ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಷ್ಯಾದ ಅಧ್ಯಕ್ಷರೊಂದಿಗಿನ ದ್ವಿಪಕ್ಷೀಯ ಸಭೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಆರಂಭಿಕ ಹೇಳಿಕೆ (ಅಕ್ಟೋಬರ್ 22, 2024)

Posted On: 22 OCT 2024 7:24PM by PIB Bengaluru

ಗೌರವಾನ್ವಿತರೇ,

ನಿಮ್ಮ ಸ್ನೇಹ, ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ನಾನು ಪ್ರಾಮಾಣಿಕವಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಬ್ರಿಕ್ಸ್ ಶೃಂಗಸಭೆಗಾಗಿ ಕಜಾನ್ ನಂತಹ ಸುಂದರ ನಗರಕ್ಕೆ ಭೇಟಿ ನೀಡುವ ಅವಕಾಶ ದೊರೆತಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ನಗರವು ಭಾರತದೊಂದಿಗೆ ಆಳವಾದ ಮತ್ತು ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಕಜನ್ ನಲ್ಲಿ ಹೊಸ ಭಾರತೀಯ ದೂತಾವಾಸವನ್ನು ತೆರೆಯುವುದರಿಂದ ಈ ಸಂಬಂಧಗಳು ಮತ್ತಷ್ಟು ಬಲಗೊಳ್ಳುತ್ತವೆ.


ಗೌರವಾನ್ವಿತರೇ,

ಕಳೆದ ಮೂರು ತಿಂಗಳಲ್ಲಿ ನಾನು ರಷ್ಯಾಕ್ಕೆ ನೀಡಿದ ಎರಡು ಭೇಟಿಗಳು ನಮ್ಮ ನಿಕಟ ಸಮನ್ವಯ ಮತ್ತು ಆಳವಾದ ಸ್ನೇಹವನ್ನು ಪ್ರತಿಬಿಂಬಿಸುತ್ತವೆ. ಜುಲೈನಲ್ಲಿ ಮಾಸ್ಕೋದಲ್ಲಿ ನಡೆದ ನಮ್ಮ ವಾರ್ಷಿಕ ಶೃಂಗಸಭೆಯಿಂದ ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಸಹಕಾರವನ್ನು ಬಲಪಡಿಸಲಾಗಿದೆ.


ಗೌರವಾನ್ವಿತರೇ,

ಕಳೆದ ಒಂದು ವರ್ಷದಲ್ಲಿ ಬ್ರಿಕ್ಸ್‌ ನ ಯಶಸ್ವಿ ಅಧ್ಯಕ್ಷತೆಯನ್ನು ವಹಿಸಿದ್ದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಕಳೆದ ಹದಿನೈದು ವರ್ಷಗಳಲ್ಲಿ, ಬ್ರಿಕ್ಸ್ ತನ್ನದೇ ಆದ ವಿಶೇಷ ಗುರುತನ್ನು ಸೃಷ್ಟಿಸಿದೆ ಮತ್ತು ಈಗ ವಿಶ್ವದಾದ್ಯಂತದ ಹಲವಾರು ದೇಶಗಳು ಅದನ್ನು ಸೇರಲು ಬಯಸುತ್ತವೆ. ಬ್ರಿಕ್ಸ್  ಶೃಂಗಸಭೆಯಲ್ಲಿ ಭಾಗವಹಿಸಲು ನಾನು ಎದುರು ನೋಡುತ್ತಿದ್ದೇನೆ.


ಗೌರವಾನ್ವಿತರೇ,

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ವಿಷಯದ ಬಗ್ಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ನಾನು ಮೊದಲೇ ಹೇಳಿದಂತೆ, ಸಮಸ್ಯೆಗಳನ್ನು ಶಾಂತಿಯುತ ಮಾರ್ಗಗಳ ಮೂಲಕ ಮಾತ್ರ ಪರಿಹರಿಸಬೇಕು ಎಂದು ನಾವು ನಂಬುತ್ತೇವೆ. ಶಾಂತಿ ಮತ್ತು ಸ್ಥಿರತೆಯ ಆರಂಭಿಕ ಮರುಸ್ಥಾಪನೆಯನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ನಮ್ಮ ಎಲ್ಲಾ ಪ್ರಯತ್ನಗಳು ಮಾನವೀಯತೆಗೆ ಆದ್ಯತೆಯನ್ನು ನೀಡುತ್ತವೆ. ಮುಂಬರುವ ದಿನಗಳಲ್ಲಿಯೂ ಸಾಧ್ಯವಿರುವ ಎಲ್ಲ ಬೆಂಬಲ ನೀಡಲು ಭಾರತ ಸಿದ್ಧವಿದೆ.


ಗೌರವಾನ್ವಿತರೇ,

ಈ ಎಲ್ಲಾ ವಿಷಯಗಳ ಬಗ್ಗೆ ನಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಇಂದು ಮತ್ತೊಂದು ಪ್ರಮುಖ ಅವಕಾಶವಾಗಿದೆ. ಮತ್ತೊಮ್ಮೆ ಧನ್ಯವಾದಗಳು.


ಸೂಚನೆ - ಇದು ಪ್ರಧಾನಮಂತ್ರಿಯವರ ಹೇಳಿಕೆಗಳ ಭಾವಾನುವಾದವಾಗಿದೆ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿತ್ತು.

 

*****




(Release ID: 2067263) Visitor Counter : 10