ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಉದ್ಯೋಗಿಗಳಿಗೆ ಆನ್‌ಲೈನ್ ಕಲಿಕೆಗೆ ಅನುಕೂಲವಾಗುವಂತೆ ಐಗೋಟ್ ಲ್ಯಾಬ್ ಅನ್ನು ಪ್ರಾರಂಭಿಸಲಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ

Posted On: 15 OCT 2024 6:11PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಕೇಂದ್ರ ಸರ್ಕಾರದ ಸಚಿವಾಲಯದೊಳಗಿನ ಎಲ್ಲಾ ಉದ್ಯೋಗಿಗಳಿಗೆ ಆನ್‌ಲೈನ್ ಕಲಿಕೆಗೆ ಅನುಕೂಲವಾಗುವಂತೆ ಐಗೋಟ್ ಲ್ಯಾಬ್ ಅನ್ನು ಸ್ಥಾಪಿಸಲು ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ. ಈ ಉಪಕ್ರಮವು ಸಚಿವಾಲಯದ ವಾರ್ಷಿಕ ಸಾಮರ್ಥ್ಯ ವರ್ಧನೆಯ ಚಟುವಟಿಕೆಯಾಗಿ ಹಮ್ಮಿಕೊಳ್ಳಲಾಗಿದೆ, ಮತ್ತು ಐಗೋಟ್ ಪೋರ್ಟಲ್‌ ನಲ್ಲಿ ಉದ್ಯೋಗಿಗಳ ಆನ್‌ ಲೈನ್ ಕಲಿಕೆಯ ಸ್ಥಿತಿಗತಿಯನ್ನು ಸಮಗ್ರ ಪರಿಶೀಲನೆಯನ್ನು ಮಾಡಲಾಗುತ್ತದೆ.

ವಾರ್ತಾ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ, ಸಚಿವರಾದ ಡಾ. ಮುರುಗನ್ ಅವರು ಅಕ್ಟೋಬರ್ 19 ರೊಳಗೆ ಎಲ್ಲಾ ಸಚಿವಾಲಯದ ಎಲ್ಲಾ ಉದ್ಯೋಗಿಗಳನ್ನು ಐಗೋಟ್ ಲ್ಯಾಬ್ ಪೋರ್ಟಲ್‌ಗೆ ಸೇರಿಸಬೇಕೆಂದು ನಿರ್ದೇಶನ ನೀಡಿದರು. ಸಚಿವಾಲಯವು ಬಜೆಟ್ ನಿರ್ವಹಣೆ ಸೇರಿದಂತೆ, ಲಿಂಗ ಸಂವೇದನೆ, ನಾಯಕತ್ವ ಮತ್ತು ತಂಡ ನಿರ್ಮಾಣ, ಅದರ ಉದ್ಯೋಗಿಗಳ ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಲು 16 ಕೋರ್ಸ್‌ಗಳ ಆಯ್ಕೆಯನ್ನು ಶಿಫಾರಸು ಮಾಡಿದೆ.

ಭಾಗವಹಿಸುವಿಕೆಯನ್ನು ಉತ್ತೇಜಿಸಲು, ಪ್ರತಿ ತ್ರೈಮಾಸಿಕದಲ್ಲಿ ಹೆಚ್ಚಿನ ಸಂಖ್ಯೆಯ ಕೋರ್ಸ್‌ಗಳನ್ನು ಸೇರಿಸಲು , ಮತ್ತು ಪೂರ್ಣಗೊಳಿಸುವ ಉದ್ಯೋಗಿಗಳನ್ನು ಗೌರವಿಸಲು ಸಚಿವಾಲಯವು ನಿರ್ಧರಿಸಿದೆ. ಹೆಚ್ಚುವರಿಯಾಗಿ, ಸಚಿವಾಲಯದ ಕಲಿಕಾ ಯೋಜನೆ ಮತ್ತು ಇಲಾಖಾ ಕಾರ್ಯತಂತ್ರಗಳನ್ನು ಪರಿಣಾಮಕಾರಿಯಾಗಿ ಸಂವಹನ ಮಾಡಲು ಪೂರಕವಾಗಿ ಎಲ್ಲಾ ಮಾಧ್ಯಮ ಘಟಕಗಳಲ್ಲಿ ಕಾರ್ಯಾಗಾರವನ್ನು ನಡೆಸುವ ಯೋಜನೆ ಕೂಡಾ ಜಾರಿಯಲ್ಲಿದೆ.

ಸಚಿವಾಲಯವು ಹೊಂದಿರುವ ಕುಂದುಕೊರತೆಗಳು ಮತ್ತು ಆರ್‌.ಟಿ.ಐ ಅರ್ಜಿಗಳ ನಿರ್ವಹಣೆಯನ್ನು ಕೂಡಾ ಸಚಿವರು ಪರಿಶೀಲಿಸಿದರು. ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಕರಣಗಳ ಸಮಯೋಚಿತ ಪರಿಹಾರ ನೀಡುವ ಕುರಿತು ಮತ್ತು ಅದರ ಮಹತ್ವವನ್ನು ಸಚಿವರು ತಿಳಿಸಿದರು.

2.jpg

 

*****


(Release ID: 2065155) Visitor Counter : 47