ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳು, 1994ಕ್ಕೆ ಪ್ರಮುಖ ತಿದ್ದುಪಡಿಗಳನ್ನು ಪರಿಚಯಿಸಿದೆ
ವ್ಯವಹಾರ ಮಾಡುವುದನ್ನು ಸುಲಭಗೊಳಿಸುವುದು: ತಿದ್ದುಪಡಿ ಮಾಡಿದ ನಿಯಮಗಳ ಅಡಿಯಲ್ಲಿ ಬ್ರಾಡ್‌ಕಾಸ್ಟ್ ಸೇವಾ ಪೋರ್ಟಲ್ ನಲ್ಲಿ ಸ್ಥಳೀಯ ಕೇಬಲ್ ಆಪರೇಟರ್ ಗಳ ನೋಂದಣಿ ಸಂಪೂರ್ಣವಾಗಿ ಆನ್‌ಲೈನ್ ಆಗಿರುತ್ತದೆ
ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸ್ಥಳೀಯ ಕೇಬಲ್ ಆಪರೇಟರ್ ಗಳಿಗೆ ನೋಂದಣಿ ಪ್ರಾಧಿಕಾರವಾಗಿದೆ; ಸ್ಥಳೀಯ ಕೇಬಲ್ ಆಪರೇಟರ್ ಗಳ ನೋಂದಣಿಯ ಸಿಂಧುತ್ವವನ್ನು 5 ವರ್ಷಗಳ ಅವಧಿಗೆ ಹೆಚ್ಚಿಸಲಾಗಿದೆ ಮತ್ತು ಭಾರತದ ಭೂಪ್ರದೇಶದಾದ್ಯಂತ ಅನ್ವಯಿಸಲಾಗಿದೆ
Posted On:
17 JAN 2025 4:21PM by PIB Bengaluru
ಸ್ಥಳೀಯ ಕೇಬಲ್ ಆಪರೇಟರ್ (ಎಲ್ ಸಿ ಒ) ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳು, 1994 (ನಿಯಮಗಳು) ಕ್ಕೆ ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇಂದು ಹೊರಡಿಸಿದೆ. ಇಂದಿನಿಂದ ಜಾರಿಗೆ ಬರುವಂತೆ, ಎಲ್ ಸಿ ಒ ನೋಂದಣಿಗಳು ಸಂಪೂರ್ಣವಾಗಿ ಆನ್‌ಲೈನ್ ಆಗಿರುತ್ತವೆ ಮತ್ತು ಸಚಿವಾಲಯವು ಅವುಗಳ ನೋಂದಣಿ ಪ್ರಾಧಿಕಾರವಾಗಿರುತ್ತದೆ.
ಆಧಾರ್, ಪ್ಯಾನ್, ಸಿಐಎನ್, ಡಿಐಎನ್ ಇತ್ಯಾದಿ ಸೇರಿದಂತೆ ಅರ್ಜಿದಾರರ ವಿವರಗಳ ಯಶಸ್ವಿ ಪರಿಶೀಲನೆಯ ನಂತರ, ಎಲ್ ಸಿ ಒ ನೋಂದಣಿ ಪ್ರಮಾಣಪತ್ರಗಳನ್ನು ನೈಜ ಸಮಯದಲ್ಲಿ ನೀಡಲಾಗುತ್ತದೆ. ಅಲ್ಲದೆ, ಎಲ್ ಸಿ ಒ ನೋಂದಣಿ ಅಥವಾ ನವೀಕರಣದ ನಿರಾಕರಣೆಯ ವಿರುದ್ಧ ಮೇಲ್ಮನವಿಗಾಗಿ ಅವಕಾಶವನ್ನು ನೀಡಲಾಗಿದೆ.
