ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ ಮತ್ತು ಭೂತಾನ್ ನಡುವಿನ ಅನನ್ಯ ಮತ್ತು ಐತಿಹಾಸಿಕ ಪಾಲುದಾರಿಕೆಯನ್ನು ಗಾಢವಾಗಿಸಲು ಬದ್ಧ : ಪ್ರಧಾನಮಂತ್ರಿ

Posted On: 21 FEB 2025 7:16PM by PIB Bengaluru

ನವದೆಹಲಿಯಲ್ಲಿ ನಡೆದಿರುವ ಎಸ್ ಒ ಯು ಎಲ್ ನಾಯಕತ್ವ ಸಮಾವೇಶದಲ್ಲಿ ಭೂತಾನ್‌ ಪ್ರಧಾನಿ ಶೆರಿಂಗ್ ಟೋಬ್ಗೇ ಅವರ ಭಾಷಣವನ್ನು ಶ್ಲಾಘಿಸುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತ ಮತ್ತು ಭೂತಾನ್ ನಡುವಿನ ಅನನ್ಯ ಮತ್ತು ಐತಿಹಾಸಿಕ ಪಾಲುದಾರಿಕೆಯನ್ನು ಆಳವಾಗಿಸಲು ನಾವು ಬದ್ಧ ಎಂದು ಭರವಸೆ ನೀಡಿದ್ದಾರೆ. 

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ: 

“ನನ್ನ ಸ್ನೇಹಿತ ಪ್ರಧಾನಮಂತ್ರಿ ಶೆರಿಂಗ್ ಟೋಬ್ಗೆ ಅವರನ್ನು ಮತ್ತೊಮ್ಮೆ ಭೇಟಿಯಾಗಲು ಸಂತೋಷವಾಗಿದೆ. ನಾಯಕತ್ವ ಸಮಾವೇಶ @LeadWithSOUL ನಲ್ಲಿ ಭೂತಾನ್ ಪ್ರಧಾನಮಂತ್ರಿ ಅವರ ಭಾಷಣವನ್ನು ಮೆಚ್ಚುತ್ತೇನೆ.  ಭಾರತ ಮತ್ತು ಭೂತಾನ್ ನಡುವಿನ ಅನನ್ಯ ಮತ್ತು ಐತಿಹಾಸಿಕ ಪಾಲುದಾರಿಕೆಯನ್ನು ಆಳಗೊಳಿಸಲು ನಾವು ಬದ್ಧರಾಗಿದ್ದೇವೆ.

@tsheringtobgay”

 

 

*****


(Release ID: 2105428) Visitor Counter : 13