ಆಯುಷ್
azadi ka amrit mahotsav

ನವದೆಹಲಿಯಲ್ಲಿಂದು ಅಖಿಲ ಭಾರತ ಆಯುರ್ವೇದ ಸಂಸ್ಥೆಯ 8ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಭಾಗಿ


ಆಯುರ್ವೇದವು ವಿಶ್ವದ ಅತ್ಯಂತ ಪುರಾತನ ಸಮಗ್ರ ವೈದ್ಯಕೀಯ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದು ಮನಸ್ಸು, ದೇಹ ಮತ್ತು ಆತ್ಮದ ನಡುವೆ ಸಾಮರಸ್ಯ ಸ್ಥಾಪಿಸುತ್ತದೆ: ಶ್ರೀಮತಿ. ದ್ರೌಪದಿ ಮುರ್ಮು

ಆಯುರ್ವೇದವು ಅತ್ಯಂತ ಪುರಾತನ ವೈದ್ಯಕೀಯ ವ್ಯವಸ್ಥೆಯಾಗಿದೆ, ಇದು ವಿಶ್ವದಲ್ಲಿ ಅತ್ಯಂತ ವೇಗದಲ್ಲಿ ಜನಪ್ರಿಯವಾಗುತ್ತಿದೆ: ಶ್ರೀ ಪ್ರತಾಪ್ ರಾವ್ ಜಾಧವ್

Posted On: 09 OCT 2024 5:20PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ. ದ್ರೌಪದಿ ಮುರ್ಮು ಅವರು ನವದೆಹಲಿಯಲ್ಲಿಂದು ಅಖಿಲ ಭಾರತ ಆಯುರ್ವೇದ ಸಂಸ್ಥೆ(ಎಐಐಎ)ಯ 8ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಹಿಸಿದ್ದರು. ಅವರು ಎಐಐಎ ಕ್ಯಾಂಪಸ್‌ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ, ಆಯುಷ್ ಖಾತೆ ರಾಜ್ಯ ಸಚಿವ(ಸ್ವತಂತ್ರ ಉಸ್ತುವಾರಿ) ಶ್ರೀ ಪ್ರತಾಪ್ ರಾವ್ ಜಾಧವ್ ಆಯುಷ್ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಎಐಐಎಯ ಹಿರಿಯ ಅಧ್ಯಾಪಕರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಆಯುಷ್ ಔಷಧಿ ಫಾರ್ಮಸಿ ಕಾರ್ಯಕ್ರಮದ ಉದ್ಘಾಟನೆ ಮತ್ತು ಶಾಶ್ವತ ಆಯುಷ್ ವಸ್ತುಪ್ರದರ್ಶನ(ಎಕ್ಸ್‌ಪೋ) ಅನಾವರಣದ ಮೂಲಕ ಭಾರತದ ರಾಷ್ಟ್ರಪತಿ ವರು ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿದರು. ಔಷಧಾಲಯವು ಗುಣಮಟ್ಟದ ಆಯುರ್ವೇದ ಔಷಧಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಗುರಿ ಹೊಂದಿದೆ, ಇದು ಆಯುರ್ವೇದದ ಮೂಲಕ ಎಲ್ಲರಿಗೂ ಆರೋಗ್ಯ ವಿತರಣೆ ಹೆಚ್ಚಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪತಿ ಮುರ್ಮು,  “ಆಯುರ್ವೇದವು ವಿಶ್ವದ ಅತ್ಯಂತ ಪುರಾತನ ಸಮಗ್ರ ವೈದ್ಯಕೀಯ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದು ಮನಸ್ಸು, ದೇಹ ಮತ್ತು ಆತ್ಮದ ನಡುವೆ ಸಾಮರಸ್ಯ ಸ್ಥಾಪಿಸುತ್ತದೆ. ಆಯುರ್ವೇದ ವೈದ್ಯಕೀಯ ವ್ಯವಸ್ಥೆ ನಮ್ಮ ಪರಂಪರೆಯಾಗಿದ್ದು, ಈ ಪರಂಪರೆಯನ್ನು ಅಧಿಕೃತ ವೈದ್ಯಕೀಯ ವ್ಯವಸ್ಥೆಯಾಗಿ ಸ್ಥಾಪಿಸುವ ಕೆಲಸವನ್ನು ಆಯುಷ್ ಸಚಿವಾಲಯ ಮಾಡುತ್ತಿದೆ. 2014ರಲ್ಲಿ ಸ್ಥಾಪನೆಯಾದ ನಂತರ ಕಳೆದ 10 ವರ್ಷಗಳಲ್ಲಿ, ಆಯುಷ್ ಸಚಿವಾಲಯವು ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಯನ್ನು ಮುಖ್ಯವಾಹಿನಿಗೆ ತರಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂಬುದು ನನಗೆ ತಿಳಿದಿದೆ. ಶಿಕ್ಷಣ, ಸಂಶೋಧನೆ, ಔಷಧಗಳ ಗುಣಮಟ್ಟ ನಿಯಂತ್ರಣ, ಔಷಧ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಆಯುಷ್ ಸಚಿವಾಲಯವು ಹಲವು ಪ್ರಮುಖ ಬದಲಾವಣೆಗಳನ್ನು ತಂದಿದೆ ಎಂದರು.

