ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಧಾನಮಂತ್ರಿಯವರ ಭೇಟಿ
प्रविष्टि तिथि:
21 NOV 2024 10:42PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಯಾನಾದ ಜಾರ್ಜ್ಟೌನ್ನಲ್ಲಿ 2 ನೇ ಭಾರತ-ಕ್ಯಾರಿಕಾಮ್ ಶೃಂಗಸಭೆಯ ನೇಪಥ್ಯದಲ್ಲಿ ನವೆಂಬರ್ 20 ರಂದು ಟ್ರಿನಿಡಾಡ್ ಮತ್ತು ಟೊಬಾಗೋ ಗಣರಾಜ್ಯದ ಪ್ರಧಾನಿ ಡಾ ಕೀತ್ ರೌಲಿ ಅವರನ್ನು ಭೇಟಿಯಾದರು.
ಟ್ರಿನಿಡಾಡ್ ಮತ್ತು ಟೊಬಾಗೊದಿಂದ ಭಾರತದ ಮಹತ್ವಾಕಾಂಕ್ಷಿ ಯುಪಿಐ ವೇದಿಕೆಯ ಅಳವಡಿಕೆಗಾಗಿ ಪ್ರಧಾನಿ ರೌಲಿ ಅವರನ್ನು ಪ್ರಧಾನಮಂತ್ರಿ ಮೋದಿ ಅಭಿನಂದಿಸಿದರು ಮತ್ತು ಡಿಜಿಟಲ್ ರೂಪಾಂತರ ವಲಯದಲ್ಲಿ ಇನ್ನಷ್ಟು ಸಹಯೋಗದ ಭರವಸೆ ನೀಡಿದರು. ಈ ವರ್ಷದ ಆರಂಭದಲ್ಲಿ ನಡೆದ ಐಸಿಸಿ ಟಿ-20 ಪುರುಷರ ಕ್ರಿಕೆಟ್ ವಿಶ್ವಕಪ್ ನ ಯಶಸ್ವಿ ಸಹ-ಆತಿಥ್ಯಕ್ಕಾಗಿ ಪ್ರಧಾನಿ ರೌಲಿಯನ್ನು ಅವರನ್ನು ಶ್ಲಾಘಿಸಿದರು.
ಭದ್ರತೆ, ಆರೋಗ್ಯ, ಸಾರಿಗೆ, ಕೃಷಿ, ಸಾಮರ್ಥ್ಯ ನಿರ್ಮಾಣ, ಸಾಂಸ್ಕೃತಿಕ ವಿನಿಮಯ, ಜನರ ನಡುವಿನ ಬಾಂಧವ್ಯ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯ ಕುರಿತು ಉಭಯ ನಾಯಕರು ಸಭೆಯಲ್ಲಿ ಚರ್ಚಿಸಿದರು. ಮಾತುಕತೆಯ ನಂತರ ಆಹಾರ ಸಂಸ್ಕರಣೆ ಕುರಿತ ತಿಳುವಳಿಕೆ ಒಪ್ಪಂದವನ್ನು ವಿನಿಮಯ ಮಾಡಿಕೊಳ್ಳಲಾಯಿತು.
*****
(रिलीज़ आईडी: 2075809)
आगंतुक पटल : 43
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam