ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಟ್ರೈಲರ್ ತಯಾರಿಕೆ ಸ್ಪರ್ಧೆಯ ಮೂಲಕ ಸೃಜನಶೀಲತೆಯನ್ನು ಅನ್ಲಾಕ್ ಮಾಡುವುದು; ನೆಟ್ ಫ್ಲಿಕ್ಸ್ ನ ವ್ಯಾಪಕ ವಿಷಯ ಗ್ರಂಥಾಲಯದಿಂದ ವಿಷಯ ಸೆಳೆದು ಬಲವಾದ ಟ್ರೈಲರ್ ಗಳನ್ನು ಅಭಿವೃದ್ಧಿಪಡಿಸಲು ಸೃಷ್ಟಿಕರ್ತರಿಗೆ ಅವಕಾಶ


ಮಾರ್ಚ್ 31ರ ಗಡುವಿನ ಮೊದಲು ಆಕಾಂಕ್ಷಿ ಸೃಷ್ಟಿಕರ್ತರು ಮತ್ತು ವೃತ್ತಿಪರರು ಅವಕಾಶವನ್ನು ಬಳಸಿಕೊಳ್ಳಬಹುದು, ಇಲ್ಲಿಯವರೆಗೆ 3200ಕ್ಕೂ ಹೆಚ್ಚು ನೋಂದಣಿಗಳಾಗಿದ್ದು,  ಉತ್ಸಾಹ ಹೆಚ್ಚುತ್ತಿದೆ

ಟ್ರೈಲರ್ ತಯಾರಿಕೆ ಸ್ಪರ್ಧೆಯ ದಿಲ್ಲಿ ರೋಡ್ ಶೋ ಜಿ.ಟಿ.ಬಿ.4 ಸಿ.ಇ.ಸಿ. (GTB4CEC) ಯಲ್ಲಿ ನಡೆದು ಸೃಜನಶೀಲತೆಯನ್ನು ಉದ್ದೀಪಿಸಿದೆ; ಉದಯೋನ್ಮುಖ ಚಲನಚಿತ್ರ ನಿರ್ಮಾಪಕರ ಆಕಾಂಕ್ಷೆಗಳಿಗೆ  ಉತ್ತೇಜನ ನೀಡಿದೆ

Posted On: 03 FEB 2025 5:46PM by PIB Bengaluru

 ಟ್ರೈಲರ್ ತಯಾರಿಕೆ ಸ್ಪರ್ಧೆಯ ದಿಲ್ಲಿ ರೋಡ್ ಶೋ ಕಳೆದ ವಾರ ಗುರುತೇಜ್ ಬಹದ್ದೂರ್ 4ನೇ ಶತಮಾನೋತ್ಸವ ಎಂಜಿನಿಯರಿಂಗ್ ಕಾಲೇಜಿನಲ್ಲಿ (GTB4CEC) ನಡೆಯಿತು. ರಾಷ್ಟ್ರವ್ಯಾಪಿ ಟ್ರೈಲರ್ ತಯಾರಿಕೆ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯ ರೋಡ್ ಶೋಗಳ ಸರಣಿಯಲ್ಲಿ ಇದು ಪ್ರಮುಖ ಮೈಲಿಗಲ್ಲು.

ಭಾರತೀಯ ವಾಣಿಜ್ಯೋದ್ಯಮಿಗಳ ಒಕ್ಕೂಟ-ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಮತ್ತು ರೀಸ್ಕಿಲ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗು ನೆಟ್ಫ್ಲಿಕ್ಸ್ ಸೃಜನಶೀಲ ಪಾಲುದಾರರಾಗಿ ಮತ್ತು ಗುರುತೇಜ್ ಬಹದ್ದೂರ್ 4 ನೇ ಶತಮಾನೋತ್ಸವ ಎಂಜಿನಿಯರಿಂಗ್ ಕಾಲೇಜು (GTB4CEC) ಶೈಕ್ಷಣಿಕ ಪಾಲುದಾರ ಸಂಸ್ಥೆಯಾಗಿ ಆಯೋಜಿಸಿದ ಉಪಕ್ರಮವು ಭಾಗವಹಿಸುವವರಿಗೆ ಅವರ ಕಥೆ ಹೇಳುವ ಮತ್ತು ವೀಡಿಯೊ ಸಂಪಾದನೆಯ ಕಲೆಯನ್ನು ಅನ್ವೇಷಿಸಲು ಅಮೂಲ್ಯ ಅವಕಾಶದ  ( ಸಾಟಿಯಿಲ್ಲದ) ವೇದಿಕೆಯನ್ನು ಒದಗಿಸಿತು.

