ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಮಿಳು ನಾಡಿನ ಜನಪ್ರಿಯ ಥೈಪೂಸಂ ಹಬ್ಬದ ಪ್ರಯುಕ್ತ ಪ್ರಧಾನಮಂತ್ರಿ ಶುಭಾಶಯ 

Posted On: 11 FEB 2025 1:14PM by PIB Bengaluru

ಇಂದು ತಮಿಳು ನಾಡಿನಲ್ಲಿ ಹಿಂದೂಗಳು ಆಚರಿಸುವ ಸುಬ್ರಹ್ಮಣ್ಯ ಸ್ವಾಮಿ ಆರಾಧಿಸುವ ಥೈಪೂಸಂ ಹಬ್ಬದ ಪ್ರಯುಕ್ತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭಾಶಯ ತಿಳಿಸಿದರು. 

"ಮುರುಗನ್ ದೇವರ ದೈವಿಕ ಅನುಗ್ರಹವು ನಮಗೆ ಶಕ್ತಿ, ಸಮೃದ್ಧಿ ಮತ್ತು ಬುದ್ಧಿವಂತಿಕೆಯೊಂದಿಗೆ ಮಾರ್ಗದರ್ಶನ ನೀಡಲಿ. ಈ ಪವಿತ್ರ ಸಂದರ್ಭದಲ್ಲಿ, ಎಲ್ಲರಿಗೂ ಸಂತೋಷ, ಉತ್ತಮ ಆರೋಗ್ಯ ಮತ್ತು ಯಶಸ್ಸನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಶ್ರೀ ಮೋದಿ ಹೇಳಿದರು.

ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಮಂತ್ರಿಗಳು,

''ಪ್ರತಿಯೊಬ್ಬರಿಗೂ ಸಂತಸ ತುಂಬಿದ ಥೈಪೂಸಂ ಹಬ್ಬದ ಶುಭಾಶಯಗಳು. ಮುರುಗನ್ ದೇವರ ಅನುಗ್ರಹವು ನಮಗೆ ಶಕ್ತಿ, ಸಮೃದ್ಧಿ ಮತ್ತು ಬುದ್ಧಿವಂತಿಕೆ ನೀಡಿ ಮಾರ್ಗದರ್ಶನ ನೀಡಲಿ. ಈ ಪವಿತ್ರ ಸಂದರ್ಭದಲ್ಲಿ, ನಾನು ಎಲ್ಲರಿಗೂ ಸಂತೋಷ, ಉತ್ತಮ ಆರೋಗ್ಯ ಮತ್ತು ಯಶಸ್ಸನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಆಶಯ ವ್ಯಕ್ತಪಡಿಸಿದ್ದಾರೆ.

Vetrivel Muruganuku Arogara!"
 

 

*****


(Release ID: 2101761) Visitor Counter : 24