ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಬೇಗ ಬನ್ನಿ! ಭಾರತದಾದ್ಯಂತ ಉದಯೋನ್ಮುಖ VFX ಕಲಾವಿದರಿಗೆ ಸುವರ್ಣಾವಕಾಶ
ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ABAI ಸ್ಥಳೀಯ ಪ್ರತಿಭೆಯನ್ನು ಪೋಷಿಸಲು ಮತ್ತು 'ಕ್ರಿಯೇಟ್ ಇನ್ ಇಂಡಿಯಾ' ಕಾರ್ಯಕ್ರಮವನ್ನು ಬೆಂಬಲಿಸಲು WAFX WAVES VFX ಚಾಲೆಂಜ್ ಪ್ರಾರಂಭಿಸಿದೆ
ಭಾರತದ ಅನಿಮೇಷನ್, ವಿಷುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ವಲಯದಲ್ಲಿ ಅವಕಾಶಗಳನ್ನು ಅನ್ವೇಷಿಸಲು ಸಿದ್ಧರಿರುವ ಯುವ ಕಲಾವಿದರಿಗೆ ನೋಂದಣಿ ಆರಂಭವಾಗಿದೆ
ಅಗ್ರ ಫೈನಲಿಸ್ಟ್ ಗಳು 5 ರಿಂದ 9 ಫೆಬ್ರವರಿ 2025 ರವರೆಗೆ ದೆಹಲಿಯಲ್ಲಿ ನಿಗದಿಪಡಿಸಿದ WAVES ಶೃಂಗಸಭೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಸಲಿದ್ದಾರೆ
Posted On:
29 OCT 2024 8:35PM by PIB Bengaluru
ನಿಮ್ಮಲ್ಲಿ ಸೃಜನಶೀಲತೆ ಇದೆಯೇ? ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ಕಲೆ ಬಲ್ಲಿರಾ? 'ದೈನಂದಿನ ಜೀವನದ ಸೂಪರ್ ಹೀರೋ' (Daily Life Superhero) ಎಂಬ ವಿಷಯವನ್ನು 30 ಸೆಕೆಂಡುಗಳ VFX ವಿಡಿಯೋ ಮೂಲಕ ಚಿತ್ರೀಕರಿಸುವ ಸಾಮರ್ಥ್ಯ ನಿಮ್ಮದಾಗಿದ್ದರೆ, ₹5 ಲಕ್ಷ ರೂಪಾಯಿಗಳ ಬಹುಮಾನ ಹಾಗೂ ಪ್ರಸಿದ್ಧ ಸ್ಟುಡಿಯೋಗಳಲ್ಲಿ ಇಂಟರ್ನ್ ಶಿಪ್ ಮಾಡುವ ಅಪೂರ್ವ ಅವಕಾಶ ನಿಮ್ಮದಾಗಲಿದೆ. ಬಹುಮಾನ ಗೆಲ್ಲುವುದಷ್ಟೇ ಅಲ್ಲ, ಫೆಬ್ರವರಿಯಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ವಿಶ್ವ ಆಡಿಯೋ ದೃಶ್ಯ ಮನರಂಜನಾ ಶೃಂಗಸಭೆಯಲ್ಲಿ ವೃತ್ತಿಪರರ ಮುಂದೆ ನಿಮ್ಮ ಕೃತಿಯನ್ನು ಪ್ರದರ್ಶಿಸಲಾಗುವುದು. ಅಲ್ಲದೆ ನಿಮ್ಮ ಕೌಶಲ್ಯ ವೃದ್ಧಿಗೆ ವಿಶೇಷ ತರಬೇತಿಯನ್ನು ನೀಡಲಾಗುವುದು. ಇದರಿಂದ ನಿಮಗೊಂದು ಉತ್ತಮ ವೃತ್ತಿಜೀವನದ ಅವಕಾಶವೂ ಒದಗಲಿದೆ. ಭಾರತದಲ್ಲಿ VFX ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ, ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯವು, ಭಾರತದ ಮುಂಚೂಣಿ ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVGC) ಸಂಸ್ಥೆಯಾದ ABAI ಯೊಂದಿಗೆ ಜಂಟಿಯಾಗಿ 'WAFX WAVES VFX ಚಾಲೆಂಜ್' ಸ್ಪರ್ಧೆಯನ್ನು ಆಯೋಜಿಸಿದೆ. ಈ ಸ್ಪರ್ಧೆಯು ವರ್ಲ್ಡ್ ಆಡಿಯೋ ವಿಶುವಲ್ ಮತ್ತು ಎಂಟರ್ ಟೈನ್ ಮೆಂಟ್ ಸಮ್ಮಿಟ್ 2025 (WAVES) ಅಂಗವಾಗಿ ನಡೆಯುತ್ತಿದೆ. ಈ ಉಪಕ್ರಮವು 'ಕ್ರಿಯೇಟ್ ಇನ್ ಇಂಡಿಯಾ' ಅಭಿಯಾನದ ಭಾಗವಾಗಿದ್ದು, ದೇಶದ ಪ್ರತಿಭಾವಂತ ಯುವಕರನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ಕಂಟೆಂಟ್ ಕ್ರಿಯೇಟ್ ವಿಚಾರದಲ್ಲಿದಲ್ಲಿ ಭಾರತವನ್ನು ಒನ್-ಸ್ಟಾಪ್ ಕೇಂದ್ರವನ್ನಾಗಿ ಮಾರ್ಪಡಿಸುವ ಗುರಿಯನ್ನು ಹೊಂದಿದೆ. ಇದು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸೃಜನಶೀಲ ಭಾರತದ ಕನಸಿಗೆ ಪೂರಕವಾಗಿದೆ.
ಚಳುವಳಿಯಲ್ಲಿ ಭಾಗಿಯಾಗಿ: ಈಗಲೇ ನೋಂದಣಿ ಮಾಡಿ!
ಭಾರತದಾದ್ಯಂತ ಹೊಸ ಹೊಸದಾಗಿ ಹೊರಹೊಮ್ಮುತ್ತಿರುವ VFX ಕಲಾವಿದರು, WAFX ವೇವ್ಸ್ VFX ಸವಾಲಿನಲ್ಲಿ ಭಾಗವಹಿಸಿ, ವೇಗವಾಗಿ ಬೆಳೆಯುತ್ತಿರುವ VFX ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಹುದು. ನೋಂದಣಿ ಈಗ ಆರಂಭವಾಗಿದ್ದು, ಹೆಚ್ಚಿನ ಮಾಹಿತಿಗಾಗಿ http://www.wafx.abai.avgc.in ವೆಬ್‌ಸೈಟ್ ಭೇಟಿ ನೀಡಿ. ಈ ಸ್ಪರ್ಧೆಯು ಕೇವಲ ನಿಮ್ಮ ಕೌಶಲ್ಯವನ್ನು ಪ್ರದರ್ಶಿಸುವ ಅವಕಾಶವಷ್ಟೇ ಅಲ್ಲ, ವೃತ್ತಿಪರ ಬೆಳವಣಿಗೆಗೆ ಒಂದು ಮೈಲಿಗಲ್ಲು. ಭಾರತದ ಅಗ್ರಗಣ್ಯ VFX ಸ್ಟುಡಿಯೋಗಳು ಮತ್ತು ಮಾರ್ಗದರ್ಶಕರ ಬಲಿಷ್ಠ ನೆಟ್ ವರ್ಕ್ ನಲ್ಲಿ ಸೇರಲು ಇದೊಂದು ಅಪೂರ್ವ ಅವಕಾಶ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: wafx@abai.avgc.in, generalsecretary@abai.avgc.in, http://www.wafx.abai.avgc.in
ಸ್ಪರ್ಧೆಯ ರಚನೆ ಮತ್ತು ಬಹುಮಾನಗಳು: WAFX ಮೂರು ಹಂತಗಳನ್ನು ಒಳಗೊಂಡಿರುತ್ತದೆ
ಮೊದಲ ಹಂತದಲ್ಲಿ ಆನ್‌ಲೈನ್ ಅರ್ಹತಾ ಸುತ್ತು ಇರುತ್ತದೆ, ಇಲ್ಲಿ 2000ಕ್ಕೂ ಹೆಚ್ಚು ಪ್ರವೇಶಗಳನ್ನು ನಿರೀಕ್ಷಿಸಲಾಗುತ್ತಿದೆ. ಇವುಗಳಿಂದ 'ಪ್ರಿ-ಸೆಲೆಕ್ಷನ್' ಜ್ಯೂರಿ, 10 ವಿದ್ಯಾರ್ಥಿಗಳು ಮತ್ತು 10 ವೃತ್ತಿಪರ ಸ್ಪರ್ಧಿಗಳನ್ನು ಆಯ್ಕೆ ಮಾಡಿ ಎರಡನೇ ಹಂತಕ್ಕೆ ಕಳುಹಿಸುತ್ತದೆ. ಈ ಸ್ಪರ್ಧಿಗಳು ವಲಯ ಮಟ್ಟದಲ್ಲಿ ಪ್ರತ್ಯಕ್ಷವಾಗಿ ಸ್ಪರ್ಧಿಸುತ್ತಾರೆ. ನಂತರ, ವಲಯ ವಿಜೇತರು ಗ್ರ್ಯಾಂಡ್ ಫಿನಾಲೆಗೆ ಮುನ್ನಡೆಯುತ್ತಾರೆ, ಇದು 24-ಗಂಟೆಗಳ VFX ಮ್ಯಾರಥಾನ್ ಮಾದರಿಯಲ್ಲಿ ನಡೆಯುತ್ತದೆ. ಈ ಅಂತಿಮ ಸುತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಹಾಗೂ ಖ್ಯಾತ VFX ಮೇಲ್ವಿಚಾರಕರನ್ನು ಒಳಗೊಂಡ ಗ್ರ್ಯಾಂಡ್ ಜ್ಯೂರಿ ಮುಂದೆ ನಡೆಯಲಿದೆ.
WAFXನಲ್ಲಿ ಭಾಗವಹಿಸುವವರು "ದೈನಂದಿನ ಜೀವನದ ಸೂಪರ್ ಹೀರೋ" ಎಂಬ ವಿಷಯದ ಮೇಲೆ ಮೂವತ್ತು ಸೆಕೆಂಡುಗಳ VFX ಚಿತ್ರವನ್ನು ತಯಾರಿಸಿ ಆನ್ ಲೈನ್‌ನಲ್ಲಿ ಸಲ್ಲಿಸಬೇಕು. ಈ ಸ್ಪರ್ಧೆಯಲ್ಲಿ ₹5 ಲಕ್ಷ ರೂಪಾಯಿಗಳ ಬಹುಮಾನಗಳು ಮತ್ತು ಉಡುಗೊರೆಗಳು, ಜೊತೆಗೆ ಪ್ರಸಿದ್ಧ ಚಿತ್ರ ತಂತ್ರಜ್ಞಾನ ಸಂಸ್ಥೆಗಳಲ್ಲಿ ತರಬೇತಿಯ ಅವಕಾಶ ಲಭ್ಯವಿದೆ. ಆನ್ ಲೈನ್ ಸುತ್ತಿನಲ್ಲಿ ಆಯ್ಕೆಯಾದ ಸ್ಪರ್ಧಿಗಳು ಚಂಡೀಗಢ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ನಡೆಯುವ ಪ್ರಾದೇಶಿಕ ಅಂತಿಮ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ಇಲ್ಲಿ ಅವರು ಪ್ರಖ್ಯಾತ ಚಲನಚಿತ್ರ ತಂತ್ರಜ್ಞಾನ ತಜ್ಞರ ಮುಂದೆ ತಮ್ಮ ಕೃತಿಯನ್ನು ಪ್ರದರ್ಶಿಸಲಿದ್ದಾರೆ. ಇದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರು 2025ರ ಫೆಬ್ರವರಿ 5 ರಿಂದ 9ರವರೆಗೆ ದೆಹಲಿಯಲ್ಲಿ ನಡೆಯುವ WAVES ಶೃಂಗಸಭೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಸುತ್ತಾರೆ.
