ಸಂಸ್ಕೃತಿ ಸಚಿವಾಲಯ
azadi ka amrit mahotsav

ಪರಿಸರ ಸಂರಕ್ಷಣೆಗೆ ಒತ್ತು ನೀಡುವ 1,000 ಕ್ಕೂ ಹೆಚ್ಚು ಪರಿಸರ ಚಾಂಪಿಯನ್‌ ಗಳನ್ನು ಒಟ್ಟುಗೂಡಿಸಲಿದೆ ಪ್ರಯಾಗರಾಜ್‌ ನಲ್ಲಿ ನಡೆಯುವ ಹಸಿರು ಮಹಾಕುಂಭ


ಮಹಾಕುಂಭ ಜಾಗೃತಿಗಾಗಿ ಪ್ರಯಾಗ್ರಾಜ್ ಮುನ್ಸಿಪಲ್ ಕಾರ್ಪೊರೇಷನ್ ವಿಶೇಷವಾದ ಸ್ವಚ್ಛತಾ ರಥ ಯಾತ್ರೆಯನ್ನು ಆಯೋಜಿಸಿದೆ;  ಸ್ವಚ್ಛತೆ ಸಂದೇಶಗಳನ್ನು ಹರಡಲು ಬೀದಿ ನಾಟಕಗಳು ಮತ್ತು ಸಂಗೀತ ಬ್ಯಾಂಡ್ ಪ್ರದರ್ಶನಗಳು ನಡೆದವು

Posted On: 07 JAN 2025 5:28PM by PIB Bengaluru

ಪ್ರಯಾಗರಾಜ್‌ ನಲ್ಲಿರುವ ಮಹಾಕುಂಭವು ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಜೊತೆಗೆ ಪರಿಸರ ಸಂರಕ್ಷಣೆಯ ಸಂದೇಶ ಪ್ರಬಲ ನಿರೂಪಣೆ ವಿಷಯವಾಗಿ ಕಾರ್ಯಕ್ರಮಗಳನ್ನು ರೂಪಿಸಿ ರಚಿಸಲಾಗಿದೆ.  ಜನವರಿ 31 ರಂದು, ನಗರವು ಹಸಿರು ಮಹಾಕುಂಭವನ್ನು ಆಯೋಜಿಸುತ್ತದೆ. ಈ ಮೂಲಕ ದೇಶಾದ್ಯಂತದ 1,000 ಕ್ಕೂ ಹೆಚ್ಚು ಪರಿಸರ ಮತ್ತು ಜಲ ಸಂರಕ್ಷಣಾ ಕಾರ್ಯಕರ್ತರನ್ನು ಒಟ್ಟುಗೂಡಿಸಲಾಗುತ್ತದೆ.  ಈ ವಿಶಿಷ್ಟ ಕಾರ್ಯಕ್ರಮವು ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್ ಆಯೋಜಿಸಿರುವ ಜ್ಞಾನ ಮಹಾಕುಂಭ - 2081 ಸರಣಿಯ ಭಾಗವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದರ ಮುಖ್ಯ ಪೋಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಸಿರು ಮಹಾಕುಂಭದ ಅಂಗವಾಗಿ, ಪ್ರಕೃತಿ, ಪರಿಸರ, ನೀರು ಮತ್ತು ಸ್ವಚ್ಛತೆಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕರಿಸಿದ ರಾಷ್ಟ್ರೀಯ ಮಟ್ಟದ ಚರ್ಚೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಕೃತಿಯ ಐದು ಅಂಶಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಎದುರಿಸುತ್ತಿರುವ ಸಮಕಾಲೀನ ಸವಾಲುಗಳನ್ನು ಎದುರಿಸಲು ತಜ್ಞರು ತಮ್ಮ ವೃತ್ತಿಪರ ಒಳನೋಟಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.  ಹೆಚ್ಚುವರಿಯಾಗಿ, ಚರ್ಚೆಗಳು ಮಹಾಕುಂಭ ಸಂದರ್ಶಕರಲ್ಲಿ ಪರಿಸರ ಸಂರಕ್ಷಣೆ ಮತ್ತು ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಮಾರ್ಗಗಳನ್ನು ಅನ್ವೇಷಿಸುವ ಅರಿವು ಮೂಡಿಸುತ್ತವೆ. ಹಾಗೆಯೇ ಈ ಪ್ರಯತ್ನಗಳನ್ನು ಉತ್ತೇಜಿಸಲು ಕೈಗೊಳ್ಳಲಾಗುತ್ತಿರುವ ವಿವಿಧ ಪ್ರಕಾರದ ಅಭಿಯಾನಗಳು ಕೂಡ ಜೊತೆಯಲ್ಲಿ ನಡೆಯಲಿದೆ. 

