ಗೃಹ ವ್ಯವಹಾರಗಳ ಸಚಿವಾಲಯ
ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್.) ನ 20ನೇ ಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಎನ್.ಐ.ಡಿ.ಎಂ.ನ ದಕ್ಷಿಣ ಕ್ಯಾಂಪಸ್, ಎನ್.ಡಿ.ಆರ್.ಎಫ್.ನ 10ನೇ ಬೆಟಾಲಿಯನ್ ಮತ್ತು ಪ್ರಾದೇಶಿಕ ಪ್ರತಿಕ್ರಿಯೆ ಕೇಂದ್ರದ ಸುಪೌಲ್ ಕ್ಯಾಂಪಸ್ ಸೇರಿದಂತೆ ಸುಮಾರು 220 ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳನ್ನು ಕೇಂದ್ರ ಸಚಿವ ಶ್ರೀ ಅಮಿತ್ ಶಾ ಅವರು ಉದ್ಘಾಟನೆ ಮಾಡಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು
ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಪ್ರಧಾನಮಂತಿ ಶ್ರೀ ನರೇಂದ್ರ ಮೋದಿ ಅವರು ಸಮೀಪನ, ವಿಧಾನ ಮತ್ತು ಉದ್ದೇಶ ಎಂಬ ಮೂರು ಅಂಶಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು
ಇಂದು ಭಾರತ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಜಾಗತಿಕ ನಾಯಕ ದೇಶವಾಗಿ ಹೊರಹೊಮ್ಮಿದೆ
ಬಹಳ ಕಡಿಮೆ ಸಮಯದಲ್ಲಿ, ಎನ್.ಡಿ.ಆರ್.ಎಫ್. ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ತನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ
ಮೋದಿ ಸರ್ಕಾರದ ಶೂನ್ಯ ಸಾವುನೋವಿನ ಗುರಿಯನ್ನು ಸಾಧಿಸಲು ಎನ್.ಡಿ.ಆರ್.ಎಫ್., ಎನ್.ಡಿ.ಎಂ.ಎ. ಮತ್ತು ಎನ್.ಐ.ಡಿ.ಎಂ. ಸಂಪೂರ್ಣ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ
ವಿಪತ್ತಿನ ಸಮಯದಲ್ಲಿ ಎನ್.ಡಿ.ಆರ್.ಎಫ್. ಸಿಬ್ಬಂದಿ ಬಂದಾಗ, ಜನರು ಈಗ ಸುರಕ್ಷಿತವಾಗಿದ್ದಾರೆ ಎಂದು ಸಾಮಾನ್ಯ ಜನರಲ್ಲಿ ಭರವಸೆ ಹುಟ್ಟುತ್ತದೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಸಿ.ಡಿ.ಆರ್.ಐ. ಸ್ಥಾಪಿಸುವ ಮೂಲಕ ಭಾರತವು ವಿಪತ್ತು ನಿರೋಧಕ ಮೂಲಸೌಕರ್ಯದಲ್ಲಿ ಇಡೀ ಜಗತ್ತನ್ನೇ ಮುನ್ನಡೆಸುತ್ತಿದೆ
ಮೋದಿ ಸರ್ಕಾರ ಆಂಧ್ರಪ್ರದೇಶದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಅವರೊಂದಿಗೆ ಜೊತೆಜೊತೆಯಲ್ಲಿ ಬಂಡೆಯಂತೆ ನಿಂತಿದೆ
