ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಪ್ರಧಾನಮಂತ್ರಿ ಅವರು ಡೆಲಾವೇರ್ ನ ವಿಲ್ಮಿಂಗ್ಟನ್ ನಲ್ಲಿ ಅಮೆರಿಕ ಅಧ್ಯಕ್ಷರನ್ನು ಭೇಟಿ ಮಾಡಿದರು

Posted On: 22 SEP 2024 2:02AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಡೆಲಾವೇರ್ ನಲ್ಲಿ ನಡೆದ ಕ್ವಾಡ್ ಶೃಂಗಸಭೆಯ ಸಂದರ್ಭದಲ್ಲಿ  ಅಮೆರಿಕದ ಅಧ್ಯಕ್ಷ ಘನತೆವೆತ್ತ ಶ್ರೀ ಜೋಸೆಫ್ ಬೈಡನ್ ಅವರನ್ನು ಭೇಟಿ ಮಾಡಿದರು. ವಿಶೇಷವಾಗಿ, ಅಧ್ಯಕ್ಷ ಬೈಡನ್ ವಿಲ್ಮಿಂಗ್ಟನ್ನಲ್ಲಿರುವ ತಮ್ಮ ಮನೆಯಲ್ಲಿ ಸಭೆಯನ್ನು ಆಯೋಜಿಸಿದ್ದರು.

ಭಾರತ-ಅಮೆರಿಕ ಪಾಲುದಾರಿಕೆಗೆ ಉತ್ತೇಜನ ನೀಡುವಲ್ಲಿ ಅಧ್ಯಕ್ಷ ಬೈಡನ್ ನೀಡಿದ ಅಪಾರ ಕೊಡುಗೆಗಳಿಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. 2023ರ ಜೂನ್ ನಲ್ಲಿ ತಾವು ಅಮೆರಿಕಕ್ಕೆ ನೀಡಿದ್ದ ಅಧಿಕೃತ ಭೇಟಿ ಮತ್ತು 2023ರ ಸೆಪ್ಟೆಂಬರ್ ನಲ್ಲಿ ಜಿ-20 ನಾಯಕರ ಶೃಂಗಸಭೆಗಾಗಿ ಅಧ್ಯಕ್ಷ ಬೈಡನ್ ಭಾರತಕ್ಕೆ ಭೇಟಿ ನೀಡಿದ್ದನ್ನು ಅವರು ಆತ್ಮೀಯವಾಗಿ ಸ್ಮರಿಸಿಕೊಂಡರು. ಈ ಭೇಟಿಗಳು ಭಾರತ-ಅಮೆರಿಕ ಪಾಲುದಾರಿಕೆಗೆ ಹೆಚ್ಚಿನ ಚಲನಶೀಲತೆ ಮತ್ತು ಆಳವನ್ನು ನೀಡಿವೆ ಎಂದು ಪ್ರಧಾನಿ ಹೇಳಿದರು.

ಭಾರತ ಮತ್ತು ಅಮೆರಿಕ ಇಂದು ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ, ಇದು ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು, ಹಿತಾಸಕ್ತಿಗಳ ಒಮ್ಮತ ಮತ್ತು ಜನರ ನಡುವಿನ ಸೌಹಾರ್ದ ಸಂಬಂಧಗಳಿಂದ ಪ್ರೇರಿತವಾದ ಮಾನವ ಪ್ರಯತ್ನದ ಎಲ್ಲಾ ಕ್ಷೇತ್ರಗಳನ್ನು ಒಳಗೊಂಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಇಬ್ಬರೂ ನಾಯಕರು ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು ಮತ್ತು ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಅದರಾಚೆಗಿನ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಅವರು ಸಂಬಂಧಗಳ ಬಲ‌ ವೃದ್ಧಿ ಮತ್ತು ನಿರಂತರ ಸಂಪರ್ಕ ಕಾಪಾಡಿಕೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಎರಡೂ ದೇಶಗಳ ನಡುವೆ ಎಲ್ಲ ಕ್ಷೇತ್ರಗಳಲ್ಲಿ ಮಾನವ ಪರಿಶ್ರಮ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು.

 

*****
 



(Release ID: 2057747) Visitor Counter : 9