ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಸುರಕ್ಷಿತ ಮತ್ತು ಸುಭದ್ರ ಜಾಗತಿಕ ಶುದ್ಧ ಇಂಧನ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಯುಎಸ್-ಭಾರತ ಉಪಕ್ರಮದ ಮಾರ್ಗಸೂಚಿ

Posted On: 22 SEP 2024 8:12AM by PIB Bengaluru

ಪರಸ್ಪರ ಹಂಚಿಕೆಯ ರಾಷ್ಟ್ರೀಯ ಮತ್ತು ಆರ್ಥಿಕ ಭದ್ರತೆಯ ವಿಷಯಗಳಲ್ಲಿ ನಮ್ಮ ಸಹಯೋಗವನ್ನು ಬಲಪಡಿಸಲು/ಆಳಗೊಳಿಸಲು ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತ ಶಾಶ್ವತ ಬದ್ಧತೆಯನ್ನು ಹಂಚಿಕೊಂಡಿವೆ. ನಮ್ಮ ಆರ್ಥಿಕ ಬೆಳವಣಿಗೆಯ ಕಾರ್ಯಸೂಚಿಗಳ ಪ್ರಮುಖ ಅಂಶವಾಗಿ, ನಮ್ಮ ಜನಸಂಖ್ಯೆಗೆ ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವುದು, ಜಾಗತಿಕವಾಗಿ ಶುದ್ಧ ಇಂಧನ ನಿಯೋಜನೆಯನ್ನು ತ್ವರಿತಗೊಳಿಸುವುದು ಮತ್ತು ಜಾಗತಿಕ ಹವಾಮಾನ ಗುರಿಗಳ ಈಡೇರಿಕೆ  ಸೇರಿದಂತೆ ಶುದ್ಧ ಇಂಧನ ಪರಿವರ್ತನೆಯ ಪ್ರಯೋಜನಗಳನ್ನು ಪಡೆಯಲು ನಾವು ಒಟ್ಟಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ.

