ಹಣಕಾಸು ಸಚಿವಾಲಯ
azadi ka amrit mahotsav

ಸರ್ಕಾರದ ಕಲ್ಯಾಣ ಯೋಜನೆಗಳು ಕಡಿಮೆ ಆದಾಯದ ಕುಟುಂಬಗಳಲ್ಲಿ ಬಳಕೆ ಮತ್ತು ಆದಾಯವನ್ನು ಉತ್ಪಾದಿಸುವ ಚಟುವಟಿಕೆಯನ್ನು ಉತ್ತೇಜಿಸುತ್ತವೆ, ಅಸಮಾನತೆಯನ್ನು ಕಡಿಮೆ ಮಾಡುವ ಮೂಲಕ ಜೀವನಮಟ್ಟದ ಮೇಲೆ ಅನುಕೂಲಕರ ಪರಿಣಾಮ ಬೀರುತ್ತವೆ: ಆರ್ಥಿಕ ಸಮೀಕ್ಷೆ 2024-25


ಸರ್ಕಾರದ ಸಾಮಾಜಿಕ ಸೇವೆಗಳ ವೆಚ್ಚ (ಎಸ್ಎಸ್ಇ) ಒಟ್ಟು ವೆಚ್ಚ (ಟಿಇ) ಹಣಕಾಸು‌ ವರ್ಷ 2021ರಲ್ಲಿ ಶೇ.23.3  ರಿಂದ ಹಣಕಾಸು‌ ವರ್ಷ‌ 2025 ರಲ್ಲಿ (ಬಜೆಟ್ ಅಂದಾಜು-ಬಿಇ) ಶೇ. 26.2 ಕ್ಕೆ ಏರಿದೆ

2011-12ರಲ್ಲಿ ಶೇ.84ರಷ್ಟಿದ್ದ ಬಳಕೆ ವೆಚ್ಚದಲ್ಲಿನ  ನಗರ-ಗ್ರಾಮೀಣ ಅಂತರವು 2023-24ರಲ್ಲಿ ಶೇ.70ಕ್ಕೆ ಇಳಿದಿದೆ

Posted On: 31 JAN 2025 1:38PM by PIB Bengaluru

ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವ ಸರ್ಕಾರದ ಗಮನವು ಹೆಚ್ಚಿನ ಪ್ರಗತಿಯನ್ನು ಕಂಡಿದೆ ಎಂದು ಆರ್ಥಿಕ ಸಮೀಕ್ಷೆ 2024-25 ಹೇಳುತ್ತದೆ. ಈ ದಾಖಲೆಯನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದರು.

ಸಾಮಾಜಿಕ ಸೇವಾ ವೆಚ್ಚದ ಪ್ರವೃತ್ತಿಗಳು

ಹಣಕಾಸು ವರ್ಷ 21ರಲ್ಲಿ ಶೇ. 23.3 ರಿಂದ 2025ರಲ್ಲಿ (ಬಿಇ) ಶೇ. 26.2 ಕ್ಕೆ ಅಥವಾ ಶೇ.15 ಸಿಎಜಿಆರ್ ಗೆ ಹೆಚ್ಚಳವನ್ನು ಬಿಂಬಿಸುವ ಆರ್ಥಿಕ ಸಮೀಕ್ಷೆಯು ಸರ್ಕಾರದ ಸಾಮಾಜಿಕ ಸೇವೆಗಳ ವೆಚ್ಚದಲ್ಲಿ (ಎಸ್ಎಸ್ಇ) ಹೆಚ್ಚುತ್ತಿರುವ ಪ್ರವೃತ್ತಿಯನ್ನು ಒಟ್ಟು ವೆಚ್ಚದ (ಟಿಇ) ಶೇಕಡಾವಾರು ಎಂದು ಉಲ್ಲೇಖಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಸ್ಎಸ್ಇ ವೆಚ್ಚವು ಹಣಕಾಸು ವರ್ಷ 21ರಲ್ಲಿ 14.8 ಲಕ್ಷ ಕೋಟಿ ರೂಪಾಯಿಗಳಾಗಿದ್ದರೆ, ಇದು ಸ್ಥಿರವಾಗಿ ಏರಿಕೆಯಾಗಿ 2025 ರಲ್ಲಿ (ಬಿಇ) 25.7 ಲಕ್ಷ ಕೋಟಿ ರೂ.ಗೆ ತಲುಪಿದೆ.

