ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) 61ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು
ಕೇಂದ್ರ ಗೃಹ ಸಚಿವರು ಅಗರ್ ತಲಾ ಸಮಗ್ರ ಚೆಕ್ ಪಾಯಿಂಟ್ (ಐಸಿಪಿ) ಮತ್ತು ಪೆಟ್ರಾಪೋಲ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಬಿಜಿಎಫ್ ವಸತಿ ಸಂಕೀರ್ಣವನ್ನು ಇ-ಉದ್ಘಾಟಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಕೇಂದ್ರ ಸರ್ಕಾರವು ಆಯುಷ್ಮಾನ್ ಕಾರ್ಡ್, ಬ್ಯಾರಕ್‌ಗಳು, ಸಿ ಎ ಪಿ ಎಫ್ ಇ-ವಸತಿ, ವಿದ್ಯಾರ್ಥಿವೇತನಗಳಂತಹ ಯೋಜನೆಗಳ ಮೂಲಕ ಸಿಎಪಿಎಫ್ ಸಿಬ್ಬಂದಿಯ ಜೀವನವನ್ನು ಸುಲಭಗೊಳಿಸುತ್ತಿದೆ
ಗಡಿ ಪ್ರದೇಶದ ಯುವಕರಿಗೆ ತರಬೇತಿ ನೀಡುವ ಮೂಲಕ ಎಸ್‌ಎಸ್‌ಬಿ ಜವಾನರು ಸ್ವಯಂ ಉದ್ಯೋಗವನ್ನು ಉತ್ತೇಜಿಸುತ್ತಿದ್ದಾರೆ
ಗಡಿ ಗ್ರಾಮಗಳ ಸಂಸ್ಕೃತಿ, ಭಾಷೆ ಮತ್ತು ಶ್ರೀಮಂತ ಪರಂಪರೆಯನ್ನು ದೇಶದ ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸುವ ವಿಶಿಷ್ಟ ಕೆಲಸವನ್ನು ಎಸ್‌ಎಸ್‌ಬಿ ಮಾಡಿದೆ
ಸಶಸ್ತ್ರ ಸೀಮಾ ಬಲ ತನ್ನ ಕರ್ತವ್ಯಗಳ ಮೂಲಕ ಸೇವೆ, ಭದ್ರತೆ ಮತ್ತು ಸಹೋದರತ್ವ ಎಂಬ ಧ್ಯೇಯವಾಕ್ಯವನ್ನು ಪೂರೈಸಿದೆ
ಎಸ್‌ಎಸ್‌ಬಿ ನೇಪಾಳ ಮತ್ತು ಭೂತಾನ್‌ನೊಂದಿಗೆ ನಂಬಿಕೆ, ಪರಂಪರೆ ಮತ್ತು ಸ್ನೇಹದ ಸಂಸ್ಕೃತಿಯನ್ನು ಉತ್ತೇಜಿಸಿದೆ
ಸರ್ಕಾರಿ ಭೂಮಿಯಿಂದ ಅತಿಕ್ರಮಣವನ್ನು ತೆಗೆದುಹಾಕಲು, ಮಾದಕವಸ್ತುಗಳು, ಶಸ್ತ್ರಾಸ್ತ್ರಗಳು, ವನ್ಯಜೀವಿಗಳು, ಅರಣ್ಯ ಉತ್ಪನ್ನಗಳು ಮತ್ತು ನಕಲಿ ನೋಟುಗಳ ಕಳ್ಳಸಾಗಣೆಯನ್ನು ಶೂನ್ಯ ಸಹಿಷ್ಣು ನೀತಿಯೊಂದಿಗೆ ನಿಲ್ಲಿಸಲು ಎಸ್‌ಎಸ್‌ಬಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ
ಎಸ್‌ಎಸ್‌ಬಿಯ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದಾಗಿ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳು ಇಂದು ನಕ್ಸಲ್ ಮುಕ್ತವಾಗಿವೆ
ಪ್ರವಾಹ ಅಥವಾ ಭೂಕುಸಿತವಾಗಿರಲಿ, ಎಸ್‌ಎಸ್‌ಬಿ ಜವಾನರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ
Posted On:
20 DEC 2024 5:02PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) 61ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಕೇಂದ್ರ ಗೃಹ ಸಚಿವರು ಅಗರ್ತಲಾದ ಸಮಗ್ರ ಚೆಕ್ ಪಾಯಿಂಟ್ (ಐಸಿಪಿ) ಮತ್ತು ಪೆಟ್ರಾಪೋಲ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಬಿಜಿಎಫ್ ವಸತಿ ಸಂಕೀರ್ಣವನ್ನು ಇ-ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರು (ಐಬಿ), ಗಡಿ ನಿರ್ವಹಣಾ ಕಾರ್ಯದರ್ಶಿ, ಗೃಹ ಸಚಿವಾಲಯ, ಡಿಜಿ, ಎಸ್‌ಎಸ್‌ಬಿ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.
ತಮ್ಮ ಭಾಷಣದ ಆರಂಭದಲ್ಲಿ, ಕೇಂದ್ರ ಗೃಹ ಸಚಿವರು ದೇಶದ ಗಡಿಗಳನ್ನು ರಕ್ಷಿಸುವಲ್ಲಿ ಮತ್ತು ಪೂರ್ವ ಪ್ರದೇಶದಿಂದ ಎಡಪಂಥೀಯ ಉಗ್ರವಾದವನ್ನು ನಿರ್ಮೂಲನೆ ಮಾಡುವಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಧೈರ್ಯಶಾಲಿ ಸೈನಿಕರಿಗೆ ಗೌರವ ಸಲ್ಲಿಸಿದರು. ತಮ್ಮ ಧೈರ್ಯಶಾಲಿ ಪುತ್ರರ ತ್ಯಾಗವು ದೇಶಕ್ಕೆ ಹೊಸ ಜೀವನ, ಶಕ್ತಿ ಮತ್ತು ಉತ್ಸಾಹವನ್ನು ನೀಡಿದೆ ಮತ್ತು ಇಡೀ ದೇಶವು ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದು ಗೃಹ ಸಚಿವರು ಹುತಾತ್ಮರ ಕುಟುಂಬಗಳಿಗೆ ತಿಳಿಸಿದರು. 61 ವರ್ಷಗಳಲ್ಲಿಎಸ್‌ಎಸ್‌ಬಿ 4 ಪದ್ಮಶ್ರೀ, 1 ಕೀರ್ತಿ ಚಕ್ರ, 6 ಶೌರ್ಯ ಚಕ್ರ, 2 ರಾಷ್ಟ್ರಪತಿಗಳ ಶೌರ್ಯ ಪದಕಗಳು, 25 ಪೊಲೀಸ್ ಶೌರ್ಯ ಪದಕಗಳು ಮತ್ತು 35 ಶೌರ್ಯ ಪದಕಗಳನ್ನು ಪಡೆದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎಸ್‌ಎಸ್‌ಬಿ ಸ್ವೀಕರಿಸಿದ ಈ ರಾಷ್ಟ್ರೀಯ ಮಟ್ಟದ ಗೌರವಗಳು ಎಸ್‌ಎಸ್‌ಬಿ ಜವಾನರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಎಷ್ಟು ದೃಢನಿಶ್ಚಯ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಭಾರತದ ಗಡಿ ಗ್ರಾಮಗಳ ಸಂಸ್ಕೃತಿ, ಭಾಷೆ ಮತ್ತು ಶ್ರೀಮಂತ ಪರಂಪರೆಯನ್ನು ದೇಶದ ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸುವ ವಿಶಿಷ್ಟ ಕೆಲಸವನ್ನು ಸಶಸ್ತ್ರ ಸೀಮಾ ಬಲ ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎಸ್‌ಎಸ್‌ಬಿ ತನ್ನ ಕರ್ತವ್ಯಗಳ ಮೂಲಕ ಸೇವೆ, ಭದ್ರತೆ ಮತ್ತು ಸಹೋದರತ್ವ ಎಂಬ ಧ್ಯೇಯವಾಕ್ಯವನ್ನು ಪೂರೈಸಿದೆ ಎಂದು ಅವರು ಹೇಳಿದರು. ನೇಪಾಳ ಮತ್ತು ಭೂತಾನ್‌ನೊಂದಿಗೆ ವಿಶ್ವಾಸ, ಪರಂಪರೆ ಮತ್ತು ಸ್ನೇಹದ ಸಂಪ್ರದಾಯಗಳನ್ನು ಎಸ್‌ಎಸ್‌ಬಿ ಮುಂದುವರಿಸಿಕೊಂಡು ಹೋಗಿದೆ ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಒಂದು ಗಡಿ, ಒಂದು ಪಡೆ ನೀತಿಯನ್ನು ಅಳವಡಿಸಿಕೊಂಡಿದ್ದರು, ನಂತರ ಎಸ್‌ಎಸ್‌ಬಿಗೆ ನೇಪಾಳ ಮತ್ತು ಭೂತಾನ್ ಗಡಿಯ ಜಾಗರೂಕತೆ ಮತ್ತು ಭದ್ರತೆಯ ಜವಾಬ್ದಾರಿಯನ್ನು ನೀಡಲಾಯಿತು ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. 