ಇದರ ಉದ್ಘಾಟನೆಯ ಕೇವಲ 5 ವರ್ಷಗಳ ಅಲ್ಪಾವಧಿಯಲ್ಲಿ, ಎಐಐಎ ಸಂಸ್ಥೆಯು ಗಮನಾರ್ಹ ಸಾಧನೆ ಮಾಡುತ್ತಿದೆ. ಇದು ಇಂದು ಸಾಂಪ್ರದಾಯಿಕ ವೈದ್ಯಕೀಯ ಮೌಲ್ಯದ ಪ್ರಯಾಣ ಮತ್ತು ವೈದ್ಯಕೀಯ ಆರೋಗ್ಯ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದೆ.

ಇಂದು ಈ ಸಂಸ್ಥೆಯಲ್ಲಿ ನಡೆಯುತ್ತಿರುವ ಕೆಲಸವನ್ನು ನೋಡಿದರೆ, ನಮ್ಮೆಲ್ಲರ ಜಂಟಿ ಪ್ರಯತ್ನದಿಂದ, ನಮ್ಮ ಅಜ್ಜಿಯರ ಸೂಚನೆಗಳೊಂದಿಗೆ ಆಯುರ್ವೇದದಂತಹ ನಮ್ಮ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಬಹುದು, ಸಾಕ್ಷ್ಯಾಧಾರಿತ ಮತ್ತು ವೈಜ್ಞಾನಿಕ ವಿಧಾನದ ಮೂಲಕ ಜಾಗತಿಕವಾಗಿ ಗುರುತಿಸಬಹುದು ಎಂಬ ವಿಶ್ವಾಸ ನನಗಿದೆ. ಈ ವರ್ಷದ ಆಯುರ್ವೇದ ದಿನದ ವಸ್ತು ವಿಷಯ - ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದ ಆವಿಷ್ಕಾರವು ಸಮಯೋಚಿತವಾಗಿದೆ. ಈ ಮೂಲಕ ಆಯುರ್ವೇದವು ಜನಸಾಮಾನ್ಯರನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ಆಯುಷ್ ಸಚಿವಾಲಯಕ್ಕೆ ಶುಭ ಹಾರೈಸುತ್ತೇನೆ ಎಂದರು.

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ ಮಾತನಾಡಿ, “ನಾವು ಹಿಂತಿರುಗಿ ನೋಡಿದರೆ, 2014ರಲ್ಲಿ ಪ್ರಾರಂಭವಾದಾಗಿನಿಂದ ಎಐಐಎ ಸಂಸ್ಥೆಯು ವಿಶ್ವಾದ್ಯಂತದ ಆರೋಗ್ಯ ವ್ಯವಸ್ಥೆಗಳಿಗೆ ಹೊಸ ಭರವಸೆ ಮೂಡಿಸಿದೆ. ಇಲ್ಲಿಯವರೆಗಿನ ಪ್ರಯಾಣವನ್ನು ಪ್ರಸ್ತಾಪಿಸಿದ ಅವರು, ಸಮುದಾಯದ ಆರೋಗ್ಯದ ಮೇಲೆ ಎಐಐಎ ಮಾಡಿದ ಪ್ರಭಾವದಿಂದ ನಾನು ವಿಶೇಷವಾಗಿ ಪ್ರಭಾವಿತನಾಗಿದ್ದೇನೆ, ಅಲ್ಲಿ ವಿವಿಧ ವಿಶೇಷತೆಗಳಲ್ಲಿ 28 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಾಗಿದೆ.

ಆಯುಷ್ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಶ್ರೀ ಪ್ರತಾಪ್ ರಾವ್  ಜಾಧವ್ ಮಾತನಾಡಿ, “ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ 10 ಹೊಸ ಆಯುರ್ವೇದ ಸಂಸ್ಥೆಗಳನ್ನು ತೆರೆಯಲಾಗುವುದು ಎಂದು ಇತ್ತೀಚೆಗೆ ಘೋಷಿಸಿದ್ದಾರೆ ಎಂದರು.

 'ಭಾರತದ ರಾಷ್ಟ್ರಪತಿ ಅವರು ನಮ್ಮ ಸಂಸ್ಥೆ ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ಭೇಟಿ ನೀಡಿರುವುದು ಆಯುಷ್ ಸಚಿವಾಲಯಕ್ಕೆ ಐತಿಹಾಸಿಕ ದಿನವಾಗಿದೆ. ಆಯುರ್ವೇದವು ಅತ್ಯಂತ ಪುರಾತನ ವೈದ್ಯಕೀಯ ಪದ್ಧತಿಯಾಗಿದೆ, ಇದು ಅತ್ಯಂತ ವೇಗವಾಗಿ ಜಗತ್ತಿನಲ್ಲಿ ಜನಪ್ರಿಯವಾಗುತ್ತಿದೆ. ಆಯುಷ್ ಸಚಿವಾಲಯವು ಗ್ರಾಮೀಣ ಪ್ರದೇಶಗಳಿಗೆ ಅಧಿಕೃತ ಮತ್ತು ಕೈಗೆಟುಕುವ ಆಯುರ್ವೇದ ಔಷಧಗಳನ್ನು ಒದಗಿಸಲು “ಆಯುಷ್ ಔಷಧಿ ಕೇಂದ್ರ” ಪ್ರಾರಂಭಿಸಿದೆ ಎಂದು ಸಚಿವರು ಹೇಳಿದರು.

ಕಳೆದ 7 ವರ್ಷಗಳಲ್ಲಿ, ಸಾಂಪ್ರದಾಯಿಕ ಔಷಧದ ಏಕೀಕರಣ ಮತ್ತು ಉತ್ತೇಜನಾ ಪ್ರಚಾರ ಮುನ್ನಡೆಸುವಲ್ಲಿ ಎಐಐಎ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿದೆ. ಎಐಐಎ ತನ್ನ 44 ವಿಶೇಷ ಚಿಕಿತ್ಸಾಲಯಗಳ ಮೂಲಕ 27 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ಒದಗಿಸಿದೆ, ರಾಷ್ಟ್ರದಾದ್ಯಂತ ಉತ್ತಮ ಗುಣಮಟ್ಟದ ಆಯುರ್ವೇದ ಆರೋಗ್ಯವನ್ನು ತಲುಪಿಸುವ ತನ್ನ ಬದ್ಧತೆಯನ್ನು ಬಲಪಡಿಸುತ್ತದೆ.

ಒಟ್ಟು 73 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ತಿಳಿವಳಿಕೆ ಪತ್ರ(ಎಂಒಯು)ಗಳಿಗೆ ಸಹಿ ಹಾಕಲಾಗಿದೆ, ಆಯುರ್ವೇದ ಕ್ಷೇತ್ರದಲ್ಲಿ ಎಐಐಎ ಜಾಗತಿಕ ಮತ್ತು ದೇಶೀಯ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಆಯುರ್ವೇದವು ತನ್ನ ಶ್ರೀಮಂತ ಪರಂಪರೆ ಮತ್ತು ಆರೋಗ್ಯಕ್ಕೆ ಸಮಗ್ರವಾದ ಕಾರ್ಯವಿಧಾನವನ್ನು ಹೊಂದಿದೆ. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮ ಸಾಧಿಸಲು ಅಮೂಲ್ಯವಾದ ಒಳನೋಟಗಳನ್ನು ನೀಡುತ್ತದೆ. ಪರಿಸರ ನಾಶದ ಸವಾಲು ಎದುರಿಸುತ್ತಿರುವ ಆಯುರ್ವೇದವು ವೈಯಕ್ತಿಕ ಆರೋಗ್ಯವನ್ನು ಮಾತ್ರವಲ್ಲದೆ, ನಮ್ಮ ಪರಿಸರದ ಯೋಗಕ್ಷೇಮವನ್ನೂ ಉತ್ತೇಜಿಸುವ ಸಮಗ್ರ ಪರಿಹಾರಗಳನ್ನು ನೀಡುತ್ತದೆ.

 

*****

 


(Release ID: 2063762) Visitor Counter : 39