ಹಣಕಾಸು ಸಚಿವಾಲಯ
ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ದ್ವಿಪಕ್ಷೀಯ ಹೂಡಿಕೆ ಒಪ್ಪಂದ, ಎರಡೂ ದೇಶಗಳ ಹೂಡಿಕೆದಾರರಿಗೆ ಹೂಡಿಕೆ ರಕ್ಷಣೆ ಮುಂದುವರಿಕೆ
Posted On:
07 OCT 2024 9:57AM by PIB Bengaluru
ಭಾರತ ಗಣರಾಜ್ಯದ ಸರ್ಕಾರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರದ ನಡುವೆ ಯುಎಇಯ ಅಬುಧಾಬಿಯಲ್ಲಿ 2024 ರ ಫೆಬ್ರವರಿ 13 ರಂದು ಸಹಿ ಹಾಕಿದ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಟಿ) 2024 ರ ಆಗಸ್ಟ್ 31 ರಿಂದ ಜಾರಿಗೆ ಬಂದಿದೆ. ಯುಎಇಯೊಂದಿಗೆ ಈ ಹೊಸ ಬಿಐಟಿಯ ಜಾರಿಯು ಎರಡೂ ದೇಶಗಳ ಹೂಡಿಕೆದಾರರಿಗೆ ಹೂಡಿಕೆ ರಕ್ಷಣೆಯನ್ನು ಮುಂದುವರೆಸುತ್ತದೆ ಮತ್ತು ನಿರಂತರತೆಯನ್ನು ನೀಡುತ್ತದೆ. ಭಾರತ ಮತ್ತು ಯುಎಇ ನಡುವೆ 2013 ರ ಡಿಸೆಂಬರಿನಲ್ಲಿ ಸಹಿ ಹಾಕಿದ ಹಿಂದಿನ ದ್ವಿಪಕ್ಷೀಯ ಹೂಡಿಕೆ ಉತ್ತೇಜನ ಮತ್ತು ಸಂರಕ್ಷಣಾ ಒಪ್ಪಂದ (ಬಿಪಿಪಿಎ) 2024 ರ ಸೆಪ್ಟೆಂಬರ್ 12 ರಂದು ಮುಕ್ತಾಯಗೊಂಡಿದೆ.
ಭಾರತದಲ್ಲಿ ಸ್ವೀಕರಿಸಿದ ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿ (ಎಫ್ ಡಿ ಐ) ಯುಎಇ 3% ಪಾಲನ್ನು ಹೊಂದಿದ್ದು, 2000ರ ಏಪ್ರಿಲ್ ನಿಂದ 2024ರ ಜೂನ್ ವರೆಗೆ ಸುಮಾರು 19 ಬಿಲಿಯನ್ ಡಾಲರ್ ಸಂಚಿತ ಹೂಡಿಕೆಯೊಂದಿಗೆ ಹೂಡಿಕೆಯಲ್ಲಿ ಏಳನೇ ಅತಿದೊಡ್ಡ ದೇಶವಾಗಿದೆ. 2000ರ ಏಪ್ರಿಲ್ ನಿಂದ 2024ರ ಆಗಸ್ಟ್ ವರೆಗೆ ಯುಎಇಯಲ್ಲಿ ತನ್ನ ಒಟ್ಟು ಸಾಗರೋತ್ತರ ನೇರ ಹೂಡಿಕೆಗಳಲ್ಲಿ ಭಾರತವು 15.26 ಬಿಲಿಯನ್ ಡಾಲರ್ ವರೆಗೆ ಅಂದರೆ 5% ನಷ್ಟು ಹೂಡಿಕೆ ಮಾಡಿದೆ. ಭಾರತ - ಯುಎಇ ಬಿಐಟಿ 2024 ಹೂಡಿಕೆದಾರರ ಸಮಾಧಾನ/ಆರಾಮದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮಧ್ಯಸ್ಥಿಕೆಯ ಮೂಲಕ ವಿವಾದ ಇತ್ಯರ್ಥಕ್ಕೆ ಸ್ವತಂತ್ರ ವೇದಿಕೆಯನ್ನು ಒದಗಿಸುವಾಗ ಕನಿಷ್ಠವೆಂದರೂ ಗುಣಮಟ್ಟದ ಸೌಜನ್ಯ ವ್ಯವಸ್ಥೆ/ಗೌರವ ಮತ್ತು ತಾರತಮ್ಯ/ಪಕ್ಷಪಾತರಹಿತವಾಗಿ ನಡೆದುಕೊಳ್ಳುವ ಭರವಸೆ ನೀಡುವ ಮೂಲಕ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಹೂಡಿಕೆದಾರರು ಮತ್ತು ಹೂಡಿಕೆ ರಕ್ಷಣೆಯನ್ನು ಒದಗಿಸುವಾಗ, ನಿಯಂತ್ರಿಸುವ ದೇಶದ/ರಾಷ್ಟ್ರದ ಹಕ್ಕಿಗೆ ಸಂಬಂಧಿಸಿದಂತೆ ಸಮತೋಲನವನ್ನು ಕಾಪಾಡಿಕೊಳ್ಳಲಾಗಿದೆ ಮತ್ತು ಆ ಮೂಲಕ ಸಾಕಷ್ಟು ನೀತಿ ಸ್ಥಳವನ್ನು/ಅವಕಾಶವನ್ನು ಒದಗಿಸಲಾಗಿದೆ.
ಬಿಐಟಿಗೆ ಸಹಿ ಹಾಕಿರುವುದು ಮತ್ತು ಜಾರಿಗೊಳಿಸಿರುವುದು ಆರ್ಥಿಕ ಸಹಕಾರವನ್ನು ಹೆಚ್ಚಿಸುವ ಮತ್ತು ಹೆಚ್ಚು ದೃಢವಾದ ಮತ್ತು ಸ್ಥಿತಿಸ್ಥಾಪಕ ಹೂಡಿಕೆ ವಾತಾವರಣವನ್ನು ಸೃಷ್ಟಿಸುವ ಎರಡೂ ರಾಷ್ಟ್ರಗಳ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಒಪ್ಪಂದವು ದ್ವಿಪಕ್ಷೀಯ ಹೂಡಿಕೆಗಳನ್ನು ಹೆಚ್ಚಿಸಲು ದಾರಿ ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ಎರಡೂ ದೇಶಗಳ ವ್ಯವಹಾರಗಳು ಮತ್ತು ಆರ್ಥಿಕತೆಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಭಾರತ-ಯುಎಇ ಬಿಐಟಿ 2024 ರ ಕೆಲವು ಪ್ರಮುಖ ಲಕ್ಷಣಗಳು/ಅಂಶಗಳು:-
1. ಪೋರ್ಟ್ಫೋಲಿಯೊ ಹೂಡಿಕೆಯ ವ್ಯಾಪ್ತಿಯೊಂದಿಗೆ ಹೂಡಿಕೆಯ ಮುಚ್ಚಿದ ಆಸ್ತಿ ಆಧಾರಿತ ವ್ಯಾಖ್ಯಾನ
2. ನ್ಯಾಯವನ್ನು ನಿರಾಕರಿಸದೆ, ಸರಿಯಾದ ಪ್ರಕ್ರಿಯೆಯ ಮೂಲಭೂತ ಉಲ್ಲಂಘನೆಯಾಗದಂತೆ, ಉದ್ದೇಶಿತ ತಾರತಮ್ಯವಿಲ್ಲದೆ ಮತ್ತು ಸ್ಪಷ್ಟವಾಗಿ ನಿಂದನೀಯ ಅಥವಾ ನಿರಂಕುಶ ನಡವಳಿಕೆಯಿಲ್ಲದೆ ಹೂಡಿಕೆಯನ್ನು ಬಾಧ್ಯತೆಯೊಂದಿಗೆ ಪರಿಗಣಿಸುವುದು
3. ತೆರಿಗೆ, ಸ್ಥಳೀಯ ಸರ್ಕಾರ, ಸರ್ಕಾರಿ ಖರೀದಿಗಳು, ಸಬ್ಸಿಡಿಗಳು ಅಥವಾ ಅನುದಾನಗಳು ಮತ್ತು ಕಡ್ಡಾಯ ಪರವಾನಗಿಗೆ ಸಂಬಂಧಿಸಿದ ಕ್ರಮಗಳಿಗೆ ವ್ಯಾಪ್ತಿಯನ್ನು ರೂಪಿಸುವುದು.
4. ಮಧ್ಯಸ್ಥಿಕೆಯ ಮೂಲಕ ಹೂಡಿಕೆದಾರರ-ರಾಷ್ಟ್ರ ವಿವಾದ ಇತ್ಯರ್ಥ (ಐ ಎಸ್ ಡಿ ಎಸ್), ಸ್ಥಳೀಯ ಪರಿಹಾರಗಳನ್ನು 3 ವರ್ಷಗಳಲ್ಲಿ ಕಡ್ಡಾಯವಾಗಿ ವಿಲೇವಾರಿ/ಇತ್ಯರ್ಥ ಮಾಡುವುದು
5. ಸಾಮಾನ್ಯ ಮತ್ತು ಭದ್ರತಾ ವಿನಾಯಿತಿಗಳು
6. ರಾಷ್ಟ್ರಕ್ಕಾಗಿ ನಿಯಂತ್ರಿಸುವ ಹಕ್ಕು
7. ಭ್ರಷ್ಟಾಚಾರ, ವಂಚನೆ, ರೌಂಡ್ ಟ್ರಿಪ್ಪಿಂಗ್ ಇತ್ಯಾದಿಗಳಲ್ಲಿ ಭಾಗಿಯಾಗಿದ್ದ ಹೂಡಿಕೆಯಾಗಿದ್ದರೆ ಹೂಡಿಕೆದಾರರಿಗೆ ಕ್ಲೈಮ್ ಇಲ್ಲ.
8. ರಾಷ್ಟ್ರೀಯ ಸೌಜನ್ಯದ ನಿಬಂಧನೆ,
9. ಈ ಒಪ್ಪಂದವು ಕಬಳಿಕೆಯಿಂದ ಹೂಡಿಕೆಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ, ಪಾರದರ್ಶಕತೆ, ವರ್ಗಾವಣೆ ಮತ್ತು ನಷ್ಟಕ್ಕೆ ಪರಿಹಾರವನ್ನು ಒದಗಿಸುತ್ತದೆ.
ಭಾರತ-ಯುಎಇ 2024 ಬಿಐಟಿಯನ್ನು ಆರ್ಥಿಕ ವ್ಯವಹಾರಗಳ ಇಲಾಖೆ, ಹಣಕಾಸು ಸಚಿವಾಲಯದ ವೆಬ್ಸೈಟ್ನಲ್ಲಿ ನೋಡಬಹುದು:
https://dea.gov.in/sites/default/files/BIT%20MoU%20Engilsh.pdf
*****
(Release ID: 2062788)
Visitor Counter : 37