ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಸಿಬಿಐ ಅಭಿವೃದ್ಧಿಪಡಿಸಿದ ‘ಭಾರತ್ ಪೊಲ್’ ಪೋರ್ಟಲ್ ಅನ್ನು ನವದೆಹಲಿಯಲ್ಲಿ ಉದ್ಘಾಟಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಡಿ ಇಂದು ‘ಭಾರತ್ ಪೊಲ್’ ಪೋರ್ಟಲ್ ಲೋಕಾರ್ಪಣೆ ಮಾಡಲಾಗಿದೆ, ಅಂತಾರಾಷ್ಟ್ರೀಯ ತನಿಖಾ ವಲಯದಲ್ಲಿ ಹೊಸ ಯುಗ ಆರಂಭವಾಗಿದ್ದು, ಭಾರತ ಇದು ಉತ್ತೇಜನಕಾರಿಯಾಗಿದೆ

‘ಭಾರತಪೋಲ್’ ಮತ್ತು ಹೊಸ ಮೂರು ಕ್ರಿಮಿನಲ್ ಕಾನೂನುಗಳು ವಿದೇಶಕ್ಕೆ ಪರಾರಿಯಾಗುವವರನ್ನು ಹಿಡಿಯಲು ಬಲವಾದ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸಲಿದೆ

ಮೂರು ಹೊಸ ಕ್ರಿಮಿನಲ್ ಕಾನೂನುಗಳಲ್ಲಿನ 'ಗೈರು ಹಾಜರಿಯಲ್ಲಿ ವಿಚಾರಣೆ' ನಿಬಂಧನೆಯ ಮೂಲಕ, ಪರಾರಿಯಾದವರ ಅನುಪಸ್ಥಿತಿಯಲ್ಲಿ ಪ್ರಕರಣಗಳ ವಿಚಾರಣೆ ನಡೆಸಬಹುದು ಮತ್ತು ಅವರಿಗೆ ಶಿಕ್ಷೆ ಕೊಡಿಸಬಹುದು

ಇಂಟರ್ ಪೋಲ್ ಸಂಪರ್ಕ ಜಾಲ ಹೊಂದಿರುವ 195 ದೇಶಗಳ ಎಲ್ಲಾ ರಾಜ್ಯಗಳ ಪೊಲೀಸರು ಮತ್ತು ತನಿಖಾ ಸಂಸ್ಥೆಗಳನ್ನು ಸಂಪರ್ಕಿಸಲು ಇದರಿಂದ ಸಾಧ್ಯವಾಗಲಿದ್ದು, ಅಪರಾಧ ನಿಯಂತ್ರಣದಲ್ಲಿ ‘ಭಾರತ್ ಪೊಲ್’ ನಿರ್ಣಾಯಕ ಪಾತ್ರ ವಹಿಸಲಿದೆ

ಮಾದಕ ದ್ರವ್ಯ, ಶಸ್ತ್ರಾಸ್ತ್ರಗಳು, ಮಾನವ ಕಳ್ಳಸಾಗಾಣೆ ಮತ್ತು ಇತರೆ ಗಡಿಯಾಚೆಯ ಕಾನೂನುಬಾಹಿರ ಪ್ರಕರಣಗಳಿಗೆ ಸಂಬಂಧಪಟ್ಟ ಅಪರಾಧಗಳನ್ನು ನಿಯಂತ್ರಿಸಲು 195 ದೇಶಗಳ ನಡುವೆ ‘ಭಾರತ್ ಪೊಲ್’ ಸಂಪರ್ಕ ಜಾಲದ ನೆರವು ನೀಡಲಿದೆ

'ಭಾರತ್ ಪೊಲ್' ಇಂಟರ್ ಪೋಲ್ 19 ಬಗೆಯ ದತ್ತಾಂಶಗಳಿಗೆ ಪ್ರವೇಶ ಹೊಂದಿರುತ್ತದೆ, ಇದು ಅಪರಾಧಗಳನ್ನು ವಿಶ್ಲೇಷಿಸಲು, ಅವುಗಳನ್ನು ತಡೆಗಟ್ಟಲು ಮತ್ತು ಅಪರಾಧಿಗಳನ್ನು ಬಂಧಿಸಲು ಸಹಾಯ ಮಾಡುತ್ತದೆ.

Posted On: 07 JAN 2025 3:42PM by PIB Bengaluru

ಕೇಂದ್ರೀಯ ತನಿಖಾ ದಳ [ಸಿಬಿಐ] ಅಭಿವೃದ್ಧಿಪಡಿಸಿರುವ ‘ಭಾರತ್ ಪೊಲ್” ಪೋರ್ಟಲ್ ಅನ್ನು ನವದೆಹಲಿಯ ಭಾರತ್ ಮಂಟಪಂನಲ್ಲಿಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಲೋಕಾರ್ಪಣೆ ಮಾಡಿದರು. ತನಿಖಾ ವಲಯದಲ್ಲಿ ಉತ್ಕೃಷ್ಟ ಸೇವೆ ಸಲ್ಲಿಸಿ ರಾಷ್ಟ್ರಪತಿ ಪೊಲೀಸ್ ಪದಕ ಮತ್ತು ಕೇಂದ್ರ ಗೃಹ ಸಚಿವರ ಪದಕಗಳನ್ನು ಪಡೆದ 35 ಸಿಬಿಐ ಅಧಿಕಾರಿಗಳಿಗೆ ಶ್ರೀ ಅಮಿತ್ ಶಾ ಅವರು ಪದಕ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ಸಿಬಿಐ ನಿರ್ದೇಶಕರು ಮತ್ತು ಡಿಒಪಿಟಿ ಕಾರ್ಯದರ್ಶಿ ಉಪಸ್ಥಿತರಿದ್ದರು.  

0I9A0391.JPG

ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಡಿ ಇಂದು ‘ಭಾರತ್ ಪೊಲ್’ ಪೋರ್ಟಲ್ ಲೋಕಾರ್ಪಣೆ ಮಾಡಲಾಗಿದ್ದು,. ಇದರಿಂದ ಅಂತಾರಾಷ್ಟ್ರೀಯ ತನಿಖಾ ವಲಯದಲ್ಲಿ ಹೊಸ ಯುಗ ಆರಂಭವಾಗಿದೆ. ಭಾರತ ಇದಕ್ಕೆ ಉತ್ತೇಜನಕಾರಿಯಾಗಿದೆ. ‘ಭಾರತ್ ಪೊಲ್’ ಮೂಲಕ ಭಾರತದ ಪ್ರತಿಯೊಂದು ಸಂಸ್ಥೆ ಮತ್ತು ಪೊಲೀಸ್ ಪಡೆಗಳು ತನಿಖೆಯನ್ನು ತ್ವರಿತಗೊಳಿಸಲು ಇಂಟರ್ ಪೋಲ್ ನೊಂದಿಗೆ ಅಪರಿಮಿತ ಸಂಪರ್ಕ ಹೊಂದಲು ಸಾಧ್ಯವಾಗಲಿದೆ ಎಂದರು.

