ಸಂಪುಟ
azadi ka amrit mahotsav

ಆಸಕ್ತಿ ವ್ಯಕ್ತಪಡಿಸುವ ಪತ್ರಕ್ಕೆ (ಲೆಟರ್ ಆಫ್ ಇಂಟೆಂಟ್) ಸಹಿ ಹಾಕುವ ಮೂಲಕ ಇಂಟರ್ನ್ಯಾಷನಲ್ ಎನರ್ಜಿ ಎಫಿಷಿಯನ್ಸಿ ಹಬ್ ಗೆ ಸೇರಲು ಭಾರತವನ್ನು ಅನುಮೋದಿಸಿದ ಕೇಂದ್ರ ಸಚಿವ ಸಂಪುಟ


ಕಾರ್ಯತಂತ್ರದ ಶಕ್ತಿ ವಿಧಿವಿಧಾನಗಳು ಮತ್ತು ನವೀನ ಪರಿಹಾರಗಳನ್ನು ಹಂಚಿಕೊಳ್ಳುವ ವಿಶೇಷ 16 ರಾಷ್ಟ್ರಗಳ ಗುಂಪಿಗೆ ಪ್ರವೇಶ ಪಡೆಯಲು ಭಾರತಕ್ಕೆ ಈ ನಿರ್ಧಾರ ಸಹಾಯ ಮಾಡುತ್ತದೆ

Posted On: 03 OCT 2024 8:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ʼಆಸಕ್ತಿ ವ್ಯಕ್ತಪಡಿಸಿವ ಪತ್ರಕ್ಕೆ (ಲೆಟರ್ ಆಫ್ ಇಂಟೆಂಟ್)ʼ ಸಹಿ ಹಾಕಲು ಅನುಮತಿ ನೀಡಿದೆ, ಹೀಗಾಗಿ ಭಾರತವು 'ಇಂಧನ ದಕ್ಷತೆಯ ಹಬ್' ಅನ್ನು ಸೇರಲು ಅನುವು ದೊರಕಿದಂತಾಗಿದೆ.

ಈ ಮೂಲಕ, ಸಹಯೋಗವನ್ನು ಉತ್ತೇಜಿಸಲು ಮತ್ತು ವಿಶ್ವಾದ್ಯಂತ ಇಂಧನ ದಕ್ಷತೆಯನ್ನು ಉತ್ತೇಜಿಸಲು ಮೀಸಲಾಗಿರುವ ಜಾಗತಿಕ ವೇದಿಕೆಯಾದ ಇಂಟರ್ನ್ಯಾಷನಲ್ ಎನರ್ಜಿ ಎಫಿಶಿಯೆನ್ಸಿ ಹಬ್ (ಹಬ್) ಗೆ ಭಾರತ ಸೇರಲಿದೆ. ಈ ಕ್ರಮವು ಸುಸ್ಥಿರ ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಗಟ್ಟಿಗೊಳಿಸುತ್ತದೆ, ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನಗಳೊಂದಿಗೆ ಸಹವರ್ತನೆ ಹಾಗೂ ಹೊಂದಾಣಿಕೆ ಮಾಡುತ್ತದೆ.

ಭಾರತವು ಸದಸ್ಯವಾಗಿದ್ದ, 2020 ರಲ್ಲಿ ಸ್ಥಾಪಿತವಾದ ಇಂಟರ್ನ್ಯಾಷನಲ್ ಪಾರ್ಟ್ನರ್ ಶಿಪ್ ಫಾರ್ ಎನರ್ಜಿ ಎಫಿಷಿಯನ್ಸಿ ಕೋಆಪರೇಶನ್ (ಐ.ಪಿ.ಇ.ಇ.ಸಿ) ಇದರ ಮುಂದಿನ ಹಂತದ ಒಕ್ಕೂಟವಾಗಿ ಈ ಹಬ್ ಸ್ಥಾಪನೆಯಾಗಿದೆ.  ಇದರಲ್ಲಿ ಹಬ್ ಜ್ಞಾನ, ಉತ್ತಮ ಅಭ್ಯಾಸಗಳು ಮತ್ತು ನವೀನ ಪರಿಹಾರಗಳನ್ನು ಹಂಚಿಕೊಳ್ಳಲು ಸರ್ಕಾರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಖಾಸಗಿ ವಲಯದ ಘಟಕಗಳನ್ನು ಒಟ್ಟುಗೂಡಿ ಕೆಲಸ ಮಾಡುತ್ತವೆ. ಹಬ್ ಗೆ ಸೇರುವ ಮೂಲಕ, ಭಾರತವು ತನ್ನ ದೇಶೀಯ ಇಂಧನ ದಕ್ಷತೆಯ ಉಪಕ್ರಮಗಳನ್ನು ಹೆಚ್ಚಿಸಲು ಸಾಧ್ಯವಾಗುವಂತೆ ಪರಿಣಿತರು ಮತ್ತು ಸಂಪನ್ಮೂಲಗಳ ವಿಶಾಲ ಜಾಲಕ್ಕೆ ಪ್ರವೇಶವನ್ನು ಪಡೆಯುತ್ತದೆ. ಜುಲೈ, 2024 ರಲ್ಲಿ, ಹದಿನಾರು ದೇಶಗಳು ( ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಡೆನ್ಮಾರ್ಕ್, ಯುರೋಪಿಯನ್ ಕಮಿಷನ್, ಫ್ರಾನ್ಸ್, ಜರ್ಮನಿ, ಜಪಾನ್, ಕೊರಿಯಾ, ಲಕ್ಸೆಂಬರ್ಗ್, ರಷ್ಯಾ, ಸೌದಿ ಅರೇಬಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ ಡಮ್ ) ಹಬ್ ಗೆ ಸೇರಿಕೊಂಡಿವೆ.

ಹಬ್ ನ ಸದಸ್ಯ ದೇಶವಾಗಿ, ಭಾರತವು ಇತರ ಸದಸ್ಯ ರಾಷ್ಟ್ರಗಳೊಂದಿಗೆ ಸಹಯೋಗ, ಅವಕಾಶ ಹಾಗೂ ಪ್ರಯೋಜನ ಪಡೆಯುತ್ತದೆ. ಭಾರತವು ತನ್ನದೇ ಆದ ಪರಿಣತಿಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತದೆ ಮತ್ತು ಅಂತರರಾಷ್ಟ್ರೀಯ ಉತ್ತಮ ಅಭ್ಯಾಸಕ್ರಮಗಳಿಂದ ಕಲಿಯುವ ಅವಕಾಶ ಲಭ್ಯವಾಗುತ್ತದೆ. ಇಂಧನ-ಸಮರ್ಥ ತಂತ್ರಜ್ಞಾನಗಳು ಮತ್ತು ಅಭ್ಯಾಸಕ್ರಮಗಳನ್ನು ಉತ್ತೇಜಿಸುವ ಮೂಲಕ ಹವಾಮಾನ ಬದಲಾವಣೆಯನ್ನು ಪರಿಹರಿಸಲು ಜಾಗತಿಕ ಪ್ರಯತ್ನಗಳಿಗೆ ದೇಶವು ಕೊಡುಗೆ ನೀಡುತ್ತದೆ.

ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ), ಶಾಸನಬದ್ಧ ಏಜೆನ್ಸಿಯಾಗಿದೆ.  ಭಾರತದ ಪರವಾಗಿ ಹಬ್ ನ ಅನುಷ್ಠಾನ ಏಜೆನ್ಸಿ ಎಂದು ಬಿಇಇಯನ್ನು ಗೊತ್ತುಪಡಿಸಲಾಗಿದೆ. ಹಬ್ ನ ಚಟುವಟಿಕೆಗಳಲ್ಲಿ ಭಾರತದ ಭಾಗವಹಿಸುವಿಕೆಯನ್ನು ಸುಲಭಗೊಳಿಸುವಲ್ಲಿ ಮತ್ತು ಭಾರತದ ಕೊಡುಗೆಗಳು ಅದರ ರಾಷ್ಟ್ರೀಯ ಇಂಧನ ದಕ್ಷತೆಯ ಗುರಿಗಳೊಂದಿಗೆ ಹೊಂದಿಕೆಯಾಗುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಬಿಇಇ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಹಬ್ ಗೆ ಸೇರುವ ಮೂಲಕ ಭಾರತವು ಹೆಚ್ಚು ಸುಸ್ಥಿರ ಭವಿಷ್ಯದತ್ತ ಮಹತ್ವದ ಹೆಜ್ಜೆ ಇಡುತ್ತಿದೆ. ಈ ಜಾಗತಿಕ ವೇದಿಕೆಯಲ್ಲಿ ದೇಶದ ಭಾಗವಹಿಸುವಿಕೆಯು ಕಡಿಮೆ ಇಂಗಾಲದ ಆರ್ಥಿಕತೆಗೆ ಪರಿವರ್ತನೆಯನ್ನು ವೇಗಗೊಳಿಸಲು ಮತ್ತು ಇಂಧನ ಭದ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
 

 

*****


(Release ID: 2061777) Visitor Counter : 56