ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಖಾಸಗಿ ಎಫ್.ಎಂ. ರೇಡಿಯೋ ಹಂತ-III ಚಾನೆಲ್ ಗಳ ಪ್ರಾರಂಭಕ್ಕಾಗಿ ಮೂರನೇ ಬ್ಯಾಚ್ ನ ಇ-ಹರಾಜಿಗಾಗಿ ಅರ್ಜಿಗಳನ್ನು ಆಹ್ವಾನಿಸುವ ಕುರಿತು ಅಧಿಸೂಚನೆ
Posted On:
15 OCT 2024 4:49PM by PIB Bengaluru
ಭಾರತದ ನೂತನ 234 ನಗರಗಳಲ್ಲಿ 730 ಖಾಸಗಿ ರೇಡಿಯೊ ಚಾನೆಲ್ ಗಳ ಪ್ರಾರಂಭಕ್ಕಾಗಿ, ಖಾಸಗಿ ಎಫ್.ಎಂ. ರೇಡಿಯೊ ಹಂತ-III ಚಾನೆಲ್ ಗಳ ಮೂರನೇ ಬ್ಯಾಚ್ ನ ಇ-ಹರಾಜಿಗಾಗಿ ನಿರೀಕ್ಷಿತ ಬಿಡ್ ದಾರರಿಂದ ಅರ್ಜಿಗಳನ್ನು ಆಹ್ವಾನಿಸುವ ನಿಮಿತ್ತ ಅಧಿಕೃತ ಸೂಚನೆಯನ್ನು ಸರ್ಕಾರವು ಹೊರಡಿಸಿದೆ.
ಈ ನೂತನ ನಗರಗಳಲ್ಲಿನ ಎಫ್.ಎಂ. ರೇಡಿಯೊ ಚಾನೆಲ್ ಗಳ ವಾರ್ಷಿಕ ಪರವಾನಗಿ ಶುಲ್ಕವನ್ನು ಜಿ.ಎಸ್.ಟಿ. ಹೊರತುಪಡಿಸಿ ಒಟ್ಟು ಆದಾಯದ 4% ರಷ್ಟು ಎಂದು ವಿಧಿಸಲಾಗಿದೆ. ಈ ನೂತನ ನಗರಗಳಲ್ಲಿ ಎಫ್.ಎಂ. ರೇಡಿಯೊ ಚಾನೆಲ್ ಗಳ ಹರಾಜಿಗೆ ಮೀಸಲು ಬೆಲೆಯು 2022 ರ ಟಿ.ಆರ್.ಎ.ಐ. ಶಿಫಾರಸು ಮಾಡಿದ ಬೆಲೆಗಳ ಪ್ರಕಾರವಾಗಿ ಇರುತ್ತದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 18ನೇ ನವೆಂಬರ್, 2024 ಆಗಿರುತ್ತದೆ.
ಸಂಪೂರ್ಣ ಸೂಚನೆ ಮತ್ತು ಎಫ್.ಎಂ. ರೇಡಿಯೊ ಹಂತ-III ನೀತಿ, ನಿಯಮಗಳು, ಮಾರ್ಗಸೂಚಿಗಳು, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವೆಬ್ ಸೈಟ್ ನಲ್ಲಿ ಲಭ್ಯವಿದೆ. ಹಾಗೂ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ವಿವರಗಳನ್ನು ಕೂಡಾ ವೀಕ್ಷಿಸಬಹುದು
*****
(Release ID: 2065063)
Visitor Counter : 41