ಪ್ರಧಾನ ಮಂತ್ರಿಯವರ ಕಛೇರಿ
ಗ್ರೀನ್ ಹೈಡ್ರೋಜನ್ ಫ್ಯೂಲ್ ಸೆಲ್ ಬಸ್, ಸುಸ್ಥಿರತೆಯನ್ನು ಹೆಚ್ಚಿಸಿ ಮುಂಬರುವ ಪೀಳಿಗೆಗೆ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುವ ನಮ್ಮ ಪ್ರಯತ್ನಗಳ ಒಂದು ಭಾಗವಾಗಿದೆ: ಪ್ರಧಾನಮಂತ್ರಿ
प्रविष्टि तिथि:
21 OCT 2024 8:07PM by PIB Bengaluru
ಗ್ರೀನ್ ಹೈಡ್ರೋಜನ್ ಫ್ಯೂಯಲ್ ಸೆಲ್ ಬಸ್‌ನಲ್ಲಿ ಭೂತಾನ್ ಪ್ರಧಾನಮಂತ್ರಿ ಶೆರಿಂಗ್ ಟೊಬ್ಗೆ ಅವರ ಸವಾರಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಗ್ರೀನ್ ಹೈಡ್ರೋಜನ್ ಫ್ಯೂಲ್ ಸೆಲ್ ಬಸ್ ಸುಸ್ಥಿರತೆಯನ್ನು ಹೆಚ್ಚಿಸುವ ಮತ್ತು ಮುಂಬರುವ ಪೀಳಿಗೆಗೆ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುವ ಭಾರತದ ಪ್ರಯತ್ನಗಳ ಭಾಗವಾಗಿದೆ ಎಂದು ಹೇಳಿದರು.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ Xನ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು;
"ಪ್ರಧಾನಮಂತ್ರಿ ಶೆರಿಂಗ್ ಟೊಬ್ಗೆಯವರು ಗ್ರೀನ್ ಹೈಡ್ರೋಜನ್ ಫ್ಯೂಯಲ್ ಸೆಲ್ ಬಸ್‌ನಲ್ಲಿ ಕುಳಿತು ಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಇಂತಹ ಬಸ್ ಮುಂಬರುವ ಪೀಳಿಗೆಗೆ ಸುಸ್ಥಿರತೆಯನ್ನು ಹೆಚ್ಚಿಸಿ, ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುವ ನಮ್ಮ ಪ್ರಯತ್ನಗಳ ಒಂದು ಭಾಗವಾಗಿದೆ. @tsheringtobgay" ಎಂದು ಹೇಳಿದ್ದಾರೆ.
*****
(रिलीज़ आईडी: 2066944)
आगंतुक पटल : 98
इस विज्ञप्ति को इन भाषाओं में पढ़ें:
Telugu
,
Urdu
,
English
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam