ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
0 6

ಗೋವಾದ ಐ ಎಫ್‌ ಎಫ್‌ ಐ ನಲ್ಲಿ  ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ 4ನೇ ಆವೃತ್ತಿಯ ಉದ್ಘಾಟನೆ


ಯುವ ಧ್ವನಿಗಳಿಗೆ ವೇದಿಕೆಯನ್ನು ಒದಗಿಸಲು ಸೃಜನಶೀಲ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು ಇದು ಮುಖ್ಯವಾಗಿದೆ: ಪ್ರಸೂನ್ ಜೋಶಿ

ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಯುವ ರಚನೆಕಾರರಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ವಿವಿಧ ವಲಯಗಳಲ್ಲಿ ಸಹಯೋಗ ಹೊಂದಲು ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ: ಸಂಜಯ್ ಜಾಜು

ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ (ಸಿಎಂಒಟಿ) 4ನೇ ಆವೃತ್ತಿಯನ್ನು ಇಂದು 55ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐ ಎಫ್‌ ಎಫ್‌ ಐ) ಉದ್ಘಾಟಿಸಲಾಯಿತು, ಇದು ಮುಂದಿನ ಪೀಳಿಗೆಯ ಚಲನಚಿತ್ರ ನಿರ್ಮಾಪಕರನ್ನು ಪೋಷಿಸುವ ಮತ್ತು ಸಶಕ್ತಗೊಳಿಸುವ ಭಾರತದ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಜಾದಿ ಕಾ ಅಮೃತ ಮಹೋತ್ಸವದ ಆಶ್ರಯದಲ್ಲಿ ಪ್ರಾರಂಭಿಸಲಾದ ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಉಪಕ್ರಮವು ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಉದಯೋನ್ಮುಖ ಪ್ರತಿಭೆಗಳಿಗೆ ದೇಶದ ಪ್ರಮುಖ ವೇದಿಕೆಗಳಲ್ಲೊಂದಾಗಿ ಶೀಘ್ರವಾಗಿ ಮನ್ನಣೆ ಪಡೆಯುತ್ತಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಈ ವರ್ಷ ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ವಿಸ್ತೃತ ವ್ಯಾಪ್ತಿಯನ್ನು ಎತ್ತಿ ತೋರಿಸಿದರು, 13 ಚಲನಚಿತ್ರ ನಿರ್ಮಾಣ ಕೌಶಲ್ಯಗಳಿಂದ 100 ಭರವಸೆಯ ಯುವ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ, ಕಳೆದ ವರ್ಷ 10 ವಿಭಾಗಗಳಲ್ಲಿ 75 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. "ಈ ವರ್ಷ, ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಯುವ ರಚನೆಕಾರರಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ವೈವಿಧ್ಯಮಯ ಕ್ಷೇತ್ರಗಳಲ್ಲಿ ಸಹಯೋಗ ಪಡೆಯಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ಇದು ಫಿಲ್ಮ್ ಬಜಾರ್‌ ನತ್ತ ಒಂದು ಹೆಜ್ಜೆಯಾಗಿದೆ, ಇದು ಜಾಗತಿಕ ಸಹಯೋಗ ಮತ್ತು ಬೆಳವಣಿಗೆಗೆ ಹೊಸ ಬಾಗಿಲುಗಳನ್ನು ತೆರೆಯುತ್ತದೆ" ಎಂದು ಅವರು ಹೇಳಿದರು.

