ಗೃಹ ವ್ಯವಹಾರಗಳ ಸಚಿವಾಲಯ
ಮಾಜಿ ಪ್ರಧಾನಮಂತ್ರಿ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅವರ ಸ್ಮೃತಿ ಸ್ಥಳ 'ಸದೈವ್ ಅಟಲ್' ನಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು
ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಅಟಲ್ ಜಿ ಅವರ ಸಮರ್ಪಣೆ ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತದೆ
ಅಟಲ್ ಜಿ ಅವರು ಸಿದ್ಧಾಂತ ಮತ್ತು ಮೌಲ್ಯಾಧಾರಿತ ರಾಜಕಾರಣದ ಕಡೆಗೆ ತಮ್ಮ ಸಮರ್ಪಣೆಯೊಂದಿಗೆ ದೇಶದಲ್ಲಿ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಹೊಸ ಯುಗವನ್ನು ಪ್ರಾರಂಭಿಸಿದರು
ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಕೆಲಸದ ಸಂಸ್ಕೃತಿಯನ್ನಾಗಿ ಮಾಡಿದ ವಾಜಪೇಯಿ ಅವರು ಯಾವಾಗಲೂ ದೇಶದ ಭದ್ರತೆ ಮತ್ತು ಸಾರ್ವಜನಿಕ ಕಲ್ಯಾಣವನ್ನು ಜೀವನದಲ್ಲಿ ಪ್ರಮುಖ ಧ್ಯೇಯವಾಗಿ ಇಟ್ಟುಕೊಂಡಿದ್ದರು
ದೇಶ ಸೇವೆಯ ಹಾದಿಯಲ್ಲಿ ಅಟಲ್ ಜಿ ಅವರು ಧ್ರುವ ನಕ್ಷತ್ರದಂತೆ ಶಾಶ್ವತವಾಗಿ ದೇಶವಾಸಿಗಳಿಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತಾರೆ
Posted On:
25 DEC 2024 12:55PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಾಜಿ ಪ್ರಧಾನಮಂತ್ರಿ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಸ್ಮೃತಿ ಸ್ಥಳ 'ಸದೈವ್ ಅಟಲ್' ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಸಾಮಾಜಿಕ ವೇದಿಕೆ ಎಕ್ಸ್ ನಲ್ಲಿನ ತಮ್ಮ ಖಾತೆಯ ಸರಣಿ ಸಂದೇಶಗಳಲ್ಲಿ, ಶ್ರೀ ಅಮಿತ್ ಶಾ ಅವರು "ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಅಟಲ್ ಜಿ ಅವರ ಸಮರ್ಪಣೆ ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ" ಎಂದು ಹೇಳಿದರು. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಅವರ ಮುಂದೆ ನಮಸ್ಕರಿಸಿದ ಕೇಂದ್ರ ಸಚಿವ ಶ್ರೀ ಶಾ ಅವರು, " ಅಟಲ್ ಜಿ ಅವರು ಸಿದ್ಧಾಂತ ಮತ್ತು ಮೌಲ್ಯಾಧಾರಿತ ರಾಜಕೀಯದ ಕಡೆಗೆ ತಮ್ಮ ಸಮರ್ಪಣೆಯೊಂದಿಗೆ ದೇಶದಲ್ಲಿ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಹೊಸ ಯುಗವನ್ನು ಪ್ರಾರಂಭಿಸಿದರು. ವಾಜಪೇಯಿ ಅವರು ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ತಮ್ಮ ದೈನಂದಿನ ಕೆಲಸದ ಸಂಸ್ಕೃತಿಯನ್ನಾಗಿ ಮಾಡಿದರು ಮತ್ತು ದೇಶದ ಭದ್ರತೆ ಮತ್ತು ಸಾರ್ವಜನಿಕ ಕಲ್ಯಾಣವನ್ನು ಯಾವಾಗಲೂ ಪ್ರಮುಖವಾಗಿ ಭಾವಿಸಿ ಅದರಂತೆ ನೆಡೆಯುತ್ತಿದ್ದರು" ಎಂದು ಅವರು ಹೇಳಿದರು. "ಅಟಲ್ ಜೀ ಅವರು ಧ್ರುವ ನಕ್ಷತ್ರದಂತೆ ಚಿರಂತನವಾಗಿ ದೇಶಸೇವೆಯ ಹಾದಿಯಲ್ಲಿ ದೇಶವಾಸಿಗಳಿಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತಾರೆ" ಎಂದು ಅವರು ತಮ್ಮ ಸಂದೇಶದಲ್ಲಿ ಹೇಳಿದರು.
*****
(Release ID: 2087895)
Visitor Counter : 11