ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತ: ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ


ವಿಶ್ವ ಬ್ಯಾಂಕ್ ಭಾರತಕ್ಕೆ ಶೇ.6.7 ರಷ್ಟು ಬೆಳವಣಿಗೆಯನ್ನು ಅಂದಾಜಿಸಿದೆ, ಇದು ಜಾಗತಿಕ ಬೆಳವಣಿಗೆಯಾದ ಶೇ.2.7 ಅನ್ನು ಮೀರಿದೆ

Posted On: 18 JAN 2025 4:11PM by PIB Bengaluru

ಪರಿಚಯ

ಭಾರತವು ಮುಂದಿನ ಎರಡು ಹಣಕಾಸು ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಸ್ಥಾನವನ್ನು ಉಳಿಸಿಕೊಳ್ಳುವ ಮೂಲಕ ಜಾಗತಿಕ ಆರ್ಥಿಕ ಸನ್ನಿವೇಶದಲ್ಲಿ ಪ್ರಾಬಲ್ಯ ಸಾಧಿಸಲು ಸಜ್ಜಾಗಿದೆ. ವಿಶ್ವಬ್ಯಾಂಕಿನ ಗ್ಲೋಬಲ್ ಎಕನಾಮಿಕ್ ಪ್ರಾಸ್ಪೆಕ್ಟ್ಸ್ (ಜಿಇಪಿ) ವರದಿಯ ಜನವರಿ 2025 ರ ಆವೃತ್ತಿಯು ಭಾರತದ ಆರ್ಥಿಕತೆಯು 2026 ಮತ್ತು 2027 ನೇ ಆರ್ಥಿಕ ವರ್ಷಗಳಲ್ಲಿ ಶೇ.6.7 ರಷ್ಟು ಸ್ಥಿರ ದರದಲ್ಲಿ ಬೆಳೆಯುತ್ತದೆ ಎಂದು ಅಂದಾಜಿಸಿದೆ, ಇದು ಜಾಗತಿಕ ಮತ್ತು ಪ್ರಾದೇಶಿಕ ಸಹವರ್ತಿ ದೇಶಗಳಿಗಿಂತ ಹೆಚ್ಚು ಮುಂದಿದೆ. 2025-26ರಲ್ಲಿ ಜಾಗತಿಕ ಬೆಳವಣಿಗೆಯು 2.7 ಪ್ರತಿಶತದಲ್ಲಿ ಉಳಿಯುವ ನಿರೀಕ್ಷೆಯಿರುವ ಸಮಯದಲ್ಲಿ, ಈ ಗಮನಾರ್ಹ ಸಾಧನೆಯು ಭಾರತದ ದೃಢತೆ ಮತ್ತು ವಿಶ್ವದ ಆರ್ಥಿಕ ಪ್ರಗತಿಯನ್ನು ರೂಪಿಸುವಲ್ಲಿ ಅದರ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.