1963 ರಲ್ಲಿ ಸ್ಥಾಪನೆಯಾದಾಗಿನಿಂದ, ಎಸ್‌ಎಸ್‌ಬಿ ಗಡಿ ಗ್ರಾಮಗಳಲ್ಲಿ ಭಾರತದೊಂದಿಗೆ ದೇಶಭಕ್ತಿ ಮತ್ತು ಬಾಂಧವ್ಯದ ದೊಡ್ಡ ಪ್ರಜ್ಞೆಯನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು. ನೇಪಾಳ ಮತ್ತು ಭೂತಾನ್‌ನೊಂದಿಗಿನ 2450 ಕಿಲೋಮೀಟರ್ ಉದ್ದದ ಭಾರತೀಯ ಗಡಿಯಲ್ಲಿಎಸ್‌ಎಸ್ ಬಿ ಜವಾನರು ಕಾವಲು ನಿಂತಿರುವುದರಿಂದ ದೇಶವಾಸಿಗಳಿಗೆ ಅವರ ಸುರಕ್ಷತೆಯ ಭರವಸೆ ಇದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಎಸ್‌ಎಸ್‌ಬಿ ತನ್ನ 61 ವರ್ಷಗಳ ಭವ್ಯ ಇತಿಹಾಸದಲ್ಲಿ ಸೇವೆ, ಭದ್ರತೆ ಮತ್ತು ಭ್ರಾತೃತ್ವದ ಘೋಷಣೆ ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಮನೋಭಾವ, ಭಕ್ತಿ ಮತ್ತು ರಾಷ್ಟ್ರಕ್ಕೆ ಮೊದಲು ಎಂಬ ಘೋಷಣೆಯನ್ನು ಸಾಕಾರಗೊಳಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮಾದಕವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಗಡಿಯಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳ ಒಳನುಸುಳುವಿಕೆಯನ್ನು ಎಸ್‌ಎಸ್‌ಬಿ ಜವಾನರು ಬಹಳ ಪೂರ್ವಭಾವಿಯಾಗಿ ನಿಲ್ಲಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಸಿಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸ್ ಪಡೆಗಳ ಸಮನ್ವಯದೊಂದಿಗೆ ಇಡೀ ಪೂರ್ವ ಪ್ರದೇಶವನ್ನು ನಕ್ಸಲ್ ಮುಕ್ತವಾಗಿಸುವಲ್ಲಿಎಸ್‌ಎಸ್‌ಬಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.
ಸುಮಾರು ನಾಲ್ಕು ದಶಕಗಳ ನಂತರ ಬಿಹಾರ ಮತ್ತು ಜಾರ್ಖಂಡ್‌ಅನ್ನು ನಕ್ಸಲ್ ಮುಕ್ತಗೊಳಿಸುವಲ್ಲಿಎಸ್‌ಎಸ್‌ಬಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸಿಲಿಗುರಿ ಕಾರಿಡಾರ್ ಪೂರ್ವ ಭಾರತದ ಅತ್ಯಂತ ಪ್ರಮುಖ ಪ್ರದೇಶವಾಗಿದೆ ಮತ್ತು ಇಲ್ಲಿ ಎಸ್‌ಎಸ್‌ಬಿಯನ್ನು ನಿಯೋಜಿಸುವುದು ಇಡೀ ರಾಷ್ಟ್ರಕ್ಕೆ ಭರವಸೆ ಮತ್ತು ವಿಶ್ವಾಸಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ಎಸ್‌ಎಸ್‌ಬಿಯ ಜಾಗರೂಕತೆಯಿಂದಾಗಿ, ಪೂರ್ವ ವಲಯದಲ್ಲಿ ವಿಶ್ವಾಸದ ವಾತಾವರಣವನ್ನು ಸೃಷ್ಟಿಸುವಲ್ಲಿನಾವು ಯಶಸ್ವಿಯಾಗಿದ್ದೇವೆ ಎಂದು ಅವರು ಹೇಳಿದರು.