WAFX ಚಾಲೆಂಜ್ ಆಕಾಂಕ್ಷಿ VFX ಕಲಾವಿದರನ್ನು ಸಬಲಗೊಳಿಸುತ್ತದೆ ಮತ್ತು ಭಾರತದ ಜಾಗತಿಕ ಸ್ಥಾನವನ್ನು ಹೆಚ್ಚಿಸುತ್ತದೆ
ಭಾರತದ ಚಲನಚಿತ್ರ ಮತ್ತು ಮಾಧ್ಯಮ ಕ್ಷೇತ್ರದಲ್ಲಿ VFX ಬಳಕೆ ಅಭೂತಪೂರ್ವ ಬೆಳವಣಿಗೆ ಕಾಣುತ್ತಿರುವ ಈ ಸಂದರ್ಭದಲ್ಲಿ, WAFX ಸವಾಲು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ, ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸಲಿದೆ. ಈ ರಾಷ್ಟ್ರಮಟ್ಟದ ಸ್ಪರ್ಧೆಯು ಉದ್ಯಮದ ಬೇಡಿಕೆಗೆ ತಕ್ಕಂತೆ VFX ವೃತ್ತಿಪರರನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಪರ್ಧಾತ್ಮಕತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. ಕರ್ನಾಟಕ ಮೂಲದ AVGC-XR ಉದ್ಯಮದ ವ್ಯಾಪಾರ ಸಂಘಟನೆಯಾದ ABAI ಈ 'WAFX ಚಾಲೆಂಜ್' ಎಂಬ ರಾಷ್ಟ್ರೀಯ ಉಪಕ್ರಮವನ್ನು ಆರಂಭಿಸಿದ್ದು, ಮುಂಚೂಣಿಯಲ್ಲಿರುವ ಎಲ್ಲ VFXಕಲಾವಿದರನ್ನು ಅದ್ಭುತ VFX ಕೃತಿಗಳನ್ನು ನಿರ್ಮಿಸಲು ಆಹ್ವಾನಿಸುತ್ತಿದೆ.
WAFX ವೇವ್ಸ್ VFX ಚಾಲೆಂಜ್: ಸಮೃದ್ಧ ಭವಿಷ್ಯಕ್ಕಾಗಿ ಯುವ ಪ್ರತಿಭೆಗಳನ್ನು ಅನಾವರಣಗೊಳಿಸುವುದು
ಭಾರತೀಯ ಸಿನಿಮಾ, ತನ್ನ ಸೃಜನಶೀಲತೆ ಮತ್ತು ಕಥೆ ಹೇಳುವ ಕಲೆಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದು, ಈಗ ನಮ್ಮ VFX ಸಾಮರ್ಥ್ಯಗಳಿಂದಾಗಿ ಜಾಗತಿಕ ಮಾನದಂಡಗಳಲ್ಲಿ ಅಂತರರಾಷ್ಟ್ರೀಯ ಸ್ಪರ್ಧಿಗಳೊಂದಿಗೆ ಸ್ಪರ್ಧಿಸುತ್ತಿದೆ. ಈ ಬೆಳವಣಿಗೆಯ ಹೊರತಾಗಿಯೂ, ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೌಶಲ್ಯಯುತ ವೃತ್ತಿಪರರ ಕೊರತೆಯನ್ನು ಈ ವಲಯ ಎದುರಿಸುತ್ತಿದೆ, ಇದರಿಂದಾಗಿ VFX ನಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಉದ್ಯಮದ ಸುಸ್ಥಿರ ಬೆಳವಣಿಗೆಗೆ ನಿರ್ಣಾಯಕವಾಗಿದೆ. WAFX ವೇವ್ಸ್ VFX ಸವಾಲು - ABAI ಯ ಪ್ರಮುಖ ಸ್ಪರ್ಧೆಯು, AVGC ವಲಯದಲ್ಲಿ ಉತ್ತೇಜಕ ಅವಕಾಶಗಳಿಗಾಗಿ ಅವರನ್ನು ಸಿದ್ಧಪಡಿಸಲು ಯುವ ಪ್ರತಿಭೆಯನ್ನು ಹುಡುಕಲು ಮತ್ತು ಪೋಷಿಸಲು ರೂಪಿಸಲಾಗಿದೆ.
ಭಾರತದ ಸೃಜನಶೀಲ ಉದ್ಯಮವನ್ನು ಹೊಸ ಕೌಶಲ್ಯಗಳೊಂದಿಗೆ ಮುನ್ನಡೆಸಲು WAFX ಚಾಲೆಂಜ್ ಮತ್ತು WAVES ಶೃಂಗಸಭೆ
ABAI ಅಧ್ಯಕ್ಷರು ಮತ್ತು ಏಷ್ಯಾ ಪೆಸಿಫಿಕ್, ಟೆಕ್ನಿಕಲರ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಬೀರೇನ್ ಘೋಷ್, WAFX ಮತ್ತು WAVES ವ್ಯವಹಾರ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವ ಕುರಿತು ಮಾತನಾಡಿದರು. "ತಾಂತ್ರಿಕ ಪ್ರಗತಿ ಮತ್ತು ಹೊಸ ಮಿಶ್ರಿತ ವಿಷಯಗಳಿಂದ ಗ್ರಾಹಕರ ಅನುಭವ ಹೆಚ್ಚಿಸುವ ಮೂಲಕ ಸೃಜನಾತ್ಮಕ ಕ್ಷೇತ್ರ ಗಮನಾರ್ಹ ಬದಲಾವಣೆಗೊಳಗಾಗುತ್ತಿದೆ" ಎಂದು ಅವರು ಹೇಳಿದರು. "ಈ ಹೊಸ ಯುಗದಲ್ಲಿ, ದೃಶ್ಯ ಮತ್ತು ಕಥನ ಕಲೆಯು ಟಿವಿ ಮತ್ತು ಸಿನಿಮಾವನ್ನು ಮೀರಿ ವಸ್ತು ಸಂಗ್ರಹಾಲಯ, ವಿಮಾನ ನಿಲ್ದಾಣ ಮತ್ತು ಸಾರ್ವಜನಿಕ ಸ್ಥಳಗಳಿಗೆ ವಿಸ್ತರಿಸುತ್ತಿದೆ. ಇದು ನಾವೀನ್ಯತೆಯನ್ನು ಪ್ರೋತ್ಸಾಹಿಸಿ, ಭಾರತದಲ್ಲಿ ಮತ್ತು ಭಾರತದಿಂದ ಸೃಜನಶೀಲತೆಗೆ ಹೊಸ ಪ್ರತಿಭೆ ಮತ್ತು ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ದೇಶದ ಎಲ್ಲ ಮೂಲೆ ಮೂಲೆಯಲ್ಲಿರುವ ಸಾವಿರಾರು ಭಾರತೀಯರನ್ನು ಒಟ್ಟುಗೂಡಿಸಿ AVGC-XR ನ ಪ್ರತಿಯೊಂದು ಅಂಶವನ್ನು ಒತ್ತಿಹೇಳಲು ಮತ್ತು WAVES ನ ಅಂತಿಮ ಸ್ಪರ್ಧೆಯಲ್ಲಿ ಜಾಗತಿಕ ವೇದಿಕೆಯಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸಲು WAFX ಸವಾಲವನ್ನು ವಿಶೇಷವಾಗಿ ರೂಪಿಸಲಾಗಿದೆ" ಎಂದು ಅವರು ತಿಳಿಸಿದರು.
*****
(Release ID: 2069929)
Visitor Counter : 19