ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

04.10.2024 ರಂದು ಗುವಾಹಟಿಯಲ್ಲಿ ಈಶಾನ್ಯ ರಾಜ್ಯಗಳೊಂದಿಗೆ ನಡೆಯಲಿರುವ 6ನೇ ಪ್ರಾದೇಶಿಕ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ವಹಿಸಲಿದ್ದಾರೆ


ಕಾರ್ಮಿಕ ಸುಧಾರಣೆಗಳು, ಉದ್ಯೋಗ ಸೃಷ್ಟಿ ಮತ್ತು ಎಲ್ಲರಿಗೂ ಸಾಮಾಜಿಕ ರಕ್ಷಣೆ ಮುಂತಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು

Posted On: 03 OCT 2024 1:29PM by PIB Bengaluru

ಈಶಾನ್ಯ ರಾಜ್ಯಗಳ ಪ್ರಾದೇಶಿಕ ಸಭೆ, ಅಂದರೆ ಅದರಲ್ಲಿ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಮೇಘಾಲಯ, ತ್ರಿಪುರಾ ಮತ್ತು ಸಿಕ್ಕಿಂ ರಾಜ್ಯಗಳು ಸೇರಿರುತ್ತವೆ, ಹಾಗೂ ಗುವಾಹಟಿಯಲ್ಲಿ 04.10.2024 (ಶುಕ್ರವಾರ) ರಂದು ಸಭೆ ನಡೆಯಲಿದೆ. ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕಾರ್ಮಿಕ ಸುಧಾರಣೆಗಳು, ಇಶ್ರಾಮ್-ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ (ಎನ್.ಡಿ.ಯು.ಡಬ್ಲ್ಯೂ.), ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (ಬಿಒಸಿಡಬ್ಲ್ಯೂ), ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ಮತ್ತು ಉದ್ಯೋಗ ಸೃಷ್ಟಿ ಉಪಕ್ರಮಗಳು ಮುಂತಾದ ವಿಷಯಗಳು ಹಾಗೂ ಇತರ ವಿಷಯಗಳಲ್ಲಿ ಒಮ್ಮತದ ನಿರ್ಣಯಕ್ಕಾಗಿ ಮತ್ತು ಕೇಂದ್ರೀಕೃತ ಚರ್ಚೆಗಳನ್ನು ನಡೆಸಲು ಈ ಪ್ರಾದೇಶಿಕ ಸಭೆಯನ್ನು ಭಾರತ ಸರ್ಕಾರ ಆಯೋಜಿಸುತ್ತಿದೆ.  

ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ವಹಿಸಲಿದ್ದಾರೆ ಮತ್ತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಸುಮಿತಾ ದಾವ್ರಾ ಭಾರತ ಸರ್ಕಾರ ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಗುವಾಹಟಿಯಲ್ಲಿ ನಡೆಯಲಿರುವ ಈ ಸಭೆಯು ರಾಜ್ಯಗಳು / ಕೇಂದ್ರಾಡಳಿ ಪ್ರದೇಶಗಳೊಂದಿಗೆ ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನಡೆಸುತ್ತಿರುವ ಪ್ರಾದೇಶಿಕ ಸಮಾಲೋಚನೆಗಳ ಸರಣಿಯ ಆರನೇ ಸಭೆಯಾಗಿದೆ. ಇದು 30.08.2024ರಂದು ಬೆಂಗಳೂರಿನಲ್ಲಿ ನಡೆದ ದಕ್ಷಿಣ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ 1ನೇ ಪ್ರಾದೇಶಿಕ ಸಭೆಯ ಮೂಲಕ ಪ್ರಾರಂಭವಾಯಿತು. ಇದರಲ್ಲಿ ದಕ್ಷಿಣ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ, ಪುದುಚೇರಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾಗವಹಿಸಿದ್ದವು. 

