತೀಯ ಮಾಧ್ಯಮ ಮತ್ತು ಮನರಂಜನಾ ವಲಯ ಮತ್ತು ಅದರ ಪ್ರತಿಭೆಯೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿರುವ ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿದೆ.
ಈ ಶೃಂಗಸಭೆಯು ಮೇ 1 ರಿಂದ 4, 2025 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮತ್ತು ಜಿಯೋ ವರ್ಲ್ಡ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಪ್ರಸಾರ ಮತ್ತು ಮಾಹಿತಿ ಮನರಂಜನೆ, ಎವಿಜಿಸಿ-ಎಕ್ಸ್ ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ), ಡಿಜಿಟಲ್ ಮಾಧ್ಯಮ ಮತ್ತು ನಾವೀನ್ಯತೆ ಮತ್ತು ಚಲನಚಿತ್ರಗಳು ಎಂಬ ನಾಲ್ಕು ಸ್ತಂಭಗಳ ಮೇಲೆ ಕೇಂದ್ರೀಕರಿಸುತ್ತದೆ, ಭಾರತದ ಮನರಂಜನಾ ಉದ್ಯಮದ ಭವಿಷ್ಯವನ್ನು ಪ್ರದರ್ಶಿಸಲು ನಾಯಕರು, ಸೃಷ್ಟಿಕರ್ತರು ಮತ್ತು ತಂತ್ರಜ್ಞರನ್ನು ಒಟ್ಟುಗೂಡಿಸುತ್ತದೆ.
ಬ್ಯಾಟಲ್ ಆಫ್ ಬ್ಯಾಂಡ್ಸ್ ಗ್ಲೋಬಲ್, ಪ್ರಸಾರ ಮತ್ತು ಮಾಹಿತಿ ಮನರಂಜನೆಯ ಮೇಲೆ ಕೇಂದ್ರೀಕರಿಸುವ ವೇವ್ಸ್ ನ ಮೊದಲ ಆಧಾರಸ್ತಂಭವಾಗಿದೆ. ಈ ಅಂತರರಾಷ್ಟ್ರೀಯ ಸ್ಪರ್ಧೆಯನ್ನು ಸೃಜನಶೀಲತೆ ಮತ್ತು ಸಂಗೀತದ ಗಡಿಗಳನ್ನು ಮೀರಲು ವಿನ್ಯಾಸಗೊಳಿಸಲಾಗಿದೆ, ಜೊತೆಗೆ ಉದ್ಯಮದೊಳಗೆ ಸಮುದಾಯ ಪ್ರಜ್ಞೆ, ನಾವೀನ್ಯತೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಅರ್ಹತಾ ಮಾನದಂಡಗಳು
ಬ್ಯಾಟಲ್ ಆಫ್ ಬ್ಯಾಂಡ್ಸ್ ಗ್ಲೋಬಲ್ ನಲ್ಲಿ ಭಾಗವಹಿಸಲು, ದಯವಿಟ್ಟು ನೀವು ಈ ಕೆಳಗಿನ ಅರ್ಹತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸಿರುವುದನ್ನು ಖಚಿತಪಡಿಸಿಕೊಳ್ಳಿ:

ಭಾಗವಹಿಸುವಿಕೆ ಪ್ರಕ್ರಿಯೆ
ಭಾಗವಹಿಸಲು, ಬ್ಯಾಂಡ್ ಗಳು (ಗಾಯಕರು ಸೇರಿದಂತೆ ಗರಿಷ್ಠ 5 ಸದಸ್ಯರು) ಅಧಿಕೃತ ದೂರದರ್ಶನ ವೆಬ್‌ಸೈಟ್ ಮೂಲಕ ತಮ್ಮದೇ ಸ್ವಂತ ಸಂಗೀತವನ್ನು ಪ್ರದರ್ಶಿಸುವ ಮೂಲ ಶ್ರವ್ಯ-ದೃಶ್ಯ ಪ್ರದರ್ಶನವನ್ನು ಸಲ್ಲಿಸಬೇಕು. ಪ್ರದರ್ಶನವು ಯಾವುದೇ ಅಸ್ತಿತ್ವದಲ್ಲಿರುವ ಹಾಡುಗಳು ಅಥವಾ ಸಂಯೋಜನೆಗಳನ್ನು ಒಳಗೊಂಡಿರಬಾರದು.