ಫೆಬ್ರವರಿ 2025ರಲ್ಲಿ ನಡೆಯಲಿರುವ ವಿಶ್ವ ಧ್ವನಿ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಕುರಿತು ಅವರು ಮಾತನಾಡಿದರು, ಇದು ಜಾಗತಿಕ ಮಾಧ್ಯಮ ಭೂದೃಶ್ಯದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. "ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ - ಸೀಸನ್ 1 (ಸಿಐಸಿ) ಗೆ ಸೇರುವಂತೆ ನಾನು ನಿಮ್ಮನ್ನು ಕೇಳುತ್ತೇನೆ, ಇದು ಹೆಚ್ಚಿನ ಅಂತಾರಾಷ್ಟ್ರೀಯ ಮಾನ್ಯತೆಗಾಗಿ ಚಿಮ್ಮುಹಲಗೆಯಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಅವರು ಹೇಳಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವಿಶೇಷ ಕಾರ್ಯದರ್ಶಿ ನೀರ್ಜಾ ಶೇಖರ್ ಮಾತನಾಡಿ,  ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಬೆಳವಣಿಗೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. "ಕಳೆದ ನಾಲ್ಕು ವರ್ಷಗಳಲ್ಲಿ ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಯುವ ಚಲನಚಿತ್ರ ನಿರ್ಮಾಪಕರಿಗೆ ಮಹತ್ವಾಕಾಂಕ್ಷೆಯ ವೇದಿಕೆಯಾಗಿದೆ, ಈ ವರ್ಷ 13 ವಿಭಿನ್ನ ಕೌಶಲ್ಯಗಳನ್ನು ಉತ್ತೇಜಿಸಲು ನಾವು ಹೆಮ್ಮೆಪಡುತ್ತೇವೆ, ಇದು ಕಾರ್ಯಕ್ರಮದ ವಿಸ್ತರಣೆಯ ಪ್ರತಿಬಿಂಬ ಮತ್ತು ಸೃಜನಶೀಲ ವೃತ್ತಿಜೀವನಕ್ಕಾಗಿ ಭಾರತದ ಯುವಕರಲ್ಲಿ ಬೆಳೆಯುತ್ತಿರುವ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ" ಎಂದು ಅವರು ಹೇಳಿದರು. ದೇಶದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಸೃಜನಶೀಲ ಆವಿಷ್ಕಾರವನ್ನು ಚಾಲನೆ ಮಾಡುವಲ್ಲಿ ಈ ಉಪಕ್ರಮದ ಪ್ರಮುಖ ಪಾತ್ರವನ್ನು ಅವರು ಒತ್ತಿ ಹೇಳಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮಾಜಿ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಪ್ರಮುಖ ಲಕ್ಷಣವಾದ 48 ಗಂಟೆಗಳ ಚಲನಚಿತ್ರ ನಿರ್ಮಾಣ ಸವಾಲಿನ ಮಹತ್ವದ ಬಗ್ಗೆ ಮಾತನಾಡಿದರು. "ಈ ಸವಾಲು ನಿಮ್ಮ ಸೃಜನಶೀಲತೆಯನ್ನು ಮಾತ್ರವಲ್ಲದೆ ತಂಡವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವ ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಈ ಉದ್ಯಮದಲ್ಲಿ ಯಶಸ್ಸಿನ ಕೀಲಿಯು ಕೇವಲ ಪ್ರತಿಭೆಯಲ್ಲ, ನಿಮ್ಮ ಆಲೋಚನೆಗಳ ಮಾರುಕಟ್ಟೆಯ ಸಾಮರ್ಥ್ಯ" ಎಂದು ಅವರು ಹೇಳಿದರು. ಭಾರತದ ಸೃಜನಶೀಲ ಪ್ರತಿಭೆಗಳ ಸಮೂಹವನ್ನು ರೂಪಿಸುವಲ್ಲಿ ಪ್ರಮುಖವಾದ ಎಸ್‌ ಆರ್‌ ಎಫ್‌ ಟಿ ಐ ಮತ್ತು ಎಫ್‌ ಟಿ ಐ ಐ ನಂತಹ ಸಂಸ್ಥೆಗಳ ಹೆಚ್ಚುತ್ತಿರುವ ಮನ್ನಣೆಯನ್ನು ಅವರು ಉಲ್ಲೇಖಿಸಿದರು.