ಸೃಜನಶೀಲತೆ ಮತ್ತು ನಾವೀನ್ಯತೆಗಾಗಿ ಒಂದು ವೇದಿಕೆ

ಸೃಜನಶೀಲತೆಯ ಅನ್ಲಾಕಿಂಗ್ (ಅನಾವರಣ) : ವೇವ್ಸ್ 2025ರ ಅಂಗವಾಗಿ ನೆಟ್ಫ್ಲಿಕ್ಸ್ ಫಂಡ್ ಫಾರ್ ಕ್ರಿಯೇಟಿವ್ ಈಕ್ವಿಟಿಯಿಂದ ಬೆಂಬಲಿತವಾದ  ಟ್ರೈಲರ್ ತಯಾರಿಕಾ ಸ್ಪರ್ಧೆಯು ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರನ್ನು ಪ್ರೇರೇಪಿಸಲು ಮತ್ತು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾದ ಸ್ಪರ್ಧೆಯಾಗಿದೆ. ಈ ವಿಶಿಷ್ಟ ಉಪಕ್ರಮವು ನೆಟ್ಫ್ಲಿಕ್ಸ್ನ ವ್ಯಾಪಕ ವಿಷಯ ಗ್ರಂಥಾಲಯದಿಂದ ವಿಷಯಗಳನ್ನು ಸೆಳೆದು ಬಲವಾದ ಟ್ರೈಲರ್ಗಳನ್ನು ರಚಿಸುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ. ವೀಡಿಯೊ ಸಂಪಾದನೆ, ಕಥೆ ಹೇಳುವಿಕೆ ಮತ್ತು ಟ್ರೈಲರ್ ನಿರ್ಮಾಣದಲ್ಲಿ ಭಾಗವಹಿಸುವವರನ್ನು ಆಳವಾದ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಲು 3 ತಿಂಗಳ ಅವಧಿಗೆ ಸಮಾನ ಆಸಕ್ತಿಯ  ಗುಂಪನ್ನು ರಚಿಸಲಾಗಿತ್ತು.

ಟ್ರೈಲರ್ ತಯಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಕಾರ್ಯಕ್ಷಮತೆಯ ಆಧಾರದ ಮೇಲೆ ವಿವಿಧ ಮಾನ್ಯತೆಗಳು ಮತ್ತು ಬಹುಮಾನಗಳನ್ನು ಪಡೆಯುತ್ತಾರೆ. ಮಾನ್ಯವಾದಂತಹ  ಟ್ರೈಲರ್ ಅನ್ನು ಸಲ್ಲಿಸುವ ಪ್ರತಿಯೊಬ್ಬ ಸ್ಪರ್ಧಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಅಗ್ರ 50 ಪ್ರವೇಶಾರ್ಥಿಗಳು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್ಐಸಿಸಿಐ) ಮತ್ತು ನೆಟ್ಫ್ಲಿಕ್ಸ್ನಿಂದ ವಿಶೇಷ ಮಾನ್ಯತೆಯೊಂದಿಗೆ ಶ್ರೇಷ್ಠತೆಯ ಪ್ರಮಾಣಪತ್ರವನ್ನು ಪಡೆಯುತ್ತಾರೆ..

ಇದಲ್ಲದೆ, ಅಗ್ರ 20 ಸ್ಪರ್ಧಿಗಳಿಗೆ ಟ್ರೋಫಿ, ವಿಶೇಷ ಬಹುಮಾನಗಳು ಮತ್ತು ವೇವ್ಸ್ನಲ್ಲಿ ಭಾಗವಹಿಸುವ ವಿಶಿಷ್ಟ ಅವಕಾಶ ಲಭಿಸಲಿದೆ, ಮತ್ತು ಅವರಿಗೆ ತಮ್ಮ  ಸಾಧನೆಗಳನ್ನು ಪ್ರದರ್ಶಿಸುವ ಹಾಗು ಉದ್ಯಮದ ನಾಯಕರೊಂದಿಗೆ ಸಂಪರ್ಕ ಸಾಧಿಸುವುದು ಮುಂತಾದ ವಿಶಿಷ್ಟ ಅವಕಾಶಗಳನ್ನು ನೀಡಲಾಗುವುದು.
 