ಭಾರತ ಮತ್ತು ನೇಪಾಳದ ನಡುವಿನ ಸ್ನೇಹ ಸಂಬಂಧಗಳ ಘನತೆಯನ್ನು ಗೌರವಿಸುವಾಗ, ಎಸ್‌ಎಸ್‌ಬಿಯಿಂದ ನೋ ಮ್ಯಾನ್ಸ್ ಲ್ಯಾಂಡ್‌ನಲ್ಲಿ1100 ಕ್ಕೂ ಹೆಚ್ಚು ಅತಿಕ್ರಮಣಗಳನ್ನು ತೆಗೆದುಹಾಕಿರುವುದು ದೊಡ್ಡ ಸಾಧನೆಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಗಡಿಯ 15 ಕಿ.ಮೀ ವ್ಯಾಪ್ತಿಯಲ್ಲಿನ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡದಂತೆ ಎಸ್‌ಎಸ್‌ಬಿ ಕಳೆದ 3 ವರ್ಷಗಳಲ್ಲಿ ಶೂನ್ಯ ಸಹಿಷ್ಣು ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಶ್ರೀ ಶಾ ಹೇಳಿದರು. ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸುವಲ್ಲಿಎಸ್‌ಎಸ್‌ಬಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಶೂನ್ಯ ಸಹಿಷ್ಣು ನೀತಿಯೊಂದಿಗೆ ಸರ್ಕಾರಿ ಭೂಮಿಯಿಂದ ಅತಿಕ್ರಮಣವನ್ನು ತೆಗೆದುಹಾಕಲು, ಮಾದಕವಸ್ತುಗಳು, ಶಸ್ತ್ರಾಸ್ತ್ರಗಳು, ವನ್ಯಜೀವಿಗಳು, ಅರಣ್ಯ ಉತ್ಪನ್ನಗಳು ಮತ್ತು ಖೋಟಾ ನೋಟುಗಳ ಕಳ್ಳಸಾಗಣೆಯನ್ನು ನಿಲ್ಲಿಸಲು ಎಸ್‌ಎಸ್‌ಬಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎಸ್‌ಎಸ್‌ಬಿ 4,000 ಕ್ಕೂ ಹೆಚ್ಚು ಕಳ್ಳಸಾಗಣೆದಾರರು, 16,000 ಕೆ.ಜಿಗೂ ಹೆಚ್ಚು ಮಾದಕವಸ್ತುಗಳು, 208 ಶಸ್ತ್ರಾಸ್ತ್ರಗಳು ಮತ್ತು ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದರು. ಎಸ್‌ಎಸ್‌ಬಿ 183 ಮಾನವ ಕಳ್ಳಸಾಗಣೆದಾರರನ್ನು ಬಂಧಿಸಿದೆ ಮತ್ತು 231 ಹುಡುಗಿಯರು ಸೇರಿದಂತೆ 301 ಸಂತ್ರಸ್ತರನ್ನು ರಕ್ಷಿಸಿದೆ ಎಂದು ಅವರು ಹೇಳಿದರು. ಮಹಿಳೆಯರ ಘನತೆಯನ್ನು ರಕ್ಷಿಸುವಲ್ಲಿ ಎಸ್‌ಎಸ್‌ಬಿ ಖಂಡಿತವಾಗಿಯೂ ದೊಡ್ಡ ಪಾತ್ರ ವಹಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಭಯೋತ್ಪಾದನೆ ಪೀಡಿತ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಎಸ್‌ಎಸ್‌ಬಿ ತನ್ನ ಕರ್ತವ್ಯವನ್ನು ಸಂಪೂರ್ಣ ಜಾಗರೂಕತೆಯಿಂದ ನಿರ್ವಹಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿಎಸ್‌ಎಸ್‌ಬಿಯ ನಿಯೋಜನೆಯು ಎಲ್ಲಾ ಭದ್ರತಾ ಪಡೆಗಳಿಗೆ ದೊಡ್ಡ ಉತ್ತೇಜನ ನೀಡಿದೆ ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ, ಎಸ್‌ಎಸ್‌ಬಿ ಜವಾನರು ವಿವಿಧ ಕಾರ್ಯಾಚರಣೆಗಳಲ್ಲಿ19ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿದ್ದಾರೆ ಮತ್ತು 14 ಭಯೋತ್ಪಾದಕರನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವರು ಹೇಳಿದರು. ಕಳೆದ 7 ವರ್ಷಗಳಲ್ಲಿ ಎಸ್‌ಎಸ್‌ಬಿ 600ಕ್ಕೂ ಹೆಚ್ಚು ಮಾವೋವಾದಿಗಳನ್ನು ಬಂಧಿಸಿದೆ, 15ಕ್ಕೂ ಹೆಚ್ಚು ಮಾವೋವಾದಿಗಳನ್ನು ಕೊಂದಿದೆ ಮತ್ತು ಎಸ್‌ಎಸ್‌ಬಿಯ ದಮನದಿಂದಾಗಿ 28 ಮಾವೋವಾದಿಗಳು ಶರಣಾಗಿದ್ದಾರೆ ಎಂದು ಅವರು ಹೇಳಿದರು.
ಎಸ್‌ಎಸ್‌ಬಿಯ ಕರ್ತವ್ಯಗಳು ಭದ್ರತೆಗೆ ಸೀಮಿತವಾಗಿಲ್ಲಆದರೆ ಪಡೆ ವಿವಿಧ ಪರಿಹಾರ ಕಾರ್ಯಾಚರಣೆಗಳಲ್ಲಿ ಸೇರಿಕೊಂಡಿದೆ ಮತ್ತು ವಿಪತ್ತುಗಳ ಸಮಯದಲ್ಲಿಸಂಪೂರ್ಣ ಸಿದ್ಧತೆಯೊಂದಿಗೆ ಜನರಿಗೆ ಸಹಾಯ ಮಾಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರವಾಹ ಅಥವಾ ಭೂಕುಸಿತವಾಗಿರಲಿ, ಈ ಯೋಧರು ತಮ್ಮ ಜೀವವನ್ನು ಲೆಕ್ಕಿಸದೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ ಮತ್ತು ದೇಶದ ಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ ಎಂದು ಅವರು ಹೇಳಿದರು. ಎಸ್‌ಎಸ್‌ಬಿ ಜವಾನರ ನಿಸ್ವಾರ್ಥ ಸೇವೆ ಮತ್ತು ದೃಢನಿಶ್ಚಯವು ಲಕ್ಷಾಂತರ ಜನರ ಜೀವವನ್ನು ಉಳಿಸಿದೆ ಮತ್ತು ಇದು ದೇಶದ ಜನರ ಹೃದಯದಲ್ಲಿಎಸ್‌ಎಸ್‌ಬಿ ಬಗ್ಗೆ ಉತ್ತಮ ಭಾವನೆಯನ್ನು ಸೃಷ್ಟಿಸಿದೆ ಎಂದು ಶ್ರೀ ಅಣಿತ್ ಶಾ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು ಆಯುಷ್ಮಾನ್ ಕಾರ್ಡ್, ಬ್ಯಾರಕ್‌ಗಳು, ಸಿಎಪಿಎಫ್ ಇ-ವಸತಿ ಮತ್ತು ವಿದ್ಯಾರ್ಥಿವೇತನಗಳಂತಹ ಯೋಜನೆಗಳ ಮೂಲಕ ಸಿಎಪಿಎಫ್ ಸಿಬ್ಬಂದಿಯ ಜೀವನವನ್ನು ಸುಲಭಗೊಳಿಸುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕಳೆದ 10 ವರ್ಷಗಳಲ್ಲಿನರೇಂದ್ರ ಮೋದಿ ಸರ್ಕಾರವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಕಲ್ಯಾಣಕ್ಕಾಗಿ 41 ಲಕ್ಷ ಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್‌ಗಳನ್ನು ಮಾಡಿದೆ, ಇದರ ಮೂಲಕ 1600 ಕೋಟಿ ರೂ. ವೆಚ್ಚದಲ್ಲಿ13,000 ಮನೆಗಳು, 113 ಬ್ಯಾರಕ್ ಗಳು ಮತ್ತು ಇ-ಆವಾಸ್ ಪೋರ್ಟಲ್‌ಅನ್ನು ರಚಿಸಲಾಗಿದ್ದು, ಇದರ ಮೂಲಕ ಸಾವಿರಾರು ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಈವರೆಗೆ 6 ಲಕ್ಷ 31 ಸಾವಿರ 346 ಪಡೆ ಸಿಬ್ಬಂದಿ ಸಿಎಪಿಎಫ್ ಇ-ಹೌಸಿಂಗ್ ಪೋರ್ಟಲ್‌ನ ಪ್ರಯೋಜನ ಪಡೆದಿದ್ದಾರೆ ಎಂದು ಅವರು ಹೇಳಿದರು.
ಕ್ರೀಡಾ ಕ್ಷೇತ್ರದಲ್ಲೂಎಸ್‌ಎಸ್‌ಬಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿಅದ್ಭುತ ಪ್ರದರ್ಶನ ನೀಡಿದೆ ಮತ್ತು ದೇಶಕ್ಕೆ 72 ಪದಕಗಳನ್ನು ಗೆದ್ದಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಎಸ್‌ಎಸ್‌ಬಿಯ ತರಬೇತಿ ಪಡೆದ ಸಿಬ್ಬಂದಿ ಗಡಿ ಪ್ರದೇಶದ ಯುವಕರಿಗೆ ಜೇನು ಸಾಕಾಣಿಕೆ, ಕಂಪ್ಯೂಟರ್, ಮೊಬೈಲ್ ರಿಪೇರಿ ಮತ್ತು ಚಾಲನೆಯಂತಹ ಅನೇಕ ಕ್ಷೇತ್ರಗಳಲ್ಲಿತರಬೇತಿ ನೀಡುವ ಮೂಲಕ ಸ್ವಯಂ ಉದ್ಯೋಗಕ್ಕೆ ಸಿದ್ಧಪಡಿಸಿದ್ದಾರೆ ಎಂದು ಅವರು ಹೇಳಿದರು. ಇದರೊಂದಿಗೆ, ನಶಾ ಮುಕ್ತ್ ಭಾರತ್ ಅಭಿಯಾನದ ಅಡಿಯಲ್ಲಿ, ಎಸ್‌ಎಸ್‌ಬಿ ಸುಮಾರು 36000 ಯುವಕರಿಗೆ ಮಾದಕ ವ್ಯಸನದ ಪಿಡುಗಿನ ಬಗ್ಗೆ ಅರಿವು ಮೂಡಿಸುವಲ್ಲಿದೊಡ್ಡ ಕೊಡುಗೆ ನೀಡಿದೆ. ಸಿಎಪಿಎಫ್‌ಗಳ ಮರ ನೆಡುವ ಅಭಿಯಾನವನ್ನು ಎಸ್‌ಎಸ್‌ಬಿ ಮುನ್ನಡೆಸಿದೆ ಮತ್ತು ನಮ್ಮ ಸಿಎಪಿಎಫ್ ಜವಾನರು 2024ರ ನವೆಂಬರ್ 15 ರವರೆಗೆ 6 ಕೋಟಿಗೂ ಹೆಚ್ಚು ಮರಗಳನ್ನು ನೆಡುವ ಮೂಲಕ ಭೂಮಿ ತಾಯಿಗೆ ಸೇವೆ ಸಲ್ಲಿಸಿದ್ದಾರೆ ಎಂದು ಗೃಹ ಸಚಿವರು ಹೇಳಿದರು.
*****
(Release ID: 2086639)
Visitor Counter : 10