ಮೊದಲು, ಎಲ್ ಸಿ ಒ ಕಛೇರಿ ಇರುವ ಪ್ರದೇಶದ ಸ್ಥಳೀಯ ಪ್ರಧಾನ ಅಂಚೆ ಕಛೇರಿಯಲ್ಲಿ ಎಲ್ ಸಿ ಒ ನೋಂದಣಿ ಪ್ರಕ್ರಿಯೆಯನ್ನು ಆಫ್‌ಲೈನ್ ಮೋಡ್ ನಲ್ಲಿ ಮಾಡಲಾಗುತ್ತಿತ್ತು ಮತ್ತು ಮುಖ್ಯ ಪೋಸ್ಟ್‌ಮಾಸ್ಟರ್ ಅವುಗಳ ನೋಂದಣಿ ಪ್ರಾಧಿಕಾರವಾಗಿದ್ದರು. ಹಸ್ತಚಾಲಿತ ನೋಂದಣಿ ಪ್ರಕ್ರಿಯೆಯು ತೊಡಕಿನದ್ದಾಗಿತ್ತು ಮತ್ತು ಸಮಯ ತೆಗೆದುಕೊಳ್ಳುತ್ತಿತ್ತು. ಅಲ್ಲದೆ, ನೋಂದಣಿಯನ್ನು ಪಡೆದ ನಂತರ ಕಾರ್ಯಾಚರಣೆಯ ಪ್ರದೇಶವು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿತ್ತು.
ಎಲ್ ಸಿ ಒ ನೋಂದಣಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲಾದ ನಿಯಮಗಳ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ:
ಎ. ಎಲ್ ಸಿ ಒ ಗಳು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬ್ರಾಡ್‌ಕಾಸ್ಟ್ ಸೇವಾ ಪೋರ್ಟಲ್‌ನಲ್ಲಿ (http://www.new.broadcastseva.gov.in) ಆನ್‌ಲೈನ್ ನಲ್ಲಿ ಹೊಸ ನೋಂದಣಿ ಅಥವಾ ನೋಂದಣಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕು ಮತ್ತು ನೋಂದಣಿ ಪ್ರಮಾಣಪತ್ರವನ್ನು ಆನ್‌ಲೈನ್ ನಲ್ಲಿ ನೀಡಲಾಗುತ್ತದೆ.
ಬಿ. ಎಲ್ ಸಿ ಒ ನೋಂದಣಿಗಳನ್ನು ಐದು ವರ್ಷಗಳ ಅವಧಿಗೆ ನೀಡಲಾಗುತ್ತದೆ ಅಥವಾ ನವೀಕರಿಸಲಾಗುತ್ತದೆ.
ಸಿ. ನೋಂದಣಿ ಅಥವಾ ನವೀಕರಣಕ್ಕೆ ಪ್ರಕ್ರಿಯೆ ಶುಲ್ಕ ಐದು ಸಾವಿರ ರೂಪಾಯಿಗಳು ಮಾತ್ರ.
ಡಿ. ಎಲ್ ಸಿ ಒ ನೋಂದಣಿಯು ಭಾರತದ ಭೂಪ್ರದೇಶದಾದ್ಯಂತ ಕಾರ್ಯಾಚರಣೆಗಳಿಗೆ ಮಾನ್ಯವಾಗಿರುತ್ತದೆ.
ಇ. ನೋಂದಣಿಯ ನವೀಕರಣಕ್ಕಾಗಿ ಅರ್ಜಿಯನ್ನು ನೋಂದಣಿಯ ಅವಧಿ ಮುಗಿಯುವ ಕನಿಷ್ಠ 90 ದಿನಗಳ ಮೊದಲು ಸಲ್ಲಿಸಬೇಕು.
ಎಫ್. 30 ದಿನಗಳಲ್ಲಿ ನೋಂದಣಿ ಅಥವಾ ನೋಂದಣಿಯ ನವೀಕರಣವನ್ನು ನಿರಾಕರಿಸಿದ ನೋಂದಣಿ ಪ್ರಾಧಿಕಾರ ಅಂದರೆ ಗೊತ್ತುಪಡಿಸಿದ ಸೆಕ್ಷನ್ ಆಫೀಸರ್ ವಿರುದ್ಧ ಎಲ್ ಸಿ ಒ ಗಳು ಮೇಲ್ಮನವಿ ಪ್ರಾಧಿಕಾರ ಅಂದರೆ ಅಧೀನ ಕಾರ್ಯದರ್ಶಿಯ (ಡಿಎಎಸ್) ಮುಂದೆ ಮೇಲ್ಮನವಿ ಸಲ್ಲಿಸಬಹುದು.
ಅಸ್ತಿತ್ವದಲ್ಲಿರುವ ಎಲ್ ಸಿ ಒ ನೋಂದಣಿಯು ನೋಂದಣಿ ಪ್ರಮಾಣಪತ್ರದಲ್ಲಿ ನಮೂದಿಸಲಾದ ಅವಧಿಯವರೆಗೆ ಮಾನ್ಯವಾಗಿರುತ್ತದೆ. ಎಲ್ ಸಿ ಒ ದ ಅಸ್ತಿತ್ವದಲ್ಲಿರುವ ನೋಂದಣಿಯು 90 ದಿನಗಳಿಗಿಂತ ಕಡಿಮೆ ಅವಧಿಯವರೆಗೆ ಇದ್ದರೆ, ನವೀಕರಣಕ್ಕಾಗಿ ಅಂತಹ ಅರ್ಜಿಗಳು ಯಾವುದಾದರೂ ಇದ್ದರೆ, ಪೋರ್ಟಲ್‌ನಲ್ಲಿ ತಕ್ಷಣವೇ ನವೀಕರಣ ಮಾಡಲಾಗುವುದು.
ನೋಂದಣಿಯ ಮಂಜೂರಾತಿ/ನವೀಕರಣಕ್ಕಾಗಿ ಅಂಚೆ ಕಛೇರಿಗಳಲ್ಲಿ ಸಲ್ಲಿಸಿದ ಅರ್ಜಿಗಳು, ಈ ದಿನಾಂಕದವರೆಗೆ ಬಾಕಿ ಉಳಿದಿದ್ದರೆ ಅರ್ಜಿಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ಅರ್ಜಿಯನ್ನು ಪೋರ್ಟಲ್ ನಲ್ಲಿ ಸಲ್ಲಿಸಬೇಕಾಗುತ್ತದೆ.
ಯಾವುದೇ ಸಹಾಯದ ಅಗತ್ಯವಿದ್ದರೆ, ಪೋರ್ಟಲ್ ನಲ್ಲಿ ಲಭ್ಯವಿರುವ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ http://lco.das[at]gov[dot]in ಗೆ ಇಮೇಲ್ ಕಳುಹಿಸಬಹುದು.
ನೋಂದಣಿ ಮತ್ತು ನವೀಕರಣ ಪ್ರಕ್ರಿಯೆಯು ವ್ಯವಹಾರವನ್ನು ಸುಲಭಗೊಳಿಸುವ ಸರ್ಕಾರದ ಬದ್ಧತೆಗೆ ಅನುಗುಣವಾಗಿದೆ, ಏಕೆಂದರೆ ಆನ್‌ಲೈನ್ ನಲ್ಲಿ ಅರ್ಜಿದಾರರ ವಿವರಗಳ ಯಶಸ್ವಿ ಪರಿಶೀಲನೆಯ ನಂತರ ನೋಂದಣಿ/ನವೀಕರಣ ಪ್ರಮಾಣಪತ್ರವನ್ನು ನೈಜ-ಸಮಯದ ಆಧಾರದ ಮೇಲೆ ರಚಿಸಲಾಗುತ್ತದೆ.
*****
(Release ID: 2093787)
Visitor Counter : 25
Read this release in:
Odia
,
Malayalam
,
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Tamil