ಪ್ರಧಾನ ಮಂತ್ರಿಯವರ ಕಛೇರಿ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಶ್ರೀ ಮಿಥುನ್ ಚರ್ಕವರ್ತಿ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ
प्रविष्टि तिथि:
30 SEP 2024 11:39AM by PIB Bengaluru
ಭಾರತೀಯ ಚಿತ್ರರಂಗಕ್ಕೆ ನೀಡಿದ ಅನುಪಮ ಕೊಡುಗೆಗಳಿಗಾಗಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಶ್ರೀ ಮಿಥುನ್ ಚಕ್ರವರ್ತಿ ಅವರನ್ನು ಪ್ರಧಾನಮಂತ್ರಿ ಶ್ರೀ.ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ವೈವಿಧ್ಯಮಯ ನಟನೆಯಿಂದಾಗಿ ಎಲ್ಲಾ ಪೀಳಿಗೆಗಳ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಅವರು ಸಾಂಸ್ಕೃತಿಕ ಪ್ರತಿರೂಪವಾಗಿದ್ದಾರೆ ಎಂದು ಮೇರು ನಟರನ್ನು ಪ್ರಧಾನಮಂತ್ರಿಗಳು ಶ್ಲಾಘಿಸಿದ್ದಾರೆ.
ಕೇಂದ್ರ ಸಚಿವರಾದ ಶ್ರೀ.ಅಶ್ವಿನಿ ವೈಷ್ಣವ್ ಅವರು ಎಕ್ಸ್ ನಲ್ಲಿ ನೀಡಿರುವ ಸಂದೇಶಕ್ಕೆ ಪ್ರಧಾನಮಂತ್ರಿಗಳ ಪ್ರತಿಕ್ರಿಯೆ ಹೀಗಿದೆ:
“ಶ್ರೀ ಮಿಥುನ್ ಚಕ್ರವರ್ತಿ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಅನನ್ಯ ಕೊಡುಗೆಗಳನ್ನು ಗುರುತಿಸಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿರುವುದು ಹರ್ಷದಾಯಕ. ತಮ್ಮ ಬಹುಮುಖ ಪ್ರದರ್ಶನಗಳಿಂದ ಎಲ್ಲಾ ಪೀಳಿಗೆಗಳ ಜನರ ಮೆಚ್ಚುಗೆ ಪಡೆದ ಅವರು ಸಾಂಸ್ಕೃತಿಕ ಪ್ರತಿರೂಪವಾಗಿದ್ದಾರೆ. ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು.”
*****
(रिलीज़ आईडी: 2060240)
आगंतुक पटल : 73
इस विज्ञप्ति को इन भाषाओं में पढ़ें:
Telugu
,
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Malayalam