ನೆಟ್‌ಫ್ಲಿಕ್ಸ್‌ ನಲ್ಲಿ ಸಾರ್ವಜನಿಕ ನೀತಿಯ ನಿರ್ದೇಶಕರಾದ ಮಹಿಮಾ ಕೌಲ್, ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಗೆ ನೆಟ್‌ಫ್ಲಿಕ್ಸ್‌ ನ ಬೆಂಬಲವನ್ನು ವ್ಯಕ್ತಪಡಿಸಿದರು. ಉದಯೋನ್ಮುಖ ಪ್ರತಿಭೆಗಳನ್ನು ಪೋಷಿಸುವ ಉಪಕ್ರಮ ಮತ್ತು ಸ್ಟ್ರೀಮಿಂಗ್ ಕ್ಷೇತ್ರದ ದೈತ್ಯನ ಸ್ವಂತ ಬದ್ಧತೆಯ ನಡುವಿನ ಸಮನ್ವಯವನ್ನು ಪ್ರಸ್ತಾಪಿಸಿದರು. "ವಾಯ್ಸ್‌ಬಾಕ್ಸ್ ಉಪಕ್ರಮದ ಅಡಿಯಲ್ಲಿ ಭಾರತದಾದ್ಯಂತ ಹಿನ್ನೆಲೆ ಧ್ವನಿ ಕಲಾವಿದರಿಗೆ ತರಬೇತಿ ನೀಡಲು ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ನೊಂದಿಗೆ ಸಹಯೋಗಿಸಲು ನಾವು ಹೆಮ್ಮೆಪಡುತ್ತೇವೆ. ನಮ್ಮ ಭಾಗವಹಿಸುವವರಲ್ಲಿ ಶೇ.50 ಕ್ಕಿಂತ ಹೆಚ್ಚು ಮಹಿಳೆಯರಾಗಿದ್ದು, ವೈವಿಧ್ಯಮಯ ಧ್ವನಿಗಳನ್ನು ಸಶಕ್ತಗೊಳಿಸುವ ನಮ್ಮ ಗುರಿಯನ್ನು ಇದು ಪ್ರತಿಬಿಂಬಿಸುತ್ತದೆ. ಹೆಚ್ಚುವರಿಯಾಗಿ, ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ದ ಉತ್ತಮ ಪ್ರದರ್ಶನಕಾರರು ನೆಟ್‌ಫ್ಲಿಕ್ಸ್‌ ನ ವಿಶೇಷ ಯೋಜನೆಯಾದ ಪ್ರಾಜೆಕ್ಟ್ ಆಜಾದಿ ಕಿ ಅಮೃತ ಕಹಾನಿಯಾಕ್ಕೆ ಕೊಡುಗೆಯನ್ನು ನೀಡುತ್ತಾರೆ. ಅಲ್ಲಿ ಅವರು ಭಾರತದ ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿದ ಕಥೆಗಳನ್ನು ವಿವರಿಸುತ್ತಾರೆ" ಎಂದು ಮಹಿಮಾ ಹೇಳಿದರು.

ಖ್ಯಾತ ಗೀತರಚನೆಕಾರ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿ ಬಿ ಎಫ್‌ ಸಿ) ಅಧ್ಯಕ್ಷ ಪ್ರಸೂನ್ ಜೋಶಿ ಅವರು ಆಳವಾದ ಒಳನೋಟವುಳ್ಳ ತಮ್ಮ ಭಾಷಣದಲ್ಲಿ ಭಾರತದಾದ್ಯಂತ ಸೃಜನಶೀಲ ಪ್ರತಿಭೆಗಳನ್ನು ಉತ್ತೇಜಿಸುವ ಮಹತ್ವದ ಕುರಿತು ಮಾತನಾಡಿದರು. “ನಮ್ಮ ದೇಶದಲ್ಲಿ ಕಥೆಗಳು ಮತ್ತು ಪ್ರತಿಭೆಗಳಿಗೆ ಕೊರತೆಯಿಲ್ಲ, ಆದರೆ ನಾವು ಸೃಜನಶೀಲ ಪ್ರಕ್ರಿಯೆಯನ್ನು ನಿರ್ಲಕ್ಷಿಸಬೇಕಾಗಿದೆ ಮತ್ತು ಈ ಧ್ವನಿಗಳಿಗೆ ವೇದಿಕೆಯನ್ನು ಒದಗಿಸಬೇಕಾಗಿದೆ, ನಾವು ಕಥೆಯನ್ನು ದೊಡ್ಡ ನಗರಗಳಿಗೆ ಸೀಮಿತಗೊಳಿಸಿದರೆ, ಅಸಾಧಾರಣ ವೈವಿಧ್ಯತೆಯಿಂದ ವಂಚಿತರಾಗುತ್ತೇವೆ. ಭಾರತದ ಪ್ರತಿಯೊಂದು ಮೂಲೆಯ ರಚನೆಕಾರರಿಗೆ ವೇದಿಕೆಯನ್ನು ನೀಡುವ ಮೂಲಕ ಈ ಅಂತರವನ್ನು ಕಡಿಮೆ ಮಾಡಲು ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಶಾರ್ಟ್ಸ್ ಇಂಟರ್‌ನ್ಯಾಶನಲ್‌ ಸಂಸ್ಥಾಪಕ ಮತ್ತು ಸಿಇಒ ಕಾರ್ಟರ್ ಪಿಲ್ಚರ್, ಭಾರತೀಯ ಚಿತ್ರರಂಗದ ಉಜ್ವಲ ಭವಿಷ್ಯದ ಬಗ್ಗೆ ಒತ್ತಿ ಹೇಳಿದರು. "ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಭಾಗವಹಿಸುವವರನ್ನು ಸಾವಿರಾರು ಅರ್ಜಿದಾರರಿಂದ ಆಯ್ಕೆ ಮಾಡಲಾಗಿದೆ ಮತ್ತು ಮುಂದಿನ 48 ಗಂಟೆಗಳು ಅವರನ್ನು ಸಹಯೋಗಿಸಲು, ಆವಿಷ್ಕರಿಸಲು ಮತ್ತು ಅಸಾಧಾರಣ ಚಲನಚಿತ್ರಗಳನ್ನು ರಚಿಸಲು ಪ್ರೇರೇಪಿಸುತ್ತವೆ. ಇದು ಭಾರತದ ಯುವಜನರ ಸೃಜನಶೀಲ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ" ಎಂದು ಅವರು ಹೇಳಿದರು. ಐದು ತಂಡಗಳು ಅತ್ಯಾಕರ್ಷಕ ಸವಾಲಿಗೆ ಸಿದ್ಧವಾಗಿವೆ ಎಂದು ಅವರು ಘೋಷಿಸಿದರು.