Posted On:
19 JAN 2025 6:01PM by PIB Bengaluru
ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್.ಡಿ.ಆರ್.ಎಫ್.) 20ನೇ ಸ್ಥಾಪನಾ ದಿನಾಚರಣೆಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ, ಶ್ರೀ ಅಮಿತ್ ಶಾ ಅವರು ಸುಮಾರು 220 ಕೋಟಿ ರೂ. ಮೌಲ್ಯದ ಹಲವು ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಇತರ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಇವುಗಳಲ್ಲಿ ವಿಪತ್ತು ನಿರ್ವಹಣಾ ಸಂಸ್ಥೆಯ (ಎನ್.ಐ.ಡಿ.ಎಂ.) ರಾಷ್ಟ್ರೀಯ ದಕ್ಷಿಣ ಕ್ಯಾಂಪಸ್, ಎನ್.ಡಿ.ಆರ್.ಎಫ್.ನ 10 ನೇ ಬೆಟಾಲಿಯನ್ ಮತ್ತು ಸುಪೌಲ್ ಕ್ಯಾಂಪಸ್ ನಲ್ಲಿರುವ ಪ್ರಾದೇಶಿಕ ಪ್ರತಿಕ್ರಿಯೆ ಕೇಂದ್ರ ಸೇರಿವೆ. ಕೇಂದ್ರ ಗೃಹ ಸಚಿವರು ಹೈದರಾಬಾದ್ ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಹೊಸ 'ಇಂಟಿಗ್ರೇಟೆಡ್ ಶೂಟಿಂಗ್ ರೇಂಜ್'ಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ತಿರುಪತಿಯಲ್ಲಿ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯ ಕಟ್ಟಡವನ್ನು ಉದ್ಘಾಟಿಸಿದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಕೆ. ರಾಮಮೋಹನ್ ನಾಯ್ಡು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀ ಬಂಡಿ ಸಂಜಯ್ ಕುಮಾರ್, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್ ಮತ್ತು ಎನ್.ಡಿ.ಆರ್.ಎಫ್. ಮಹಾನಿರ್ದೇಶಕ ಶ್ರೀ ಪಿಯೂಷ್ ಆನಂದ್ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, “ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಎನ್.ಡಿ.ಆರ್.ಎಫ್. ರಕ್ಷಣೆಗೆ ಬರುತ್ತದೆ ಮತ್ತು ಮಾನವ ನಿರ್ಮಿತ ವಿಪತ್ತುಗಳು ಸಂಭವಿಸಿದಾಗ, ಶ್ರೀ ನರೇಂದ್ರ ಮೋದಿ ಸರ್ಕಾರ ಸಹಾಯಕ್ಕೆ ಬರುತ್ತದೆ” ಎಂದು ಹೇಳಿದರು. “2014 ರಿಂದ 2019 ರವರೆಗಿನ ಐದು ವರ್ಷಗಳಲ್ಲಿ ಆಂಧ್ರಪ್ರದೇಶವು ಮಾನವ ನಿರ್ಮಿತ ವಿಪತ್ತಿನಿಂದಾಗಿ ಗಮನಾರ್ಹ ಹಿನ್ನಡೆಯನ್ನು ಎದುರಿಸಿದೆ, ಇಂತಹ ಘಟನೆಗಳು ರಾಜ್ಯದ ಅಗಾಧ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ” ಎಂದು ಕೇಂದ್ರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು. ಈ ಅವಧಿಯಲ್ಲಿನ ಅಭಿವೃದ್ಧಿ ನಷ್ಟಗಳನ್ನು ಸರಿದೂಗಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಒಟ್ಟಾರೆ ಬೆಳವಣಿಗೆಯನ್ನು ಮೂರು ಪಟ್ಟು ವೇಗದಲ್ಲಿ ಮುನ್ನಡೆಸುತ್ತಿದ್ದಾರೆ” ಎಂದು ಅವರು ಹೇಳಿದರು. ಉತ್ತಮ ಆಡಳಿತ, ಹಣಕಾಸು ಮತ್ತು ಅಭಿವೃದ್ಧಿ ಕಾರ್ಯತಂತ್ರಗಳ ಮೂಲಕ ರಾಜ್ಯವನ್ನು ಮುನ್ನಡೆಸಿದ್ದಕ್ಕಾಗಿ ಶ್ರೀ ಚಂದ್ರಬಾಬು ನಾಯ್ಡು ಅವರನ್ನು ಕೇಂದ್ರ ಸಚಿವ ಶ್ರೀ ಅಮಿತ್ ಶಾ ಅವರು ಶ್ಲಾಘಿಸಿದರು. ಪ್ರಧಾನಮಂತ್ರಿ ಶ್ರೀ ಮೋದಿ ಕಳೆದ ಆರು ತಿಂಗಳಲ್ಲಿ ಆಂಧ್ರಪ್ರದೇಶಕ್ಕೆ 3 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹೂಡಿಕೆ ಮತ್ತು ಸಹಾಯವನ್ನು ಒದಗಿಸಿದ್ದಾರೆ. ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ವಿಶಾಖಪಟ್ಟಣಂ ಉಕ್ಕು ಸ್ಥಾವರಕ್ಕೆ 11,000 ಕೋಟಿ ರೂಪಾಯಿ ಅನುಮೋದಿಸಿದೆ. ಇದು, ಸ್ಥಾವರದ ದೀರ್ಘಕಾಲೀನ ಕಾರ್ಯಸಾಧ್ಯತೆಯನ್ನು ಭದ್ರಪಡಿಸುವ ಮತ್ತು ಆಂಧ್ರಪ್ರದೇಶದ ಹೆಮ್ಮೆಯ ಸಂಕೇತವಾಗಿ ಸ್ಥಾವರದ ಸ್ಥಾನಮಾನವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಅವರು ಪರಿಕಲ್ಪಿಸಿದ ಅಮರಾವತಿಯನ್ನು ರಾಜ್ಯ ರಾಜಧಾನಿಯಾಗಿ ಕಲ್ಪಿಸಿ ರೂಪಿಸುವ ದೃಷ್ಟಿಕೋನವನ್ನು ಸಚಿವರು ನೆನಪಿಸಿಕೊಂಡರು ಮತ್ತು ಪ್ರಧಾನಮಂತ್ರಿ ಶ್ರೀ ಮೋದಿಯವರು ಶಿಲಾನ್ಯಾಸ (ಭೂಮಿ ಪೂಜೆ) ಸಮಾರಂಭದೊಂದಿಗೆ ಉದ್ಘಾಟಿಸಿದರು. ಹಾಗೂ, ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಹಿಂದಿನ ಸರ್ಕಾರವನ್ನು ಸಚಿವರು ವಿಮರ್ಶಿಸಿದರು.