ತದನಂತರ 06.09.2024 ರಂದು, ಚಂಡೀಗಢದಲ್ಲಿ ಪಂಜಾಬ್, ಚಂಡೀಗಢ, ಹಿಮಾಚಲ ಪ್ರದೇಶ, ಲಡಾಖ್ ಮತ್ತು ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ 2ನೇ ಪ್ರಾದೇಶಿಕ ಸಭೆ ನಡೆಯಿತು. 15.09.2024ರಂದು ಗುಜರಾತ್ ನ ರಾಜ್ಕೋಟ್ ನಲ್ಲಿ ಮಹಾರಾಷ್ಟ್ರ, ಗೋವಾ, ಗುಜರಾತ್, ದಾಮನ್ ಮತ್ತು ದಿಯು ಮತ್ತು ದಾದ್ರಾ ಹಾಗೂ ನಗರ ಹವೇಲಿ ಮತ್ತು ಲಕ್ಷದ್ವೀಪಗಳು ಸೇರಿದಂತೆ ಪಶ್ಚಿಮ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ 3ನೇ ಪ್ರಾದೇಶಿಕ ಸಭೆಯನ್ನು ನಡೆಸಲಾಯಿತು. ಒಡಿಶಾ, ಛತ್ತೀಸ್ಗಢ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ ಪೂರ್ವ ರಾಜ್ಯಗಳೊಂದಿಗೆ 4ನೇ ಪ್ರಾದೇಶಿಕ ಸಭೆಯು 20.09.2024ರಂದು ಭುವನೇಶ್ವರದಲ್ಲಿ ನಡೆಯಿತು. ಲಕ್ನೋದಲ್ಲಿ 30.09.2024 ರಂದು ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಉತ್ತರಾಖಂಡ ಮತ್ತು ದೆಹಲಿ ಸೇರಿದಂತೆ ಕೇಂದ್ರ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ 5 ಲನೇ ಪ್ರಾದೇಶಿಕ ಸಭೆ ನಡೆಯಿತು.

ನಾಳೆ, 04.10.204 ರಂದು, ನಡೆಯುವ ಸಭೆಯಲ್ಲಿ, ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರವು ರೂಪಿಸಿದ ಕರಡು ನಿಯಮಗಳಲ್ಲಿ ಸಮನ್ವಯತೆ ಸೇರಿದಂತೆ ಪ್ರಮುಖ ಕಾರ್ಮಿಕ ಮತ್ತು ಉದ್ಯೋಗ ಸಮಸ್ಯೆಗಳು, ಉದ್ಯೋಗದ ಡೇಟಾ ಸಂಗ್ರಹಣೆ ಮತ್ತು ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳು, ಕೇಂದ್ರ ಬಜೆಟ್ 2024-25ರಲ್ಲಿ ಘೋಷಿಸಲಾದ ಉದ್ಯೋಗ ಲಿಂಕ್ಡ್ ಇನ್ಸೆಂಟಿವ್ (ಇ.ಎಲ್.ಐ) ಯೋಜನೆಯ ಸಲಹೆಗಳು, ವಲಸೆ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗುವಂತೆ ಇ-ಶ್ರಮ್ ಪೋರ್ಟಲ್ ಅನ್ನು 'ಒಂದು-ನಿಲುಗಡೆ ಪರಿಹಾರ'ವಾಗಿ ಸ್ಥಾಪಿಸುವುದು, ವಿವಿಧ ಕೇಂದ್ರ ಕಲ್ಯಾಣ ಯೋಜನೆಗಳ ವ್ಯಾಪ್ತಿಯನ್ನು ಬಿಒಸಿ ಕಾರ್ಮಿಕರಿಗೆ ವಿಸ್ತರಿಸುವುದು, ಉದ್ಯೋಗ ವಿನಿಮಯ ಕೇಂದ್ರಗಳ ಉನ್ನತೀಕರಣ ಇತ್ಯಾದಿ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗುವುದು.

 

*****




(Release ID: 2061553) Visitor Counter : 26