- ವೀಡಿಯೊ ಸಲ್ಲಿಕೆ:
- ಬ್ಯಾಂಡ್ ಗಳು ಆಧುನಿಕ ಮತ್ತು ಸಾಂಪ್ರದಾಯಿಕ ಜಾನಪದ ಅಂಶಗಳನ್ನು ಸಂಯೋಜಿಸುವ ಮೂಲ ಸಂಗೀತದ ವೀಡಿಯೊ (ಗರಿಷ್ಠ 2 ನಿಮಿಷಗಳು, 300MB, MP4 ಸ್ವರೂಪ) ಸಲ್ಲಿಸಬೇಕು.
- ದೂರದರ್ಶನದ ಅಧಿಕೃತ ವೆಬ್‌ಸೈಟ್ ಮೂಲಕ “ವೇವ್ಸ್ ಇಂಡಿಯಾ”ವಿಭಾಗದ ಅಡಿಯಲ್ಲಿ “ಬ್ಯಾಟಲ್ ಆಫ್ ಬ್ಯಾಂಡ್ಸ್”ಅನ್ನು ಆಯ್ಕೆ ಮಾಡಿ ಮತ್ತು ನೋಂದಣಿ ಸೂಚನೆಗಳನ್ನು ಅನುಸರಿಸಿ ಅಪ್‌ಲೋಡ್ ಮಾಡಬೇಕು.
- ನೋಂದಣಿ
- ನೋಂದಣಿ ಅರ್ಜಿಯನ್ನು ಬ್ಯಾಂಡ್ ಹೆಸರು, ನಗರ, ಸಂಪರ್ಕ ಮಾಹಿತಿ, ಬ್ಯಾಂಡ್ ಸದಸ್ಯರು, ಸಾಮಾಜಿಕ ಮಾಧ್ಯಮ ಲಿಂಕ್ ಗಳು ಮತ್ತು ಪ್ರದರ್ಶನ ಲಿಂಕ್ ನಂತಹ ವಿವರಗಳೊಂದಿಗೆ ಭರ್ತಿ ಮಾಡಬೇಕು.
- ನಿಯಮಗಳು
- ಮೊದಲು ಸಲ್ಲಿಸಿದ ಮಾನ್ಯ ವೀಡಿಯೊವನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ.
- ವೀಡಿಯೊಗಳು ಮಾರ್ಗಸೂಚಿಗಳನ್ನು ಪಾಲಿಸಬೇಕು; ಪಾಲಿಸದಿರುವುದು ಅನರ್ಹತೆಗೆ ಕಾರಣವಾಗುತ್ತದೆ.
- ಮಾಹಿತಿಯನ್ನು ಸಲ್ಲಿಸುವ ಮೂಲಕ, ಭಾಗವಹಿಸುವವರು ಪ್ರಚಾರದ ಬಳಕೆಗಾಗಿ ಗೌಪ್ಯತಾ ಹಕ್ಕುಗಳನ್ನು ಬಿಟ್ಟುಕೊಡುತ್ತಾರೆ.