ಅಮರಾವತಿಯನ್ನು ಆಂಧ್ರಪ್ರದೇಶ ರಾಜ್ಯದ ರಾಜಧಾನಿಯಾಗಿ ಮಾಡುವ ದೃಷ್ಟಿಕೋನವನ್ನು ಸಾಕಾರಗೊಳಿಸುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ ಆರು ತಿಂಗಳಲ್ಲಿ ಚುರುಕುಗೊಳಿಸಿದ್ದಾರೆ ಎಂದು ಕೇಂದ್ರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು. ಹೊಸ ರೈಲ್ವೆ ವಲಯಕ್ಕೆ ಅಡಿಪಾಯ ಹಾಕಲಾಗಿದೆ ಮತ್ತು ಆಂಧ್ರಪ್ರದೇಶದ ಜೀವನಾಡಿ ಎಂದು ಪರಿಗಣಿಸಲಾದ ಪೋಲವರಂನಿಂದ 2028 ರ ವೇಳೆಗೆ ರಾಜ್ಯದ ಮೂಲೆ ಮೂಲೆಗೆ ನೀರು ತಲುಪಲಿದೆ ಎಂದು ಸಚಿವರು ಹೇಳಿದರು. ರೂ. 1,600 ಕೋಟಿ ವೆಚ್ಚದಲ್ಲಿ ಏಮ್ಸ್ ಆಸ್ಪತ್ರೆ ಯೋಜನೆಯ ಆರಂಭವನ್ನು ಕೇಂದ್ರ ಶ್ರೀ ಶಾ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ವಿಶಾಖಪಟ್ಟಣವನ್ನು ಹಸಿರು ಹೈಡ್ರೋಜನ್ ಕೇಂದ್ರವನ್ನಾಗಿ ಮಾಡಲು. ಮತ್ತು 2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ಹಂಚಿಕೆಯ ಯೋಜನೆಗಳು ಪ್ರಾರಂಭವಾಗಿದೆ. ಕಳೆದ ಆರು ತಿಂಗಳಲ್ಲಿ ಆಂಧ್ರಪ್ರದೇಶಕ್ಕೆ ಸುಮಾರು 1.2 ಲಕ್ಷ ಕೋಟಿ ರೂ. ಮೌಲ್ಯದ ಹೆದ್ದಾರಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು. ಆಂಧ್ರಪ್ರದೇಶದ ತ್ವರಿತ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿ ಶ್ರೀ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಅವರೊಂದಿಗೆ ಜೊತೆಜೊತೆಯಾಗಿ ದೃಢವಾಗಿ ನಿಂತಿದ್ದಾರೆ ಎಂದು ಕೇಂದ್ರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಕಳೆದ ದಶಕದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್.ಎನ್.ಡಿ.ಎಂ.) ಮೂಲಕ ವಿಪತ್ತು ನಿರ್ವಹಣೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪರಿಣಾಮಕಾರಿಯಾಗಿ ವಿಪತ್ತು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಮ ಪಂಚಾಯಿತಿಗಳು, ಪೊಲೀಸ್ ಠಾಣೆಗಳು, ಎನ್.ಸಿ.ಸಿ. ಮತ್ತು ಸ್ಕೌಟ್ಸ್ ಕೆಡೆಟ್ ಗಳಿಂದ ಹಿಡಿದು ಭಾರತ ಸರ್ಕಾರದವರೆಗೆ, ಸುಗಮ ಸಮನ್ವಯ, ಸಹಕಾರದ ಮಹತ್ವವನ್ನು ಕೇಂದ್ರ ಗೃಹ ಸಚಿವರು ವಿವರಿಸಿ ಹೇಳಿದರು. ವಿಪತ್ತು ನಿರ್ವಹಣೆಯ ಸಮೀಪನ, ವಿಧಾನ ಮತ್ತು ಉದ್ದೇಶಗಳಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಪರಿಚಯಿಸಿದ್ದಕ್ಕಾಗಿ ಪ್ರಧಾನ ಮೋದಿಯವರಿಗೆ ಕೇಂದ್ರ ಗೃಹ ಸಚಿವ ಶ್ರೀ ಶಾ ಅವರು ಕೃತಜ್ಞತೆ ಸಲ್ಲಿಸಿದರು. ಹಿಂದಿನ ಕಾಲದ ಪರಿಹಾರ-ಕೇಂದ್ರಿತ ವಿಧಾನವನ್ನು ರಕ್ಷಣಾ-ಕೇಂದ್ರಿತ ವಿಧಾನದಿಂದ ಬದಲಾಯಿಸಲಾಗಿದೆ, ಇದು ಶ್ರೀ ಮೋದಿ ಜಿ ಪ್ರಧಾನಮಂತ್ರಿಯಾದ 2014 ರಿಂದ ಆಗುತ್ತಿರುವ ಸಮಗ್ರ ಬದಲಾವಣೆಯ ಒಂದು ಹಂತವಾಗಿ ಗುರುತಿಸಬಹುದಾಗಿದೆ ಎಂದು ಅವರು ತಿಳಿಸಿದರು. ಈ ಬದಲಾವಣೆಯು ನಷ್ಟಗಳನ್ನು ಕಡಿಮೆ ಮಾಡುವುದರ ಜೊತೆಗೆ ವಿಪತ್ತುಗಳ ಸಮಯದಲ್ಲಿ ಶೂನ್ಯ ಸಾವುನೋವುಗಳನ್ನು ಸಾಧಿಸುವ ಸ್ಪಷ್ಟ ಗುರಿಯೊಂದಿಗೆ ಪ್ರತಿಕ್ರಿಯಾತ್ಮಕತೆಯಿಂದ ಪೂರ್ವಭಾವಿ ತಂತ್ರಗಳತ್ತ ಸಾಗುವುದನ್ನು ಕಂಡಿದೆ. ಹೆಚ್ಚು ಪರಿಣಾಮಕಾರಿ ವಿಪತ್ತು ನಿರ್ವಹಣೆ ಮತ್ತು ಜೀವಗಳ ರಕ್ಷಣೆಯನ್ನು ಖಾತ್ರಿಪಡಿಸುವ ಮೂಲಕ ಈ ಗುರಿಯತ್ತ ಕೆಲಸ ಮಾಡುವಲ್ಲಿ ಎನ್.ಡಿ.ಆರ್.ಎಫ್./ ಎನ್.ಡಿ.ಎಂ.ಎ. ಮತ್ತು ಎನ್.ಐ.ಡಿ.ಎಂ. ನಡುವಿನ ಸಾಮರಸ್ಯದ ಸಹಯೋಗ, ಸಹಕಾರದ ಅಗತ್ಯತೆಯನ್ನು ಶ್ರೀ ಶಾ ಅವರು ಒಪ್ಪಿಕೊಂಡರು.
ಎನ್.ಡಿ.ಆರ್.ಎಫ್. ಕಡಿಮೆ ಅವಧಿಯಲ್ಲಿ ಭಾರತದೊಳಗೆ ಮಾತ್ರವಲ್ಲದೆ ಜಾಗತಿಕವಾಗಿಯೂ ಗಮನಾರ್ಹವಾಗಿ ವಿಶ್ವಾಸಾರ್ಹ ಸಂಸ್ಥೆಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ವಿಪತ್ತಿನ ಸಮಯದಲ್ಲಿ ಎನ್.ಡಿ.ಆರ್.ಎಫ್. ಸಿಬ್ಬಂದಿ ಬಂದಾಗ, ಜನರು ಈಗ ಸುರಕ್ಷಿತರಾಗಿದ್ದೇವೆ ಎಂದು ಭರವಸೆ ಹೊಂದುತ್ತಾರೆ ಎಂದು ಅವರು ಹೇಳಿದರು. ಕಳೆದ ಎರಡು ವರ್ಷಗಳಲ್ಲಿ, ಎರಡು ಪ್ರಮುಖ ಬಿರುಗಾಳಿಗಳ ಸಮಯದಲ್ಲಿ ಎನ್.ಡಿ.ಆರ್.ಎಫ್. ಶೂನ್ಯ ಸಾವುನೋವುಗಳ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ ಎಂದು ಅವರು ಹೇಳಿದರು. ನೇಪಾಳ, ಇಂಡೋನೇಷ್ಯಾ, ಟರ್ಕಿ, ಮ್ಯಾನ್ಮಾರ್, ವಿಯೆಟ್ನಾಂ ಮತ್ತು ಇತರ ದೇಶಗಳಲ್ಲಿ ಎನ್.ಡಿ.ಆರ್.ಎಫ್. ನ ಪ್ರಯತ್ನಗಳನ್ನು ಆಯಾ ರಾಷ್ಟ್ರಗಳ ಮುಖ್ಯಸ್ಥರು ವ್ಯಾಪಕವಾಗಿ ಗುರುತಿಸಿದ್ದಾರೆ ಮತ್ತು ಪ್ರಶಂಸಿಸಿದ್ದಾರೆ ಎಂದು ಶ್ರೀ ಶಾ ತಿಳಿಸಿದರು. ಎನ್.ಡಿ.ಆರ್.ಎಫ್.ನ ಎನ್.ಡಿ.ಎಂ.ಎ. ನೀತಿಗಳ ಅನುಷ್ಠಾನವು ಭಾರತವನ್ನು ಇಂದು ವಿಪತ್ತು ನಿರ್ವಹಣೆಯಲ್ಲಿ ಜಾಗತಿಕ ನಾಯಕನನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಕೇಂದ್ರ ಸರ್ಕಾರವು ವಿಪತ್ತು ನಿರ್ವಹಣೆಗೆ 12 ನೇ ಹಣಕಾಸು ಆಯೋಗವು ವಿಪತ್ತು ನಿರ್ವಹಣೆಗೆ 12,500 ಕೋಟಿ ರೂ.