0I9A0474.JPG

ಭಾರತ 2047 ರ ವೇಳೆಗೆ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿದೆ ಮತ್ತು ಪ್ರಸ್ತುತ ಅವಧಿಯನ್ನು ಪ್ರಧಾನಮಂತ್ರಿಯವರು ಅಮೃತ ಕಾಲ ಎಂದು ಕರೆದಿದ್ದಾರೆ. ದೇಶದ 140 ಕೋಟಿ ಜನ ಸಮಯವನ್ನು ಅಮೃತ ಕಾಲ ಎಂದು ಪರಿಗಣಿಸಿದ್ದಾರೆ ಮತ್ತು 2047 ರ ವೇಳೆಗೆ ಭಾರತ ಪ್ರತಿಯೊಂದು ವಲಯದಲ್ಲಿ ಅಗ್ರ ಸ್ಥಾನಕ್ಕೆ ತಲುಪಲು ಸಾಮೂಹಿಕ ಪ್ರತಿಜ್ಞೆ ಕೈಗೊಂಡಿದ್ದಾರೆ. ಈ ಸಂಕಲ್ಪವನ್ನು ಸಾಕಾರಗೊಳಿಸಲು ಹಲವು ಮೈಲಿಗಲ್ಲುಗಳಿವೆ ಮತ್ತು 2027ರ ವೇಳೆಗೆ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವುದು ಮೊದಲ ಮೈಲಿಗಲ್ಲು ಎಂದು ಅವರು ಹೇಳಿದರು. ಇದು 'ಅಮೃತ ಕಾಲ'ದ ಸಂಕಲ್ಪವನ್ನು ಸಾಧಿಸುವ ಸಮಯವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 2047 ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು. 'ಅಮೃತ ಕಾಲ' ಭಾರತಕ್ಕೆ ಒಂದು ಸುವರ್ಣ ಅವಕಾಶವಾಗಿದೆ ಎಂದು ಹೇಳಿದರು.

0I9A0128.JPG

ಪ್ರಧಾನಮಂತ್ರಿ ಮೋದಿ ಅವರ ನಾಯಕತ್ವದಡಿ ಭಾರತ ಪ್ರಾದೇಶಿಕ ನಾಯಕತ್ವದಿಂದ ಜಾಗತಿಕ ನಾಯಕನಾಗಿ ಹೊರ ಹೊಮ್ಮುತ್ತಿದ್ದು, ಇದಕ್ಕಾಗಿ ವೈಜ್ಞಾನಿಕ ನೀಲನಕ್ಷೆಗೆ ಸೂಕ್ತ ಸ್ವರೂಪ ನೀಡಲಾಗುತ್ತಿದೆ ಮತ್ತು ಕಾಲಮಿತಿಯ ಕಾರ್ಯಕ್ರಮಗಳ ಮೂಲಕ ಸಂಕಲ್ಪವನ್ನು ಸಾಧಿಸಲಾಗುತ್ತಿದೆ. ಭಾರತ ಹಾದಿಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದೆ. ನಾವು ಮುಂದೆ ಸಾಗುತ್ತಿರುವಾಗ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವಾಗ ನಮ್ಮ ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳನ್ನು ನವೀಕರಿಸುವ ಅಗತ್ಯವನ್ನು ಶ್ರೀ ಅಮಿತ್ ಶಾ ಒತ್ತಿ ಹೇಳಿದರು ಮತ್ತು ‘ಭಾರತ್ ಪೊಲ್’ ಆ ದಿಕ್ಕಿನಲ್ಲಿ ಒಂದು ಸಕಾಲಿಕ ಹೆಜ್ಜೆಯಾಗಿದೆ ಎಂದರು.