ಶಿಕ್ಷಣಕ್ಕೆ ಸಂಬಂಧಿಸಿದಂತೆ, ಈ ಕ್ಷೇತ್ರದ ವೆಚ್ಚವು 2021 ರ ಹಣಕಾಸು ವರ್ಷದಲ್ಲಿ 5.8 ಲಕ್ಷ ಕೋಟಿ ರೂಪಾಯಿಗಳಿಂದ 2025 ರಲ್ಲಿ (ಬಿಇ) 9.2 ಲಕ್ಷ ಕೋಟಿ ರೂಪಾಯಿಗೆ ಶೇ.12 ರಷ್ಟು ಸಿಎಜಿಆರ್ ನಲ್ಲಿ ಬೆಳೆದಿದೆ ಎಂದು ಸಮೀಕ್ಷೆ ಹೇಳುತ್ತದೆ. ಮತ್ತೊಂದೆಡೆ, ಸಿಎಜಿಆರ್ ನಲ್ಲಿ ಆರೋಗ್ಯ ವಲಯದ ವೆಚ್ಚವು ಶೇ.18 ರಷ್ಟು ಹೆಚ್ಚುತ್ತಿರುವ ಪ್ರವೃತ್ತಿಯನ್ನು ಸಮೀಕ್ಷೆ ಗಮನಿಸಿದೆ. 2021ರಲ್ಲಿ 3.2 ಲಕ್ಷ ಕೋಟಿ ರೂ.ಗಳಿಂದ 2025ರಲ್ಲಿ 6.1 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 2015 ಮತ್ತು 2022ರ ನಡುವೆ ದೇಶದ ಒಟ್ಟು ಆರೋಗ್ಯ ವೆಚ್ಚದಲ್ಲಿ, ಸರ್ಕಾರದ ಆರೋಗ್ಯ ವೆಚ್ಚದ ಪಾಲು ಶೇ. 29.0 ರಿಂದ 48.0 ಕ್ಕೆ ಏರಿದೆ ಎಂದು ಸಮೀಕ್ಷೆ ತಿಳಿಸಿದೆ.

ಬಳಕೆ ವೆಚ್ಚ

ಸರ್ಕಾರದ ಯೋಜನೆಗಳು ಕಡಿಮೆ ಆದಾಯದ ಕುಟುಂಬಗಳಲ್ಲಿ ಬಳಕೆ ಮತ್ತು ಆದಾಯವನ್ನು ಉತ್ಪಾದಿಸುವ ಚಟುವಟಿಕೆಯನ್ನು ಉತ್ತೇಜಿಸಿವೆ ಎಂದು ಪುರಾವೆಗಳು ತೋರಿಸುತ್ತವೆ ಎಂದು ಆರ್ಥಿಕ ಸಮೀಕ್ಷೆ ಗಮನಿಸುತ್ತದೆ. ಉಚಿತ ಅಥವಾ ಸಬ್ಸಿಡಿ ಆಹಾರ ಧಾನ್ಯಗಳು, ಸಬ್ಸಿಡಿ ಅಡುಗೆ ಇಂಧನ, ವಿಮಾ ರಕ್ಷಣೆ, ವಿವಿಧ ಯೋಜನೆಗಳ ಅಡಿಯಲ್ಲಿ ನೇರ ಲಾಭ ವರ್ಗಾವಣೆಯಂತಹ ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳು ಕುಟುಂಬದ ಆದಾಯವನ್ನು ಹೆಚ್ಚಿಸುತ್ತಿವೆ. ಈ ಹಣಕಾಸಿನ ವರ್ಗಾವಣೆಗಳು ಆರ್ಥಿಕವಾಗಿ ವಂಚಿತ ವರ್ಗಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಜನರ ಜೀವನಮಟ್ಟದ ಮೇಲೆ ಅನುಕೂಲಕರ ಪರಿಣಾಮ ಬೀರುತ್ತದೆ.

