ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ನೈಜೀರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ 


ನಮ್ಮ ಅನಿವಾಸಿ ಭಾರತೀಯರು ಜಾಗತಿಕವಾಗಿ ಯಶಸ್ವಿಯಾಗಿದ್ದಾರೆ ಮತ್ತು ಇದು ನಮಗೆಲ್ಲರಿಗೂ ಹೆಮ್ಮೆ ತಂದಿದೆ: ಪ್ರಧಾನಮಂತ್ರಿ

ನಮಗೆ ಇಡೀ ವಿಶ್ವವೇ ಒಂದು ಕುಟುಂಬ: ಪ್ರಧಾನಮಂತ್ರಿ

ಭಾರತ ಮತ್ತು ನೈಜೀರಿಯಾ ಪ್ರಜಾಸತ್ತಾತ್ಮಕ ತತ್ವಗಳು, ವೈವಿಧ್ಯತೆಯ ಆಚರಣೆ ಮತ್ತು ಜನರ ಬದ್ಧತೆಯಿಂದ ಸಂಪರ್ಕ ಹೊಂದಿವೆ: ಪ್ರಧಾನಮಂತ್ರಿ

ಭಾರತದ ಪ್ರಗತಿಯನ್ನು ಜಾಗತಿಕವಾಗಿ ಪ್ರಶಂಸಿಸಲಾಗುತ್ತಿದೆ, ಭಾರತದ ಜನರು ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ: ಪ್ರಧಾನಮಂತ್ರಿ

ಭಾರತೀಯರು ತಮ್ಮ ಸೌಕರ್ಯದ ವಲಯದಿಂದ ಹೊರಬಂದು ಅದ್ಭುತಗಳನ್ನು ಮಾಡಿದ್ದಾರೆ, ಸ್ಟಾರ್ಟ್ಅಪ್ ವಲಯವು ಒಂದು ಉದಾಹರಣೆಯಾಗಿದೆ: ಪ್ರಧಾನಮಂತ್ರಿ

ಅಭಿವೃದ್ಧಿ, ಸಮೃದ್ಧಿ ಮತ್ತು ಪ್ರಜಾಪ್ರಭುತ್ವವನ್ನು ಮುನ್ನಡೆಸುವಾಗ ಭಾರತವು ಜಗತ್ತಿಗೆ ಭರವಸೆಯ ದಾರಿದೀಪವಾಗಿದೆ, ನಾವು ಯಾವಾಗಲೂ ಮಾನವೀಯತೆಯ ಮನೋಭಾವವನ್ನು ಮುನ್ನಡೆಸಲು ಕೆಲಸ ಮಾಡಿರುವೆವು: ಪ್ರಧಾನಮಂತ್ರಿ

ಎಲ್ಲಾ ಜಾಗತಿಕ ವೇದಿಕೆಗಳಲ್ಲಿ ಬಲವಾಗಿ ಧ್ವನಿ ಎತ್ತುವಲ್ಲಿ ಭಾರತವು ಯಾವಾಗಲೂ ಆಫ್ರಿಕಾವನ್ನು ಬೆಂಬಲಿಸುತ್ತದೆ: ಪ್ರಧಾನಮಂತ್ರಿ

Posted On: 17 NOV 2024 10:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನೈಜೀರಿಯಾದ ಅಬುಜಾದಲ್ಲಿ ಭಾರತೀಯ ಸಮುದಾಯವು ಅವರ ಗೌರವಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರನ್ನು ಉದ್ದೇಶಿಸಿ ಮಾತನಾಡಿದರು. ಭಾರತೀಯ ಸಮುದಾಯದಿಂದ ವಿಶೇಷ ಪ್ರೀತಿ ಮತ್ತು ವಿಜೃಂಭಣೆಯಿಂದ ತಮಗೆ ದೊರೆತ ಭವ್ಯ ಸ್ವಾಗತದ ಬಗ್ಗೆ ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. ಸಮುದಾಯದಿಂದ ದೊರೆತ ಪ್ರೀತಿ, ಸೌಹಾರ್ದವೇ ನನಗೆ ದೊಡ್ಡ ಬಂಡವಾಳ ಎಂದರು.

ಪ್ರಧಾನಮಂತ್ರಿಯಾಗಿ ನೈಜೀರಿಯಾಕ್ಕೆ ಇದು ಅವರ ಮೊದಲ ಭೇಟಿ ಎಂದು ಹೇಳಿದ ಶ್ರೀ ಮೋದಿ, ತಮ್ಮೊಂದಿಗೆ ಕೋಟ್ಯಂತರ ಭಾರತೀಯರ ಶುಭ ಹಾರೈಕೆಗಳನ್ನು ತಂದಿರುವೆನು ಎಂದು ಹೇಳಿದರು. ನೈಜೀರಿಯಾದಲ್ಲಿರುವ ಭಾರತೀಯರ ಪ್ರಗತಿಯ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ ಎಂದು ಅವರು ಹೇಳಿದರು. ಅಧ್ಯಕ್ಷ ಟಿನುಬು ಮತ್ತು ನೈಜೀರಿಯಾದ ಜನರಿಗೆ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಶ್ರೀ ಮೋದಿ ಅವರು ಎಲ್ಲಾ ವಿನಮ್ರತೆಯೊಂದಿಗೆ ಪ್ರಶಸ್ತಿಯನ್ನು ಕೋಟಿಗಟ್ಟಲೆ ಭಾರತೀಯರಿಗೆ ಅರ್ಪಿಸಿದರು.

ಅಧ್ಯಕ್ಷ ಟಿನುಬು ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ, ನೈಜೀರಿಯಾದಲ್ಲಿನ ಭಾರತೀಯರ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು ಹೆಮ್ಮೆಪಡುವಂತೆ ಮಾಡಿದರು. ಒಂದು ದೃಷ್ಟಾಂತವನ್ನು ಉಲ್ಲೇಖಿಸಿ, ಶ್ರೀ ಮೋದಿ ಅವರು ತಮ್ಮ ಮಕ್ಕಳು ತಮ್ಮ ವೃತ್ತಿಜೀವನದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಿದಾಗ ಪೋಷಕರು ಹೇಗೆ ಸಂತಸ ಪಡುತ್ತಾರೋ  ಅದೇ ರೀತಿ ಸಂತೋಷ ಮತ್ತು ಹೆಮ್ಮೆಯನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಿದರು. ಇಲ್ಲಿನ ಭಾರತೀಯ ಸಮುದಾಯದವರು ಯಾವಾಗಲೂ ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳಲ್ಲಿ ನೈಜೀರಿಯಾದ ಪರವಾಗಿ ನಿಂತಿದ್ದಾರೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ನೈಜೀರಿಯಾದಲ್ಲಿ 40 ರಿಂದ 60 ವರ್ಷದೊಳಗಿನ ಅನೇಕ ಭಾರತೀಯರಿದ್ದಾರೆ, ಅವರು ಹಿಂದೊಮ್ಮೆ ಭಾರತೀಯ ಶಿಕ್ಷಕರಿಂದ ಶಿಕ್ಷಣ ಪಡೆದವರಾಗಿರುತ್ತಾರೆ ಎಂದು ಅವರು ಹೇಳಿದರು. ನೈಜೀರಿಯಾದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅನೇಕ ಭಾರತೀಯ ವೈದ್ಯರಿದ್ದಾರೆ ಎಂದು ಶ್ರೀ ಮೋದಿ ಗಮನಿಸಿದರು. ಅನೇಕ ಭಾರತೀಯ ಉದ್ಯಮಿಗಳು ಉದ್ಯಮಗಳನ್ನು ಸ್ಥಾಪಿಸಿದ್ದಾರೆ ಮತ್ತು ನೈಜೀರಿಯಾದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಾಗಿದ್ದಾರೆ ಎಂದು ಅವರು ಹೇಳಿದರು. ಸ್ವಾತಂತ್ರ್ಯಕ್ಕೂ ಮೊದಲೇ, ಶ್ರೀ ಕಿಶನ್ಚಂದ್ ಝೇಲಾರಾಮ್ ಜಿ ಅವರು ನೈಜೀರಿಯಾಕ್ಕೆ ವಲಸೆ ಹೋಗಿದ್ದರು ಮತ್ತು ನೈಜೀರಿಯಾದ ಅತಿದೊಡ್ಡ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿದ್ದ ವ್ಯಾಪಾರವನ್ನು ಸ್ಥಾಪಿಸಿದರು ಎಂದು ಪ್ರಧಾನಮಂತ್ರಿಯವರು ಹೇಳಿದರು. ಇಂದು ಅನೇಕ ಭಾರತೀಯ ಕಂಪನಿಗಳು ನೈಜೀರಿಯಾದ ಆರ್ಥಿಕತೆಯನ್ನು ಬಲಪಡಿಸುತ್ತಿವೆ ಎಂದು ಅವರು ಹೇಳಿದರು. ತುಳಸಿಚಂದ್ರ ಪ್ರತಿಷ್ಠಾನವು ಅನೇಕ ನೈಜೀರಿಯನ್ನರ ಜೀವನವನ್ನು ಬೆಳಗಿಸುತ್ತಿದೆ ಎಂದು ಶ್ರೀ ಮೋದಿ ಗಮನಿಸಿದರು. ನೈಜೀರಿಯಾದ ಪ್ರಗತಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿರುವ ಭಾರತೀಯ ಸಮುದಾಯವನ್ನು ಶ್ಲಾಘಿಸಿದ ಶ್ರೀ ಮೋದಿ, ಇದು ಭಾರತೀಯರ ದೊಡ್ಡ ಶಕ್ತಿ ಮತ್ತು ಭಾರತೀಯರ ಸಂಸ್ಕೃತಿಯ ಸಂಕೇತ  ಎಂದು ಹೇಳಿದರು. ಭಾರತೀಯರು ಎಲ್ಲರ ಕಲ್ಯಾಣದ ಆದರ್ಶವನ್ನು ಎಂದಿಗೂ ಮರೆಯುವುದಿಲ್ಲ ಮತ್ತು ಇಡೀ ಜಗತ್ತೇ ಒಂದೇ ಕುಟುಂಬ ಎನ್ನುವ ನಂಬಿಕೆಯೊಂದಿಗೆ ಯಾವಾಗಲೂ ಬದುಕುತ್ತಿದ್ದಾರೆ ಎಂದು ಅವರು ಹೇಳಿದರು.

ಭಾರತೀಯರು ತಮ್ಮ ಸಂಸ್ಕೃತಿಯ ಬಗ್ಗೆ ಹೊಂದಿರುವ ಗೌರವವು ಎಲ್ಲೆಡೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು. ನೈಜೀರಿಯನ್ನರಲ್ಲಿ ಯೋಗವು ನಿರಂತರವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ ಎಂದು ಹೇಳಿದ ಅವರು, ನೈಜೀರಿಯಾದಲ್ಲಿರುವ ಭಾರತೀಯರು ನಿಯಮಿತವಾಗಿ ಯೋಗವನ್ನು ಅಭ್ಯಾಸ ಮಾಡುವಂತೆ ಒತ್ತಾಯಿಸಿದರು. ನೈಜೀರಿಯಾದ ರಾಷ್ಟ್ರೀಯ ದೂರದರ್ಶನ ವಾಹಿನಿಯಲ್ಲಿ ಯೋಗದ ಕುರಿತು ವಾರಕ್ಕೊಮ್ಮೆ ಕಾರ್ಯಕ್ರಮವಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ನೈಜೀರಿಯಾದಲ್ಲಿ ಹಿಂದಿ ಮತ್ತು ಭಾರತೀಯ ಚಿತ್ರಗಳು ಕೂಡ ಜನಪ್ರಿಯತೆಯನ್ನು ಗಳಿಸುತ್ತಿವೆ ಎಂದು ಶ್ರೀ ಮೋದಿ ಹೇಳಿದರು.
ಗಾಂಧೀಜಿಯವರು ಆಫ್ರಿಕಾದಲ್ಲಿ ಸಾಕಷ್ಟು ಸಮಯ ಕಳೆದಿದ್ದಾರೆ ಎಂದು ಹೇಳಿದ ಶ್ರೀ ಮೋದಿಯವರು, ಭಾರತ ಮತ್ತು ನೈಜೀರಿಯಾದ ಜನರು ತಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಸರ್ವ ಪ್ರಯತ್ನಗಳನ್ನು ಮಾಡಿದರು ಎಂದು ಹೇಳಿದರು. ಭಾರತದ ಸ್ವಾತಂತ್ರ್ಯವು ನೈಜೀರಿಯಾದ ಸ್ವಾತಂತ್ರ್ಯ ಹೋರಾಟದ ಮೇಲೆ ಮತ್ತಷ್ಟು ಪ್ರಭಾವ ಬೀರಿತು ಎಂದು ಅವರು ಹೇಳಿದರು. ಸ್ವಾತಂತ್ರ್ಯ ಹೋರಾಟದ ದಿನಗಳ ಜೀವನದಂತೆ ಇಂದು ಭಾರತ ಮತ್ತು ನೈಜೀರಿಯಾ ಅಭಿವೃದ್ಧಿಯನ್ನು ಮುಂದುವರೆಸಿದೆ ಎಂದು ಶ್ರೀ ಮೋದಿ ಹೇಳಿದರು. "ಭಾರತ ಪ್ರಜಾಪ್ರಭುತ್ವದ ತಾಯಿ ಆದರೆ ನೈಜೀರಿಯಾ ಆಫ್ರಿಕಾದ ಅತಿದೊಡ್ಡ ಪ್ರಜಾಪ್ರಭುತ್ವ" ಎಂದು ಶ್ರೀ ಮೋದಿ ಹೇಳಿದರು. ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಜನರ  ಶಕ್ತಿ ಎರಡೂ ದೇಶಗಳಿಗೆ ಸಾಮಾನ್ಯ ಅಂಶಗಳಾಗಿವೆ ಎಂದು ಅವರು ಹೇಳಿದರು. ನೈಜೀರಿಯಾದಲ್ಲಿನ ವೈವಿಧ್ಯತೆಯ ಕುರಿತು ಮಾತನಾಡಿದ ಶ್ರೀ ಮೋದಿ, ದೇವಾಲಯಗಳನ್ನು ನಿರ್ಮಿಸಲು ನೀಡಿದ ಬೆಂಬಲಕ್ಕಾಗಿ ನೈಜೀರಿಯಾ ಸರ್ಕಾರಕ್ಕೆ ಭಾರತೀಯರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