ನೋಂದಣಿಗಳು ಚಾಲ್ತಿಯಲ್ಲಿದ್ದು ಮತ್ತು 2025ರ ಮಾರ್ಚ್ 31 ರಂದು ಕೊನೆಗೊಳ್ಳುತ್ತವೆ. ಇಲ್ಲಿಯವರೆಗೆ, ಪ್ರಪಂಚದಾದ್ಯಂತ ಸುಮಾರು 3200 ನೋಂದಣಿಗಳನ್ನು ಮಾಡಲಾಗಿದೆ. ಭಾಗವಹಿಸುವವರ ಸಾಮಾನ್ಯ ಪ್ರೊಫೈಲ್ಗಳು ಕಾಲೇಜು ವಿದ್ಯಾರ್ಥಿಗಳಿಂದ ಅಂದರೆ ಮಹತ್ವಾಕಾಂಕ್ಷೆಯ ವಿಷಯ ಸೃಷ್ಟಿಕರ್ತರು ಮತ್ತು ವೀಡಿಯೊ ಸಂಪಾದಕರಿಂದ ಹಿಡಿದು ಕೆಲಸ ಮಾಡುವ ವೃತ್ತಿಪರರವರೆಗೆ,  ತಮ್ಮ ಹವ್ಯಾಸಕ್ಕೆ ಧುಮುಕುವ ಅಥವಾ ಪ್ರಸ್ತುತ ತಮ್ಮ ಉದ್ಯಮವನ್ನು ನಡೆಸುತ್ತಿರುವ ಸಂಪಾದಕರು ಮತ್ತು ಸೃಷ್ಟಿಕರ್ತರವರೆಗೆ ವಿವಿಧ ಜನರನ್ನು ಒಳಗೊಂಡಿವೆ.

ನೋಂದಣಿ ಲಿಂಕ್: https://reskilll.com/hack/wavesficci/signup

 

ದಿಲ್ಲಿಯಲ್ಲಿ ರೋಡ್ ಶೋ GTB4CEC

ಗುರುತೇಜ್ ಬಹದ್ದೂರ್ 4ನೇ ಶತಮಾನೋತ್ಸವ ಎಂಜಿನಿಯರಿಂಗ್ ಕಾಲೇಜಿನಲ್ಲಿ (GTB4CEC) ನಡೆದ ದಿಲ್ಲಿ ರೋಡ್ ಶೋ ಸೇರಿದಂತೆ ದೇಶಾದ್ಯಂತ ನಡೆದ ರೋಡ್ ಶೋಗಳು ಸೃಜನಶೀಲ ಪ್ರತಿಭೆಗಳನ್ನು ಪ್ರೇರೇಪಿಸುವಲ್ಲಿ ಮತ್ತು ಪೋಷಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.

ದಿಲ್ಲಿ  ರೋಡ್ ಶೋನ ಮುಖ್ಯಾಂಶಗಳು

ಹ್ಯಾಂಡ್-ಆನ್ ಕಾರ್ಯಾಗಾರಗಳು, (ವಿಷಯದ ಬಗ್ಗೆ ಪ್ರಾಯೋಗಿಕ ಮತ್ತು ಸಮಾಲೋಚನೆಯ ಮೂಲಕ ಕಲಿಯುವ ಅವಕಾಶಗಳು )

ಭಾಗವಹಿಸಿದವರು ಹಸಿರು ಪರದೆ ಸಂಪಾದನೆ, ಬಣ್ಣ ತಿದ್ದುಪಡಿ ಮತ್ತು ಸುಧಾರಿತ ವೀಡಿಯೊ ಎಡಿಟಿಂಗ್ ತಂತ್ರಗಳಲ್ಲಿ ಪ್ರಾಯೋಗಿಕ ತರಬೇತಿಯನ್ನು ಪಡೆದರು.

ಸೃಜನಶೀಲ ಸವಾಲು:

ಒದಗಿಸಿದ ಥೀಮ್ ಗಳ (ವಿಷಯ ಶೀರ್ಷಿಕೆ) ಆಧಾರದ ಮೇಲೆ ಆಕರ್ಷಕ ಟ್ರೈಲರ್ ಗಳನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ರಚಿಸಿದರು, ಅವರ ಕಥೆ ಹೇಳುವ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಪ್ರದರ್ಶಿಸಿದರು.