‘ಭಾರತ್‌ ಪೊಲ್’ನ ಐದು ಪ್ರಮುಖ ಮಾದರಿಗಳು - ಸಂಪರ್ಕ, ಇಂಟರ್‌ಪೋಲ್ ಸೂಚನೆಗಳು, ಉಲ್ಲೇಖಗಳು, ಪ್ರಸಾರ ಮತ್ತು ಸಂಪನ್ಮೂಲಗಳು - ನಮ್ಮ ಎಲ್ಲಾ ಕಾನೂನು ಜಾರಿ ಸಂಸ್ಥೆಗಳನ್ನು ಬೆಂಬಲಿಸಲು ತಾಂತ್ರಿಕ ವೇದಿಕೆಯನ್ನು ಇದು ಒದಗಿಸುತ್ತವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಂಪರ್ಕದ ಮೂಲಕ, ನಮ್ಮ ಎಲ್ಲಾ ಕಾನೂನು ಜಾರಿ ಸಂಸ್ಥೆಗಳು ಮೂಲಭೂತವಾಗಿ ಇಂಟರ್ ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ (ಎನ್.ಸಿ.ಬಿ-ನವದೆಹಲಿ) ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ವಿವರಿಸಿದರು. ಈ ವ್ಯವಸ್ಥೆಯು ಇಂಟರ್‌ಪೋಲ್ ಸೂಚನೆಗಳಿಗಾಗಿ ಮನವಿಗಳ ತ್ವರಿತ, ಸುರಕ್ಷಿತ ಮತ್ತು ರಚನಾತ್ಮಕ ಪ್ರಸರಣವನ್ನು ಖಚಿತಪಡಿಸುತ್ತದೆ, ಭಾರತದಿಂದ ಮತ್ತು ಜಗತ್ತಿನಾದ್ಯಂತ, ಭಾರತದೊಳಗೆ ಅಪರಾಧಿಗಳನ್ನು ತ್ವರಿತವಾಗಿ ಪತ್ತೆಹಚ್ಚಲು ವೈಜ್ಞಾನಿಕ ಕಾರ್ಯವಿಧಾನವನ್ನು ಸಕ್ರಿಯಗೊಳಿಸುತ್ತದೆ ಎಂದು ಅವರು ಹೇಳಿದರು. 195 ದೇಶಗಳ ಇಂಟರ್‌ಪೋಲ್ ಉಲ್ಲೇಖಗಳು ವಿದೇಶದಲ್ಲಿ ತನಿಖೆಗೆ ಅಂತರಾಷ್ಟ್ರೀಯ ನೆರವು ಪಡೆಯಲು ಮತ್ತು ಪಡೆಯುವುದನ್ನು ಹೆಚ್ಚು ಸರಳಗೊಳಿಸುತ್ತದೆ ಎಂದು ಶ್ರೀ ಶಾ ಒತ್ತಿ ಹೇಳಿದರು. 195 ದೇಶಗಳ ಸಹಾಯಕ್ಕಾಗಿ ವಿನಂತಿಗಳು ಈಗ ಪ್ರಸರಣ ಮಾದರಿಯ ಮೂಲಕ ತಕ್ಷಣವೇ ಲಭ್ಯವಿರುತ್ತವೆ, ಆದರೆ ಸಂಪನ್ಮೂಲಗಳ ಮಾದರಿಯ ದಾಖಲೆಗಳ ವಿನಿಮಯ ಮತ್ತು ನಿರ್ವಹಣೆ ಮತ್ತು ಸಾಮರ್ಥ್ಯ-ವರ್ಧನೆಯ ಉಪಕ್ರಮಗಳಿಗೆ ಅನುಕೂಲವಾಗುತ್ತದೆ ಎಂದು ಅವರು ಉಲ್ಲೇಖಿಸಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಪೋರ್ಟಲ್‌ನ ಪ್ರಮುಖ ವೈಶಿಷ್ಟ್ಯದ ಬಗ್ಗೆ ಒತ್ತಿ ಹೇಳಿದರು. ನೈಜ-ಸಮಯದ ಸಂರ್ಪಕ ಸಾಧಿಸಲು, ಅಪರಾಧ ನಿಯಂತ್ರಣ ಕ್ರಮಗಳನ್ನು ಹೆಚ್ಚಿಸಲು ಸಂಸ್ಥೆಗಳ ನಡುವೆ ತಡೆರಹಿತ ಮತ್ತು ಪರಿಣಾಮಕಾರಿ ಸಂವಹನವನ್ನು ಸಕ್ರಿಯಗೊಳಿಸುತ್ತದೆ. ಜಾಗತಿಕ ಸಂಪರ್ಕ ಜಾಲದ ಮೂಲಕ ರೆಡ್ ಕಾರ್ನರ್ ನೋಟಿಸ್‌ಗಳು ಮತ್ತು ಇತರ ಎಚ್ಚರಿಕೆಗಳನ್ನು ನೀಡುವುದು ಸೇರಿದಂತೆ ನೈಜ-ಸಮಯದ ದತ್ತಾಂಶ ಹಂಚಿಕೆಗಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿನಂತಿಗಳಿಗೆ ಪೋರ್ಟಲ್ ಪ್ರತಿಕ್ರಿಯೆಗಳನ್ನು ಗಮನಾರ್ಹವಾಗಿ ವೇಗಗೊಳಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ವರ್ಷಗಳಿಂದ, ಭಾರತದಲ್ಲಿ ಅಪರಾಧಗಳನ್ನು ಎಸಗುವ ಮತ್ತು ಇತರ ದೇಶಗಳಿಗೆ ಪಲಾಯನ ಮಾಡುವ ಅಪರಾಧಿಗಳು ಭಾರತೀಯ ಕಾನೂನುಗಳ ವ್ಯಾಪ್ತಿಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ, ‘ಭಾರತ್‌ ಪೊಲ್’ ಆಧುನಿಕ ವ್ಯವಸ್ಥೆಗಳ ಅನುಷ್ಠಾನದಿಂದ, ಅಂತಹ ಅಪರಾಧಿಗಳನ್ನು ಈಗ ನ್ಯಾಯದ ವ್ಯಾಪ್ತಿಗೆ ತರಲಿದೆ ಎಂದರು.

0I9A0112.JPG

ಮೂರು ಹೊಸ ಕ್ರಿಮಿನಲ್ ಕಾನೂನುಗಳಲ್ಲಿನ 'ಗೈರು ಹಾಜರಿಯಲ್ಲಿ ವಿಚಾರಣೆ' ನಿಬಂಧನೆಯ ಮೂಲಕ, ಪರಾರಿಯಾದವರ ಅನುಪಸ್ಥಿತಿಯಲ್ಲಿ ಪ್ರಕರಣಗಳ ಬಗ್ಗೆ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಬಹುದು ಮತ್ತು ಅವರಿಗೆ ನ್ಯಾಯಸಮ್ಮತವಾಗಿ ಶಿಕ್ಷೆ ಕೊಡಿಸಬಹುದು. ಈ ನಿಬಂಧನೆಯು ಅಪರಾಧಿಗಳನ್ನು ವಿದೇಶಗಳಿಂದ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಎಂದು ಅವರು ವಿವರಿಸಿದರು. ‘ಭಾರತ್‌ಪೊಲ್’ ಪೋರ್ಟಲ್‌ನ ಸಾಮರ್ಥ್ಯಗಳೊಂದಿಗೆ ಸೇರಿ, ಈ ಹೊಸ ಕ್ರಮವು ಭಾರತೀಯ ಕಾನೂನು ಜಾರಿ ಸಂಸ್ಥೆಗಳಿಗೆ ಪರಾರಿಯಾದವರನ್ನು ಅವರು ಎಲ್ಲಿ ಅಡಗಿಕೊಂಡರೂ ನ್ಯಾಯದ ವ್ಯಾಪ್ತಿಗೆ ತರಲು ಅಧಿಕಾರ ನೀಡುತ್ತದೆ ಎಂದು ಶ್ರೀ ಅಮಿತ್ ಶಾ ಒತ್ತಿ ಹೇಳಿದರು. ‘ಭಾರತ್ ಪೊಲ್’ ಪೋರ್ಟಲ್ ಅನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕೇಂದ್ರೀಯ ತನಿಖಾ ದಳ [ಸಿಬಿಐ] ನಾಯಕತ್ವ ವಹಿಸಬೇಕು ಮತ್ತು ತಳಮಟ್ಟದಲ್ಲಿ ವಿಸ್ತೃತವಾದ ತರಬೇತಿ ನೀಡಿ ಸಜ್ಜುಗೊಳಿಸಬೇಕು ಎಂದು ಆಗ್ರಹಿಸಿದರು. ಇದು ನ್ಯಾಯಾಂಗ ವ್ಯವಸ್ಥೆಯನ್ನು ಬಲಗೊಳಿಸಲಿದ್ದು, ಪಾರದರ್ಶಕತೆಯನ್ನು ವೃದ್ಧಿಸಲಿದೆ ಮತ್ತು ಒಟ್ಟಾರೆ ಸಾಮರ್ಥ್ಯವನ್ನು ಸುಧಾರಿಸಲಿದೆ ಹಾಗೂ ಕಾನೂನು ಜಾರಿ ಪ್ರಯತ್ನಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲಿದೆ ಎಂದರು.

