ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024- ಭಾರತೀಯ ಚಿತ್ರರಂಗದ ಭವಿಷ್ಯವನ್ನು ಪೋಷಿಸುವ ಗುರಿ ಹೊಂದಿದೆ
ಹೌದು, #TheFutureIsNow. 55ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) ರಾಷ್ಟ್ರದಾದ್ಯಂತದ ಯುವ ಚಲನಚಿತ್ರ ನಿರ್ಮಾತೃಗಳ ಪ್ರತಿಭೆ, ಸೃಜನಶೀಲತೆ ಮತ್ತು ಒಲವನ್ನು ಗುರುತಿಸುವ ಮೂಲಕ ಭಾರತೀಯ ಚಿತ್ರರಂಗದ ಭವಿಷ್ಯವನ್ನು ಆಚರಿಸುತ್ತದೆ. ಸಿನಿಮಾ ಕಲೆ ಮತ್ತು ಕಥಾ ನಿರೂಪಣೆಯ ಉತ್ಕೃಷ್ಟತೆಗಳನ್ನು ಸಿನಿಮಾ ವಿದ್ಯಾರ್ಥಿಗಳಿಗೆ ತೆರೆದಿಡುವ ಅಗತ್ಯವನ್ನು ಮನಗಂಡು, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಮೂಲಕ ಈ ಪ್ರತಿಷ್ಠಿತ ಉತ್ಸವದಲ್ಲಿ ಸುಮಾರು 350 ಸಿನಿಮಾ ಮತ್ತು ಸಂವಹನ ವಿದ್ಯಾರ್ಥಿಗಳಿಗೆ ಆತಿಥ್ಯ ವಹಿಸಲು ಹೆಮ್ಮೆಪಡುತ್ತದೆ.
ಈ ವರ್ಷದ ಯುವ ಸಿನಿಮಾ ನಿರ್ಮಾತೃ ಕಾರ್ಯಕ್ರಮವು ಭಾರತದಾದ್ಯಂತ 13 ಹೆಸರಾಂತ ಚಲನಚಿತ್ರ ಸಂಸ್ಥೆಗಳಿಂದ ಈಶಾನ್ಯ ಭಾರತದ 67 ಪ್ರತಿಭಾವಂತ ಚಲನಚಿತ್ರ ನಿರ್ಮಾತೃಗಳು ಸೇರಿದಂತೆ 279 ಉದಯೋನ್ಮುಖ ಚಲನಚಿತ್ರ ನಿರ್ಮಾತೃಗಳನ್ನು ಒಟ್ಟುಗೂಡಿಸಿದೆ.
ಸಿನಿಮಾದ ರೋಮಾಂಚಕ ಜಗತ್ತಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅನನ್ಯ ಅವಕಾಶವನ್ನು ಈ ಸಿನಿಮೋತ್ಸವದಲ್ಲಿ ಪಾಲ್ಗೊಂಡವರಿಗೆ ನೀಡಲಾಗುತ್ತಿದೆ:
ಅಂತಾರಾಷ್ಟ್ರೀಯ ಮತ್ತು ಭಾರತೀಯ ಚಲನಚಿತ್ರಗಳ ಪ್ರದರ್ಶನ: ವಿಶ್ವ ಸಿನಿಮಾದಲ್ಲಿನ ಇತ್ತೀಚಿನ ಮತ್ತು ಪ್ರಸಿದ್ಧ ಭಾರತೀಯ ಚಲನಚಿತ್ರಗಳ ಪ್ರದರ್ಶನದ ಮೂಲಕ ವೈವಿಧ್ಯಮಯ ಕಥಾ ನಿರೂಪಣಾ ಶೈಲಿಗಳ ಆಳವಾದ ಅರ್ಥೈಸುವಿಕೆಯ ಪೋಷಣೆ.
ಮಾಸ್ಟರ್ಕ್ಲಾಸ್ಗಳು ಮತ್ತು ಚರ್ಚೆಗಳು: ಜಾಗತಿಕ ಮತ್ತು ಭಾರತೀಯ ಚಲನಚಿತ್ರ ವೃತ್ತಿಪರರೊಂದಿಗೆ ತೊಡಗಿಸಿಕೊಳ್ಳುತ್ತಾ ಚಲನಚಿತ್ರ ನಿರ್ಮಾಣದ ಕಲೆ ಮತ್ತು ಕೌಶಲ್ಯದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯುವುದು.
ಇಫಿಎಸ್ಟಾ ಸಾಂಸ್ಕೃತಿಕ ಕಾರ್ಯಕ್ರಮಗಳು: ಉತ್ಸವದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಕಲಾತ್ಮಕತೆಯ ಒಟ್ಟುಗೂಡಿದ ಶಕ್ತಿಯ ಅನುಭೂತಿ
ಫಿಲ್ಮ್ ಬಜಾರ್: ವಿದ್ಯಾರ್ಥಿಗಳು ಫಿಲ್ಮ್ ಬಜಾರ್ ವೀಕ್ಷಿಸಿದರು ಮತ್ತು ಅವರಿಗೆ ಫಿಲ್ಮ್ ಬಜಾರ್ನ ಪ್ರತಿಯೊಂದು ವಿಭಾಗದ ಬಗ್ಗೆ ಪರಿಚಯಿಸಲಾಯಿತು.
ಮುಂದಿನ ಪೀಳಿಗೆಯ ಕಥೆಗಾರರನ್ನು ಪೋಷಿಸಲು ಮತ್ತು ಭಾರತೀಯ ಚಿತ್ರರಂಗದ ಭವಿಷ್ಯವನ್ನು ರೂಪಿಸಲು ಅಗತ್ಯವಿರುವ ಸಾಧನಗಳು ಮತ್ತು ಸ್ಫೂರ್ತಿಯೊಂದಿಗೆ ಅವರನ್ನು ಸಜ್ಜುಗೊಳಿಸಲು ಐಎಫ್ಎಫ್ಐನ ಬದ್ಧತೆಯನ್ನು ಈ ಕಾರ್ಯಕ್ರಮ ಪ್ರತಿಬಿಂಬಿಸುತ್ತದೆ. ಈ ಉಪಕ್ರಮದ ಮೂಲಕ, ಯುವ ಚಲನಚಿತ್ರ ನಿರ್ಮಾತೃಗಳಿಗೆ ಜಾಗತಿಕ ಸಿನಿಮಾದ ಶ್ರೇಷ್ಠತೆಯ ಪರಿಚಯವಾಗುವುದಲ್ಲದೇ ಅವರು ತಮ್ಮ ವಿಶಿಷ್ಟ ಚಿಂತನೆ ಮತ್ತು ದೃಷ್ಟಿಕೋನಗಳನ್ನು ಮುನ್ನೆಲೆಗೆ ತರಲು ಪ್ರೋತ್ಸಾಹಿಸಲಾಗುತ್ತದೆ.
ಈ ಉದಯೋನ್ಮುಖ ಸೃಜನಶೀಲ ಕಲಾಕಾರರನ್ನು ಪ್ರೋತ್ಸಾಹಿಸುವಾಗ, ಭಾರತೀಯ ಚಿತ್ರರಂಗದ ಗಡಿಗಳನ್ನು ಮರು ವ್ಯಾಖ್ಯಾನಿಸುವ ಅವರ ಸಾಮರ್ಥ್ಯವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅವರ ನವೀನ ಆಲೋಚನೆಗಳು ಮತ್ತು ಉತ್ಸಾಹವು ನಿಸ್ಸಂದೇಹವಾಗಿ ಚಿತ್ರರಂಗದ ಮೇಲೆ ಅಚ್ಚಳಿಯದ ಪರಿಣಾಮ ಬೀರಲಿದೆ.
55ನೇ ಐಎಫ್ಎಫ್ಐ ಸಿನಿಮಾ ಶ್ರೇಷ್ಠತೆ, ಸಂಪರ್ಕ ಸಂಸ್ಕೃತಿಗಳು ಮತ್ತು ಪ್ರೇರಣಾದಾಯಕ ಕಥೆಗಳಿಗೆ ದಾರಿದೀಪವಾಗಿ ಮುಂದುವರಿಯುತ್ತದೆ. ಈ ಯುವ ಚಲನಚಿತ್ರ ನಿರ್ಮಾತೃಗಳ ಸೃಜನಾತ್ಮಕ ಪಯಣದಲ್ಲಿ, ಐಎಫ್ಎಫ್ಐ 2024 ನಲ್ಲಿನ ಅವರ ಅನುಭವಗಳು ಉಜ್ವಲವಾದ ಸಿನಿಮಾ ಭವಿಷ್ಯದೆಡೆಗೆ ಮಹತ್ವದ ಹೆಜ್ಜೆಯಾಗಲಿದೆ.
*****
(Release ID: 2076840)