ಹಿಂದಿನ ಆವೃತ್ತಿಗಳ ಯಶಸ್ಸಿನ ಸ್ಮರಣಾರ್ಥವಾಗಿ, ಕಳೆದ ವರ್ಷಗಳಿಂದ ಐದು ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಚಾಂಪಿಯನ್‌ ಗಳನ್ನು ಉದ್ಯಮಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಗೌರವಿಸಲಾಯಿತು. ಈ ಹಳೆಯ ವಿದ್ಯಾರ್ಥಿಗಳು 48-ಗಂಟೆಗಳ ಚಲನಚಿತ್ರ ನಿರ್ಮಾಣ ಸವಾಲಿನ ಸಮಯದಲ್ಲಿ ಭಾಗವಹಿಸುವವರ ಪ್ರಸ್ತುತ ತಂಡಕ್ಕೆ ಮಾರ್ಗದರ್ಶನ ನೀಡುತ್ತಾರೆ, ಹೊಸ ತಲೆಮಾರಿನ ರಚನೆಕಾರರಿಗೆ ಮಾರ್ಗದರ್ಶನ ನೀಡಲು ತಮ್ಮ ಅಮೂಲ್ಯವಾದ ಒಳನೋಟಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ ಬಗ್ಗೆ (ಸಿಎಂಒಟಿ):

ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ (ಸಿಎಂಒಟಿ) ಉಪಕ್ರಮವು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಮುಖ ಕಾರ್ಯಕ್ರಮವಾಗಿದ್ದು, ಭಾರತದಲ್ಲಿನ ಅತ್ಯಂತ ಪ್ರತಿಭಾವಂತ ಯುವ ಚಲನಚಿತ್ರ ನಿರ್ಮಾತೃಗಳನ್ನು ಗುರುತಿಸಲು, ಪೋಷಿಸಲು ಮತ್ತು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ. ಅದರ ಆರಂಭದಿಂದಲೂ, ಸಿಎಂಒಟಿ ಭಾರತೀಯ ಚಲನಚಿತ್ರ ಮತ್ತು ಮಾಧ್ಯಮ ಉದ್ಯಮದಲ್ಲಿ ಮಹತ್ವಾಕಾಂಕ್ಷಿ ರಚನೆಕಾರರಿಗೆ ಸಹಯೋಗ, ಕೌಶಲ್ಯ-ನಿರ್ಮಾಣ ಮತ್ತು ಮಾರ್ಗದರ್ಶನವನ್ನು ಉತ್ತೇಜಿಸುವ ದೊಡ್ಡ ಸಂಪೂರ್ಣ ಬೆಂಬಲಿತ ವೇದಿಕೆಯಾಗಿ ಹೊರಹೊಮ್ಮಿದೆ. ಸಿಎಂಒಟಿ ಯ 2024ರ ಆವೃತ್ತಿಯನ್ನು ನವೆಂಬರ್ 20 ರಿಂದ 28 ರವರೆಗೆ ಗೋವಾದಲ್ಲಿ 55 ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯೋಜಿಸಲಾಗಿದೆ.

ನೆಟ್‌ಫ್ಲಿಕ್ಸ್ ಮತ್ತು ಪರ್ಲ್ ಅಕಾಡೆಮಿಯಂತಹ ಹೆಸರಾಂತ ಉದ್ಯಮದ ಪಾಲುದಾರರ ಬೆಂಬಲದೊಂದಿಗೆ, ಸಿಎಂಒಟಿ ಭಾರತೀಯ ಸಿನಿಮಾ ಜಾಗತಿಕ ವೇದಿಕೆಯಲ್ಲಿ ಪ್ರವರ್ಧಮಾನಕ್ಕೆ ಬರುವಂತಹ ಭವಿಷ್ಯವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ:

https://pib.gov.in/PressReleaseIframePage.aspx?PRID=2073892

 

*****

 

iffi reel

(Release ID: 2075686) Visitor Counter : 17