ಸ್ವಚ್ಛ ಮಹಾಕುಂಭದ ದೃಷ್ಟಿಕೋನದ ಪರಿಕಲ್ಪನೆಯನ್ನು ಅನುಸರಿಸಿ, ಈ ಐತಿಹಾಸಿಕ ಕಾರ್ಯಕ್ರಮದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸ್ಥಳೀಯ ನಾಗರಿಕರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಉಪಕ್ರಮದ ಭಾಗವಾಗಿ, ಶುಚಿತ್ವವನ್ನು ಉತ್ತೇಜಿಸಲು ಮತ್ತು ಸಾರ್ವಜನಿಕ ಜಾಗೃತಿ ಮೂಡಿಸಲು, ಗಮನಾರ್ಹವಾಗಿ ಹೆಚ್ಚು ಹೆಚ್ಚು ಸಮುದಾಯಗಳ ಭಾಗವಹಿಸುವಿಕೆಯನ್ನು ಸೆಳೆಯಲು ಇಂದು ಪ್ರಯಾಗ್‌ರಾಜ್‌ ನಲ್ಲಿ ಸ್ವಚ್ಛತಾ ರಥ ಯಾತ್ರೆಯನ್ನು ಕೂಡ ಪ್ರಾರಂಭಿಸಲಾಗಿದೆ.

ಮಹಾಕುಂಭದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಪ್ರಯಾಗ್ರಾಜ್ ಸ್ವಚ್ಛತೆಯ ಮನೋಭಾವವನ್ನು ಎಲ್ಲಾ ಕಡೆ ಪ್ರತಿಬಿಂಬಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸ್ವಚ್ಛತಾ ರಥ ಯಾತ್ರೆಯನ್ನು ಪ್ರಾರಂಭಿಸಲಾಯಿತು.  "ಮಹಾಕುಂಭ ನಗರ ಮಾರ್ಗ"ವು ನಗರದ ಪ್ರಮುಖ ಬೀದಿಗಳಲ್ಲಿ ಮೂಲಕ ಹಾದು ಹೋಗುವುದರೊಂದಿಗೆ, ಈ ಭವ್ಯ ಸಮಾರಂಭದಲ್ಲಿ ನಿರೀಕ್ಷಿತ ಲಕ್ಷಾಂತರ ಸಂದರ್ಶಕರಿಗೆ ಪ್ರಾಚೀನ ಪರಿಸರವನ್ನು ಕಾಪಾಡಿಕೊಳ್ಳುವ ಗುರಿಯನ್ನು ಈ ಉಪಕ್ರಮವು ಹೊಂದಿದೆ.