ಉದ್ದೇಶಗಳಿಗೆ ಬೆಂಬಲವಾಗಿ, ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತ ಶುದ್ಧ ಇಂಧನ ತಂತ್ರಜ್ಞಾನಗಳು ಮತ್ತು ಘಟಕಗಳಿಗೆ ಪೂರಕವಾಗಿ ಯುಎಸ್ ಮತ್ತು ಭಾರತೀಯ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ದ್ವಿಪಕ್ಷೀಯ ತಾಂತ್ರಿಕ, ಹಣಕಾಸು ಮತ್ತು ನೀತಿ ಬೆಂಬಲವನ್ನು ಹೆಚ್ಚಿಸಲು ಮತ್ತು ವಿಸ್ತರಿಸಲು ಉದ್ದೇಶಿಸಿವೆ ಮತ್ತು ಆಫ್ರಿಕಾದಲ್ಲಿ ಸಹಭಾಗಿತ್ವದ ಮೇಲೆ ಗಮನ ಕೇಂದ್ರೀಕರಿಸಿ ಮೂರನೇ ರಾಷ್ಟ್ರಗಳಲ್ಲಿ ಹೆಚ್ಚಿನ ಸಹಕಾರಕ್ಕೆ ಅಡಿಪಾಯ ಹಾಕಲು ಉದ್ದೇಶಿಸಿವೆ. ಈ ಪ್ರಯತ್ನವು 2023 ರಲ್ಲಿ ಪ್ರಧಾನಿ ಮೋದಿಯವರ ಯುನೈಟೆಡ್ ಸ್ಟೇಟ್ಸ್ ಭೇಟಿಯ ಸಮಯದಲ್ಲಿ ಪ್ರಾರಂಭಿಸಲಾದ ಯುಎಸ್ ಇಂಧನ ಇಲಾಖೆ ಮತ್ತು ಭಾರತ ಸರ್ಕಾರದ ಸಚಿವಾಲಯಗಳ ನೇತೃತ್ವದ ಕಾರ್ಯತಂತ್ರದ ಶುದ್ಧ ಇಂಧನ ಪಾಲುದಾರಿಕೆ, ಯುಎಸ್ ಪ್ರಯೋಗಾಲಯಗಳು ಒದಗಿಸಿದ ತಾಂತ್ರಿಕ ನೆರವು ಮತ್ತು ಎಲೆಕ್ಟ್ರಿಕ್ ಬಸ್ ಗಳ ತ್ವರಿತ ನಿಯೋಜನೆಯನ್ನು ಬೆಂಬಲಿಸಲು ಸ್ಥಾಪಿಸಲಾದ ಪಾವತಿ ಭದ್ರತಾ ಕಾರ್ಯವಿಧಾನದಂತಹ ನವೀನ ಹಣಕಾಸು ವೇದಿಕೆಗಳು ಸೇರಿದಂತೆ ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವೆ ಅಸ್ತಿತ್ವದಲ್ಲಿರುವ ಶುದ್ಧ ಇಂಧನ ಸಹಕಾರವನ್ನು ಬಲಪಡಿಸುತ್ತವೆ.  ಪರಸ್ಪರ ಹಂಚಿಕೆಯ ಮತ್ತು ಸ್ಥಿತಿಸ್ಥಾಪಕತ್ವ ಕೇಂದ್ರೀಕೃತವಾದ ಮತ್ತು ಅತ್ಯಾಧುನಿಕ ತಾಂತ್ರಿಕ-ಕೈಗಾರಿಕಾ ನೆಲೆಯನ್ನು ನವೀನ ಶುದ್ಧ ಇಂಧನ ತಯಾರಿಕಾ ತಂತ್ರಜ್ಞಾನಗಳನ್ನು ಯುಎಸ್ ಮತ್ತು ಭಾರತೀಯ ಪಾಲುದಾರಿಕೆಯಲ್ಲಿ ಸ್ಥಾಪಿಸುವುದಕ್ಕೆ  ನೆರವಾಗುತ್ತದೆ ಮತ್ತು ಆ ಮೂಲಕ ಜಗತ್ತಿಗೆ ಒಂದು ಉದಾಹರಣೆಯನ್ನು ಒದಗಿಸುತ್ತದೆ ಹಾಗು ನಮ್ಮ ದೇಶಗಳನ್ನು 21 ನೇ ಶತಮಾನದಲ್ಲಿ ಶುದ್ಧ ಆರ್ಥಿಕ ಅಭಿವೃದ್ಧಿಯ ನಾಯಕತ್ವ ವಹಿಸುವ ಸ್ಥಿತಿಯಲ್ಲಿಡುತ್ತದೆ.

ಪಾಲುದಾರಿಕೆಯನ್ನು ಪ್ರಾರಂಭಿಸಲು, ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತವು ಭಾರತದ ದೇಶೀಯ ಶುದ್ಧ ಇಂಧನ ಪೂರೈಕೆ ಸರಪಳಿ ನಿರ್ಮಾಣವನ್ನು ತ್ವರಿತಗೊಳಿಸುವುದೂ  ಸೇರಿದಂತೆ ಯೋಜನೆಗಳಿಗಾಗಿ ಅಂತರರಾಷ್ಟ್ರೀಯ ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್ (ಐಬಿಆರ್ಡಿ) ಮೂಲಕ 1 ಬಿಲಿಯನ್ ಅಮೆರಿಕನ್ ಡಾಲರ್ ಹೊಸ ಬಹುಪಕ್ಷೀಯ ಹಣಕಾಸು ಲಭಿಸುವಂತೆ  ಮಾಡಲು ಕೆಲಸ ಮಾಡುತ್ತಿವೆ. ಸೌರ, ಪವನ, ಬ್ಯಾಟರಿ, ಇಂಧನ ಗ್ರಿಡ್ ವ್ಯವಸ್ಥೆಗಳು ಮತ್ತು ಹೆಚ್ಚಿನ ದಕ್ಷತೆಯ ಹವಾನಿಯಂತ್ರಣ ಮತ್ತು ಸೀಲಿಂಗ್ ಫ್ಯಾನ್ ಪೂರೈಕೆ ಸರಪಳಿಗಳ ಮೇಲೆ ಕೇಂದ್ರೀಕರಿಸುವ ಪ್ರಮುಖ ತಂತ್ರಜ್ಞಾನ ಪೂರೈಕೆಗೆ ಸಂಬಂಧಿಸಿ  ಉತ್ಪಾದನಾ ಸಾಮರ್ಥ್ಯ ವಿಸ್ತರಣೆಯನ್ನು ಧನಸಹಾಯವು ಬೆಂಬಲಿಸುತ್ತದೆ. ಕಾಲಾನಂತರದಲ್ಲಿ, ಸಾರ್ವಜನಿಕ ಮತ್ತು ಖಾಸಗಿ ಹಣಕಾಸು ಸಾಧನಗಳನ್ನು ಬಳಸಿಕೊಳ್ಳುವ ಮತ್ತು ಹೊಂದಿಕೊಳ್ಳುವ ಹವಾಮಾನ ಹಣಕಾಸು ಪರಿಹಾರಗಳ ತ್ವರಿತ ಬೇಡಿಕೆಯನ್ನು ಪೂರೈಸಲು ನವೀನ ಹಣಕಾಸು ವ್ಯವಸ್ಥೆಗಳನ್ನು ಪ್ರವರ್ತಿಸುವ ಆದ್ಯತೆಯ ಶುದ್ಧ ಇಂಧನ ಉತ್ಪಾದನಾ ಕ್ಷೇತ್ರಗಳಿಗೆ ಹೆಚ್ಚುವರಿ ಹಣಕಾಸು ಸಜ್ಜುಗೊಳಿಸಲು ನಾವು ಪ್ರಯತ್ನಿಸುತ್ತೇವೆ.

ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸುವ ಮತ್ತು ಗುರುತಿಸಲಾದ ಕ್ಷೇತ್ರಗಳಲ್ಲಿ ಪೂರೈಕೆ ಸರಪಳಿ ವಿಸ್ತರಣೆ ಮತ್ತು ವೈವಿಧ್ಯೀಕರಣಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಶುದ್ಧ ಇಂಧನ ಮೌಲ್ಯ ಸರಪಳಿಯಾದ್ಯಂತ ಪ್ರಾಯೋಗಿಕ ಯೋಜನೆಗಳ ಪ್ಯಾಕೇಜ್ ಗುರುತಿಸಲು ಸಂಬಂಧಿತ ಸರ್ಕಾರಿ ಸಂಸ್ಥೆಗಳು, ನಾಗರಿಕ ಸಮಾಜ, ಯುಎಸ್ ಮತ್ತು ಭಾರತೀಯ ಖಾಸಗಿ ವಲಯಗಳು, ದಾನಿಗಳು ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳೊಂದಿಗೆ ಕೆಲಸ ಮಾಡಲು ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತ ಉದ್ದೇಶಿಸಿವೆ. ಈ ಹೊಸ ಪಾಲುದಾರಿಕೆಯನ್ನು ಪ್ರಾರಂಭಿಸಲು ಮತ್ತು ಅಂತಿಮವಾಗಿ ವಿಸ್ತರಿಸಲು  ಯುಎಸ್ ಮತ್ತು ಭಾರತ ಸರ್ಕಾರಗಳು ಉದ್ಯಮದ ನಾಯಕರೊಂದಿಗೆ ಕೆಳಗಿನ ಪ್ರಯತ್ನಗಳಲ್ಲಿ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡುತ್ತವೆ:

ನಿರ್ದಿಷ್ಟ ಶುದ್ಧ ಇಂಧನ ಪೂರೈಕೆ ಸರಪಳಿ ವಿಭಾಗಗಳಿಗೆ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಹೂಡಿಕೆ ಅವಕಾಶಗಳನ್ನು ಗುರುತಿಸುವುದು. ಕೆಳಗಿನ ಶುದ್ಧ ಇಂಧನ ಘಟಕಗಳ ಮೇಲೆ ಆರಂಭಿಕ ಗಮನವನ್ನು ಕೇಂದ್ರೀಕರಿಸಲಾಗುತ್ತದೆ:

ಸೋಲಾರ್ ವೇಫರ್ ಗಳು ಮತ್ತು ವೇಫರ್ ಉತ್ಪಾದನಾ ಉಪಕರಣಗಳು (ಸೌರ ವಿದ್ಯುತ್ ಕೋಶಗಳ ಮೂಲಭೂತ ನಿರ್ಮಾಣ ಸಾಮಗ್ರಿಗಳಾದ ವೇಫರ್ ಗಳು ಸಿಲಿಕಾನ್ ನಿಂದ ತಯಾರಿಸಲ್ಪಟ್ಟ ತೆಳುವಾದ ವೃತ್ತಾಕಾರದ ರಚನೆಗಳು) ಹಾಗು  ಮುಂದಿನ ಪೀಳಿಗೆಯ ಸೌರ ಕೋಶಗಳು

ವಿಂಡ್ ಟರ್ಬೈನ್ ನ್ಯಾಸೆಲ್  (ಪವನ ವಿದ್ಯುತ್ ಉತ್ಪಾದನೆಯಲ್ಲಿ ಜನರೇಟರ್ ಸಹಿತ ಇಡೀ ವಿದ್ಯುತ್ ಉತ್ಪಾದನಾ ವ್ಯವಸ್ಥೆಯನ್ನು ಒಳಗೊಂಡಿರುವ ಸಂರಕ್ಷಕ ಪರಿಕರ)  ಘಟಕಗಳು

ವಾಹಕಗಳು, ಕ್ಯಾಬ್ಲಿಂಗ್, ಟ್ರಾನ್ಸ್ ಫಾರ್ಮರ್ ಗಳು ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನಗಳು ಸೇರಿದಂತೆ ವಿದ್ಯುತ್ ಪ್ರಸರಣ ಮಾರ್ಗದ ಘಟಕಗಳು

ಬ್ಯಾಟರಿಗಳು ಸೇರಿದಂತೆ ಶಕ್ತಿ ಶೇಖರಣಾ ಘಟಕಗಳು

2- ಮತ್ತು 3-ಚಕ್ರಗಳ ಎಲೆಕ್ಟ್ರಿಕ್ ವಾಹನಗಳು (ಇವಿಗಳು) ಮತ್ತು ಶೂನ್ಯ ಮಾಲಿನ್ಯ -ಹೊರಸೂಸುವ ಇ-ಬಸ್ ಮತ್ತು ಟ್ರಕ್ ಘಟಕಗಳಿಗೆ ಬ್ಯಾಟರಿ ಪ್ಯಾಕ್ ಗಳು

ಹೆಚ್ಚಿನ-ದಕ್ಷತೆಯ ಹವಾನಿಯಂತ್ರಣಗಳು ಮತ್ತು ಸೀಲಿಂಗ್ ಫ್ಯಾನ್ ಘಟಕಗಳು

ಮೇಲಿನ ಪೂರೈಕೆ ಸರಪಳಿ ವಿಭಾಗಗಳಲ್ಲಿ ಅರ್ಹ ಅವಕಾಶಗಳ ವ್ಯಾಪ್ತಿಯನ್ನು  ವಿಸ್ತರಿಸಲು ಮತ್ತು ಪ್ರಾಯೋಗಿಕ ಯೋಜನೆಗಳ ಆರಂಭಿಕ ಪ್ಯಾಕೇಜ್ ಅನ್ನು ಬೆಂಬಲಿಸಲು ಖಾಸಗಿ ವಲಯದೊಂದಿಗೆ ಸಹಕರಿಸುವುದು, ಇದು ಆಫ್ರಿಕಾಕ್ಕೆ ಶುದ್ಧ ಇಂಧನ ನಿಯೋಜನೆಯ ಮೇಲೆ ಕೇಂದ್ರೀಕರಿಸಿದ ಒಂದು ಯೋಜನೆಯನ್ನು ಒಳಗೊಂಡಿದೆ. ಹೆಚ್ಚುವರಿ ಹೂಡಿಕೆ ಯೋಜನೆಗಳು ಮತ್ತು ಧನಸಹಾಯದ ಮೂಲಗಳನ್ನು ಕಾಲಾನಂತರದಲ್ಲಿ ಅಭಿವೃದ್ಧಿಪಡಿಸಬಹುದು. ಈ ಪ್ರಯತ್ನವು ಸೌರ, ಪವನ, ಬ್ಯಾಟರಿ ಮತ್ತು ನಿರ್ಣಾಯಕ ಖನಿಜ ಕ್ಷೇತ್ರಗಳಲ್ಲಿ ಯುಎಸ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್ಸಿ) ಮೂಲಕ  ಖಾಸಗಿ ವಲಯದ ಸಹಭಾಗಿತ್ವವನ್ನು ನಿರ್ಮಿಸುತ್ತದೆ ಮತ್ತು ಶುದ್ಧ ಇಂಧನ ಘಟಕಗಳ ಉತ್ಪಾದನೆಗೆ ಹಣಕಾಸು ಒದಗಿಸುವ ಅವಕಾಶಗಳನ್ನು ಹುಡುಕುತ್ತದೆ. ಇಂತಹ ಹೂಡಿಕೆಗಳು ಭಾರತದಲ್ಲಿ ನವೀಕರಿಸಬಹುದಾದ ಇಂಧನ, ಸಂಗ್ರಹಣೆ ಮತ್ತು ಇ-ಮೊಬಿಲಿಟಿ ಹೂಡಿಕೆಗಳನ್ನು ಬೆಂಬಲಿಸುವ ಮತ್ತು ಸ್ಥಳೀಯ ಉತ್ಪಾದನೆಗೆ ಬೇಡಿಕೆಯನ್ನು ಬಲಪಡಿಸುವ ಭಾರತದ ಹಸಿರು ಪರಿವರ್ತನೆ ನಿಧಿಯಲ್ಲಿ  ಮತ್ತು ನವೀಕರಿಸಬಹುದಾದ ಇಂಧನ, ಪರಿಣಾಮಕಾರಿ ತಂಪಾಗಿಸುವಿಕೆ ಮತ್ತು ವಿದ್ಯುತ್ ಸಾರಿಗೆಯಂತಹ ಶುದ್ಧ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡಲು ಅನುಕೂಲಗಳನ್ನು ಒದಗಿಸುತ್ತದೆ. ಇದರಲ್ಲಿ  ಹೊಸ ಡಿಎಫ್ಸಿ ಬೆಂಬಲಿತ 900 ಮಿಲಿಯನ್ ಡಾಲರ್ ನಿಧಿಯನ್ನು ಹೂಡಿಕೆಗೆ ಬಳಸಲು  ಅನುಕೂಲವೊದಗಲಿದೆ.

