ಪ್ರಧಾನ ಮಂತ್ರಿಯವರ ಕಛೇರಿ
ಆರಂಭ್ 6.0 ತರಗತಿ ವೇಳೆ ಯುವ ನಾಗರಿಕ ಸೇವಾ ಸಿಬ್ಬಂದಿಯೊಂದಿಗೆ ಪ್ರಧಾನಮಂತ್ರಿ ಸಂವಾದ
ನಾಗರಿಕರ “ಸುಲಲಿತ ಜೀವನ” ಸುಧಾರಿಸುವಂತೆ ಯುವ ನಾಗರಿಕ ಸೇವಾ ಸಿಬ್ಬಂದಿಗೆ ಪ್ರಧಾನಮಂತ್ರಿ ಕರೆ
प्रविष्टि तिथि:
30 OCT 2024 9:13PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರಂಭ್ 6.0ರ ಸಂದರ್ಭದಲ್ಲಿ ಯುವ ನಾಗರಿಕ ಸೇವಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಜನರ ಪಾಲ್ಗೊಳ್ಳುವಿಕೆಯೊಂದಿಗೆ ಆಡಳಿತ ಸುಧಾರಿಸುವ ಕುರಿತಂತೆ ಯುವ ನಾಗರಿಕ ಸೇವಾ ಸಿಬ್ಬಂದಿಯೊಂದಿಗೆ ಪ್ರಧಾನಮಂತ್ರಿಯವರು ವಿಸ್ತೃತ ಚರ್ಚೆ ನಡೆಸಿದರು. ಸದೃಢ ಪ್ರತಿಕ್ರಿಯಾ ಕಾರ್ಯವ್ಯವಸ್ಥೆ ಮತ್ತು ಕುಂದುಕೊರತೆ ನಿವಾರಣಾ ವ್ಯವಸ್ಥೆಯ ಸುಧಾರಣೆಯ ಮಹತ್ವದ ಬಗ್ಗೆ ಪ್ರಧಾನಮಂತ್ರಿಗಳು ಒತ್ತಿ ಹೇಳಿದರು. ನಾಗರಿಕರಿಗೆ “ಸುಲಲಿತ ಜೀವನ” ವನ್ನು ಸುಧಾರಿಸುವ ಬಗ್ಗೆ ಯುವ ನಾಗರಿಕ ಸೇವಾ ಸಿಬ್ಬಂದಿ ಗಮನಹರಿಸುವಂತೆ ಪ್ರಧಾನಮಂತ್ರಿ ಕರೆ ನೀಡಿದರು.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:
“ಆರಂಭ್ 6.0 ತರಗತಿಯ ವೇಳೆ ಯುವ ನಾಗರಿಕ ಸೇವಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದೆ. ಜನರ ಪಾಲ್ಗೊಳ್ಳುವಿಕೆಯೊಂದಿಗೆ ಹೇಗೆ ಆಡಳಿತವನ್ನು ಸುಧಾರಿಸಬಹುದು ಎಂಬ ಬಗ್ಗೆ ನಾವು ವ್ಯಾಪಕವಾಗಿ ಚರ್ಚೆ ನಡೆಸಿದೆವು. ಸದೃಢ ಪ್ರತಿಕ್ರಿಯಾ ವ್ಯವಸ್ಥೆ ಹೊಂದುವ ಬಗ್ಗೆ ಮತ್ತು ಕುಂದುಕೊರತೆ ನಿವಾರಣಾ ವ್ಯವಸ್ಥೆಯ ಸುಧಾರಣೆಯ ಮಹತ್ವದ ಬಗ್ಗೆ ತಿಳಿಸಿದೆ. ನಾಗರಿಕರಿಗೆ ʼಸುಲಲಿತ ಜೀವನʼವನ್ನು ಸುಧಾರಿಸುವಂತೆ ಯುವ ನಾಗರಿಕ ಸೇವಾ ಸಿಬ್ಬಂದಿಯನ್ನು ಪ್ರೇರೇಪಿಸಿರುವೆ”
*****
(रिलीज़ आईडी: 2069826)
आगंतुक पटल : 82
इस विज्ञप्ति को इन भाषाओं में पढ़ें:
Odia
,
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam