ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆದ ಜಿ-20 ಡಿಆರ್ ಆರ್‌ ಡಬ್ಲೂಜಿ ಸಚಿವರ ಸಭೆಯಲ್ಲಿ ಉನ್ನತ ಮಟ್ಟದ ಭಾರತೀಯ ನಿಯೋಗ ಭಾಗಿ

Posted On: 02 NOV 2024 10:00AM by PIB Bengaluru

ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ. ಪಿಕೆ ಮಿಶ್ರಾ ನೇತೃತ್ವದ ಉನ್ನತ ಮಟ್ಟದ ಭಾರತೀಯ ನಿಯೋಗವು ಬ್ರೆಜಿಲ್‌ನ ಬೆಲೆಮ್‌ನಲ್ಲಿ 2024ರ ಅಕ್ಟೋಬರ್ 30 ರಿಂದ ನವೆಂಬರ್ 1 ರವರೆಗೆ ನಡೆದ ಜಿ-20 ವಿಪತ್ತು ಅಪಾಯ ಕಡಿತ ವರ್ಕಿಂಗ್ ಗ್ರೂಪ್ (ಡಿ ಆರ್ ಆರ್ ಡಬ್ಲೂ ಜಿ-DRRWG) ಸಚಿವರ ಸಭೆಯಲ್ಲಿ ಭಾಗವಹಿಸಿತು.

ಭಾರತೀಯ ನಿಯೋಗದ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ವಿಪತ್ತು ಅಪಾಯ ಕಡಿತದ (ಡಿ ಆರ್ ಆರ್) ಮೊದಲ ಸಚಿವರ ಘೋಷಣೆಯನ್ನು ಅಂತಿಮಗೊಳಿಸುವಲ್ಲಿ ಒಮ್ಮತವು ಮೂಡಿತು. ವಿವಿಧ ಸಚಿವಾಲಯಗಳ ಗೋಷ್ಠಿಗಳಲ್ಲಿ ಡಾ. ಪಿ.ಕೆ. ಮಿಶ್ರಾ ಅವರು ವಿಪತ್ತು ಅಪಾಯಗಳನ್ನು ತಗ್ಗಿಸುವಲ್ಲಿ ಮತ್ತು ಭಾರತದಲ್ಲಿ ವಿಪತ್ತು ಹಣಕಾಸು ಹೆಚ್ಚಿಸುವಲ್ಲಿ ಭಾರತ ಸರ್ಕಾರ ಮಾಡಿದ ಪ್ರಗತಿಯನ್ನು ಹಾಗೂ ಆವಿಷ್ಕಾರಗಳನ್ನು ಹಂಚಿಕೊಂಡರು.

ಡಾ. ಪಿ.ಕೆ. ಮಿಶ್ರಾ ಅವರು ಡಿಆರ್‌ಆರ್‌ಡಬ್ಲ್ಯುಜಿಯ ಐದು ಆದ್ಯತೆಗಳ ಮೇಲೆ ವಿಪತ್ತು ಅಪಾಯ ಕಡಿತಕ್ಕೆ (ಡಿಆರ್‌ಆರ್) ಭಾರತದ ಪೂರ್ವಭಾವಿ ವಿಧಾನದ ಬಗ್ಗೆ  ಒತ್ತಿ ಹೇಳಿದರು. ಅವುಗಳನ್ನು ಭಾರತದ ಜಿ-20 ಅಧ್ಯಕ್ಷತೆಯಲ್ಲಿ ಘೋಷಿಸಲ್ಪಟ್ಟಿದ್ದವು, ಅವುಗಳೆಂದರೆ ಮುನ್ನೆಚ್ಚರಿಕೆ ವ್ಯವಸ್ಥೆಗಳು, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ, ಡಿಆರ್‌ಆರ್ ಹಣಕಾಸು, ಸ್ಥಿತಿಸ್ಥಾಪಕ ಪರಿಹಾರಗಳು ಮತ್ತು ಪ್ರಕೃತಿ ಆಧಾರಿತ ಚೇತರಿಕೆ ಇತ್ಯಾದಿ. ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯದಲ್ಲಿ ಅವರು ಈಗ 40 ದೇಶಗಳು ಮತ್ತು 7 ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಸದಸ್ಯರಾಗಿರುವ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ (ಸಿ ಡಿ ಆರ್ ಐ) ಗಾಗಿ ಪ್ರಧಾನ ಮಂತ್ರಿ ಅವರ ಜಾಗತಿಕ ಉಪಕ್ರಮವನ್ನು ಹಂಚಿಕೊಂಡರು.

ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿಯವರು ಸೆಂಡೈ(Sendai) ಚೌಕಟ್ಟಿಗೆ ಭಾರತ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಜಾಗತಿಕವಾಗಿ ವಿಪತ್ತು ಸ್ಥಿತಿಸ್ಥಾಪಕತ್ವವನ್ನು ವೃದ್ಧಿಸಲು ಜ್ಞಾನ ಹಂಚಿಕೆ, ತಂತ್ರಜ್ಞಾನ ವರ್ಗಾವಣೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಅಂತಾರಾಷ್ಟ್ರೀಯ ಸಹಯೋಗವನ್ನು ಹೆಚ್ಚಿಸುವಂತೆ ಕರೆ ನೀಡಿದರು.

ಭಾರತೀಯ ನಿಯೋಗವು ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಸಚಿವರುಗಳೊಂದಿಗೆ ಟ್ರೋಕಾ ಸಭೆಯಲ್ಲಿ ಭಾಗವಹಿಸಿತು ಮತ್ತು ಆತಿಥೇಯ ದೇಶ ಬ್ರೆಜಿಲ್ ಮತ್ತು ಇತರ ದೇಶಗಳಾದ ಜಪಾನ್, ನಾರ್ವೆ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಜರ್ಮನಿ ಮತ್ತು ಆಹ್ವಾನಿತ ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿತು.

ತೀವ್ರವಾದ ಬಿಸಿ ಶಾಖದ ಕುರಿತು ಯುಎನ್‌ಎಸ್‌ಜಿ ಕರೆಗೆ ಪ್ರತಿಕ್ರಿಯಿಸಿ, ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಅನುಭವವನ್ನು ಹಂಚಿಕೊಂಡರು ಮತ್ತು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಾಂಪ್ರದಾಯಿಕ ಆಚರಣೆಗಳನ್ನು ಉತ್ತೇಜಿಸುವ ಗಮನ ಹರಿಸುತ್ತಿರುವುದು ಒಳಗೊಂಡಂತೆ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ವಿವರಿಸಿದರು,

ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಭಾರತದ ಉಪಕ್ರಮದ ಮೇಲೆ 2023ರಲ್ಲಿ ಮೊದಲ ಡಿ ಆರ್ ಆರ್ ಡ ಬ್ಲೂಜಿ ಅನ್ನು ಸ್ಥಾಪಿಸಲಾಯಿತು. ಡಿ ಆರ್ ಆರ್ ಡಬ್ಲೂ ಜಿಯ ಮುಂದುವರಿಕೆಗಾಗಿ ಬ್ರೆಜಿಲ್ ಅಧ್ಯಕ್ಷತೆಯನ್ನು ಡಾ. ಮಿಶ್ರಾ ಅಭಿನಂದಿಸಿದರು ಮತ್ತು ಅದನ್ನು ಸಚಿವರ ಮಟ್ಟಕ್ಕೆ ಎತ್ತರಿಸಿದರು ಮತ್ತು ಮುಂದಿನ ವರ್ಷ ಜಿ20 ಅಧ್ಯಕ್ಷತೆ ವಹಿಸಲಿರುವ ದಕ್ಷಿಣ ಆಫ್ರಿಕಾ ಡಿಆರ್ ಆರ್ ಡಬ್ಲೂಜಿಯಲ್ಲಿ  ಭಾರತದ ಬೆಂಬಲವನ್ನು ದೃಢಪಡಿಸಿದರು.

ಭಾರತದ ಭಾಗವಹಿಸುವಿಕೆಯು ಜಾಗತಿಕ ಡಿ ಆರ್‌ ಆರ್ ಪ್ರಯತ್ನಗಳಲ್ಲಿ ಅದರ ಬೆಳೆಯುತ್ತಿರುವ ಪಾತ್ರವನ್ನು ಒತ್ತಿಹೇಳುತ್ತದೆ ಮತ್ತು ಸುರಕ್ಷಿತ ಮತ್ತು ಹೆಚ್ಚು ಸ್ಥಿತಿಸ್ಥಾಪಕ ಜಗತ್ತನ್ನು ನಿರ್ಮಿಸುವ ಅದರ ಬದ್ಧತೆಯನ್ನು ಬಲವಾಗಿ ಪ್ರತಿಪಾದಿಸುತ್ತದೆ.

 

*****


(Release ID: 2070336) Visitor Counter : 27