ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಅಮೇರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರರು
ಭಾರತ-ಯು.ಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯಲ್ಲಿನ ಕಳೆದ ನಾಲ್ಕು ವರ್ಷಗಳ ಪ್ರಗತಿಯನ್ನು ಅವರು ಚರ್ಚಿಸಿದರು
ಅಧ್ಯಕ್ಷರಾದ ಶ್ರೀ ಬಿಡೆನ್ ಅವರೊಂದಿಗಿನ ವಿವಿಧ ಸಭೆಗಳನ್ನು, ಸಂವಾದಗಳನ್ನು ಮತ್ತು ಭೇಟಿಗಳನ್ನು ಪ್ರಧಾನಮಂತ್ರಿಯವರು
ನೆನಪಿಸಿಕೊಂಡರು ಮತ್ತು ಬಾಂಧವ್ಯಗಳನ್ನು ಬಲಪಡಿಸುವಲ್ಲಿ ಅವರ ಕೊಡುಗೆಗಳನ್ನು ಶ್ಲಾಘಿಸಿದರು
ಅಮೇರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್.ಎಸ್.ಎ) ಶ್ರೀ ಜೇಕ್ ಸುಲ್ಲಿವಾನ್ ಅವರು ಹಸ್ತಾಂತರಿಸಿದ ಅಧ್ಯಕ್ಷರಾದ ಶ್ರೀ ಬಿಡೆನ್ ಅವರ ಪತ್ರವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಸಹಕಾರವನ್ನು ಇನ್ನಷ್ಟು ಉತ್ತಮಗೊಳಿಸುವ ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು
ಅಧ್ಯಕ್ಷರಾದ ಶ್ರೀ ಬಿಡೆನ್ ಮತ್ತು ಪ್ರಥಮ ಮಹಿಳೆ ಡಾ. ಜಿಲ್ ಬಿಡೆನ್ ಅವರಿಗೆ ಪ್ರಧಾನಮಂತ್ರಿಯವರು ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು
Posted On:
06 JAN 2025 7:43PM by PIB Bengaluru
ಅಮೇರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್.ಎಸ್.ಎ) ಶ್ರೀ ಜೇಕ್ ಸುಲ್ಲಿವಾನ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಕಳೆದ ನಾಲ್ಕು ವರ್ಷಗಳಲ್ಲಿ, ವಿಶೇಷವಾಗಿ ತಂತ್ರಜ್ಞಾನ, ರಕ್ಷಣೆ, ಬಾಹ್ಯಾಕಾಶ, ನಾಗರಿಕ ಪರಮಾಣು, ಶುದ್ಧ ಶಕ್ತಿ, ಅರೆವಾಹಕಗಳು ಮತ್ತು ಕೃತಕ ಬುದ್ಧಿಮತ್ತೆ (ಎ.ಐ) ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಯು.ಎಸ್. ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ, ಇದು ಬಹಳಷ್ಟು ಸಕಾರಾತ್ಮಕ ಹಾಗೂ ಧನಾತ್ಮಕವಾಗಿದೆ ಎಂದು ಇಬ್ಬರೂ ನಾಯಕರು ಪರಸ್ಪರ ಒಪ್ಪಿಕೊಂಡರು.
ಕ್ವಾಡ್ ಲೀಡರ್ಸ್ ಶೃಂಗಸಭೆಗಾಗಿ ಸೆಪ್ಟೆಂಬರ್ 2024ರಲ್ಲಿ ಯು.ಎಸ್. ಗೆ ನೀಡಿರುವ ಭೇಟಿ ಸೇರಿದಂತೆ ಅಧ್ಯಕ್ಷ ಶ್ರೀ ಬಿಡೆನ್ ಅವರೊಂದಿಗಿನ ವಿವಿಧ ಸಭೆಗಳನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಭಾರತ-ಯು.ಎಸ್. ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಅಧ್ಯಕ್ಷ ಶ್ರೀ ಬಿಡೆನ್ ಅವರ ಕೊಡುಗೆಗಳನ್ನು ಶ್ಲಾಘಿಸಿದರು.
ಅಮೇರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್.ಎಸ್.ಎ) ಶ್ರೀ ಜೇಕ್ ಸುಲ್ಲಿವಾನ್ ಅವರು ಹಸ್ತಾಂತರಿಸಿದ ಅಧ್ಯಕ್ಷರಾದ ಶ್ರೀ ಬಿಡೆನ್ ಅವರ ಪತ್ರವನ್ನು ಪ್ರಧಾನಮಂತ್ರಿ ಬಹಳಷ್ಟು ಶ್ಲಾಘಿಸಿದರು.
ಉಭಯ ದೇಶಗಳ ಜನರ ಅನುಕೂಲಕ್ಕಾಗಿ ಮತ್ತು ಜಾಗತಿಕ ಒಳಿತಿಗಾಗಿ ಎರಡು ಪ್ರಜಾಪ್ರಭುತ್ವಗಳ ನಡುವೆ ನಿಕಟ ಸಹಕಾರವನ್ನು ಆಳವಾಗಿ ಮುಂದುವರಿಸುವ ತಮ್ಮ ಬದ್ಧತೆಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು, ಅಧ್ಯಕ್ಷರಾದ ಶ್ರೀ ಬಿಡೆನ್ ಮತ್ತು ಪ್ರಥಮ ಮಹಿಳೆ ಡಾ. ಜಿಲ್ ಬಿಡೆನ್ ಅವರಿಗೆ ಶುಭ ಹಾರೈಕೆಯನ್ನು ಕೋರಿದರು.
*****
(Release ID: 2090763)
Visitor Counter : 13
Read this release in:
Odia
,
English
,
Manipuri
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam