ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರಿಗೆ ಕುವೈತ್‌ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Posted On: 22 DEC 2024 4:48PM by PIB Bengaluru

ಕುವೈತ್‌ನ ಅಮೀರ್ ಆಗಿರುವ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಬೇರ್ ಅಲ್-ಸಬಾಹ್ ಅವರು ಕುವೈತ್‌ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಮುಬಾರಕ್ ಅಲ್-ಕಬೀರ್ ಆರ್ಡರ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಪ್ರದಾನ ಮಾಡಿದರು. ಕುವೈತ್‌ ಪ್ರಧಾನಿ ಶೇಖ್ ಅಹ್ಮದ್ ಅಲ್-ಅಬ್ದುಲ್ಲಾ ಅಲ್-ಅಹ್ಮದ್ ಅಲ್-ಸಬಾಹ್ ಅವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾರತ ಮತ್ತು ಕುವೈತ್ ನಡುವಿನ ದೀರ್ಘಕಾಲದ ಮೈತ್ರಿಗೆ ಹಾಗೂ ಕುವೈತ್‌ನಲ್ಲಿರುವ ಭಾರತೀಯ ಸಮುದಾಯ ಮತ್ತು ಭಾರತದ 1.4 ಶತಕೋಟಿ ಜನರಿಗೆ ಪ್ರಧಾನಮಂತ್ರಿಯವರು ಈ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ.

ಭಾರತದ ಪ್ರಧಾನಿಯೊಬ್ಬರು 43 ವರ್ಷಗಳ ನಂತರ ಕುವೈತ್‌ಗೆ ಐತಿಹಾಸಿಕ ಭೇಟಿ ನೀಡಿದಾಗ ಪ್ರಶಸ್ತಿ ಪ್ರದಾನ ಮಾಡಿರುವುದು ಈ ಸಂದರ್ಭಕ್ಕೆ ವಿಶೇಷ ಮೆರುಗು ನೀಡಿದೆ.

ಪ್ರಶಸ್ತಿಯನ್ನು 1974ರಲ್ಲಿ ಸ್ಥಾಪಿಸಲಾಗಿದ್ದು ಆಯ್ದ ಜಾಗತಿಕ ನಾಯಕರಿಗೆ ನೀಡಲಾಗುತ್ತಿದೆ.

 

*****


(Release ID: 2087078) Visitor Counter : 10