ಸಾಮಾಜಿಕ ವಲಯದ ಉಪಕ್ರಮಗಳು ಅಸಮಾನತೆಯನ್ನು ಕಡಿಮೆ ಮಾಡಿವೆ ಮತ್ತು ಬಳಕೆಯ ವೆಚ್ಚವನ್ನು ಹೆಚ್ಚಿಸಿವೆ ಎಂದು ಸಮೀಕ್ಷೆಯಲ್ಲಿ ಪ್ರತಿಬಿಂಬಿತವಾಗಿದೆ. ಬಳಕೆಯ ವೆಚ್ಚದಲ್ಲಿನ ಅಸಮಾನತೆಯ ಅಳತೆಯಾದ ಗಿನಿ ಗುಣಾಂಕವು ಇತ್ತೀಚಿನ ವರ್ಷಗಳಲ್ಲಿ ಕುಸಿಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಇದು 2022-23 ರಲ್ಲಿ 0.266 ರಿಂದ 2023-24 ರಲ್ಲಿ 0.237ಕ್ಕೆ ಇಳಿದಿದೆ ಮತ್ತು ನಗರ ಪ್ರದೇಶಗಳಲ್ಲಿ ಇದು 2022-23 ರಲ್ಲಿ 0.314 ರಿಂದ 2023-24 ರಲ್ಲಿ 0.284 ಕ್ಕೆ ಇಳಿದಿದೆ.

ಸಮೀಕ್ಷೆಯ ದಾಖಲೆಯು ಗೃಹ ಬಳಕೆ ವೆಚ್ಚ ಸಮೀಕ್ಷೆ (ಎಚ್ ಸಿಇಎಸ್) 2023-24 ರ ಫಲಿತಾಂಶಗಳನ್ನು ಬಿಂಬಿಸುತ್ತದೆ, ಇದು ಬಳಕೆಯ ವೆಚ್ಚದಲ್ಲಿ ನಗರ-ಗ್ರಾಮೀಣ ಅಂತರವು ಕಿರಿದಾಗುತ್ತಿದೆ ಎಂದು ಗಮನಿಸುತ್ತದೆ. 2022-23 ಮತ್ತು 2023-24ರ ಹಣಕಾಸು ವರ್ಷದ ನಡುವೆ ಸರಾಸರಿ ಮಾಸಿಕ ತಲಾ ವೆಚ್ಚದ (ಎಂಪಿಸಿಇ) ಅತಿದೊಡ್ಡ ಬೆಳವಣಿಗೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನಸಂಖ್ಯೆಯ ಕೆಳಮಟ್ಟದ ಶೇ. 5-10 ಜನರಲ್ಲಿ ಸಂಭವಿಸಿದೆ. ಸರಾಸರಿ ಎಂಪಿಸಿಇಯಲ್ಲಿ ನಗರ-ಗ್ರಾಮೀಣ ಅಂತರವು 2011-12 ರಲ್ಲಿ ಶೇ.84 ರಿಂದ 2022-23 ರಲ್ಲಿ ಶೇ. 71ಕ್ಕೆ ಇಳಿದಿದೆ. 2023-24ರಲ್ಲಿ ಇದು ಇನ್ನೂ ಶೇ. 70ಕ್ಕೆ ಇಳಿದಿದೆ, ಇದು ಗ್ರಾಮೀಣ ಪ್ರದೇಶಗಳಲ್ಲಿ ಬಳಕೆಯ ಬೆಳವಣಿಗೆಯ ನಿರಂತರ ಆವೇಗವನ್ನು ದೃಢಪಡಿಸುತ್ತದೆ.

ಸರ್ಕಾರದ ವಿವಿಧ ಹಣಕಾಸಿನ ನೀತಿಗಳು ಆದಾಯ ವಿತರಣೆಯನ್ನು ಮರುರೂಪಿಸುತ್ತಿವೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ಸರ್ಕಾರದ ವೈವಿಧ್ಯಮಯ ಸಾಮಾಜಿಕ ಯೋಜನೆಗಳಲ್ಲಿ ಆಹಾರ ಸಬ್ಸಿಡಿಗಳು ಅತಿದೊಡ್ಡ ಹಣಕಾಸಿನ ವೆಚ್ಚವನ್ನು ರೂಪಿಸುತ್ತವೆ. 2022-23ರಲ್ಲಿ, ಕೇಂದ್ರ ಸರ್ಕಾರವು ಉಚಿತ ಮತ್ತು ಸಬ್ಸಿಡಿ ಆಹಾರ ಪಡಿತರವನ್ನು ಒದಗಿಸಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಗಾಗಿ ತನ್ನ ಬಜೆಟ್ ನ ಶೇ. 6.5 ರಷ್ಟನ್ನು ವೆಚ್ಚ ಮಾಡಿದೆ.

ಕಡಿಮೆ ಬಳಕೆಯ ಗುಂಪುಗಳಲ್ಲಿ ಹೆಚ್ಚಿನ ಪ್ರಯೋಜನಗಳ ಕೇಂದ್ರೀಕರಣವು ಪಿಡಿಎಸ್ / ಪಿಎಂಜಿಕೆಎವೈ ನೀತಿಗಳು ಕಡಿಮೆ ಆದಾಯವನ್ನು ಬೆಂಬಲಿಸುತ್ತವೆ ಮತ್ತು ಆದಾಯದ ಏರಿಳಿತಗಳು ಮತ್ತು ಬಡತನದಿಂದ ಇತರ ದುರ್ಬಲ ಕುಟುಂಬಗಳನ್ನು ರಕ್ಷಿಸುತ್ತವೆ ಎಂದು ಸೂಚಿಸುತ್ತದೆ. 2022-23ರಲ್ಲಿ ಸರಾಸರಿಯಾಗಿ, ಸಬ್ಸಿಡಿಯ ಮೌಲ್ಯವು ಗ್ರಾಮೀಣ ಕೆಳಮಟ್ಟದ ಶೇ.20ರಲ್ಲಿ ಗೃಹ ಬಳಕೆಯ ಶೇ.7 ರಷ್ಟಿದೆ, ಆದರೆ ಉನ್ನತ ಮಟ್ಟದ ಶೇ.20ರಲ್ಲಿ ಕೇವಲ ಶೇ. 2 ರಷ್ಟು ಮಾತ್ರ. ನಗರ ಪ್ರದೇಶಗಳಲ್ಲಿ ಇದೇ ರೀತಿಯ ಪ್ರಗತಿಪರ ಮಾದರಿಯನ್ನು ಗಮನಿಸಲಾಗಿದೆ.

ಜನಸಂಖ್ಯೆಯ ವಿವಿಧ ವಿಭಾಗಗಳಲ್ಲಿ ಈ ಪ್ರಯೋಜನಗಳ ಹಂಚಿಕೆಯ ಬಗ್ಗೆ ಸಮೀಕ್ಷೆಯು ಒಳನೋಟಗಳನ್ನು ಒದಗಿಸುತ್ತದೆ. 2022-23ರಲ್ಲಿ, ಜನಸಂಖ್ಯೆಯ ಶೇ. 84ರಷ್ಟು ಜನರು ಪಡಿತರ ಚೀಟಿ ಹೊಂದಿದ್ದರು. ಇದರಲ್ಲಿ ಶೇ.59 ರಷ್ಟು ಜನರು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್), ಅಂತ್ಯೋದಯ ಅನ್ನ ಯೋಜನೆ (ಎಎವೈ) ಅಥವಾ ಆದ್ಯತಾ ಕುಟುಂಬ (ಪಿಎಚ್ಎಚ್) ಕಾರ್ಡ್ ಸೇರಿದೆ.

 

*****


(Release ID: 2098025) Visitor Counter : 10