ಮಾದಕ ದ್ರವ್ಯ, ಶಸ್ತ್ರಾಸ್ತ್ರಗಳು, ಮಾನವ ಕಳ್ಳಸಾಗಾಣೆ ಮತ್ತು ಇತರೆ ಗಡಿಯಾಚೆಯ ಕಾನೂನುಬಾಹಿರ ಪ್ರಕರಣಗಳಿಗೆ ಸಂಬಂಧಪಟ್ಟ ಅಪರಾಧಗಳನ್ನು ನಿಯಂತ್ರಿಸಲು 195 ದೇಶಗಳ ನಡುವೆ ‘ಭಾರತ್ ಪೊಲ್’ ನಂತಹ ಹೊಸ ವ್ಯವಸ್ಥೆಯು ಸಂಪರ್ಕ ಜಾಲದ ನೆರವು ನೀಡುವ ಜೊತೆಗೆ ಪರಿವರ್ತನೆ ತರಲಿದೆ. ಇಂತಹ ಅಪರಾಧ ಪ್ರಕರಣಗಳಲ್ಲಿ 195 ದೇಶಗಳೊಂದಿಗೆ ನೈಜಕಾಲದ ಮಾಹಿತಿ ಹಂಚಿಕೊಳ್ಳುವ ಮೂಲಕ ಕಾನೂನು ಜಾರಿ ಸಂಸ್ಥೆಗಳೊಂದಿಗೆ ‘ಭಾರತ್ ಪೊಲ್’ ಸಂಪರ್ಕ ಜಾಲ ಸಹಭಾಗಿತ್ವ ಹೊಂದಲಿದೆ. ಶ್ರೀ ಅಮಿತ್ ಶಾ ಅವರು ಇಂಟರ್ ಪೋಲ್ ಸೂಚನೆಗಳ ಬಗ್ಗೆ ಕಾನೂನು ಜಾರಿ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಮತ್ತು ವ್ಯವಸ್ಥೆಯನ್ನು ಸಾಂಸ್ಥಿಕಗೊಳಿಸುವ ಮಹತ್ವವನ್ನು ಒತ್ತಿ ಹೇಳಿದರು. 'ಭಾರತ್ ಪೊಲ್' ಇಂಟರ್ ಪೋಲ್ ನಿಂದ 19 ಬಗೆಯ ದತ್ತಾಂಶಗಳಿಗೆ ಪ್ರವೇಶ ಹೊಂದಿರುತ್ತದೆ, ಇದು ಅಪರಾಧಗಳನ್ನು ವಿಶ್ಲೇಷಿಸಲು, ಅವುಗಳನ್ನು ತಡೆಗಟ್ಟಲು ಮತ್ತು ಅಪರಾಧಿಗಳನ್ನು ಬಂಧಿಸಲು ಸಹಾಯ ಮಾಡುತ್ತದೆ. ದತ್ತಾಂಶಗಳ ವಿಶ್ಲೇಷಣೆ, ಅಪರಾಧ ತಡೆ ಕಾರ್ಯತಂತ್ರಗಳು ಮತ್ತು ಅಪರಾಧಿಗಳನ್ನು ಹಿಡಿಯಲು ಹೆಚ್ಚು ಪರಿಣಾಮಕಾರಿಗೊಳಿಸಲು ಯುವ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಹೆಚ್ಚಿನ ವೇಗ ಮತ್ತು ದಕ್ಷತೆಯೊಂದಿಗೆ ಸೈಬರ್ ಅಪರಾಧಗಳಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ವ್ಯವಸ್ಥೆಯಲ್ಲಿನ ಸಾಮರ್ಥ್ಯದ ಬಗ್ಗೆ ಮಾತನಾಡಿದ  ಶ್ರೀ ಅಮಿತ್ ಶಾ ಅವರು ಸಂಪೂರ್ಣ ಉಪಕ್ರಮವನ್ನು ಕ್ರಾಂತಿಕಾರಿ ಎಂದು ವರ್ಣಿಸಿದರು. ತನಿಖಾ ಪ್ರಕ್ರಿಯೆಗಳನ್ನು ಮರು ವ್ಯಾಖ್ಯಾನಿಸುವ ಮತ್ತು ಕಾನೂನು ಜಾರಿ ವ್ಯವಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಪೋರ್ಟಲ್ ನಲ್ಲಿದೆ ಎಂದರು.

0I9A0498.JPG

ಭಾರತದಲ್ಲಿ ಇಂಟರ್‌ಪೋಲ್‌ಗಾಗಿ ನ್ಯಾಷನಲ್ ಸೆಂಟ್ರಲ್ ಬ್ಯೂರೋ ಆಗಿ (ಎನ್.ಸಿ.ಬಿ -ನವದೆಹಲಿ), ದೇಶದಾದ್ಯಂತ ವಿವಿಧ ಕಾನೂನು ಜಾರಿ ಸಂಸ್ಥೆಗಳ ಸಹಯೋಗದೊಂದಿಗೆ ಅಪರಾಧ ಪ್ರಕರಣಗಳ ಮೇಲೆ ಅಂತರಾಷ್ಟ್ರೀಯ ಸಹಕಾರವನ್ನು ಸುಲಭಗೊಳಿಸುವಲ್ಲಿ ಸಿಬಿಐ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಹಕಾರ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಹಂತದಲ್ಲಿ ಮತ್ತು ಇಂಟರ್ ಪೋಲ್ ಮಾಹಿತಿ ಅಧಿಕಾರಿ [ಐಎಲ್ಒಗಳು]ಗಳ ಮೂಲಕ ನಿರ್ವಹಣೆ ಮಾಡಲಿದೆ. ಈ ಐಎಲ್ ಒಗಳು ಘಟಕ ಅಧಿಕಾರಿಗಳ (ಯುಒಗಳು) ಜೊತೆಯಲ್ಲಿ ಕೆಲಸ ಮಾಡಲಿದ್ದಾರೆ. ಅವರು ಸಾಮಾನ್ಯವಾಗಿ ತಮ್ಮ ಸಂಸ್ಥೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಆಯುಕ್ತರು ಅಥವಾ ಶಾಖಾ ಮುಖ್ಯಸ್ಥರಂತಹ ಸ್ಥಾನಗಳನ್ನು ಹೊಂದಿದ್ದಾರೆ. ಪ್ರಸ್ತುತ, ಸಿಬಿಐ, ಐಎಲ್ ಗಳು ಮತ್ತು ಯುಒ ಗಳ ನಡುವಿನ ಸಂವಹನವನ್ನು ಪ್ರಾಥಮಿಕವಾಗಿ ಪತ್ರಗಳು, ಇಮೇಲ್‌ಗಳು ಮತ್ತು ಫ್ಯಾಕ್ಸ್‌ಗಳು ಸೇರಿದಂತೆ ಸಾಂಪ್ರದಾಯಿಕ ವಿಧಾನಗಳ ಮೂಲಕ ನಡೆಸಲಾಗುತ್ತಿತ್ತು. ಇದೀಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.

 

*****


(Release ID: 2091008) Visitor Counter : 145