ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕುವೈತ್ ರಾಜಕುಮಾರನನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

Posted On: 22 DEC 2024 5:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕುವೈತ್ ನ ಯುವರಾಜರಾದ ಗೌರವಾನ್ವಿತ ಶೇಖ್ ಸಬಾಹ್ ಅಲ್-ಖಾಲಿದ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾಹ್ ಅವರನ್ನು ಭೇಟಿ ಮಾಡಿದರು. 2024ರ ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಘನತೆವೆತ್ತ ಯುವರಾಜರನ್ನು ತಾವು ಭೇಟಿ ಮಾಡಿದ್ದನ್ನು ಪ್ರಧಾನಮಂತ್ರಿಯವರು ಪ್ರೀತಿಯಿಂದ ಸ್ಮರಿಸಿದರು.

ಕುವೈತ್ ನೊಂದಿಗಿನ ದ್ವಿಪಕ್ಷೀಯ ಸಂಬಂಧಗಳಿಗೆ ಭಾರತ ಅತ್ಯಂತ ಮಹತ್ವ ನೀಡುವುದಾಗಿ ಪ್ರಧಾನಿಯವರು ತಿಳಿಸಿದರು. ದ್ವಿಪಕ್ಷೀಯ ಸಂಬಂಧಗಳು ಉತ್ತಮವಾಗಿ ಪ್ರಗತಿ ಸಾಧಿಸುತ್ತಿವೆ ಎಂದು ಉಭಯ ನಾಯಕರು ಒಪ್ಪಿಕೊಂಡು, ವ್ಯೂಹಾತ್ಮಕ ಪಾಲುದಾರಿಕೆಗೆ ಉಭಯ ದೇಶಗಳ ಉನ್ನತಿಯನ್ನು ಸ್ವಾಗತಿಸಿದರು. ವಿಶ್ವಸಂಸ್ಥೆ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ಎರಡೂ ದೇಶಗಳ ನಡುವೆ ನಿಕಟ ಸಮನ್ವಯಕ್ಕೆ ಅವರು ಒತ್ತು ನೀಡಿದರು. ಕುವೈತ್ ಅಧ್ಯಕ್ಷತೆಯ ಅಡಿಯಲ್ಲಿ ಭಾರತ-ಜಿಸಿಸಿ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿವೆ ಎಂಬ ವಿಶ್ವಾಸವನ್ನು ಪ್ರಧಾನಿಯವರು ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯವರು ಪರಸ್ಪರ ಅನುಕೂಲಕರ ದಿನಾಂಕದಂದು ಭಾರತಕ್ಕೆ ಭೇಟಿ ನೀಡುವಂತೆ ಕುವೈತ್ ನ ಯುವರಾಜರಿಗೆ ಆಹ್ವಾನ ನೀಡಿದರು.

ಗೌರವಾನ್ವಿತ ಕುವೈತ್ ನ ಯುವರಾಜರು ಪ್ರಧಾನಮಂತ್ರಿಯವರ ಗೌರವಾರ್ಥವಾಗಿ ಔತಣಕೂಟವನ್ನು ಏರ್ಪಡಿಸಿದ್ದರು.

 

*****


(Release ID: 2087128) Visitor Counter : 10