ಗಳನ್ನು ನಿಗದಿಪಡಿಸಿದೆ, ಇದನ್ನು 14 ನೇ ಹಣಕಾಸು ಆಯೋಗದಲ್ಲಿ 61,000 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂಬ ಅಂಶದಿಂದ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಭಾರತವು ಸಿಡಿಆರ್‌ಐ (ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ)ವನ್ನು ಸ್ಥಾಪಿಸಿತು ಮತ್ತು ಇಂದು 48 ದೇಶಗಳು ಸಿಡಿಆರ್‌ಐ ನೇತೃತ್ವದಲ್ಲಿ ಅದರ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.
ಮೋದಿ ಸರ್ಕಾರವು ಅನೇಕ ಅಪ್(ಅಪ್ಲಿಕೇಶನ್)ಗಳು, ವೆಬ್‌ಸೈಟ್‌ಗಳು ಮತ್ತು ಪೋರ್ಟಲ್ ಗಳನ್ನು ರಚಿಸುವ ಮೂಲಕ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯವನ್ನು ಮಾಡಿದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ದೇಶಾದ್ಯಂತ ಲಕ್ಷಾಂತರ ಜನರು ಈ ಅಪ್ಲಿಕೇಶನ್ ಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಈ ಅಪ್ಲಿಕೇಶನ್ ಗಳನ್ನು ಎಲ್ಲಾ ಭಾಷೆಗಳಲ್ಲಿ ಸಂವಹನ ನಡೆಸಲು ಸಾಧ್ಯವಾಗುವಂತೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸಚಿವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಡಯಲ್ 112 ಮತ್ತು ಕಾಮನ್ ಅಲರ್ಟ್ ಪ್ರೋಟೋಕಾಲ್ ನಂತಹ ಸೇವೆಗಳು ಜನರಿಗೆ ಹೆಚ್ಚಿನ ಸಹಾಯ ಮಾಡಿವೆ ಎಂದು ಅವರು ವಿವರಿಸಿದರು. ಈ ನಿಟ್ಟಿನಲ್ಲಿ, ಇಂದು, ಇನ್ನೂ ಎರಡು ಸಂಸ್ಥೆಗಳು ಪಟ್ಟಿಯಲ್ಲಿ ಸೇರಲಿವೆ ಎಂದು ಶ್ರೀ ಶಾ ಅವರು ಹೇಳಿದರು. ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು ಅವರು ಯಾವುದೇ ವೆಚ್ಚವಿಲ್ಲದೆ ಭೂಮಿಯನ್ನು ಕೇಂದ್ರಕ್ಕೆ ಒದಗಿಸಿದ್ದಾರೆ ಮತ್ತು ಎನ್.ಡಿ.ಆರ್.ಎಫ್.ನ 10 ನೇ ಬೆಟಾಲಿಯನ್ ಮತ್ತು ಎನ್.ಐ.ಡಿ.ಎಂ.ನ ದಕ್ಷಿಣ ಭಾರತ ಶಾಖೆಯನ್ನು ಸ್ಥಾಪಿಸುವಲ್ಲಿ ಸಹಾಯ ಮಾಡಿದ್ದಾರೆ ಎಂದು ಅವರು ಉಲ್ಲೇಖಿಸಿದರು.
*****
(Release ID: 2094475)
Visitor Counter : 7