ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಎಫ್ ಟಿ ಐ ಐ ನ ವಿದ್ಯಾರ್ಥಿ ಚಲನಚಿತ್ರ 'ಸನ್ ಫ್ಲವರ್ಸ್ ವೆರ್ ದಿ ಫರ್ಸ್ಟ್ ಒನ್ಸ್ ಟು ನೋʼ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಗೆ ಅರ್ಹತೆ ಪಡೆದಿದೆ


ಎಫ್ ಟಿ ಐ ಐ ನಿರ್ಮಿಸಿದ ಮತ್ತು ಲಾ ಸಿನೆಫ್- ಕಾನ್  ವಿಜೇತ ಚಲನಚಿತ್ರವು 97ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಸ್ಪರ್ಧಿಸಲಿದೆ

Posted On: 04 NOV 2024 5:55PM by PIB Bengaluru

ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್ ಟಿಐಐ) ವಿದ್ಯಾರ್ಥಿಯ ಚಲನಚಿತ್ರ 'ಸನ್ ಫ್ಲವರ್ಸ್ ವೆರ್ ದಿ ಫರ್ಸ್ಟ್ ಒನ್ಸ್ ಟು ನೋʼ' ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ 2025 ಆಸ್ಕರ್ ಪ್ರಶಸ್ತಿಗೆ ಅರ್ಹತೆ ಪಡೆದಿದೆ.
 
ಈ ಕಿರುಚಿತ್ರವನ್ನು ಎಫ್ ಟಿ ಐ ಐ ವಿದ್ಯಾರ್ಥಿ ಚಿದಾನಂದ ಎಸ್ ನಾಯಕ್ ನಿರ್ದೇಶಿಸಿದ್ದಾರೆ ಮತ್ತು ಈ ವರ್ಷದ ಆರಂಭದಲ್ಲಿ ಕಾನ್ ಚಲನಚಿತ್ರೋತ್ಸವದ ಲಾ ಸಿನೆಫ್ ಆಯ್ಕೆಯಲ್ಲಿ ಮೊದಲ ಬಹುಮಾನವನ್ನು ಗೆದ್ದುಕೊಂಡಿತು, ಭಾರತೀಯ ಜಾನಪದ ಕಥೆಗಳು ಮತ್ತು ಸಂಪ್ರದಾಯಗಳಿಂದ ಪ್ರೇರಿತವಾದ ಈ ಕನ್ನಡ ಭಾಷೆಯ ಕಿರುಚಿತ್ರವು ಜಾಗತಿಕ ಮನ್ನಣೆಗೆ ಕಾರಣವಾಯಿತು.

ಚಿದಾನಂದ್ ಎಸ್. ನಾಯಕ್ ಎಫ್ ಟಿಐಐನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಿರ್ಮಿಸಲಾಗಿದ್ದ ಈ ಕಿರುಚಿತ್ರವು ಸೂರಜ್ ಠಾಕೂರ್ (ಛಾಯಾಗ್ರಹಣ), ಮನೋಜ್ ವಿ (ಸಂಕಲನ) ಮತ್ತು ಅಭಿಷೇಕ್ ಕದಮ್ (ಧ್ವನಿ ವಿನ್ಯಾಸ) ಸೇರಿದಂತೆ ಪ್ರತಿಭಾವಂತ ತಂಡದ ಪರಿಣತಿಯನ್ನು ಪ್ರದರ್ಶಿಸುತ್ತದೆ. ನಿರೂಪಣೆಯು ಚುರುಕಾಗಿದ್ದು ಗಹನವಾಗಿದೆ, ಹಳ್ಳಿಯ ಹುಂಜವನ್ನು ಕದಿಯುವ ವಯಸ್ಸಾದ ಮಹಿಳೆಯನ್ನು ಕೇಂದ್ರೀಕರಿಸುತ್ತದೆ, ಇದು ಸೂರ್ಯನ ಬೆಳಕನ್ನು ತಡೆಯಲು ಕಾರಣವಾಗಿ ಪರಿಣಾಮವಾಗಿ ಸಮುದಾಯದೊಳಗೆ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ. ವ್ಯವಸ್ಥೆಯನ್ನು ಮರುಸ್ಥಾಪಿಸುವ ಪ್ರಯತ್ನದಲ್ಲಿ, ಸಂತರಲ್ಲಿ ಸಲಹೆ ಕೇಳಲಾಗುತ್ತದೆ, ಇದರ ಪರಿಣಾಮವಾಗಿ ಮಹಿಳೆಯ ಕುಟುಂಬದವರನ್ನು ಬಹಿಷ್ಕರಿಸಲಾಗುತ್ತದೆ. ಆದ್ದರಿಂದ ಅವರು ಹುಂಜವನ್ನು ಹುಡುಕುವ ಕಾರ್ಯವನ್ನು ಕೈಗೊಳ್ಳುತ್ತಾರೆ.

ಕ್ಯಾನ್ ನಲ್ಲಿನ ಲಾ ಸಿನೆಫ್ ಜ್ಯೂರಿ ತಂಡವು ಚಲನಚಿತ್ರವನ್ನು ಅದರ ಬೆಳಕು ಚೆಲ್ಲುವ ಕಥೆಯ ನಿರೂಪಣೆ   ಮತ್ತು ಅದ್ಭುತ ನಿರ್ದೇಶನಕ್ಕಾಗಿ ಶ್ಲಾಘಿಸಿದೆ. "ರಾತ್ರಿಯ ಆಳದಿಂದ, ಹಾಸ್ಯ ಮತ್ತು ತೀಕ್ಷ್ಣವಾದ ನಿರ್ದೇಶನದ ಪ್ರಜ್ಞೆಯಿಂದ ಹೊಳೆಯುವ ಒಂದು ಬೆಳಕು, ಮೊದಲ ಬಹುಮಾನವನ್ನು ಚಿದಾನಂದ ಎಸ್ ನಾಯಕ್ ಅವರ ''ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು' ಚಿತ್ರಕ್ಕೆ ನೀಡಲಾತ್ತಿದೆ” ಎಂದು ಶ್ಲಾಘಿಸಿದೆ.

ಚಿತ್ರ ನಿರ್ದೇಶಕ ಚಿದಾನಂದ ಎಸ್ ನಾಯ್ಕ್ ಮಾತನಾಡಿ, “ನನಗೆ ನೆನಪಿಗೆ ಬಂದಾಗಿನಿಂದ ಈ ಕಥೆಯನ್ನು ಹೇಳಬೇಕೆಂಬ ಆಸೆ ಇತ್ತು. ನಮ್ಮ ಗುರಿ ಕೇವಲ ಈ ಕಥೆಗಳನ್ನು ಕೇಳುವುದು ಮಾತ್ರವಲ್ಲ, ಅವುಗಳ ನಿಜವಾದ ಪ್ರಾಮಾಣಿಕ ಅನುಭವವನ್ನು ನೀಡುವುದು ನಮ್ಮ ಉದ್ದೇಶವಾಗಿತ್ತು - ಇದು ಪ್ರಪಂಚದಾದ್ಯಂತದ ಪ್ರೇಕ್ಷಕರಿಕೆ ಇಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ.

ಸಂಪೂರ್ಣವಾಗಿ ರಾತ್ರಿಯಲ್ಲಿ ಚಿತ್ರೀಕರಿಸಲಾದ 'ಸನ್ ಫ್ಲವರ್ಸ್ ವೆರ್ ದಿ ಫರ್ಸ್ಟ್ ಒನ್ಸ್ ಟು ನೋʼ ,ವೀಕ್ಷಕರನ್ನು ಭಾರತೀಯ ಪರಿಸರದ ಹೃದಯದಲ್ಲಿ ಮುಳುಗಿಸುತ್ತದೆ, ಅದರ ವಿಶಿಷ್ಟ ಸಂಸ್ಕೃತಿ ಮತ್ತು ವಾತಾವರಣದೊಂದಿಗೆ ತೊಡಗಿಸಿಕೊಳ್ಳಲು ಅವರನ್ನು ಆಹ್ವಾನಿಸುತ್ತದೆ. ಶ್ರೀ ನಾಯ್ಕ್ ಅವರ ನಿರ್ದೇಶನವು  ದೇಶದ ಸೌಂದರ್ಯವನ್ನು ಆಚರಿಸುವ ದೃಶ್ಯಗಳೊಂದಿಗೆ ಸಾಂಪ್ರದಾಯಿಕ ನಿರೂಪಣಾ ಅಂಶಗಳನ್ನು ಕಲಾತ್ಮಕವಾಗಿ ಸಂಯೋಜಿಸುತ್ತದೆ, ಜನರ ನಡುವಿನ ಆಳವಾದ ಬೇರೂರಿರುವ ಸಂಪರ್ಕಗಳು ಮತ್ತು ಅವರ ಕಥೆಗಳ ಮಾಂತ್ರಿಕತೆಯನ್ನು ಒತ್ತಿಹೇಳುತ್ತದೆ.

ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಸ್ಪರ್ಧಾತ್ಮಕ ಪ್ರಶಸ್ತಿ ಸೇರಿದಂತೆ ಚಿತ್ರೋತ್ಸವದ ವಲಯದಲ್ಲಿ ಮೆಚ್ಚುಗೆಯನ್ನು ಪಡೆದಿರುವ 'ಸನ್ ಫ್ಲವರ್ಸ್ ವೆರ್ ದಿ ಫರ್ಸ್ಟ್ ಒನ್ಸ್ ಟು ನೋʼ  ಈಗ ವಿಶ್ವದ ಅತ್ಯುತ್ತಮ ಕಿರುಚಿತ್ರಗಳ ಜೊತೆಗೆ ಸ್ಪರ್ಧಿಸಲು ಸಜ್ಜಾಗಿದೆ.  ಈ ಕಿರುಚಿತ್ರದ ಪ್ರಚಾರವು ವಿಶೇಷ ಪ್ರದರ್ಶನಗಳು, ಪತ್ರಿಕಾ ಗೋಷ್ಟಿಗಳು ಮತ್ತು ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ, ಇದು ಅಕಾಡೆಮಿ ಸದಸ್ಯರು ಮತ್ತು ವಿಶ್ವಾದ್ಯಂತ ಪ್ರೇಕ್ಷಕರಿಗೆ ಭಾರತದ ಕಥೆ ಹೇಳುವ ಸಂಪ್ರದಾಯಗಳ ಸಾರ್ವತ್ರಿಕ ಶಕ್ತಿಯ ಒಂದು ನೋಟವನ್ನು ನೀಡುತ್ತದೆ. ಪುರಸ್ಕಾರಗಳ ಹೊರತಾಗಿ, 'ಸನ್ ಫ್ಲವರ್ಸ್ ವೆರ್ ದಿ ಫರ್ಸ್ಟ್ ಒನ್ಸ್ ಟು ನೋʼ  ಭಾರತೀಯ ಸಂಸ್ಕೃತಿ ಮತ್ತು ಕಥೆ ಹೇಳುವಿಕೆಯೊಂದಿಗೆ ತೊಡಗಿಸಿಕೊಳ್ಳಲು ವೀಕ್ಷಕರಿಗೆ ಒಂದು ಆಹ್ವಾನವಾಗಿ ಕಾರ್ಯನಿರ್ವಹಿಸುತ್ತದೆ, ಸಾರ್ವತ್ರಿಕವಾದ ವಿಷಯವು ಜಾಗತಿಕ ಪ್ರೇಕ್ಷಕರ ಮನಸ್ಸಿಗೆ  ಆಳವಾಗಿ  ನಾಟುತ್ತದೆ.

 

*****


(Release ID: 2070735) Visitor Counter : 24