ಜಿಇಪಿ ವರದಿಯು ಈ ಅಸಾಧಾರಣ ಆವೇಗದ ಶ್ರೇಯವನ್ನು ಅಭಿವೃದ್ಧಿ ಹೊಂದುತ್ತಿರುವ ಸೇವಾ ವಲಯಕ್ಕೆ ಮತ್ತು ಸರ್ಕಾರದ ಪರಿವರ್ತಕ ಉಪಕ್ರಮಗಳಿಂದ ನಡೆಸಲ್ಪಡುವ ಪುನಶ್ಚೇತನಗೊಂಡ ಉತ್ಪಾದನಾ ನೆಲೆಗೆ ನೀಡಿದೆ. ಮೂಲಸೌಕರ್ಯವನ್ನು ಆಧುನೀಕರಿಸುವುದರಿಂದ ಹಿಡಿದು ತೆರಿಗೆಗಳನ್ನು ಸರಳಗೊಳಿಸುವವರೆಗೆ, ಈ ಕ್ರಮಗಳು ದೇಶೀಯ ಬೆಳವಣಿಗೆಗೆ ಉತ್ತೇಜನ ನೀಡುತ್ತಿವೆ ಮತ್ತು ಜಾಗತಿಕ ಆರ್ಥಿಕ ಸ್ಥಿರತೆಯ ಮೂಲಾಧಾರವಾಗಿ ಭಾರತವನ್ನು ಇರಿಸುತ್ತಿವೆ. ಭಾರತದ ಹತ್ತಿರದ ಪ್ರತಿಸ್ಪರ್ಧಿ ಚೀನಾ, ಮುಂದಿನ ವರ್ಷ ಶೇ.4 ಬೆಳವಣಿಗೆಗೆ ಕ್ಷೀಣಿಸುತ್ತಿದ್ದು, ಭಾರತದ ಏರಿಕೆ ಕೇವಲ ಅಂಕಿಅಂಶಕ್ಕಿಂತ ಹೆಚ್ಚಿನದಾಗಿದೆ. ಇದು ಮಹತ್ವಾಕಾಂಕ್ಷೆ, ನಾವೀನ್ಯತೆ ಮತ್ತು ಸಾಟಿಯಿಲ್ಲದ ಸಾಮರ್ಥ್ಯದ ಪ್ರಬಲ ಕಥೆಯಾಗಿದೆ.

ವಿಶ್ವ ಬ್ಯಾಂಕ್ ವರದಿಗೆ ಪೂರಕವಾಗಿ, ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವಿಶ್ವ ಆರ್ಥಿಕ ಅವಲೋಕನದ (ಡಬ್ಲ್ಯುಇಒ) ಇತ್ತೀಚಿನ ನವೀಕರಣವು ಭಾರತದ ಬಲವಾದ ಆರ್ಥಿಕ ಪ್ರಗತಿಯನ್ನು ಬೆಂಬಲಿಸಿದೆ. ಐಎಂಎಫ್ ಭಾರತದ ಬೆಳವಣಿಗೆಯು 2025 ಮತ್ತು 2026 ಎರಡೂ ಸಾಲಿನಲ್ಲಿ ಶೇ.6.5 ರಲ್ಲಿ ದೃಢವಾಗಿ ಉಳಿಯುತ್ತದೆ ಎಂದು ಅಂದಾಜಿಸಿದೆ. ಇದು ಅಕ್ಟೋಬರ್‌ ನಲ್ಲಿ ಮಾಡಿದ ಅಂದಾಜುಗಳಿಗೆ ಅನುಗುಣವಾಗಿದೆ. ಈ ಸ್ಥಿರವಾದ ಬೆಳವಣಿಗೆಯ ಸನ್ನಿವೇಶವು ಭಾರತದ ಸ್ಥಿರ ಆರ್ಥಿಕ ಮೂಲಭೂತ ಅಂಶಗಳನ್ನು ಮತ್ತು ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ಆವೇಗವನ್ನು ಕಾಯ್ದುಕೊಳ್ಳುವ ಅದರ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ಎರಡರಿಂದಲೂ ಅಂದಾಜಿಸಲ್ಪಟ್ಟಿರುವ ಭಾರತದ ಆರ್ಥಿಕ ಕಾರ್ಯಕ್ಷಮತೆಯ ನಿರಂತರ ಸಾಮರ್ಥ್ಯವು ದೇಶದ ದೃಢತೆಯನ್ನು ಒತ್ತಿಹೇಳುತ್ತದೆ ಮತ್ತು ಅದರ ಆರ್ಥಿಕ ಮೂಲಭೂತ ಅಂಶಗಳ ನಿರಂತರ ಶಕ್ತಿಯನ್ನು ಎತ್ತಿ ತೋರಿಸುತ್ತದೆ, ಜಾಗತಿಕ ಆರ್ಥಿಕ ಸನ್ನಿವೇಶದಲ್ಲಿ ಭಾರತವನ್ನು ನಿರ್ಣಾಯಕ ಆಟಗಾರನನ್ನಾಗಿ ಮಾಡಿದೆ.