ಸೌರ ಮತ್ತು ಬ್ಯಾಟರಿ ಶೇಖರಣಾ ಅವಕಾಶಗಳ ಮೇಲೆ ಗಮನ ಕೇಂದ್ರೀಕರಿಸಿ, ಶುದ್ಧ ಇಂಧನ ನಿಯೋಜನೆಗೆ ರಾಜಕೀಯ ಬದ್ಧತೆಗಳನ್ನು ಪ್ರತಿಪಾದಿಸಿರುವ ಆಫ್ರಿಕನ್ ಪಾಲುದಾರರೊಂದಿಗೆ ತ್ರಿಪಕ್ಷೀಯ ಸಂಬಂಧಗಳ ಸ್ಥಾಪನೆ. ಹೆಚ್ಚಿನ ಸಾಮರ್ಥ್ಯದ ಸೌರ ಮತ್ತು ಇವಿ ನಿಯೋಜನೆ ಅವಕಾಶಗಳನ್ನು ಹೊಂದಲು, ಯೋಜನೆಯ ಯಶಸ್ಸಿಗೆ ಅಗತ್ಯವಾದ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು, ಯೋಜನೆಯ ಯಶಸ್ಸಿಗೆ ಪಾಲುದಾರಿಕೆ ಮತ್ತು ಹಣಕಾಸು ಮಾದರಿಯನ್ನು ವಿವರಿಸಲು ಮತ್ತು ಯೋಜನೆಯನ್ನು ಕಾರ್ಯಗತಗೊಳಿಸಲು ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಗಳು  ಆಫ್ರಿಕಾದ ಪಾಲುದಾರರೊಂದಿಗೆ ಬಹುಪಕ್ಷೀಯ ಆಯಾಮದಲ್ಲಿ  ಕೆಲಸ ಮಾಡಬಹುದು. ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಮತ್ತು ಸಾರ್ವಜನಿಕ-ಖಾಸಗಿ ವಲಯದಲ್ಲಿ ಸೂಕ್ತ ಹೊಂದಾಣಿಕೆಯನ್ನು  ಸುಗಮಗೊಳಿಸಲು ಮತ್ತು ಸ್ಥಳೀಯ ಆಫ್ರಿಕನ್ ತಯಾರಕರೊಂದಿಗೆ ಪಾಲುದಾರಿಕೆಯನ್ನು ವಿಸ್ತರಿಸಲು ಭಾರತೀಯ ಕಂಪನಿಗಳೊಂದಿಗೆ ಸಹಕರಿಸಲು ಯುನೈಟೆಡ್ ಸ್ಟೇಟ್ಸ್ ಉದ್ದೇಶಿಸಿದೆ. ಡಿಎಫ್ ಸಿ ಮತ್ತು ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್, ಭಾರತ ಮೂಲದ ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ ಸಹಯೋಗದೊಂದಿಗೆ ಆರೋಗ್ಯ ಸೌಲಭ್ಯಗಳ ಬಳಿ ಸೌರ ಮತ್ತು ಇವಿ ಚಾರ್ಜಿಂಗ್ ನೆಟ್ವರ್ಕ್ಗಳನ್ನು ನಿಯೋಜಿಸುವ ಮೂಲಕ ಪ್ರಯತ್ನವನ್ನು ಬೆಂಬಲಿಸುತ್ತಿವೆ.

ಸ್ಥಳೀಯವಾಗಿ ತಯಾರಿಸಿದ ಶುದ್ಧ ತಂತ್ರಜ್ಞಾನಗಳಿಗೆ ಬೇಡಿಕೆ ಖಚಿತತೆಯನ್ನು ಬಲಪಡಿಸುವ ನೀತಿಗಳ ಬಗ್ಗೆ ಸಮಾಲೋಚಿಸಲು ಪರಸ್ಪರ ಮತ್ತು ಉದ್ಯಮದೊಂದಿಗೆ ಸಹಯೋಗ. ಯು.ಎಸ್. ದ್ವಿಪಕ್ಷೀಯ ಮೂಲಸೌಕರ್ಯ ಕಾನೂನು ಮತ್ತು ಹಣದುಬ್ಬರ ಕಡಿತ ಕಾಯ್ದೆಯು ಶುದ್ಧ ಇಂಧನ ತಂತ್ರಜ್ಞಾನಗಳ ದೊಡ್ಡ ಪ್ರಮಾಣದ ನಿಯೋಜನೆಯಲ್ಲಿ ಹೂಡಿಕೆ ಮಾಡಲು ವಿನ್ಯಾಸಗೊಳಿಸಲಾದ ಐತಿಹಾಸಿಕ ಕಾನೂನುಗಳಾಗಿವೆ, ಅದೇ ಸಮಯದಲ್ಲಿ ಶುದ್ಧ ಇಂಧನ ಪೂರೈಕೆ ಸರಪಳಿಗಳನ್ನು ಸೂಕ್ತವಾಗಿ ಕಡಲ ಮೂಲಕ  ಸಾಗಿಸಲು ಯುನೈಟೆಡ್ ಸ್ಟೇಟ್ಸ್ ನ  ಉತ್ಪಾದನಾ ಸಾಮರ್ಥ್ಯವನ್ನು ಪುನರುಜ್ಜೀವನಗೊಳಿಸುವುದಕ್ಕೂ ಅನುವು ಮಾಡಿಕೊಡುತ್ತದೆ. ಅಂತೆಯೇ, ಭಾರತದ ಉತ್ಪಾದನಾ ಲಿಂಕ್ಡ್ ಪ್ರೋತ್ಸಾಹಕ ಯೋಜನೆಗಳು ಹೊಸ ಈಗ ಶೈಶವಾವಸ್ಥೆಯಲ್ಲಿರುವ ಶುದ್ಧ ಇಂಧನ ಉತ್ಪಾದನೆಗೆ ವೇಗವರ್ಧನೆ ನೀಡಲು  4.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿವೆ. ಆದಾಗ್ಯೂ, ಜಾಗತಿಕ ಮಾರುಕಟ್ಟೆ ವ್ಯತ್ಯಯ/ಚಲನಶಾಸ್ತ್ರ ಮತ್ತು ಬಹಳ ಕಡಿಮೆ ಪ್ರಮಾಣದ  ಲಾಭಾಂಶಗಳ ಹಿನ್ನೆಲೆಯಲ್ಲಿ ಹೂಡಿಕೆಗಳನ್ನು ವಿಸ್ತರಿಸಲು ಮತ್ತು ರಕ್ಷಿಸಲು ಹೆಚ್ಚುವರಿ ನೀತಿಗಳು ಅತ್ಯಗತ್ಯ. ಬೇಡಿಕೆಯ ಅನಿಶ್ಚಿತತೆಗಳನ್ನು ಕಡಿಮೆ ಮಾಡಲು ನೀತಿ ಚೌಕಟ್ಟುಗಳನ್ನು ಹೇಗೆ ವಿನ್ಯಾಸಗೊಳಿಸುವುದು ಮತ್ತು ಸಾಕಷ್ಟು ಒಳಸುರಿಗಳು (ಇನ್ಪುಟ್ ವಸ್ತುಗಳು), ತಾಂತ್ರಿಕ ಪರಿಣತಿ, ಹಣಕಾಸು ಮತ್ತು ಇತರ ಉತ್ಪಾದನಾ ಸಾಮರ್ಥ್ಯಗಳು  ಲಭ್ಯವಿವೆ  ಮತ್ತು ಸುರಕ್ಷಿತವಾಗಿವೆ ಎಂಬುದನ್ನು  ಖಚಿತಪಡಿಸಿಕೊಳ್ಳಲು ಒಳನೋಟಗಳನ್ನು ಹಂಚಿಕೊಳ್ಳುವ ಮಹತ್ವವನ್ನು ಎರಡೂ ದೇಶಗಳು ಒಪ್ಪಿಕೊಂಡಿವೆ.

ಈ ಮಾರ್ಗಸೂಚಿಯು ಯೋಜನೆಗಳಲ್ಲಿ ಆರಂಭಿಕ ಸಹಕಾರವನ್ನು ಹೆಚ್ಚಿಸಲು ಅಲ್ಪಾವಧಿಯ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ, ಈ ಪಾಲುದಾರಿಕೆಯು  ಸಭೆಗಳ ಮೂಲಕ  ಮತ್ತು ಮೈಲಿಗಲ್ಲುಗಳನ್ನು ಸ್ಥಾಪಿಸಲು ಒಟ್ಟಾಗಿ ಕೆಲಸ ಮಾಡುವುದು ಸೇರಿದಂತೆ ದೀರ್ಘಕಾಲೀನ ಮಾರ್ಗಸೂಚಿಯನ್ನು ನಿರ್ಮಾಣ ಮಾಡಲು  ಸಹಾಯ ಮಾಡುತ್ತದೆ. ಈ ಮಾರ್ಗಸೂಚಿಯು ದೇಶೀಯ ಅಥವಾ ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಹಕ್ಕುಗಳು ಅಥವಾ ಬಾಧ್ಯತೆಗಳಿಗೆ ಕಾರಣವಾಗುವ ಇರಾದೆಯನ್ನು  ಹೊಂದಿಲ್ಲ.

 

*****



(Release ID: 2057763) Visitor Counter : 14