ಭಾರತವು ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ ಎಂದು ಒತ್ತಿ ಹೇಳಿದ ಮೋದಿ, ಸ್ವಾತಂತ್ರ್ಯದ ನಂತರ ಭಾರತ ಎದುರಿಸುತ್ತಿರುವ ಹಲವಾರು ಸವಾಲುಗಳ ಬಗ್ಗೆಯೂ ಪ್ರಸ್ತಾಪಿಸಿದರು. ಚಂದ್ರಯಾನ, ಮಂಗಳಯಾನ, ಮೇಡ್ ಇನ್ ಇಂಡಿಯಾ ಫೈಟರ್ ಜೆಟ್ ಗಳಂತಹ ಭಾರತದ ಸಾಧನೆಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ ಎಂದು ಅವರು ಹೇಳಿದರು. "ಭಾರತವು ಬಾಹ್ಯಾಕಾಶದಿಂದ ಉತ್ಪಾದನಾ ವಲಯದವರೆಗೆ, ಡಿಜಿಟಲ್ ತಂತ್ರಜ್ಞಾನದಿಂದ ಆರೋಗ್ಯ ರಕ್ಷಣೆಯವರೆಗೆ ಜಾಗತಿಕ ಶಕ್ತಿಗಳೊಂದಿಗೆ ಸ್ಪರ್ಧಿಸುತ್ತಿದೆ" ಎಂದು ಶ್ರೀ ಮೋದಿ ಹೇಳಿದರು. ಸ್ವಾತಂತ್ರ್ಯದ ಆರು ದಶಕಗಳ ನಂತರ, ಭಾರತವು ಕೇವಲ $ 1 ಟ್ರಿಲಿಯನ್ ಗಡಿ ದಾಟಿದೆ ಎಂದು   ಹೇಳಿದ ಶ್ರೀ ಮೋದಿಯವರು, ಕಳೆದ ಒಂದು ದಶಕದಲ್ಲಿ ಭಾರತವು $ 2 ಟ್ರಿಲಿಯನ್ ಅನ್ನು ಸೇರಿಸಿದೆ, ಇಂದು ಅದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಭಾರತವು ಶೀಘ್ರದಲ್ಲೇ ಐದು ಟ್ರಿಲಿಯನ್ ಆರ್ಥಿಕತೆ ಮತ್ತು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತೀಯರು ರಿಸ್ಕ್ ತೆಗೆದುಕೊಳ್ಳುವವರು ಎಂಬುದನ್ನು ಎತ್ತಿ ಹಿಡಿದ ಮೋದಿ, ಭಾರತವು ವಿವಿಧ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು. ಭಾರತದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿ 1.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್ಅಪ್ಗಳಿವೆ ಎಂದು ಹೇಳಿದ ಶ್ರೀ ಮೋದಿ, ಇದು ಭಾರತೀಯ ಯುವಕರು ತಮ್ಮ ಆರಾಮ ವಲಯದಿಂದ ಹೊರಬರಲು ಶ್ರಮಿಸುತ್ತಿರುವುದರ ನೇರ ಪರಿಣಾಮವಾಗಿದೆ ಎಂದು ಹೇಳಿದರು. "ಕಳೆದ 10 ವರ್ಷಗಳಲ್ಲಿ ಭಾರತವು 100 ಕ್ಕೂ ಹೆಚ್ಚು ಯುನಿಕಾರ್ನ್ ಗಳನ್ನು ಹೊಂದಿದೆ" ಎಂದು ಶ್ರೀ ಮೋದಿ ಹೇ

ಭಾರತೀಯರು ಸವಾಲನ್ನು  ತೆಗೆದುಕೊಳ್ಳುವವರು ಎಂಬುದನ್ನು ಎತ್ತಿ ಹಿಡಿದ ಶ್ರೀ ಮೋದಿ, ಭಾರತವು ವಿವಿಧ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದರು. ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯು 1.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳನ್ನು ಹೊಂದಿದೆ ಎಂದು ಹೇಳಿದ ಶ್ರೀ ಮೋದಿ, ಇದು ಭಾರತೀಯ ಯುವಕರು ತಮ್ಮ ಸೌಕರ್ಯವಾದ ವಲಯಗಳಿಂದ ಹೊರಬರುವ ಮೂಲಕ ಅವರ ಕಠಿಣ ಪರಿಶ್ರಮದ ನೇರ ಫಲಿತಾಂಶವಾಗಿದೆ ಎಂದು ಹೇಳಿದರು. "ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ 100 ಕ್ಕೂ ಹೆಚ್ಚು ಯುನಿಕಾರ್ನ್‌ ಗಳಿವೆ" ಎಂದು ಶ್ರೀ ಮೋದಿ ಹೇಳಿದರು.

ಭಾರತವು ತನ್ನ ಸೇವಾ ವಲಯಕ್ಕೆ ಹೆಸರುವಾಸಿಯಾಗಿದೆ ಎಂದು ಗಮನಿಸಿದ ಶ್ರೀ ಮೋದಿ, ಸರ್ಕಾರವು ತನ್ನ ಸೌಕರ್ಯವಾದ ವಲಯದಿಂದ ಹೊರಬಂದಿದೆ ಮತ್ತು ಉತ್ಪಾದನಾ ವಲಯವನ್ನು ವಿಶ್ವದರ್ಜೆಯ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಹೆಚ್ಚಿನ ಉತ್ತೇಜನವನ್ನು ನೀಡಿದೆ ಎಂದು ಹೇಳಿದರು. ಭಾರತವು ಈಗ ವಿಶ್ವದ ಅತಿದೊಡ್ಡ ಮೊಬೈಲ್ ಫೋನ್ ತಯಾರಕರಲ್ಲಿ ಒಂದಾಗಿದೆ ಮತ್ತು ಭಾರತದಲ್ಲಿ 30 ಕೋಟಿಗೂ ಹೆಚ್ಚು ಮೊಬೈಲ್ ಫೋನ್ಗಳನ್ನು ತಯಾರಿಸಲಾಗಿದೆ ಎನ್ನುವುದರಿಂದ  ಇದು ಸಾಬೀತಾಗಿದೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ ಭಾರತದ ಮೊಬೈಲ್ ಫೋನ್ ರಫ್ತು 75 ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ ಭಾರತದ ರಕ್ಷಣಾ ರಫ್ತುಗಳ ಬಗ್ಗೆ ತಿಳಿಸಿದ  ಶ್ರೀ ಮೋದಿ ಅವರು, ಇದು 30 ಪಟ್ಟು ಹೆಚ್ಚಾಗಿದೆ ಮತ್ತು ಭಾರತವು ಇಂದು 100 ಕ್ಕೂ ಹೆಚ್ಚು ದೇಶಗಳಿಗೆ ತನ್ನ ರಕ್ಷಣಾ ಸಾಧನಗಳನ್ನು ರಫ್ತು ಮಾಡುತ್ತಿದೆ ಎಂದು ಹೇಳಿದರು. ಭಾರತದ ಬಾಹ್ಯಾಕಾಶ ಕ್ಷೇತ್ರವನ್ನು ವಿಶ್ವದಾದ್ಯಂತ ಪ್ರಶಂಸಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಾರತವು ತನ್ನದೇ ಆದ ಗಗನ್ ಯಾನ್ ನಲ್ಲಿ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು. ಭಾರತವು ಬಾಹ್ಯಾಕಾಶದಲ್ಲಿ ಬಾಹ್ಯಾಕಾಶ ನಿಲ್ದಾಣವನ್ನು ಅಭಿವೃದ್ಧಿಪಡಿಸಲಿದೆ ಎಂದು ಅವರು ಹೇಳಿದರು.

ಭಾರತವು ಪ್ರಸ್ತುತ ತನ್ನ ಸೌಕರ್ಯದ ವಲಯದಿಂದ ಹೊರಬರುವ ಮೂಲಕ ಆವಿಷ್ಕಾರ ಮತ್ತು ಹೊಸ ಮಾರ್ಗಗಳನ್ನು ಸೃಷ್ಟಿಸುವ ಮನಸ್ಥಿತಿಯಲ್ಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಕಳೆದ 20 ವರ್ಷಗಳಲ್ಲಿ ಭಾರತವು 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ ಎಂದು ಹೇಳಿದರು. ಬಡತನದಿಂದ ಹೊರಬರುವ ಅನೇಕ ಜನರು ಜಗತ್ತಿಗೆ ಉತ್ತಮ ಸ್ಫೂರ್ತಿಯಾಗಿದ್ದಾರೆ ಮತ್ತು ಭಾರತವು ಅದನ್ನು ಮಾಡಿದ್ದರೆ, ನಾವು ಸಹ ಅದನ್ನು ಮಾಡಬಹುದು ಎಂಬ ಭರವಸೆಯನ್ನು ಪ್ರತಿ ದೇಶಕ್ಕೂ ನೀಡುತ್ತದೆ ಎಂದು ಅವರು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಗುರಿಯೊಂದಿಗೆ ಭಾರತವು ಇಂದು ಹೊಸ ಪ್ರಯಾಣವನ್ನು ಆರಂಭಿಸಿದೆ ಎಂದು ಶ್ರೀ ಮೋದಿ ಹೇಳಿದರು. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯತ್ತ ಪ್ರತಿಯೊಬ್ಬ ಭಾರತೀಯನೂ ಶ್ರಮಿಸುತ್ತಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭಿವೃದ್ಧಿ, ಶಾಂತಿ, ಸಮೃದ್ಧಿ ಅಥವಾ ಪ್ರಜಾಪ್ರಭುತ್ವ ಇರಲಿ, ಭಾರತವು ಜಗತ್ತಿಗೆ ಹೊಸ ಭರವಸೆಯಾಗಿ ಹೊರಹೊಮ್ಮಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ನೈಜೀರಿಯಾದಲ್ಲಿ ನೆಲೆಸಿರುವ ಭಾರತೀಯರು ತಾವು ಭಾರತದವರು ಎಂದು ಹೇಳಿದಾಗ ಅವರಿಗೂ ಸಿಗುವ ಗೌರವವನ್ನು ಅನುಭವಿಸಿರಬೇಕು ಎಂದು ಹೇಳಿದರು.