ವಿಶ್ವ ಬ್ಯಾಂಕ್ GEP ವರದಿಯ ಅವಲೋಕನ

ಗ್ಲೋಬಲ್ ಎಕನಾಮಿಕ್ ಪ್ರಾಸ್ಪೆಕ್ಟ್ಸ್ (ಜಿಇಪಿ) ವರದಿಯು ಜಾಗತಿಕ ಆರ್ಥಿಕತೆಯ ಪ್ರವೃತ್ತಿಗಳು ಮತ್ತು ಅಂದಾಜುಗಳನ್ನು ಪರಿಶೀಲಿಸುವ ವಿಶ್ವ ಬ್ಯಾಂಕ್ ಗುಂಪಿನ ಪ್ರಮುಖ ಪ್ರಕಟಣೆಯಾಗಿದೆ. ಇದು ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳ ಮೇಲೆ ವಿಶೇಷ ಒತ್ತು ನೀಡುತ್ತದೆ, ಅವರ ಬೆಳವಣಿಗೆಯ ಪಥಗಳು ಮತ್ತು ಸವಾಲುಗಳ ಒಳನೋಟಗಳನ್ನು ನೀಡುತ್ತದೆ. ಜನವರಿ ಮತ್ತು ಜೂನ್‌ ನಲ್ಲಿ ವರ್ಷಕ್ಕೆ ಎರಡು ಬಾರಿ ಪ್ರಕಟವಾಗುವ ವರದಿಯು ನೀತಿ ನಿರೂಪಕರು, ಅರ್ಥಶಾಸ್ತ್ರಜ್ಞರು ಮತ್ತು ಸಂಶೋಧಕರಿಗೆ ಪ್ರಮುಖ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಜನವರಿ ಆವೃತ್ತಿಯು ಪ್ರಮುಖ ನೀತಿ ಸಮಸ್ಯೆಗಳ ವಿವರವಾದ ವಿಶ್ಲೇಷಣೆಗಳನ್ನು ಒದಗಿಸುತ್ತದೆ, ಜೂನ್ ಆವೃತ್ತಿಯು ಸಂಕ್ಷಿಪ್ತ, ಕೇಂದ್ರೀಕೃತ ವಿಶ್ಲೇಷಣಾತ್ಮಕ ತುಣುಕುಗಳನ್ನು ಒದಗಿಸುತ್ತದೆ.

ಇತ್ತೀಚಿನ ಜಿಇಪಿ ವರದಿಯು 21ನೇ ಶತಮಾನದ ಆರಂಭದಿಂದಲೂ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಕಾರ್ಯಕ್ಷಮತೆಯ ಮೊದಲ ಸಮಗ್ರ ವಿಮರ್ಶೆಯನ್ನು ಪ್ರಸ್ತುತಪಡಿಸುವ ಮೂಲಕ ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತದೆ. 2025 ರಲ್ಲಿ ಅದರ ಮೊದಲ ತ್ರೈಮಾಸಿಕದ ಅಂತ್ಯವನ್ನು ಗುರುತಿಸುವ ವರದಿಯು 2000 ರಿಂದ ಈ ಆರ್ಥಿಕತೆಗಳು ಮಾಡಿದ ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಮುಂದಿನ 25 ವರ್ಷಗಳಲ್ಲಿ ಅವುಗಳ ಭವಿಷ್ಯವನ್ನು ಮೌಲ್ಯಮಾಪನ ಮಾಡುತ್ತದೆ. ಈ ಸಂಪುಟವು ಎರಡು ವಿಶ್ಲೇಷಣಾತ್ಮಕ ಅಧ್ಯಾಯಗಳನ್ನು ಒಳಗೊಂಡಿದೆ. ಒಂದು ಅಧ್ಯಾಯವು ಮಧ್ಯಮ-ಆದಾಯದ ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ಎದುರಿಸುತ್ತಿರುವ ಅವಕಾಶಗಳು ಮತ್ತು ಸವಾಲುಗಳನ್ನು ಪರಿಶೀಲಿಸುತ್ತದೆ, ಇನ್ನೊಂದು ಅಧ್ಯಾಯವು ಪ್ರಪಂಚದ ಬಡ ದೇಶಗಳ ಪ್ರಗತಿ ಮತ್ತು ಅಡೆತಡೆಗಳ ಮೇಲೆ ಕೇಂದ್ರೀಕರಿಸುತ್ತದೆ.

ಜನವರಿ 2025 ರ ವರದಿಯಲ್ಲಿನ ಪ್ರಮುಖ ಸಂಶೋಧನೆಗಳು

  • ಭಾರತವು 2026 ಮತ್ತು 2027 ನೇ ಆರ್ಥಿಕ ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿ ಉಳಿಯುತ್ತದೆ ಎಂದು ಅಂದಾಜಿಸಲಾಗಿದೆ, ಇದು ಜಾಗತಿಕ ಆರ್ಥಿಕ ಭೂದೃಶ್ಯದಲ್ಲಿ ಅದರ ಪ್ರಾಬಲ್ಯವನ್ನು ದೃಢೀಕರಿಸುತ್ತದೆ.
  • 2026 ಮತ್ತು 2027 ನೇ ಆರ್ಥಿಕ ವರ್ಷಗಳ ಅವಧಿಯಲ್ಲಿ ಭಾರತದ ಆರ್ಥಿಕತೆಯು ವಾರ್ಷಿಕವಾಗಿ ಶೇ.6.7 ರಷ್ಟು ಸ್ಥಿರ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ.

  • ಭಾರತದ ಸೇವಾ ವಲಯದ ಬೆಳವಣಿಗೆಯು ದೃಢವಾಗಿ ಉಳಿಯುವ ನಿರೀಕ್ಷೆಯಿದೆ, ಅಲ್ಲದೇ ಉತ್ಪಾದನಾ ಚಟುವಟಿಕೆಯೂ ಬಲಗೊಳ್ಳುತ್ತದೆ, ಇದು ಲಾಜಿಸ್ಟಿಕ್ಸ್ ಮೂಲಸೌಕರ್ಯವನ್ನು ಸುಧಾರಿಸುವ ಮತ್ತು ತೆರಿಗೆ ವ್ಯವಸ್ಥೆಗಳನ್ನು ಸುಗಮಗೊಳಿಸುವ ಸರ್ಕಾರದ ಕ್ರಮಗಳಿಂದ ಬೆಂಬಲಿತವಾಗಿದೆ.
  • ಬಲವಾದ ಕಾರ್ಮಿಕ ಮಾರುಕಟ್ಟೆ, ಹೆಚ್ಚಿದ ಸಾಲದ ಪ್ರವೇಶ ಮತ್ತು ಕಡಿಮೆ ಹಣದುಬ್ಬರದಿಂದ ಭಾರತದಲ್ಲಿ ಖಾಸಗಿ ಬಳಕೆಯು ವೇಗವನ್ನು ಪಡೆಯುವ ಸಾಧ್ಯತೆಯಿದೆ.
  • ಹೆಚ್ಚುತ್ತಿರುವ ಖಾಸಗಿ ಹೂಡಿಕೆ, ಆರೋಗ್ಯಕರ ಕಾರ್ಪೊರೇಟ್ ಬ್ಯಾಲೆನ್ಸ್ ಶೀಟ್‌ ಗಳು ಮತ್ತು ಅನುಕೂಲಕರ ಹಣಕಾಸು ಪರಿಸ್ಥಿತಿಗಳಿಂದ ಭಾರತದ ಹೂಡಿಕೆಯ ಬೆಳವಣಿಗೆಯು ಸ್ಥಿರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
  • ಜಾಗತಿಕ ಆರ್ಥಿಕ ಬೆಳವಣಿಗೆ ರದವು 2025-26 ರಲ್ಲಿ ಶೇಕಡಾ 2.7 ರಷ್ಟು ಸ್ಥಿರವಾಗಿರುತ್ತದೆ ಎಂದು ಅಂದಾಜಿಸಲಾಗಿದೆ, ಇದು ಭಾರತದ ಉತ್ತಮ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತದೆ.
  • ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳು (ಇಎಂಡಿಇಗಳು) 2000 ರಿಂದ ಗಮನಾರ್ಹ ರೂಪಾಂತರಕ್ಕೆ ಒಳಗಾಗಿವೆ, ಶತಮಾನದ ಆರಂಭದಲ್ಲಿದ್ದ 25 ಪ್ರತಿಶತಕ್ಕೆ ಹೋಲಿಸಿದರೆ, ಈಗ ಜಾಗತಿಕ ಜಿಡಿಪಿಯ ಸುಮಾರು 45 ಪ್ರತಿಶತದಷ್ಟು ಕೊಡುಗೆ ನೀಡುತ್ತಿವೆ.
  • ಮೂರು ದೊಡ್ಡ ಇಎಂಡಿಇಗಳಾದ ಭಾರತ, ಚೀನಾ ಮತ್ತು ಬ್ರೆಜಿಲ್, ಶತಮಾನದ ಆರಂಭದಿಂದ ವಾರ್ಷಿಕ ಜಾಗತಿಕ ಬೆಳವಣಿಗೆಯ ಸುಮಾರು 60 ಪ್ರತಿಶತದಷ್ಟು ಕೊಡುಗೆಯನ್ನು ನೀಡಿವೆ.

ಸರ್ಕಾರದ ಯೋಜನೆಗಳು ಮತ್ತು ಉಪಕ್ರಮಗಳು ಬೆಳವಣಿಗೆಗೆ ಕಾರಣವಾಗಿವೆ

ಭಾರತ ಸರ್ಕಾರವು ದೇಶವನ್ನು ಸುಸ್ಥಿರ ಆರ್ಥಿಕ ಬೆಳವಣಿಗೆ ಮತ್ತು ಜಾಗತಿಕ ನಾಯಕತ್ವದ ಕಡೆಗೆ ಸಾಗಿಸುವ ಗುರಿಯನ್ನು ಹೊಂದಿರುವ ಹಲವಾರು ದೂರದೃಷ್ಟಿಯ ಯೋಜನೆಗಳು ಮತ್ತು ಉಪಕ್ರಮಗಳನ್ನು ಜಾರಿಗೆ ತಂದಿದೆ. ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯಿಂದ ಹಿಡಿದು ಸ್ಟಾರ್ಟ್‌ಅಪ್ ಇಂಡಿಯಾ ಮತ್ತು ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಯಂತಹ ಉಪಕ್ರಮಗಳ ಮೂಲಕ ನಾವೀನ್ಯತೆಯನ್ನು ಉತ್ತೇಜಿಸುವವರೆಗೆ ಈ ಸುಧಾರಣೆಗಳು ಉತ್ಪಾದನೆ, ಡಿಜಿಟಲ್ ಆರ್ಥಿಕತೆ ಮತ್ತು ಹಣಕಾಸು ಸೇರ್ಪಡೆಯಂತಹ ಕ್ಷೇತ್ರಗಳಲ್ಲಿ ಬದಲಾವಣೆಗೆ ಚಾಲನೆ ನೀಡುತ್ತಿವೆ. ಒಟ್ಟಾರೆಯಾಗಿ, ದೃಢ, ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕತೆಯನ್ನು ನಿರ್ಮಿಸುವ ಭಾರತದ ಬದ್ಧತೆಯನ್ನು ಅವು ಪ್ರತಿಬಿಂಬಿಸುತ್ತವೆ.