ಪ್ರಯಾಗ್ರಾಜ್ ಮೇಯರ್ ಶ್ರೀ ಉಮೇಶ್ ಚಂದ್ರ ಗಣೇಶ್ ಕೇಸರವಾಣಿ ಅವರು "ಪ್ರಯಾಗ್ರಾಜ್ ಅನ್ನು ಸ್ವಚ್ಛ, ಆರೋಗ್ಯಕರ ಮತ್ತು ಶಿಸ್ತುಬದ್ಧವಾಗಿ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವೊಂದು 'ಜನ ಜಾಗರಣ ಯಾತ್ರೆ' ಯಾಗಿದೆ" ಎಂದು ವಿಶೇಷ ರೀತಿಯಲ್ಲಿ ಕಾರ್ಯಯೋಜನೆಗಳನ್ನು ಬಣ್ಣಿಸಿದರು. "ನಾಗರಿಕರು ಕಸ ಹಾಕುವುದನ್ನು ತಪ್ಪಿಸಬೇಕು, ಕಸದ ತೊಟ್ಟಿಗಳನ್ನು ಬಳಸಬೇಕು ಮತ್ತು ಏಕ-ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು" ಎಂದು ಅವರು ಒತ್ತಾಯಿಸಿದರು. ಸ್ಥಳೀಯರು ಉತ್ತಮ ಸಂಖ್ಯೆಯಿಂದ ಭಾಗವಹಿಸಿ ಉತ್ಸಾಹಭರಿತ ಬೆಂಬಲವನ್ನು ನೀಡಿದರು, ಮತ್ತು ಅನೇಕರು ಬಹಳಷ್ಟು ಸಕ್ರಿಯವಾಗಿ ಭಾಗವಹಿಸಿದರು.

ಬೀದಿ ನಾಟಕ ಕಲಾವಿದರು ವಿವಿಧ ಬಣ್ಣಗಳ ಕಸದ ತೊಟ್ಟಿಗಳನ್ನು ರಥದ ಪಕ್ಕದಲ್ಲಿ ಪ್ರದರ್ಶಿಸಿದರು, ಒದ್ದೆ ಮತ್ತು ಒಣ ತ್ಯಾಜ್ಯಕ್ಕೆ ಪ್ರತ್ಯೇಕ ಕಸದ ತೊಟ್ಟಿಗಳನ್ನು ಬಳಸುವ ಮೂಲಕ ಸರಿಯಾದ ತ್ಯಾಜ್ಯ ವಿಂಗಡಣೆಯ ಬಗ್ಗೆ ಜಾಗೃತಿ ಮೂಡಿಸಿದರು. ಅರ್ಥಪೂರ್ಣ  ಸಂದೇಶವನ್ನು ಸೇರಿಸುವ ಮೂಲಕ, ಯಾತ್ರೆಯ ಉದ್ದಕ್ಕೂ ಸ್ವಚ್ಛತೆ-ವಿಷಯದ ಸಂಗೀತ ಬ್ಯಾಂಡ್ ಪ್ರದರ್ಶನಗೊಂಡಿತು. ಮಹಾ ಕುಂಭದ ಸಮಯದಲ್ಲಿ ಸ್ವಚ್ಛ ಪ್ರಯಾಗ್ರಾಜ್ ಅನ್ನು ನಿರ್ವಹಿಸುವ ಕರೆಯ ಸಂದೇಶವನ್ನು ಈ ರೀತಿಯ ಉಪಕ್ರಮಗಳು ಮತ್ತಷ್ಟು ವರ್ಧಿಸುತ್ತವೆ.  ಹೆಚ್ಚಿನ ಸಂಖ್ಯೆಯಲ್ಲಿ ನೈರ್ಮಲ್ಯ ಕಾರ್ಯಕರ್ತರು ( ಸಫಾಯಿ ಕರ್ಮಚಾರಿಗಳು) ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಸಿಬ್ಬಂದಿಗಳು ಸಹ ಸಕ್ರಿಯವಾಗಿ ಭಾಗವಹಿಸಿದರು. ಇವರೆಲ್ಲರ ಜೊತೆ ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಗರವನ್ನು ಸ್ವಚ್ಛವಾಗಿಡುವಲ್ಲಿ ತಮ್ಮ ಪಾತ್ರದ ಮಹತ್ವವನ್ನು ಸಾದರ ಪಡಿಸಿದರು.

 

*****
 


(Release ID: 2091105) Visitor Counter : 11