ಚಾಲೆಂಜ್ ನ ವಿವರಗಳು
ಸಂಪೂರ್ಣ ಆಯ್ಕೆ ಪ್ರಕ್ರಿಯೆಯ ನಂತರ, ಅಗ್ರ 13 ಅಂತರರಾಷ್ಟ್ರೀಯ ಬ್ಯಾಂಡ್ ಗಳು ಈ ಚಾಲೆಂಜ್ ಗೆ ಸೇರುತ್ತವೆ, ಇದು ಮಾರ್ಚ್ 15 ರಿಂದ 20 ರವರೆಗೆ ಪ್ರಸಾರವಾಗಲಿದೆ ಮತ್ತು ಏಪ್ರಿಲ್ 30, 2025 ರ ಮೊದಲು ಮುಕ್ತಾಯಗೊಳ್ಳುತ್ತದೆ. ಕಾರ್ಯಕ್ರಮದ ಉದ್ದಕ್ಕೂ, ಅಗ್ರ 5 ಅಂತರರಾಷ್ಟ್ರೀಯ ಬ್ಯಾಂಡ್ ಗಳನ್ನು ಅವುಗಳ ಪ್ರದರ್ಶನಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಮತ್ತು ಈವೆಂಟ್ ಹೀಗಿರುತ್ತದೆ:
- ನಿರ್ಮಾಣ: ಸರೆಗಮ
- ನಿರ್ದೇಶನ: ಅನುಭವಿ ಶೋ ನಿರ್ದೇಶಕಿ ಶ್ರುತಿ ಅನಿಂದಿತಾ ವರ್ಮಾ
- ನಿರೂಪಕರು: ಪ್ರತಿಭಾವಂತ ಕೆತ್ತನ್ ಸಿಂಗ್
- ತೀರ್ಪುಗಾರರು: ಪ್ರಸಿದ್ಧ ಕಲಾವಿದರಾದ ರಾಜಾ ಹಸನ್ ಮತ್ತು ಶ್ರದ್ಧಾ ಪಂಡಿತ್
- ಮಾರ್ಗದರ್ಶಕರು: ಟೋನಿ ಕಕ್ಕರ್, ಶ್ರುತಿ ಪಾಠಕ್, ರಾಧಿಕಾ ಚೋಪ್ರಾ, ಅಮಿತಾಭ್ ವರ್ಮಾ ಮತ್ತು ಇತರರು ಸೇರಿದಂತೆ ಭಾರತದ ಪ್ರಖ್ಯಾತ ಮಾರ್ಗದರ್ಶಕರು, ಅಂತರರಾಷ್ಟ್ರೀಯ ಪರಿಣತಿಯನ್ನು ತರುತ್ತಾರೆ.
ಮುಕ್ತಾಯ
ಬ್ಯಾಟಲ್ ಆಫ್ ಬ್ಯಾಂಡ್ಸ್ ಗ್ಲೋಬಲ್ ವೈವಿಧ್ಯಮಯ ಸಂಗೀತ ಪ್ರತಿಭೆ ಮತ್ತು ಅಂತರರಾಷ್ಟ್ರೀಯ ಸಹಯೋಗಕ್ಕೆ ಒಂದು ವಿಶಿಷ್ಟ ವೇದಿಕೆಯನ್ನು ಒದಗಿಸುತ್ತದೆ. ಆಯ್ಕೆಯಾದ ಅಗ್ರ 5 ಜಾಗತಿಕ ಬ್ಯಾಂಡ್ ಗಳು ಪ್ರತಿಷ್ಠಿತ ವೇವ್ಸ್ ವೇದಿಕೆಯಲ್ಲಿ ಅಗ್ರ 5 ಭಾರತೀಯ ಬ್ಯಾಂಡ್ ಗಳೊಂದಿಗೆ ಪ್ರದರ್ಶನ ನೀಡುತ್ತವೆ, ಜಾಗತಿಕ ಮತ್ತು ಭಾರತೀಯ ಸಂಗೀತ ಎರಡರಲ್ಲೂ ಅತ್ಯುತ್ತಮವಾದದ್ದನ್ನು ಪ್ರದರ್ಶಿಸುತ್ತವೆ. ಈ ಉಪಕ್ರಮವು ಭಾರತದ ಶ್ರೀಮಂತ ಸಂಗೀತ ಸಂಪ್ರದಾಯಗಳನ್ನು ಆಚರಿಸುವ ಮೂಲಕ ಜಾಗತಿಕ ಸಂಗೀತ ಕ್ಷೇತ್ರವನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿದೆ.
ಉಲ್ಲೇಖಗಳು
v. https://x.com/WAVESummitIndia/status/1854483072172822893
v. https://www.saregama.com/battleofbands
v. https://prasarbharati.gov.in/battle-of-bands/
v. https://pib.gov.in/PressReleaseIframePage.aspx?PRID=2102856#:~:text=Battle%20of%20bands%20International%20aims,to%20audiences%20around%20the%20globe.
v. https://pib.gov.in/PressNoteDetails.aspx?NoteId=152045&ModuleId=3®=3&lang=2
Click here to download PDF
*****
(Release ID: 2107326)
Visitor Counter : 14