ಉದ್ಯಮದ ಒಳನೋಟಗಳು:

ತಜ್ಞರ ಸಮಿತಿಯು ಟ್ರೈಲರ್ ಗಳನ್ನು ಮೌಲ್ಯಮಾಪನ ಮಾಡಿತು ಮತ್ತು ಭಾಗವಹಿಸಿದವರಿಗೆ ತಮ್ಮ ಕರಕುಶಲತೆಯನ್ನು ಪರಿಷ್ಕರಿಸಲು ಸಹಾಯ ಮಾಡುವುದಕ್ಕಾಗಿ  ಅಮೂಲ್ಯವಾದ ಹಿಮ್ಮಾಹಿತಿಯನ್ನು  ಹಂಚಿಕೊಂಡಿತು.

ಪ್ರತಿಭೆಯ ಪ್ರದರ್ಶನ:

ರೋಡ್ ಶೋ ಉದಯೋನ್ಮುಖ ಚಲನಚಿತ್ರ ನಿರ್ಮಾಪಕರು ಮತ್ತು ಸಂಪಾದಕರ ಸೃಜನಶೀಲತೆಯನ್ನು ಕೊಂಡಾಡಿತು, ಅವರ ಗ್ರ್ಯಾಂಡ್ ಫಿನಾಲೆಯ  ತಯಾರಿಗೆ  ವೇಗವನ್ನು ನೀಡಿತು.

 

ಕಾರ್ಯಕ್ರಮದಲ್ಲಿ ರೆಸ್ಕಿಲ್ನ ಹಿರಿಯ ವೀಡಿಯೊ ಸಂಪಾದಕ ಧ್ರುವ್ ಮಾಥುರ್ ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದರು, ಅವರು ವೀಡಿಯೊ ಸಂಪಾದನೆಯಲ್ಲಿ ತಮ್ಮ ಪರಿಣತಿಯನ್ನು ಹಂಚಿಕೊಂಡರು ಮತ್ತು ಕಥೆ ಹೇಳುವ ತಂತ್ರಗಳನ್ನು ಕರಗತ ಮಾಡಿಕೊಳ್ಳುವ ಬಗ್ಗೆ ಭಾಗವಹಿಸಿದವರಿಗೆ  ಮಾರ್ಗದರ್ಶನ ನೀಡಿದರು.

ಮುಂದಿನ ಹಾದಿ

ಟ್ರೈಲರ್ ತಯಾರಿಕೆ ಸ್ಪರ್ಧೆ ಮತ್ತು ಅದರ ರೋಡ್ ಶೋಗಳು ಮುಂದಿನ ಪೀಳಿಗೆಯ ಚಲನಚಿತ್ರ ನಿರ್ಮಾಪಕರು ಮತ್ತು ಕಥೆಗಾರರನ್ನು ಗುರುತಿಸುವ ಮತ್ತು ಪೋಷಿಸುವ ಗುರಿಯನ್ನು ಹೊಂದಿವೆ. ಈ ಗುಂಪು ಚಟುವಟಿಕೆಯ ಸಹಯೋಗದ  ನಂತರ, ಇದರಲ್ಲಿ ಭಾಗವಹಿಸಿದವರಿಗೆ  ವೇವ್ಸ್ ಶೃಂಗಸಭೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಉದ್ಯಮ ಮಾನ್ಯತೆಗಾಗಿ ಸ್ಪರ್ಧಿಸುವ ಅವಕಾಶವಿದ್ದು ಅದಕ್ಕೆ ಅವರೀಗ  ಸಜ್ಜಾಗಿದ್ದಾರೆ.

ದಿಲ್ಲಿ ರೋಡ್ ಶೋ ಕಥೆ ಹೇಳುವ ಮತ್ತು ವೀಡಿಯೊ ಸಂಪಾದನೆಯ ಪರಿವರ್ತಕ ಶಕ್ತಿಗೆ ಸಾಕ್ಷಿಯಾಗಿದೆ, ಇದು ರಾಷ್ಟ್ರವ್ಯಾಪಿ ಸ್ಪರ್ಧೆಗೆ ರೋಮಾಂಚಕಾರಿ ವೇದಿಕೆಯನ್ನು ಕಲ್ಪಿಸಿತು. 

 

*****


(Release ID: 2099454) Visitor Counter : 27