ಜಗತ್ತಿನಲ್ಲಿ ಸಮಸ್ಯೆ ಎದುರಾದಾಗಲೆಲ್ಲಾ ಭಾರತವು ಜಾಗತಿಕ ಸಹೋದರನಾಗಿ ಸಹಾಯಕ್ಕಾಗಿ ಮೊದಲು ಅಲ್ಲಿಗೆ ತಲುಪುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಕರೊನಾ ಸಮಯದಲ್ಲಿ ಆಗ ಜಗತ್ತಿನಲ್ಲಿ ಬಹಳ  ಕೋಲಾಹಲವಿತ್ತು, ಪ್ರತಿ ದೇಶವೂ ಲಸಿಕೆ ಬಗ್ಗೆ ಚಿಂತಿತರಾಗಿದ್ದರು ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಭಾರತವು ಹೆಚ್ಚು ಹೆಚ್ಚು ದೇಶಗಳಿಗೆ ಲಸಿಕೆ ನೀಡಲು ನಿರ್ಧರಿಸಿತು ಎಂದು ಅವರು ಹೇಳಿದರು. ಇದು ನಮ್ಮ ಸಂಸ್ಕಾರ ಮತ್ತು ಸಾವಿರಾರು ವರ್ಷಗಳ ಸಂಸ್ಕೃತಿ ಇದನ್ನು ನಮಗೆ ಕಲಿಸಿದೆ ಎಂದು ಶ್ರೀ ಮೋದಿ ಹೇಳಿದರು.  

ಆಫ್ರಿಕಾದ ಭವಿಷ್ಯದ ಬೆಳವಣಿಗೆಗೆ ನೈಜೀರಿಯಾ ದೊಡ್ಡ ಕೇಂದ್ರವಾಗಿದೆ ಎಂದು ಹೇಳಿದ ಶ್ರೀ ಮೋದಿ, ಕಳೆದ 5 ವರ್ಷಗಳಲ್ಲಿ ಆಫ್ರಿಕಾದಲ್ಲಿ 18 ಹೊಸ ರಾಯಭಾರ ಕಚೇರಿಗಳನ್ನು ಪ್ರಾರಂಭಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಜಾಗತಿಕ ವೇದಿಕೆಯಲ್ಲಿ ಆಫ್ರಿಕಾದ ಪರವಾಗಿ ಬಲವಾಗಿ ಧ್ವನಿಯನ್ನು ಎತ್ತಲು ಭಾರತವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಅವರು ಹೇಳಿದರು. ಮೊದಲ ಬಾರಿಗೆ ಭಾರತದ ಜಿ20 ಅಧ್ಯಕ್ಷ ಸ್ಥಾನವನ್ನು ವಿವರಿಸಿದ ಶ್ರೀ ಮೋದಿ, ಆಫ್ರಿಕನ್ ಒಕ್ಕೂಟವನ್ನು ಖಾಯಂ ಸದಸ್ಯರನ್ನಾಗಿ ಮಾಡಲು ಬಲವಾದ ಪ್ರಯತ್ನವನ್ನು ಮಾಡಲಾಗಿದೆ ಎಂದು ಹೇಳಿದರು. ಭಾರತದ ಆಹ್ವಾನದ ಮೇರೆಗೆ ಜಿ20ಯ ಪ್ರತಿಯೊಂದು ಸದಸ್ಯ ರಾಷ್ಟ್ರವೂ ಭಾರತ ಮತ್ತು ನೈಜೀರಿಯಾದ ಈ ಹೆಜ್ಜೆಯನ್ನು ಸಂಪೂರ್ಣವಾಗಿ ಬೆಂಬಲಿಸಿದೆ ಮತ್ತು ಪೂರ್ಣ ವೈಭವದೊಂದಿಗೆ ಅತಿಥಿ ರಾಷ್ಟ್ರವಾಗಿ ನೈಜೀರಿಯಾ ಇತಿಹಾಸವನ್ನು ನಿರ್ಮಿಸಿರುವುದನ್ನು ಗಮನಿಸಲು ಸಂತಸವಾಗುತ್ತಿದೆ ಎಂದು ಅವರು ಹೇಳಿದರು.

ಮುಂದಿನ ವರ್ಷ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿಯವರು ಸರ್ವರಿಗೂ ವಿಶೇಷ ಆಹ್ವಾನ ನೀಡಿದರು. ಜನವರಿ 26 ರಿಂದ ಗಣರಾಜ್ಯೋತ್ಸವ ಮತ್ತು ಜನವರಿ ಎರಡನೇ ವಾರದಲ್ಲಿ ಪ್ರವಾಸಿ ಭಾರತೀಯ ದಿವಸದೊಂದಿಗೆ ಪ್ರಾರಂಭವಾಗುವ ಜನವರಿ ತಿಂಗಳಲ್ಲಿ ಅನೇಕ ಹಬ್ಬಗಳು ಒಗ್ಗೂಡಿ ಒರಿಸ್ಸಾದಲ್ಲಿ ಭಗವಾನ್ ಜಗನ್ನಾಥ ಜೀ ಅವರ ಪಾದದಲ್ಲಿ ಆಚರಿಸಲಾಗುವುದು ಎಂದು ಅವರು ಹೇಳಿದರು. ಜನವರಿ 13 ರಿಂದ ಫೆಬ್ರವರಿ 26 ರವರೆಗೆ 45 ದಿನಗಳ ಕಾಲ ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಮಹಾಕುಂಭದ ಕುರಿತು ಪ್ರಧಾನಮಂತ್ರಿಯವರು ಮಾತನಾಡಿದರು. ಈ ಸಮಯದಲ್ಲಿ ಭಾರತೀಯ ಸಮುದಾಯದವರು ತಮ್ಮ ನೈಜೀರಿಯಾದ ಸ್ನೇಹಿತರ ಜೊತೆಗೆ ಒಟ್ಟಿಗೆ ಭಾರತಕ್ಕೆ ಬರುವಂತೆ ಕೇಳಿಕೊಳ್ಳುವುದಕ್ಕೆ ಭಾರತಕ್ಕೆ ಬರಲು ಹಲವು ಕಾರಣಗಳಿವೆ ಎಂದು ಶ್ರೀ ಮೋದಿ ಹೇಳಿದರು. ಅಯೋಧ್ಯೆಯಲ್ಲಿ 500 ವರ್ಷಗಳ ನಂತರ ಭಗವಾನ್ ಶ್ರೀರಾಮನ ಭವ್ಯ ಮಂದಿರವನ್ನು ನಿರ್ಮಿಸಲಾಗಿದೆ, ಅಲ್ಲಿಗೆ ಅವರು ಮತ್ತು ಅವರ ಮಕ್ಕಳು ಭೇಟಿ ನೀಡಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು. ಮೊದಲು ಅನಿವಾಸಿ ಭಾರತೀಯರ ದಿನ, ನಂತರ ಮಹಾ ಕುಂಭ ಮತ್ತು ಅದರ ನಂತರ ಗಣರಾಜ್ಯೋತ್ಸವ, ಇದು ಒಂದು ರೀತಿಯ ತ್ರಿವೇಣಿ ಸಂಗಮ, ಭಾರತದ ಅಭಿವೃದ್ಧಿ ಮತ್ತು ಪರಂಪರೆಯೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ಅವಕಾಶ ಎಂದು ಶ್ರೀ ಮೋದಿಯವರು ಹೇಳಿದರು.

ಪ್ರಧಾನಿಯವರು ತಮ್ಮ ಭಾಷಣದ ಕೊನೆಯಲ್ಲಿ, ಭಾರತೀಯ ಸಮುದಾಯದವರು ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದರೂ ಮತ್ತು ಅನೇಕ ಬಾರಿ ಭೇಟಿ ನೀಡಿದ್ದರೂ, ಈ ಭೇಟಿಯು ಅವರ ಜೀವನದ ಅಮೂಲ್ಯ ಸ್ಮರಣೆಯಾಗಲಿದೆ ಎಂದು ಹೇಳಿದರು. ಎಲ್ಲರ ಉತ್ಸಾಹ ಮತ್ತು ಆತ್ಮೀಯ ಸ್ವಾಗತಕ್ಕಾಗಿ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು.

 

 

*****


(Release ID: 2074592) Visitor Counter : 8