ತೀರ್ಮಾನ

ಭಾರತದ ಗಮನಾರ್ಹ ಆರ್ಥಿಕ ಪ್ರಗತಿಯು ಅಂತರ್ಗತ ಬೆಳವಣಿಗೆ ಮತ್ತು ನಾವೀನ್ಯತೆ-ಚಾಲಿತ ಅಭಿವೃದ್ಧಿಯ ದೃಷ್ಟಿಗೆ ಸಾಕ್ಷಿಯಾಗಿದೆ. ದೂರದೃಷ್ಟಿಯ ನೀತಿಗಳನ್ನು ಅನುಷ್ಠಾನಗೊಳಿಸುವ ಮೂಲಕ, ಬಲವಾದ ಮೂಲಸೌಕರ್ಯವನ್ನು ಉತ್ತೇಜಿಸುವ ಮೂಲಕ ಮತ್ತು ಡಿಜಿಟಲ್ ರೂಪಾಂತರವನ್ನು ಅಳವಡಿಸಿಕೊಳ್ಳುವ ಮೂಲಕ, ರಾಷ್ಟ್ರವು ತನ್ನ ಜಾಗತಿಕ ಸ್ಥಾನವನ್ನು ಮರುವ್ಯಾಖ್ಯಾನಿಸುತ್ತಿದೆ. ಮುಂದಿನ ಎರಡು ಹಣಕಾಸು ವರ್ಷಗಳಲ್ಲಿ ಶೇ.6.7 ರಷ್ಟು ಸ್ಥಿರವಾದ ಬೆಳವಣಿಗೆಯೊಂದಿಗೆ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿ, ಭಾರತವು ಜಾಗತಿಕ ಸಹವರ್ತಿ ದೇಶಗಳನ್ನು ಮೀರಿಸುತ್ತಿದೆ ಮತ್ತು ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ಪ್ರಗತಿಯಲ್ಲಿ ನಾಯಕನಾಗಿ ತನ್ನ ಸ್ಥಾನವನ್ನು ಭದ್ರಪಡಿಸುತ್ತಿದೆ. ಮಾರುಕಟ್ಟೆಗಳನ್ನು ಸಂಯೋಜಿಸುವ ಸರಕು ಮತ್ತು ಸೇವಾ ತೆರಿಗೆಯಿಂದ ಸ್ಟಾರ್ಟ್‌ಅಪ್ ಇಂಡಿಯಾ ಮತ್ತು ಉದ್ಯಮಶೀಲತೆ ಮತ್ತು ಉತ್ಪಾದನೆಯನ್ನು ಉತ್ತೇಜಿಸುವ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಯಂತಹ  ಉಪಕ್ರಮಗಳವರೆಗೆ ರಾಷ್ಟ್ರವು ಕ್ರಿಯಾತ್ಮಕ ಮತ್ತು ಬಲವಾದ ಆರ್ಥಿಕತೆಯನ್ನು ನಿರ್ಮಿಸುತ್ತಿದೆ. ಈ ಆವೇಗದೊಂದಿಗೆ, ಭಾರತವು ಜಾಗತಿಕ ಆರ್ಥಿಕತೆಯ ಭವಿಷ್ಯವನ್ನು ರೂಪಿಸಲು ಸಜ್ಜಾಗಿದೆ, ಸಾಟಿಯಿಲ್ಲದ ಪ್ರಗತಿಯನ್ನು ಸಾಧಿಸುವಲ್ಲಿ ಮಹತ್ವಾಕಾಂಕ್ಷೆ, ಸ್ಥಿತಿಸ್ಥಾಪಕತ್ವ ಮತ್ತು ಕಾರ್ಯತಂತ್ರದ ಆಡಳಿತದ ಶಕ್ತಿಯನ್ನು ಉದಾಹರಿಸುತ್ತದೆ.

ಉಲ್ಲೇಖಗಳು:

Click here to see PDF.

 

*****

 


(Release ID: 2094133) Visitor Counter : 39